Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಪ್ರಕೃತಿಯನ್ನು ದೇವರನ್ನಾಗಿ ಮಾಡುವ ಸೈತಾನನ ಯೋಜನೆ

    ಭೌತದ್ರವ್ಯ ನಿಯಮಗಳು (Laws of Matter) ಮತ್ತು ಪ್ರಕೃತಿ ನಿಯಮಗಳಿಗೆ ಗಮನಕೊಡುವವರು ದೇವರ ಎಡೆಬಿಡದ ಹಾಗೂ ನೇರವಾದ ಕರ್ತೃತ್ವ ಶಕ್ತಿಯನ್ನು ಮರೆಯುತ್ತಾರೆ. ಪ್ರಕೃತಿಯಮೇಲೆ ದೇವರಿಗೆ ಯಾವುದೇ ಹತೋಟಿಯಿಲ್ಲ, ಅದು ಆತನಿಂದ ಸ್ವತಂತ್ರವಾಗಿದೆ ಹಾಗೂ ತನ್ನದೇ ಆದ ಇತಿಮಿತಿಗಳು ಮತ್ತು ಸಾಮಥ್ರ್ಯ ಹೊಂದಿದ್ದು ಅದರಿಂದ ಕಾರ್ಯನಿರ್ವಹಿಸುತ್ತವೆಂಬ ಅಭಿಪ್ರಾಯ ಅವರದು. ಅವರ ದೃಷ್ಟಿಯಲ್ಲಿ ಪ್ರಾಕೃತಿಕ ಮತ್ತು ಅಲೌಕಿಕ (Super Natural) ನಡುವೆ ಎದ್ದು ಕಾಣುವಂತ ವ್ಯತ್ಯಾಸವಿದೆ. ಪ್ರಾಕೃತಿಕವಾದದ್ದು ಸಾಮಾನ್ಯ ವಿಷಯಗಳ ಹೊಣೆಹೊಂದಿದ್ದು, ದೇವರಶಕ್ತಿಯೊಂದಿಗೆ ಪರಸ್ಪರ ಸಂಬಂಧ ಹೊಂದಿಲ್ಲ. ಪ್ರಮುಖ ಶಕ್ತಿಯು ಭೌತದ್ರವ್ಯ ಅಥವಾ ಭೌತಪದಾರ್ಥದಿಂದಾಗಿದೆ ಎಂದು ಭಾವಿಸಿ ಪ್ರಕೃತಿಯನ್ನು ದೇವತೆಯನ್ನಾಗಿ ಮಾಡುತ್ತದೆ. ಭೌತದ್ರವ್ಯವು (Matter) ಒಂದು ನಿರ್ದಿಷ್ಟವಾದ ಸಾದೃಶ್ಯ ಸಂಬಂಧಿತ ಸಹಜ ಸ್ಥಾನದಲ್ಲಿರಿಸಲ್ಪಟ್ಟಿದ್ದು, ಸ್ವತಃ ದೇವರೂ ಸಹ ಮಧ್ಯಪ್ರವೇಶಿಸಲಾರದಂತ ಸ್ಥಿರವಾದ ನಿಯಮಗಳಿಂದ ಕಾರ್ಯನಿರ್ವಹಿಸಲು ಸ್ವತಂತ್ರವಾಗಿ ಬಿಡಲಾಗಿದೆ. ಅಲ್ಲದೆ ಪ್ರಕೃತಿಯು ಕೆಲವು ನಿರ್ದಿಷ್ಟ ಗುಣಲಕ್ಷಣದ ಅರ್ಹತೆ ಹೊಂದಿದ್ದು, ನಿಯಮಗಳಿಗೆ ಅಧೀನವಾಗಿದೆ ಹಾಗೂ ಈ ನಿಯಮಗಳಿಗೆ ವಿಧೇಯವಾಗುವಂತೆ ಅದನ್ನು ಅದರಷ್ಟಕ್ಕೆ ಸ್ವತಂತ್ರವಾಗಿ ಬಿಡಲಾಗಿದೆ ಎಂದು ಭೌತದ್ರವ್ಯ ನಿಯಮಗಳು ಮತ್ತು ಪ್ರಕೃತಿ ನಿಯಮಗಳನ್ನು ಸಮರ್ಥಿಸುವವರು ವಾದಿಸುತ್ತಾರೆ ಹಾಗೂ ಅಭಿಪ್ರಾಯ ಪಡುತ್ತಾರೆ.KanCCh 411.3

    ಇದೊಂದು ದೋಷಪೂರಿತ ಹಾಗೂ ತಪ್ಪಾದ ವಿಜ್ಞಾನವಾಗಿದೆ. ಈ ವಾದವನ್ನು ಸಮರ್ಥಿಸುವಂತ ಯಾವ ವಿಷಯವು ಬೈಬಲಿನಲ್ಲಿ ಇಲ್ಲ, ತಾನೇ ಸ್ವತಃ ನೀಡಿದ ನಿಯಮಗಳನ್ನು ದೇವರು ರದ್ದುಮಾಡುವುದಿಲ್ಲ, ಬದಲಾಗಿ ಅವುಗಳನ್ನು ತನ್ನ ಸಾಧನಗಳನ್ನಾಗಿ ಉಪಯೋಗಿಸಿ, ಅವುಗಳ ಮೂಲಕ ಎಡೆಬಿಡದೆ ಕಾರ್ಯಮಾಡುತ್ತಿದ್ದಾನೆ. ಅವುಗಳು ಸ್ವತಃ ತಮ್ಮಶಕ್ತಿಯಿಂದ ಕಾರ್ಯ ನಿರ್ವಹಿಸುತ್ತಿಲ್ಲ. ದೇವರು ನಿರಂತರವಾಗಿ ಪ್ರಕೃತಿಯಲ್ಲಿ ಕಾರ್ಯಮಾಡುತ್ತಿದ್ದಾನೆ. ಅದು ದೇವರ ಸೇವಕನಾಗಿದ್ದು, ಆತನು ಅದನ್ನು ತನ್ನ ಇಷ್ಟದಂತೆ ನಿರ್ದೇಶಿಸುತ್ತಾನೆ. ಪ್ರಕೃತಿಯು ತನ್ನಕಾರ್ಯದಲ್ಲಿ ತನ್ನಇಚ್ಛೆಯಂತೆ ಕಾರ್ಯನಿರ್ವಹಿಸುವ ಸರ್ವಜ್ಞಾನಿಯಾದ ದೇವರ ಪ್ರಸನ್ನತೆಗೆ ಸಾಕ್ಷ್ಯಾಧಾರ ಕೊಡುತ್ತದೆ. ಭೂಮಿಯು ವರ್ಷವರ್ಷವೂ ಸಮೃದ್ಧಿಯಾದ ಬೆಳೆಕೊಡುವುದು ಹಾಗೂ ಸೂರ್ಯನನ್ನು ಸುತ್ತುವುದು ಪ್ರಕೃತಿಯಲ್ಲಿರುವ ಯಾವುದೇ ಅಂತರ್ಗತವಾದ (Inherent) ಮೂಲ ಸಾಮರ್ಥ್ಯದಿಂದಲ್ಲ. ಅನಂತ ಸ್ವರೂಪಿಯಾದ ದೇವರ ಸಾಮರ್ಥ್ಯದ ಹಸ್ತವು ನಿರಂತರವಾಗಿ ಕಾರ್ಯನಿರ್ವಹಿಸುತ್ತಾ, ನಮ್ಮ ಭೂಮಿಗೆ ಮಾರ್ಗದರ್ಶನ ಮಾಡುತ್ತದೆ. ದೇವರ ಅತ್ಯಲ್ಪವಾದ ಸಾಮರ್ಥ್ಯವು ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುವಂತೆ ಮಾಡುತ್ತದೆ.KanCCh 412.1

    ಮಾನವ ಶರೀರದ ಯಾಂತ್ರಿಕ ವ್ಯವಸ್ಥೆ (Mechanism) ಅಂದರೆ ಪರಸ್ಪರ ಹೊಂದಾಣಿಕೆಯಿಂದ ನಡೆಯುವ ಶಾರೀರಿಕ ಅಂಗಗಳನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗದು. ನಮ್ಮ ಶರೀರದಲ್ಲಿರುವ ನಿಗೂಢತೆಯು ಅತ್ಯಂತ ಬುದ್ಧಿಶಾಲಿಗಳಿಗೂ ತಬ್ಬಿಬ್ಬುಗೊಳಿಸಿ ದಿಗ್ಭ್ರಮೆ ಹುಟ್ಟಿಸುತ್ತದೆ. ಯಾಂತ್ರಿಕ ವ್ಯವಸ್ಥೆಯ ಫಲಿತಾಂಶವಾಗಿ ನಾವು ಉಸಿರಾಡುವುದಿಲ್ಲ. ಅಥವಾ ನಾಡಿಮಿಡಿಯುವುದಿಲ್ಲ. ನಾವು ದೇವರಲ್ಲಿ ಜೀವಿಸುತ್ತೇವೆ ಹಾಗೂ ಆತನಲ್ಲಿ ಚಲಿಸುತ್ತೇವೆ. ನಮ್ಮ ಪ್ರತಿಯೊಂದು ಉಸಿರಾಟ, ಹೃದಯದ ಪ್ರತಿಯೊಂದು ತುಡಿತವೂ ಸದಾಇರುವಾತನಾದ ದೇವರಸಾಮರ್ಥ್ಯದ ನಿರಂತರ ಸಾಕ್ಷ್ಯಾಧಾರವಾಗಿದೆ.KanCCh 412.2

    ಪ್ರಕೃತಿಯಲ್ಲಿ ಪ್ರಕಟಗೊಂಡಿರುವ ನಮ್ಮ ಯೆಹೋವದೇವರ ನಿಗೂಢತೆಗಳನ್ನು ಈ ವಿಶ್ವದಲ್ಲಿರುವ ಅತ್ಯಂತ ಪ್ರತಿಭಾವಂತ ವ್ಯಕ್ತಿಯಿಂದಲೂ ತಿಳಿದುಕೊಳ್ಳಲಾಗದು. ದೇವರುಕೇಳುವ ಪ್ರಶ್ನೆಗಳಿಗೆ ಈ ಲೋಕದ ಅತ್ಯಂತಮೇಧಾವಿಗಳಾದ ವಿಜ್ಞಾನಿಗಳು, ಶ್ರೇಷ್ಠವಿದ್ವಾಂಸರು ಉತ್ತರ ನೀಡಲಾರರು. ನಾವು ಉತ್ತರ ಕೊಡಬೇಕೆಂದು ಈ ಪ್ರಶ್ನೆಗಳನ್ನು ದೇವರುಕೇಳುತ್ತಿಲ್ಲ. ಬದಲಾಗಿ ದೇವರ ಅಗಾಧವಾದ ನಿಗೂಢತೆಗಳ ಕಡೆಗೆ ನಮ್ಮ ಗಮನಸೆಳೆದು ಮಾನವರಾದ ನಮ್ಮ ಜ್ಞಾನವಿವೇಕದ ಇತಿಮಿತಿ ಎಷ್ಟೆಂದು ತಿಳಿಸುತ್ತವೆ. ಅಲ್ಲದೆ ನಮ್ಮ ದಿನನಿತ್ಯದ ಜೀವನದಲ್ಲಿ ನಮ್ಮ ಇತಿಮಿತಿಯುಳ್ಳ ಜ್ಞಾನವು ಗ್ರಹಿಸಿಕೊಳ್ಳಲಾಗದಂತಹ, ನಮ್ಮ ಅರಿವಿಗೆಮೀರಿದ ಅನೇಕ ವಿಷಯಗಳಿವೆ ಎಂಬುದನ್ನೂ ಸಹ ಪ್ರಕೃತಿಯ ಮೂಲಕ ವ್ಯಕ್ತಗೊಳಿಸಲ್ಪಟ್ಟಿರುವ ದೇವರ ನಿಗೂಢತೆಯು ತಿಳಿಸುತ್ತದೆ. ಆತನ ಜ್ಞಾನವಿವೇಕವು ನಮ್ಮ ಊಹೆಗೂ ನಿಲುಕದಷ್ಟು ಅಗಾಧವಾಗಿದೆ.KanCCh 412.3

    ಈ ಲೋಕದಲ್ಲಿ ಆರಂಭವಾಗುವ ಶಿಕ್ಷಣವು, ಈ ಜೀವನದಲ್ಲಿ ಮುಕ್ತಾಯವಾಗುವುದಿಲ್ಲ. ಇದು ಯುಗಯುಗಾಂತರಗಳವರೆಗೂ ಮುಂದುವರಿಯುತ್ತದೆ. ನಿರಂತರವಾಗಿ ವಿಕಾಸಗೊಳ್ಳುತ್ತದೆ, ಆದರೆ ಎಂದೆಂದಿಗೂ ಮುಕ್ತಾಯವಾಗುವುದಿಲ್ಲ. ಪರಲೋಕದಲ್ಲಿ ಪ್ರತಿದಿನವೂ ದೇವರ ಅದ್ಭುತವಾದ ಕಾರ್ಯಗಳು, ಈ ವಿಶ್ವವನ್ನು ಸೃಷ್ಟಿಸುವುದರಲ್ಲಿ ಹಾಗೂ ಅದನ್ನು ಕಾಪಾಡಿಕೊಂಡು ಬರುತ್ತಿರುವ ಆತನ ಮಹೋನ್ನತಶಕ್ತಿಯ ಸಾಕ್ಷ್ಯಾಧಾರವು ಹೊಸಹೊಸ ಸೌಂದರ್ಯದೊಡನೆ ನಮ್ಮ ಮನಸ್ಸಿನ ಮುಂದೆ ಪ್ರಕಟಗೊಳ್ಳುತ್ತಲೇ ಇರುತ್ತದೆ. ದೇವರಸಿಂಹಾಸನದಿಂದ ಹೊಳೆಯುವ ಬೆಳಕಿನಲ್ಲಿ, ನಿಗೂಢತೆಯ ಹಾಗೂ ಎಲ್ಲಾ ರಹಸ್ಯಗಳೂ ಕಣ್ಮರೆಯಾಗುತ್ತವೆ, ಹಾಗೂ ನಮ್ಮ ಹೃದಯವು ಹಿಂದೆ ಎಂದೂ ಗ್ರಹಿಸಿಕೊಳ್ಳಲಾಗದಿದ್ದಂತ ವಿಷಯಗಳು ಹಾಗೂ ವಸ್ತುಗಳು ಎಷ್ಟೊಂದು ಸರಳವಾಗಿದೆ ಎಂದು ತಿಳಿದುಕೊಂಡಾಗ ನಮಗೆ ದಿಗ್ಭ್ರಮೆಯಾಗುತ್ತದೆ.KanCCh 413.1