Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಆತ್ಮೀಕ ಜೀವನದ ಪುನರುಜ್ಜೀವನದ ಅಗತ್ಯ

    “ನಾವು ಕ್ರಿಸ್ತನನ್ನು ಅನುಸರಿಸೋಣ, ಆತನು ಎಲ್ಲಾ ವಿಷಯಗಳಲ್ಲಿಯೂ ನಮ್ಮ ಮಾದರಿಯಾಗಿದ್ದಾನೆಂದು ಮರೆಯಬಾರದು. ಆತನ ಬೋಧನೆಗಳಲ್ಲಿ ಕಂಡುಬರದಂತ ವಿಷಯಗಳನ್ನು ಯಾವುದೇ ಅನುಮಾನವಿಲ್ಲದೆ ತಿರಸ್ಕರಿಸಿ. ನಮ್ಮಬೋಧಕರು ನಿತ್ಯವಾದ ಸತ್ಯವೆಂಬಬಂಡೆಯಂತೆ ದೃಢವಾಗಿರಬೇಕು. ಮನಸ್ಸಿನ ಪ್ರಚೋದನೆಯಿಂದ ಹಠಾತ್ತಾಗಿ ಉದ್ರೇಕಗೊಳ್ಳುವುದನ್ನು ಪವಿತ್ರಾತ್ಮನೆಂದು ಹೇಳಿಕೊಳ್ಳುವುದರ ವಿರುದ್ಧವಾಗಿ ಎಚ್ಚರಿಕೆಯಾಗಿರ್ರಿ. ನಂಬಿಕೆಯಲ್ಲಿ ಬಹಳ ದೃಢವಾಗಿದ್ದು ನಮ್ಮ ನಿರೀಕ್ಷೆಗೆ ಆಧಾರವೇನೆಂದು ಪ್ರಶ್ನಿಸುವವರಿಗೆ ಸೂಕ್ತ ಉತ್ತರ ನೀಡಲು ಅಡ್ವೆಂಟಿಸ್ಟರು ಸಮರ್ಥರಾಗಿರಬೇಕೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ.KanCCh 414.2

    ಶತ್ರುವಾದ ಸೈತಾನನು ನಮ್ಮ ಸಹೋದರ ಸಹೋದರಿಯರು ಈ ಕೊನೆಯ ಕಾಲದಲ್ಲಿ ಇತರರನ್ನು ಕ್ರಿಸ್ತನಬರೋಣಕ್ಕಾಗಿ ಸಿದ್ಧಪಡಿಸುವ ಕಾರ್ಯಮಾಡದಂತೆ ಅವರಮನಸ್ಸನ್ನು ಬೇರೆಕಡೆಗೆ ತಿರುಗಿಸಲು ಪ್ರಯತ್ನಿಸುತ್ತಾನೆ. ಕೊನೆಯಕಾಲದಲ್ಲಿ ಮಾಡಬೇಕಾದ ಕರ್ತವ್ಯಗಳು ಮತ್ತು ಬರಲಿರುವ ಸಂಕಟಗಳಿಂದ ಜನರ ಮನಸ್ಸು ದೂರವಾಗುವಂತೆ ಸೈತಾನನು ತನ್ನ ಕುತರ್ಕಗಳನ್ನು ಉಪಯೋಗಿಸುತ್ತಾನೆ. ಪರಲೋಕದಿಂದ ಕ್ರಿಸ್ತನು ಯೋಹಾನನಿಗೆ ದರ್ಶನದಲ್ಲಿ ಕಾಣಿಸಿಕೊಂಡು ಕೊಟ್ಟಂತ ಸತ್ಯದಬೆಳಕನ್ನು ಇಂತಹ ಜನರು ಅಲಕ್ಷಿಸುತ್ತಾರೆ. ಮುಂದೆನಡೆಯಲಿರುವ ಘಟನೆಗಳು ವಿಶೇಷ ಗಮನನೀಡುವಷ್ಟು ಪ್ರಾಮುಖ್ಯವಾಗಿಲ್ಲವೆಂದು ಬೋಧಿಸುತ್ತಾರೆ. ಪರಲೋಕದಿಂದ ಬಂದಿರುವ ಸತ್ಯದ ಬೆಳಕನ್ನು ಬೋಧಿಸದೆ, ದೋಷಪೂರಿತವಾದ ಹಾಗೂ ತಪ್ಪಾದ ವಿಜ್ಞಾನದಿಂದ ಜನರನ್ನು ಮರುಳುಗೊಳಿಸುತ್ತಾರೆ.KanCCh 414.3

    ಯೆಹೋವನು ಹೀಗೆ ನುಡಿಯುತ್ತಾನೆ- “ದಾರಿಗಳು ಕೂಡುವಸ್ಥಳದಲ್ಲಿ ನಿಂತುಕೊಂಡು ನೋಡಿ ಪುರಾತನಮಾರ್ಗಗಳು ಯಾವುವು, ಆ ಸನ್ಮಾರ್ಗವು ಎಲ್ಲಿ ಎಂದು ವಿಚಾರಿಸಿ ಅದರಲ್ಲೇ ನಡೆಯಿರಿ“... (ಯೆರೆಮೀಯ 6:16). ನಿಮ್ಮ ಆತ್ಮೀಕಜೀವನವನ್ನು ಪುನರುಜ್ಜೀವನಗೊಳಿಸಬೇಕೆಂದು ಕರ್ತನಾದ ದೇವರ ಹೇಳುತ್ತಾನೆ. ಬಹಳ ಕಾಲದಿಂದಲೂ ದೇವಜನರ ಆತ್ಮೀಕಚೈತನ್ಯವು ನಿರುತ್ಸಾಹಗೊಂಡಿದ್ದು ಪ್ರಜ್ಞೆತಪ್ಪಿದಂತಿದೆ. ಈ ಚೈತನ್ಯವು ಸಂಪೂರ್ಣವಾಗಿ ಉಡುಗಿ ಹೋಗುವುದಕ್ಕೆ ಮೊದಲು ಪುನರುಜ್ಜೀವನಗೊಳ್ಳಬೇಕಾಗಿದೆ. KanCCh 415.1

    ಪ್ರಾರ್ಥನಾಪೂರ್ವಕವಾಗಿ ನಿಮ್ಮಪಾಪಗಳನ್ನು ಒಪ್ಪಿ ಅರಿಕೆ ಮಾಡಿಕೊಂಡಾಗ, ಕ್ರಿಸ್ತನು ನಮ್ಮ ಹೃದಯದಲ್ಲಿ ಪ್ರವೇಶಿಸಲು ಸಾಧ್ಯವಾಗುವುದು. ಆಗ ಪವಿತ್ರಾತ್ಮನು ನಮ್ಮಲ್ಲಿ ಬರುವನು. ಪಂಚಾಶತ್ತಮ ಹಬ್ಬದದಿನದಂದು ನಡೆದಂತ ಪವಿತ್ರಾತ್ಮನ ಶಕ್ತಿಯು ನಮಗೆ ಬೇಕಾಗಿದೆ. ದೇವರು ಜಯಕೊಡುವ ಮಹಾಪರಾಕ್ರಮದಿಂದ ತನ್ನ ಆತ್ಮನನ್ನು ಕಳುಹಿಸುತ್ತೇನೆಂದು ವಾಗ್ದಾನ ಮಾಡಿರುವುದರಿಂದ, ಈ ಶಕ್ತಿಯು ಬಂದೇಬರುತ್ತದೆ.KanCCh 415.2

    ಕಷ್ಟಸಂಕಟಗಳ ಸಮಯವು ಇನ್ನೇನು ಬರಲಿದೆ. ಸತ್ಯದ ಜ್ಞಾನ ಹೊಂದಿರುವ ಪ್ರತಿಯೊಬ್ಬರೂ ಆತ್ಮೀಕವಾಗಿ ಎಚ್ಚರಗೊಂಡು ತನ್ನ ಶರೀರ, ಪ್ರಾಣ ಹಾಗೂ ಆತ್ಮವನ್ನು ದೇವರ ನಿಯಂತ್ರಣಕ್ಕೆ ಒಪ್ಪಿಸಬೇಕು. ಶತ್ರುವು ನಮ್ಮ ಬೆನ್ನು ಹತ್ತಿದ್ದಾನೆ. ನಾವು ಅವನ ವಿರುದ್ಧ ಎಚ್ಚರಿಕೆಯಿಂದಿರಬೇಕು. ದೇವರ ಸರ್ವಾಯುಧಗಳನ್ನು ನಾವು ಧರಿಸಿಕೊಳ್ಳಬೇಕು (ಎಫೆಸ 6:13-17). ಪ್ರವಾದನಾಆತ್ಮದ ಮೂಲಕ ಕೊಡಲ್ಪಟ್ಟಿರುವ ಮಾರ್ಗದರ್ಶನಗಳನ್ನು ನಾವು ಅನುಸರಿಸಬೇಕು. ಅಂತ್ಯಕಾಲಕ್ಕೆ ಕೊಡಲ್ಪಟ್ಟಿರುವ ಸತ್ಯವನ್ನು ನಾವು ಪ್ರೀತಿಸಿ ಅದಕ್ಕೆ ವಿಧೇಯರಾಗಿರಬೇಕು. ಇದು ನಮ್ಮನ್ನು ಮೋಸ ಹೋಗದಂತೆ ತಪ್ಪಿಸುತ್ತದೆ. ದೇವರು ತನ್ನವಾಕ್ಯದ ಮೂಲಕ ನಮ್ಮೊಂದಿಗೆ ಮಾತಾಡಿದ್ದಾನೆ. ಆತನು ಸಭೆಗೆ ಕೊಟ್ಟ ಸಾಕ್ಷ್ಯಾಧಾರಗಳು ಹಾಗೂ ಪುಸ್ತಕಗಳ ಮೂಲಕ ಮಾತಾಡಿದ್ದಾನೆ. ಇವು ನಮ್ಮ ಕರ್ತವ್ಯ ಹಾಗೂ ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ತಿಳಿಸಿವೆ. ಇವುಗಳಲ್ಲಿ ನಮಗೆ ಕೊಟ್ಟಿರುವ ಎಲ್ಲಾ ನಿಯಮಗಳನ್ನು ಅಕ್ಷರಕ್ಷರವಾಗಿ ಅನುಸರಿಸಬೇಕು ಹಾಗೂ ಎಚ್ಚರಿಕೆಗಳಿಗೆ ಗಮನ ಕೊಡಬೇಕು. ಅವುಗಳನ್ನು ನಾವು ಅಲಕ್ಷ್ಯಮಾಡಿದಲ್ಲಿ ಯಾವ ನೆಪ ಹೇಳಲಾದೀತು?KanCCh 415.3

    ದೇವರಿಗಾಗಿ ಸೇವೆಮಾಡುತ್ತಿರುವವರು ಯಥಾರ್ಥವಾದದ್ದನ್ನು ಬಿಟ್ಟು ಸುಳ್ಳಾದದ್ದನ್ನು ಅಂಗೀಕರಿಸಬಾರದೆಂದು ಶ್ರೀಮತಿ ವೈಟಮ್ಮನವರು ಕಳಕಳಿಯಿಂದ ಮನವಿ ಮಾಡಿದ್ದಾರೆ. ದೈವೀಕವಾದ ಹಾಗೂ ಪರಿಶುದ್ಧವಾದ ಸತ್ಯಕ್ಕೆ ಪ್ರಾಮುಖ್ಯತೆ ನೀಡುವಾಗ, ಮಾನವರ ಆಲೋಚನಾಶಕ್ತಿ, ತರ್ಕವನ್ನು ಗಣನೆಗೆ ತಂದುಕೊಳ್ಳಬಾರದು. ತನ್ನ ಜನರ ಹೃದಯಗಳಲ್ಲಿ ನಂಬಿಕೆ ಹಾಗೂ ಪ್ರೀತಿಯನ್ನು ಉತ್ತೇಜಿಸಿಪ್ರಚೋದಿಸಲು ಕ್ರಿಸ್ತನುಕಾದುಕೊಂಡಿದ್ದಾನೆ. ಯುಗಯುಗಾಂತರಗಳವರೆಗೆ ನಿಲ್ಲುವ ಸತ್ಯದಲ್ಲಿ ದೃಢವಾಗಿರಬೇಕಾದ ದೇವಜನರು ತಪ್ಪಾದ ಸಿದ್ಧಾಂತಗಳಿಗೆ ಸಮ್ಮತಿಸಬಾರದು. ಪರಲೋಕದಿಂದ “ಯಾವುದೇ ಸಂದೇಹಕ್ಕೆ ಆಸ್ಪದಕೊಡದಂತೆ ಅಧಿಕಾರಯುಕ್ತವಾಗಿ ಕೊಡಲ್ಪಟ್ಟಿರುವ ಮೂಲಭೂತ ತತ್ವಗಳನ್ನು ನಾವು ದೃಢವಾಗಿ ಅನುಸರಿಸಬೇಕೆಂದು ದೇವರು ನಮ್ಮನ್ನು ಕರೆಯುತ್ತಾನೆ.KanCCh 415.4