Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮತ್ತೊಬ್ಬರ ಹತೋಟಿಗೆ ಮನಸ್ಸನ್ನು ಒಪ್ಪಿಸುವುದು

    ಯಾರೂಸಹ ಮತ್ತೊಬ್ಬ ವ್ಯಕ್ತಿಯು ತಮ್ಮಮನಸ್ಸನ್ನು ಹತೋಟಿಗೆ ತೆಗೆದುಕೊಳ್ಳುವುದಕ್ಕೆ ಅನುಮತಿಕೊಡಬಾರದು. ಹಾಗೆಮಾಡಿದಲ್ಲಿ ತಮಗೆ ಅಪಾರವಾದ ಪ್ರಯೋಜನವುಂಟಾಗುತ್ತದೆಂದು ಕೆಲವರು ಆಲೋಚಿಸುತ್ತಾರೆ. ಮನಸ್ಸಿನ ಸ್ವಸ್ಥತೆಯು (Mindcure) ಅತ್ಯಂತ ಅಪಾಯಕಾರಿಯಾದ ವಂಚನೆಗಳಲ್ಲಿ ಒಂದಾಗಿದ್ದು, ಯಾವ ವ್ಯಕ್ತಿಯ ಮೇಲಾದರೂ ಅದನ್ನು ಪ್ರಯೋಗಿಸಬಹುದಾಗಿದೆ. ಈ ಚಿಕಿತ್ಸೆಯಿಂದ ತಾತ್ಕಾಲಿಕವಾಗಿ ಪರಿಹಾರ ಸಿಗಬಹುದು. ಆದರೆ ಚಿಕಿತ್ಸೆಗೊಳಪಟ್ಟವರ ಮನಸ್ಸು ಇನ್ನೆಂದಿಗೂ ಅಷ್ಟೊಂದು ಬಲವಾಗಿರುವುದಿಲ್ಲ ಹಾಗೂ ವಿಶ್ವಾಸಾರ್ಹವಾಗಿರುವುದಿಲ್ಲ. ಕ್ರಿಸ್ತನ ಉಡುಪಿನ ಗೊಂಡೆಯನ್ನು ಮುಟ್ಟಿದಂತ ಸ್ತ್ರೀಯಂತೆ ನಾವು ದುರ್ಬಲರಾಗಿರಬಹುದು. ಆದರೆ ನಾವು ದೇವರುಕೊಟ್ಟ ಅವಕಾಶಗಳನ್ನು ಉಪಯೋಗಿಸಿಕೊಂಡು, ನಂಬಿಕೆಯಿಂದ ಆತನ ಬಳಿಗೆ ಬಂದಲ್ಲಿ, ವಿಶ್ವಾಸದಿಂದ ಆತನ ಉಡುಪಿನಗೊಂಡೆಯನ್ನು ಮುಟ್ಟಿದ ಸ್ತ್ರೀ ಹೇಗೆ ತಕ್ಷಣದಲ್ಲಿಯೇ ವಾಸಿಯಾದಳೋ, ಅಷ್ಟೇಬೇಗನೆ ಕ್ರಿಸ್ತನು ನಮಗೆ ಉತ್ತರ ಕೊಡುವನು. KanCCh 420.1

    ಒಬ್ಬನು ಮತ್ತೊಬ್ಬ ವ್ಯಕ್ತಿಯ ನಿಯಂತ್ರಣಕ್ಕೆ ತನ್ನ ಮನಸ್ಸನ್ನು ಒಪ್ಪಿಸಿಕೊಡುವುದು ದೇವರ ಉದ್ದೇಶವಲ್ಲ. ಪುನರುತ್ಥಾನ ಹೊಂದಿ, ಈಗ ತಂದೆಯ ಬಲಪಾರ್ಶ್ವದಲ್ಲಿ ಸಿಂಹಾಸನದಲ್ಲಿ ಆಸೀನನಾಗಿರುವ ಕ್ರಿಸ್ತನು ವೈದ್ಯರಲ್ಲಿ ಮಹಾವೈದ್ಯನಾಗಿದ್ದಾನೆ. ಗುಣಹೊಂದುವುದಕ್ಕಾಗಿ ಆತನಲ್ಲಿ ದೃಷ್ಟಿಯಿಡಿರಿ. ಆತನ ಮೂಲಕ ಮಾತ್ರ ಪಾಪಿಯು ತಾನಿದ್ದಹಾಗೆಯೇ ದೇವರಬಳಿಗೆ ಬರಬಹುದು. ಪಾಪಿಗಳು ಎಂದಿಗೂ ಸಹ ಬೇರೆಯವರ ಮನಸ್ಸಿನ ಮೂಲಕ ದೇವರ ಬಳಿಗೆ ಬರಲಾಗದು. ತಂದೆಯಾದ ದೇವರು ಮತ್ತು ಪಾಪಿಗಳಾದ ಮನುಷ್ಯರ ನಡುವೆ ಬೇರೆ ಯಾವ ವ್ಯಕ್ತಿಯೂ ಎಂದೆಂದಿಗೂ ಮಧ್ಯಸ್ಥಿಕೆ ವಹಿಸಲಾಗದು.KanCCh 420.2

    ಇತರರಮನಸ್ಸನ್ನು ದೇವರಕಡೆಗೆ ತಿರುಗಿಸುವುದರಲ್ಲಿ, ಎಲ್ಲರೂ ಸಹ ಆತನೊಂದಿಗೆ ಸಹಕರಿಸಬೇಕು. ಜಗತ್ತಿನಲ್ಲಿಯೇ ಅತ್ಯಂತ ಮಹಾವೈದ್ಯನಾದ ದೇವರ ಸಾಮರ್ಥ್ಯದಹಾಗೂ ಕೃಪೆಯ ಬಗ್ಗೆ ಇತರರಿಗೆ ತಿಳಿಸಬೇಕು. ಬೇರೆ ವ್ಯಕ್ತಿಗಳ ಅಧೀನಕ್ಕೆ ನಿಮ್ಮಮನಸ್ಸುಗಳನ್ನು ಒಪ್ಪಿಸಿಕೊಡಿ ಎಂದು ನಾವು ಹೇಳಲಾಗುವುದಿಲ್ಲ. ಮನಸ್ಸಿನಸ್ವಸ್ಥತೆ (Mind cure) ಇದುವರೆಗೂ ಸಮರ್ಥಿಸಲ್ಪಟ್ಟ ಅತ್ಯಂತ ಭಯಾನಕವಾದ ವಿಜ್ಞಾನವಾಗಿದೆ. ಪ್ರತಿಯೊಬ್ಬ ದುಷ್ಟನೂ ಸಹ ತನ್ನದೇಆದ ಕೆಟ್ಟಯೋಜನೆಗಳನ್ನು ನಡೆಸುವುದಕ್ಕಾಗಿ ಇದನ್ನು ಉಪಯೋಗಿಸಬಹುದು. ಅದರಬಗ್ಗೆ ನಾವು ಭಯಪಡಬೇಕು. ಯಾವುದೇ ಕ್ರೈಸ್ತಸಂಸ್ಥೆಗಳು ಪ್ರೇತಸಂಪರ್ಕ ಹಾಗೂ ಮನಸ್ಸಿನಸ್ವಸ್ಥತೆ ಎಂಬ ಕೆಟ್ಟ ಸಿದ್ಧಾಂತಗಳನ್ನು ಉತ್ತೇಜಿಸಬಾರದು.KanCCh 420.3

    ಪ್ರಾರ್ಥಿಸುವುದನ್ನು ನಿರ್ಲಕ್ಷಿಸುವುದು ಮನುಷ್ಯರು ತಮ್ಮದೇ ಶಕ್ತಿ ಸಾಮಥ್ರ್ಯದ ಮೇಲೆ ಆತುಕೊಳ್ಳುವುದಕ್ಕೆ ಕಾರಣವಾಗುತ್ತದೆ ಹಾಗೂ ಶೋಧನೆಗೆ ಎಡೆ ಮಾಡಿಕೊಡುತ್ತದೆ. ಅನೇಕಪ್ರಕರಣಗಳಲ್ಲಿ ವೈಜ್ಞಾನಿಕ ಸಂಶೋಧನೆಗಳಿಂದ ಮನಸ್ಸಿನ ಭಾವನೆಗಳು ಆಕರ್ಷಿತಗೊಳ್ಳುತ್ತವೆ. ಇದರಿಂದ ಮನುಷ್ಯರು ತಮ್ಮ ಸ್ವಂತಸಾಮರ್ಥ್ಯದ ಬಗ್ಗೆ ಹೆಮ್ಮೆಪಡುವರು. ಮಾನವರ ಮನಸ್ಸಿಗೆ ಚಿಕಿತ್ಸೆ ನೀಡುವ ವಿಜ್ಞಾನಗಳನ್ನು ಬಹಳಷ್ಟು ಶ್ಲಾಘಿಸಲಾಗುವುದು. ವಿಜ್ಞಾನವು ತನ್ನಷ್ಟಕ್ಕೆ ಒಳ್ಳೆಯದು; ಆದರೆ ಅದನ್ನು ಸೈತಾನನು ಹಾಗೂ ಅವನ ಪ್ರಬಲರಾದ ಪ್ರತಿನಿಧಿಗಳು ಮನುಷ್ಯರನ್ನು ವಂಚಿಸಿ ನಾಶಮಾಡುವುದಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಅವನ ವಂಚನೆಯನ್ನು ಮಾನವರು ಪರಲೋಕದಿಂದ ಬಂದದ್ದೆಂದು ಒಪ್ಪಿಕೊಳ್ಳುವುದರಿಂದ, ಅವನಿಗೆ ಒಪ್ಪುವಂತರೀತಿಯಲ್ಲಿ ಜನರು ಅವನನ್ನು ಆರಾಧಿಸುತ್ತಾರೆ. ಇಂತಹ ವಿಜ್ಞಾನಗಳಿಂದ ಸದ್ಗುಣವು ನಾಶವಾಗುತ್ತದೆ ಮತ್ತು ಪ್ರೇತಸಂಪರ್ಕಸಿದ್ಧಾಂತಕ್ಕೆ ಅಸ್ತಿವಾರ ಹಾಕಲಾಗುತ್ತದೆ.KanCCh 421.1