Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನಂಬಿಕೆಯ ಪ್ರಾರ್ಥನೆ

    ನಮ್ಮ ಆತ್ಮೀಕಕಣ್ಣುಗಳು ತೆರೆಯಲ್ಪಟ್ಟಲ್ಲಿ ಸೈತಾನನದೂತರು ತಾವು ಸುರಕ್ಷಿತವಾಗಿದ್ದೇವೆ, ನಿರಾತಂಕವಾಗಿದ್ದೇವೆಂದು ಭಾವಿಸುವವರೊಂದಿಗೆ ತಮ್ಮ ದುಷ್ಟಕಾರ್ಯ ಮಾಡುತ್ತಿದ್ದಾರೆಂದು ಗ್ರಹಿಸಬಹುದು. ಆದರೆ ದೇವರಮಕ್ಕಳು ತಾವು ನಿರಾತಂಕರಾಗಿದ್ದೇವೆಂದು ಭಾವಿಸಬಾರದು. ಸೈತಾನನ ದುಷ್ಟದೂತರು ಪ್ರತಿಯೊಂದು ಕ್ಷಣದಲ್ಲಿಯೂ ನಮ್ಮನ್ನು ಹಿಂಬಾಲಿಸುತ್ತಿದ್ದಾರೆ. ಸೈತಾನನು ಸೂಚಿಸಿದಂತೆ ಮಾಡಲು ಕೆಟ್ಟಜನರು ಯಾವಾಗಲೂ ಸಿದ್ಧವಾಗಿರುತ್ತಾರೆಂದು ನಾವು ನಿರೀಕ್ಷಿಸಿರಬೇಕು. ಆದರೆ ನಮಗೆ ಕಾಣದಂತೆ ತಮ್ಮ ಕಾರ್ಯಮಾಡುವ ಸೈತಾನನ ಏಜಂಟರುಗಳ ವಿರುದ್ಧವಾಗಿ ನಾವು ಎಚ್ಚರಿಕೆ ವಹಿಸದಿದ್ದಲ್ಲಿ, ಅವರು ಹೊಸದಾದರೂಪದಲ್ಲಿ ನಮ್ಮಮುಂದೆ ಅದ್ಭುತಗಳನ್ನು ಹಾಗೂ ನಮಗೆ ಆಶ್ಚರ್ಯಹುಟ್ಟಿಸುವಂತ ಪವಾಡಗಳನ್ನು ಮಾಡುತ್ತಾರೆ. ಅವುಗಳನ್ನು ಯಶಸ್ವಿಯಾಗಿ ಎದುರಿಸುವ ಏಕೈಕ ಆಯುಧವಾದ ದೇವರ ವಾಕ್ಯವನ್ನು ನಾವು ಉಪಯೋಗಿಸಲು ಸಿದ್ಧರಾಗಿದ್ದೇವೆಯೋ?KanCCh 423.1

    ಅನೇಕರು ಸೈತಾನನ ಇಂತಹ ಪವಾಡ, ಅದ್ಭುತಗಳನ್ನು ದೇವರಿಂದ ಬಂದವೆಂದು ನಂಬುವ ಅಪಾಯದಲ್ಲಿದ್ದಾರೆ. ನಮ್ಮ ಕಣ್ಮುಂದೆಯೇ ರೋಗಿಗಳು ಗುಣವಾಗುತ್ತಾರೆ, ಅದ್ಭುತಗಳು ನಡೆಯುತ್ತವೆ. ಸೈತಾನನ ವಂಚನೆಯ ಅದ್ಭುತಗಳು ಇನ್ನೂ ಅತ್ಯಂತ ಪೂರ್ಣಪ್ರಮಾಣದಲ್ಲಿ ನಮ್ಮಮುಂದೆ ಕಾಣಲ್ಪಡಲಿವೆ. ಅಂತಹ ಶೋಧನೆ ಎದುರಿಸಲು ನಾವು ಸಿದ್ಧರಾಗಿದ್ದೇವೆಯೇ? ಅನೇಕರು ಸೈತಾನನ ಇಂತಹ ಬಲೆಯಲ್ಲಿ ಸಿಕ್ಕಿದ್ದಾರಲ್ಲವೇ? ದೇವರಾಜ್ಞೆಗಳು ಹಾಗೂ ಆತನ ಬೋಧೆನಿಯಮಗಳನ್ನು ಅಲಕ್ಷಿಸಿ, ಕಾಲ್ಪನಿಕಕತೆಗಳಿಗೆ ಮನಸ್ಸುಕೊಟ್ಟಾಗ, ಅಂತವರು ಸೈತಾನನ ಇಂತಹ ವಂಚನೆಯ ಅದ್ಭುತಗಳನ್ನು ಒಪ್ಪಿಕೊಳ್ಳಲು ಸಿದ್ಧವಾಗುತ್ತಾರೆ. ಅತಿ ಶೀಘ್ರದಲ್ಲಿಯೇ ನಡೆಯಲಿರುವ ಈ ಹೋರಾಟದಲ್ಲಿ ಭಾಗವಹಿಸಲು ನಾವು ದೇವರಆಯುಧಗಳನ್ನು ಧರಿಸಿಕೊಳ್ಳಬೇಕಾಗಿದೆ (ಎಫೆಸ 6:10-17). ಪ್ರಾರ್ಥನಾಪೂರ್ವಕವಾಗಿ ದೇವರವಾಕ್ಯವನ್ನು ಅಧ್ಯಯನ ಮಾಡಿ, ಜೀವನದಲ್ಲಿ ಅದನ್ನು ಅನುಸರಿಸಿ ನಡೆದಾಗ, ಅದು ಸೈತಾನನ ಶಕ್ತಿಯ ವಿರುದ್ಧವಾಗಿ ನಮಗೆ ಗುರಾಣಿಯಂತೆ ರಕ್ಷಣೆ ನೀಡುತ್ತದೆ ಹಾಗೂ ಕ್ರಿಸ್ತನ ರಕ್ತದ ಮೂಲಕ ನಾವು ಜಯಶಾಲಿಗಳಾಗುವಂತೆ ಮಾಡುತ್ತದೆ. KanCCh 423.2

    *****