Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ಅಧ್ಯಾಯ-61 — ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳು

  ರಕ್ಷಕನಾದ ಕ್ರಿಸ್ತನು ತನ್ನ ಶಿಷ್ಯರಿಗೆ ಕೊಟ್ಟ ಸಲಹೆ, ಸೂಚನೆಗಳು ಪ್ರತಿಯೊಂದು ಕಾಲದಲ್ಲಿಯೂ ಜೀವಿಸುವ ಆತನ ಅನುಯಾಯಿಗಳಿಗೆ ಪ್ರಯೋಜನಕಾರಿಯಾಗಿವೆ. “ಎಚ್ಚರವಾಗಿರ್ರಿ” ಎಂದು ಕ್ರಿಸ್ತನು ಹೇಳಿದಾಗ (ಮತ್ತಾಯ 24:42; 25:13) ಕೊನೆಯಕಾಲ ಸಮೀಪಿಸಿರುವಾಗ ಜೀವಿಸುತ್ತಿರುವವರಿಗೆ ಉದ್ದೇಶಿಸಿದ್ದನು. ನಾವು ಪ್ರತಿಯೊಬ್ಬರೂ ಸಹ ಪರಿಶುದ್ಧಾತ್ಮನ ಅಮೂಲ್ಯವಾದ ಕೃಪೆಗಳನ್ನು ಹೃದಯದಲ್ಲಿ ಪೋಷಿಸುವುದು ನಮ್ಮ ಕರ್ತವ್ಯವಾಗಿದೆ.KanCCh 439.1

  ಮಹಾಸಂಕಟದ ಸಮಯವು ಸಮೀಪದಲ್ಲಿದೆ. ಆ ಸಮಯದಲ್ಲಿ ಬರುವ ಕಷ್ಟ, ಸಂಕಟ, ಶೋಧನೆಗಳನ್ನು ಎದುರಿಸಲು ಹಾಗೂ ಅದರ ಕರ್ತವ್ಯಗಳನ್ನು ನಿರ್ವಹಿಸಲು ನಮಗೆ ದೃಢವಾದ ನಂಬಿಕೆಯ ಅಗತ್ಯವಿದೆ. ಎಚ್ಚರವಾಗಿದ್ದು ಎಡಬಿಡದೆ ಪ್ರಾರ್ಥಿಸುತ್ತಾ ದೇವರಲ್ಲಿ ವಿಶ್ವಾಸವಿಟ್ಟಿರುವ ಯಾರೂ ಸಹ ಸೈತಾನನ ಬಲೆಯಲ್ಲಿ ಬೀಳುವುದಿಲ್ಲ, ಬದಲಾಗಿ ಮಹಿಮೆಯಿಂದ ಅದ್ಭುತ ಜಯ ಹೊಂದುವರು.KanCCh 439.2

  ಸಹೋದರರೇ, ಅಡ್ವೆಂಟಿಸ್ಟರಾದ ನಮಗೆ ಪ್ರವಾದನಾಆತ್ಮದ ಮೂಲಕ ದೇವರವಾಕ್ಯದ ಸತ್ಯಗಳು ತಿಳಿಸಲ್ಪಟ್ಟಿವೆ. ಹಾಗಾದರೆ, ಜಗತ್ತಿನ ಇತಿಹಾಸದ ಮುಕ್ತಾಯದ ಸಮಯದಲ್ಲಿ ನಿಮ್ಮ ಪಾತ್ರವೇನಾಗಿದೆ? ಗಂಭೀರವಾದ ಈ ವಾಸ್ತವದ ಬಗ್ಗೆ ನೀವು ಎಚ್ಚರವಾಗಿದ್ದೀರಾ? ಪರಲೋಕ, ಭೂಲೋಕಗಳಲ್ಲಿ ಮಹಾಸಿದ್ಧತಾ ಕಾರ್ಯಗಳು ನಡೆಯುತ್ತಿವೆ ಎಂದು ನಿಮಗೆ ತಿಳಿದಿದೆಯೇ? ಸತ್ಯದ ಬೆಳಕನ್ನು ಅಂಗೀಕರಿಸಿದವರು ಮತ್ತು ಪ್ರವಾದನೆಯನ್ನು ಓದುವ ಹಾಗೂ ಕೇಳುವ ಅವಕಾಶ ದೊರೆತಿದ್ದವರು “ಕಾಲವು ಸಮೀಪವಾಗಿದೆ. ಎಲ್ಲವುಗಳ ಅಂತ್ಯವು ಸಮೀಪಿಸಿದೆ, ಆ ದಿನವು ಹತ್ತಿರವಿದೆ, ಬಾಗಿಲಲ್ಲೇ ಇದೆ” (ಮತ್ತಾಯ 24:33) ಎಂಬುದರ ವಿಷಯದಲ್ಲಿ ಬಹಳ ಎಚ್ಚರಿಕೆಯಾಗಿರಬೇಕು. ನಮ್ಮ ಲೋಕದಲ್ಲಿರುವ ಎಲ್ಲಾ ಕಷ್ಟ ದುಃಖ ಸಂಕಟಗಳಿಗೆ ಮೂಲಕಾರಣವಾಗಿರುವ ಪಾಪಕ್ಕೆ ಯಾರೂ ಸಹ ಕೈಹಾಕಬಾರದು, ನಾವು ಯಾರೂ ಸಹ ಸೋಮಾರಿತನದಿಂದಲೂ ಮತ್ತು ಮೂರ್ಖತನದಿಂದ ಉದಾಸೀನರಾಗಿಯೂ ಇರಬಾರದು. ನಾವೆಲ್ಲರೂ ಸಂಪೂರ್ಣವಾಗಿ ದೇವರ ಪಕ್ಷದಲ್ಲಿದ್ದೇವೆಂದು ತಿಳಿದಿರಬೇಕು. ಈ ದಿನವನ್ನು “ಯಾರು ಎದುರಿಸಲು ಶಕ್ತರು” ಎಂದು ಪ್ರಾಮಾಣಿಕರಾದವರು ನಡುಗುವ ತುಟಿಗಳಿಂದ ವಿಚಾರಿಸಲಿ. ಕೃಪೆಯ ಕಾಲ ಇನ್ನೇನು ಮುಗಿಯಲಿರುವ ಅಮೂಲ್ಯವಾದ ಈ ಸಮಯದಲ್ಲಿ ಯಾವ ರೀತಿಯಲ್ಲಿ ನೀವು ಕ್ರಿಸ್ತನಲ್ಲಿದಂತ ಗುಣಸ್ವಭಾವಗಳನ್ನು ಬೆಳೆಸಿಕೊಳ್ಳುತ್ತಿರುವಿರೀ? ಎಲ್ಲಾ ವಿಧವಾದ ಸುಕ್ಕು, ಕಳಂಕಗಳಿಂದ ನಿಮ್ಮನ್ನು ಶುದ್ಧೀಗೊಳಿಸುತ್ತಿರುವಿರಾ? ಸತ್ಯದ ಬೆಳಕನ್ನು ಅನುಸರಿಸುತ್ತಿರುವಿರಾ? ನಿಮ್ಮ ಕೆಲಸಗಳು ನಿಮ್ಮ ನಂಬಿಕೆಗೆ ಅನುಗುಣವಾಗಿವೆಯೇ? KanCCh 439.3

  ಭಾಗಶಃ ಮತ್ತು ಹೊರತೋರಿಕೆಯ ವಿಶ್ವಾಸಿಯಾಗಿರಲು ಸಾಧ್ಯ. ಆದರೂ ಅಂತವರು ದೇವರದೃಷ್ಟಿಯಲ್ಲಿ ಪರಿಪೂರ್ಣವಾಗಿಲ್ಲದಿರುವುದರಿಂದ ನಿತ್ಯಜೀವಕಳೆದುಕೊಳ್ಳುವರು. ಸತ್ಯವೇದದ ಕೆಲವುಆಜ್ಞೆಗಳನ್ನು ಕೈಕೊಂಡು ನಡೆದು ಕ್ರೈಸ್ತರೆಂದು ಕರೆಸಿಕೊಳ್ಳುವುದು ಸಾಧ್ಯ, ಆದಾಗ್ಯೂ ಅಂತವರು ಕ್ರೈಸ್ತ ಸದ್ಗುಣಗಳಿಗೆ ಅತ್ಯಗತ್ಯವಾದ ಅರ್ಹತೆ ಹೊಂದಿಲ್ಲದಿರುವ ಕಾರಣ ನಾಶವಾಗುವರು. ದೇವರು ಕೊಟ್ಟಿರುವ ಎಚ್ಚರಿಕೆಗಳನ್ನು ನಾವು ನಿರ್ಲಕ್ಷಿಸಿದಲ್ಲಿ ಅಥವಾ ಅವುಗಳಿಗೆ ಉದಾಸೀನತೆ ತೋರಿದಲ್ಲಿ ಮತ್ತು ಪಾಪದಲ್ಲಿ ಮುಳುಗಿದ್ದಲ್ಲಿ ನಾವು ನಾಶವಾಗುತ್ತೇವೆ. ನಾವು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬರುತ್ತೇವೆ (ದಾನಿಯೇಲನು 5:27). ಕೃಪೆ, ಸಮಾಧಾನ ಹಾಗೂ ಕ್ಷಮೆಯು ಎಂದೆಂದಿಗೂ ಸಂಪೂರ್ಣವಾಗಿ ಹಿಂತೆಗೆಯಲ್ಪಡುತ್ತವೆ. ನಿಮ್ಮ ಪ್ರಾರ್ಥನೆ, ದೈನ್ಯದ ವಿಜ್ಞಾಪನೆಗಳಿಗೆ ದೇವರು ಎಂದೆಂದಿಗೂ ಉತ್ತರಿಸುವುದಿಲ್ಲ. ಕೃಪೆಯು ಇನ್ನೂ ದೊರೆಯುವ ಕಾಲದಲ್ಲಿಯೇ, ರಕ್ಷಕನು ನಮಗಾಗಿ ಇನ್ನೂ ದೇವರಮುಂದೆ ವಿಜ್ಞಾಪನೆ ಮಾಡುತ್ತಿರುವಾಗಲೇ ನಿತ್ಯಜೀವ ಪಡೆದುಕೊಳ್ಳುವುದಕ್ಕಾಗಿ ನಾವು ಪ್ರಾಮಾಣಿಕವಾಗಿ ಕಾರ್ಯಮಾಡಬೇಕಾಗಿದೆ.KanCCh 440.1

  ಸೈತಾನನು ನಿದ್ರಿಸುತ್ತಿಲ್ಲ. ಅವನು ಕಣ್ಣು ತೆರೆದು ಎಚ್ಚರವಾಗಿದ್ದು, ಪ್ರವಾದನಾ ವಾಕ್ಯಗಳು ನಮ್ಮಮೇಲೆ ಯಾವುದೇ ಪರಿಣಾಮಬೀರದಂತೆ ಮಾಡಲು ಬಹಳವಾಗಿ ಪ್ರಯತ್ನಿಸುತ್ತಾನೆ. ಅವನು ತನ್ನ ಕೌಶಲ ಹಾಗೂ ವಂಚನೆಯ ಮೂಲಕ ಸತ್ಯವೇದದಲ್ಲಿ ಸ್ಪಷ್ಟವಾಗಿ ತಿಳಿಸಿರುವ ದೇವರಚಿತ್ತಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾನೆ. ಆದಿಯಿಂದಲೂ ಸೈತಾನನು ಸತ್ಯಕ್ಕೆ ಬದಲಾಗಿ ತನ್ನ ಕುತರ್ಕ ಹಾಗೂ ಕುಶಾಗ್ರತೆಯ ಮೂಲಕ ಜನರಮನಸ್ಸನ್ನು ಹತೋಟಿಗೆ ತೆಗೆದುಕೊಳ್ಳುತ್ತಿದ್ದಾನೆ. ಇಂತಹ ಕಷ್ಟದಸಮಯದಲ್ಲಿ ದೇವರಲ್ಲಿ ಭಯಭಕ್ತಿ ಇಟ್ಟಿರುವ ನೀತಿವಂತರು “ಯೆಹೋವನೇ, ನೀನು ಕಾರ್ಯ ನಡಿಸುವುದಕ್ಕೆ ಸಮಯಬಂದಿದೆ; ನಿನ್ನ ಧರ್ಮಶಾಸ್ತ್ರವನ್ನು ಉಲ್ಲಂಘಿಸಿದ್ದಾರೆ” ಎಂದು ದಾವೀದನ ವಾಕ್ಯದ ಮೂಲಕ (ಕೀರ್ತನೆಗಳು 119:126) ದೇವರ ನಾಮವನ್ನು ಮಹಿಮೆಪಡಿಸುತ್ತಾರೆ.KanCCh 440.2

  ಲೋಕದ ಇತರೆಲ್ಲಾ ಜನರಿಗಿಂತ ಅಡ್ವೆಂಟಿಸ್ಟರಾದ ನಮಗೆ ಸತ್ಯದಬೆಳಕು ಹೆಚ್ಚಾಗಿ ಕೊಡಲ್ಪಟ್ಟಿದೆ ಎಂದು ನಾವು ಹೇಳಿಕೊಳ್ಳುತ್ತೇವೆ. ಅಂದಮೇಲೆ ನಮ್ಮ ಜೀವನ ಹಾಗೂ ಗುಣಸ್ವಭಾವಗಳೂ ಸಹ ಆ ನಂಬಿಕೆಗೆ ಅನುಗುಣವಾಗಿರಬೇಕಲ್ಲವೇ? ನೀತಿವಂತರು ಅಮೂಲ್ಯವಾದ ಧಾನ್ಯದಂತೆ ಹೊರೆ ಕಟ್ಟಿ ಪರಲೋಕದ ಕಣಜಕ್ಕೆ ಸೇರಿಸಲ್ಪಡುವ ಮತ್ತು ದುಷ್ಟರು ಮಹಾ ಕೊನೆಯ ಕಾಲದಲ್ಲಿ ಹೊಟ್ಟಿನಂತೆ ಬೆಂಕಿಯಲ್ಲಿ ಸುಡಲ್ಪಡುವ ದಿನವು ಅತೀ ಸಮೀಪದಲ್ಲಿದೆ. ಆದರೆ ಗೋದಿ ಮತ್ತು ಹಣಜಿಗಳೆರಡೂ ಸುಗ್ಗೀಕಾಲದ ತನಕ ಬೆಳೆಯುತ್ತವೆ (ಮತ್ತಾಯ 13:24, 30).KanCCh 440.3

  ಜೀವನದ ಕರ್ತವ್ಯಗಳನ್ನು ನಿರ್ವಹಿಸುವಾಗ ನೀತಿವಂತರು ಕೊನೆಯವರೆಗೂ ದುಷ್ಟರ ಸಂಪರ್ಕದಲ್ಲಿರುವರು. ಸತ್ಯವೆಂಬ ಬೆಳಕಿನ ಮಕ್ಕಳಾದ ನೀತಿವಂತರಿಗೂ ಅಂಧಕಾರದಲ್ಲಿರುವ ದುಷ್ಟರಿಗೂ ಇರುವ ವ್ಯತ್ಯಾಸಗಳನ್ನು ಎಲ್ಲರೂ ನೋಡುವಂತೆ ನೀತಿವಂತರು ದುಷ್ಟರ ಮಧ್ಯದಲ್ಲಿ ವಾಸಿಸುವರು. ಈ ರೀತಿಯಲ್ಲಿ ದೇವರ ಮಕ್ಕಳು “ತಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರ ಮಾಡುವವರಾಗಿರಬೇಕು... (1 ಪೇತ್ರನು 2:9). ದೈವೀಕ ಪ್ರೀತಿಯು ದೇವರ ಮಕ್ಕಳ ಹೃದಯದಲ್ಲಿ ಪ್ರಕಾಶಿಸುವುದು, ಅವರ ಜೀವನದಲ್ಲಿ ಕ್ರಿಸ್ತನಂತ ಸಾಮರಸ್ಯವು ಕಂಡುಬರುವುದು. ಇವು ಪರಲೋಕದ ಬೆಳಕಿನ ದೈವೀಕಪ್ರೀತಿಯು ಲೋಕದಜನರು ಅದರ ಉತ್ಕೃಷ್ಟತೆಯನ್ನು ನೋಡಿ ಮೆಚ್ಚುವಂತೆ ದೇವಜನರಲ್ಲಿ ತೋರಿಬರುತ್ತದೆ.KanCCh 441.1

  ದುಷ್ಟರಾದಜನರು ಮತ್ತು ಸೈತಾನನ ಕೆಟ್ಟದೂತರ ವಿರುದ್ಧವಾಗಿ ನಾವು ಒಂದಾಗದಿದ್ದಲ್ಲಿ, ನಾವು ಎಂದಿಗೂಸಹ ದೇವರ ಸೇವೆಮಾಡಲಾಗದು. ಕ್ರಿಸ್ತನನ್ನು ಅನುಸರಿಸಲು ಬಯಸುವ ಪ್ರತಿಯೊಬ್ಬರನ್ನು ಸೈತಾನನು ತನ್ನ ಬಲೆಗೆ ಬೀಳಿಸಲು ಪ್ರಯತ್ನಿಸುವುದರಿಂದ, ಅವನ ದುಷ್ಟದೂತರು ಅಂತವರನ್ನು ಯಾವಾಗಲೂ ಹಿಂಬಾಲಿಸಿ ಅವರ ಪ್ರಯತ್ನವನ್ನು ಕೆಡಿಸಲು ನಿರತರಾಗಿರುತ್ತಾನೆ. ಕೆಟ್ಟವರು ನಾಶವಾಗುವ ಸಲುವಾಗಿ ಸೈತಾನನ ಬಲವಾದ ಭ್ರಮೆಗೆ ಒಳಗಾಗಿ ವಂಚಿಸಲ್ಪಡುವರು. ಇಂತಹ ವ್ಯಕ್ತಿಗಳು ತೋರಿಕೆಗೆ ಪ್ರಾಮಾಣಿಕರಂತೆ ನಟಿಸುತ್ತಾ, ಸಾಧ್ಯವಾದರೆ ದೇವರಾದುಕೊಂಡವರನ್ನೂ ವಂಚಿಸುವರು (ಮತ್ತಾಯ 24:24; ಮಾರ್ಕ 13:22).KanCCh 441.2

  Larger font
  Smaller font
  Copy
  Print
  Contents