Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕ್ರಿಸ್ತನ ಬರೋಣವು ತಡವಾಗುತ್ತಿದೆ ಎಂದು ತಿಳಿಯುವುದರಿಂದಾಗುವ ಅಪಾಯಗಳು

    ಆದರೆ ಕೆಟ್ಟಆಳು-ತನ್ನ ಯಜಮಾನನು ಬರುವುದಕ್ಕೆ ತಡಮಾಡುತ್ತಾನೆ ಎಂದು ತನ್ನಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ. ಅವನು ಕ್ರಿಸ್ತನಿಗಾಗಿ ಕಾದುಕೊಂಡಿದ್ದೆನೆಂದು ಎಣಿಸಿಕೊಂಡಿದ್ದಾನೆ. ಆ ಸೇವಕನು ತೋರಿಕೆಗೆ ದೇವರಸೇವೆಗೆ ತನ್ನನ್ನು ಸಮರ್ಪಿಸಿಕೊಂಡಿದ್ದೇನೆಂದು ಹೇಳಿಕೊಂಡರೂ, ಹೃದಯದಲ್ಲಿ ತನ್ನನ್ನು ಸೈತಾನನಿಗೆ ಒಪ್ಪಿಸಿಕೊಂಡಿರುತ್ತಾನೆ (ಮತ್ತಾಯ 24:48-50).KanCCh 442.2

    ಈ ಕೆಟ್ಟಆಳು ಕುಚೋದ್ಯಗಾರರಂತೆ “ಕ್ರಿಸ್ತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು?” ಎಂದು ಪ್ರಶ್ನಿಸಿ ಬಹಿರಂಗವಾಗಿ ಸತ್ಯವನ್ನು ನಿರಾಕರಿಸುತ್ತಿಲ್ಲ (2 ಪೇತ್ರನು 3:3,40). ಆದರೆ ತನ್ನ ಯಜಮಾನನು ಬರುವುದಕ್ಕೆ ತಡಮಾಡುತ್ತಾನೆಂದು ತನ್ನಮನಸ್ಸಿನಲ್ಲಿ ಅಂದುಕೊಂಡು ಅದನ್ನು ತನ್ನ ಜೀವಿತದಲ್ಲಿ ತೋರಿಸುತ್ತಾನೆ. ದುರಹಂಕಾರದಿಂದ ಅವನು ಪರಲೋಕದ ವಿಷಯದಲ್ಲಿ ಉದಾಸೀನತೆ ತೋರಿಸುತ್ತಾನೆ. ಈ ಕೆಟ್ಟಆಳು ಲೋಕದ ನೀತಿ ನಿಯಮಗಳನ್ನು ಒಪ್ಪಿಕೊಂಡು ಅದರ ಸಂಪ್ರದಾಯ, ರೂಢಿಗಳನ್ನು ಆಚರಿಸುತ್ತಾನೆ. ಸ್ವಾರ್ಥತೆ, ಲೋಕದ ಡಂಭಾಚಾರ ಮತ್ತು ಮಹತ್ವಾಕಾಂಕ್ಷೆಯು ಅವನ ಜೀವನದಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ. ಇತರರು ತನಗಿಂತ ಉನ್ನತಸ್ಥಾನಕ್ಕೇರಬಹುದೆಂಬ ಶಂಕೆಯಿಂದ ಅವನು ಅವರನ್ನು ಹೀನೈಸುತ್ತಾ ಅವರ ಪ್ರಯತ್ನಗಳನ್ನು ವಿಫಲಗೊಳಿಸಲು ಯತ್ನಿಸುವುದಲ್ಲದೆ, ಅವರ ಉದ್ದೇಶಗಳನ್ನು ಪ್ರತಿಭಟಿಸಿ ಖಂಡಿಸುತ್ತಾನೆ. ಈ ರೀತಿಯಲ್ಲಿ ಅವನು ತನ್ನ ಜೊತೆಗಾರರಾದ ಆಳುಗಳನ್ನು ಹೊಡೆಯುತ್ತಾನೆ.KanCCh 442.3

    ಕೆಟ್ಟವನಾದ ಈ ಆಳು ದೇವಜನರಿಂದ ತಾನೇ ದೂರವಾಗಿ, ದೇವಭಕ್ತಿಯಿಲ್ಲದ ಇತರ ಅನ್ಯಜನರೊಂದಿಗೆ ಹೆಚ್ಚೆಚ್ಚಾಗಿ ಸೇರುತ್ತಾನೆ. ಅವನು ಕುಡುಕರ ಸಂಗಡ ತಿನ್ನುತ್ತಾ, ಕುಡಿಯುತ್ತಾ, ಅವರ ಕೆಟ್ಟತನದಲ್ಲಿ ಪಾಲ್ಗೊಳ್ಳುತ್ತಾನೆ (ಮತ್ತಾಯ 24:48-50). ಈ ರೀತಿಯಲ್ಲಿ ಅವನು ದೇವರ ಎರಡನೇಬರೋಣದ ಬಗ್ಗೆ ಉದಾಸೀನತೆ ತೋರಿಸಿ ಮೋಸಕ್ಕೊಳಗಾಗಿ ಸೋಮಾರಿಯಾಗುವನು.KanCCh 442.4