Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಹೊಸದೆಂದು ಕರೆಯಲಾಗುವ ಬೆಳಕಿನಿಂದ ಅನೇಕರು ವಂಚಿಸಲ್ಪಡುವರು

    ಈ ಲೋಕದಮೇಲೆ ಬರಲಿರುವ ನಾಶದಲ್ಲಿ ದೇವರ ಉಳಿದಸಭೆಯ ಜನರೂ ಸಹ ನಾಶವಾಗಬೇಕೆಂದು ಸೈತಾನನು ಆಶಿಸುತ್ತಾನೆ. ಕ್ರಿಸ್ತನ ಬರೋಣವು ಸಮೀಪಿಸುತ್ತಿರುವಾಗ, ಅವನು ಇನ್ನೂ ಹೆಚ್ಚಿನಪ್ರಯತ್ನದಿಂದ ಅವರನ್ನು ನಾಶಮಾಡಬೇಕೆಂದು ನಿರ್ಧರಿಸಿದ್ದಾನೆ. ತಮಗೆ ದೇವರಿಂದ ಹೊಸ ಸತ್ಯದ ಬೆಳಕುಬಂದಿದೆ ಅಥವಾ ಹೊಸದಾದ ದರ್ಶನಕಂಡುಬಂದಿದೆ ಎಂದು ಹೇಳಿಕೊಳ್ಳುವ ಅನೇಕ ಸ್ತ್ರೀಪುರುಷರು ದೇವಜನರ ನಂಬಿಕೆಯನ್ನು ಕುಂದಿಸಲು ಪ್ರಯತ್ನಿಸುತ್ತಾರೆ. ಇವರು ಹೊಸದೆಂದು ಹೇಳಿಕೊಳ್ಳುವ ಸಿದ್ಧಾಂತಗಳು, ದೇವರಿಂದ ಬಂದದ್ದಲ್ಲವಾದರೂ ಅನೇಕರು ಇದರಿಂದ ಮೋಸಹೋಗುತ್ತಾರೆ.KanCCh 443.1

    ಸುಳ್ಳಾದ ವರದಿಗಳು ಪ್ರಚಾರಗೊಳ್ಳುತ್ತವೆ ಹಾಗೂ ಇದರ ಮೋಸದ ಉರುಲಿಗೆ ಅನೇಕರು ಸಿಕ್ಕಿಕೊಳ್ಳುತ್ತಾರೆ. ಈ ಗಾಳಿಮಾತುಗಳನ್ನು ಅನೇಕರು ನಂಬುವುದಲ್ಲದೆ, ಇತರರಿಗೂ ಸಹ ಅದನ್ನು ಹಬ್ಬಿಸುತ್ತಾರೆ. ಈ ಮೂಲಕ ಪರಮಶತ್ರುವಾದ ಸೈತಾನನೊಂದಿಗೆ ಕೂಡಿಸುವ ಒಂದು ಸಂಪರ್ಕಕೊಂಡಿಯು ಉಂಟಾಗುವುದು. ಈ ವರದಿಗಳು ಯಾವಾಗಲೂ ದೇವರು ಕಳುಹಿಸುವ ಸಂದೇಶಗಳಿಗೆ ನೇರವಾದ ಹಾಗೂ ಮುಕ್ತವಾದ ಪ್ರತಿಭಟನೆಯ ಮೂಲಕ ವ್ಯಕ್ತವಾಗುವುದಿಲ್ಲ. ಬದಲಾಗಿ ಅನೇಕವಿಧವಾಗಿ ವ್ಯವಸ್ಥಿತವಾದ ಅಪನಂಬಿಕೆಯು ವ್ಯಕ್ತಪಡಿಸಲ್ಪಡುವುದು. ಕೊಡಲಾದ ಪ್ರತಿಯೊಂದು ಸುಳ್ಳಾದಹೇಳಿಕೆಗಳು ದೇವರಸಂದೇಶದ ಬಗ್ಗೆ ಅಪನಂಬಿಕೆಯನ್ನು ಮತ್ತಷ್ಟು ಬಲಪಡಿಸುವುದರಿಂದ, ಅನೇಕರು ತಪ್ಪಾದ ಮಾರ್ಗದಲ್ಲಿ ನಡೆಯುತ್ತಾರೆ.KanCCh 443.2