Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-10 — ಕ್ರೈಸ್ತರು ದೇವರ ಪ್ರತಿನಿಧಿಗಳು

    ತನ್ನ ಜನರ ಮೂಲಕ ಪರಲೋಕರಾಜ್ಯದ ಸಿದ್ಧಾಂತಗಳನ್ನು ಪ್ರಕಟಪಡಿಸುವುದು ದೇವರ ಉದ್ದೇಶವಾಗಿದೆ. ಕ್ರೈಸ್ತರು ತಮ್ಮ ಗುಣಸ್ವಭಾವ ಮತ್ತು ದಿನನಿತ್ಯದ ಜೀವನದಲ್ಲಿ ಈ ಸಿದ್ಧಾಂತಗಳನ್ನು ಅನುಸರಿಸಿ ನಡೆಯಬೇಕು. ಅವರು ಈ ಲೋಕದ ಆಚಾರವಿಚಾರ, ಸಂಪ್ರದಾಯ, ಪದ್ಧತಿಗಳಿಂದ ಪ್ರತ್ಯೇಕವಾಗಿರಬೇಕೆಂದು ದೇವರು ಬಯಸುತ್ತಾನೆ. ತನ್ನ ಚಿತ್ತವನ್ನು ಈ ಜನರಿಗೆ ತಿಳಿಯಪಡಿಸುವುದಕ್ಕಾಗಿ ದೇವರು ತನ್ನ ಬಳಿಗೆ ಅವರು ಬರಬೇಕೆಂದು ಆಶಿಸುತ್ತಾನೆ.KanCCh 62.1

    ದೇವರು ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಬಿಡುಗಡೆ ಮಾಡಿದ ನಂತರ ಅವರ ಮೂಲಕ ಯಾವ ಉದ್ದೇಶ ನೆರವೇರಿಸಲು ಬಯಸಿದ್ದನೋ, ಇಂದಿಗೂ ಸಹ ತನ್ನ ಜನರ ಮೂಲಕ ಅದನ್ನು ಸಾಧಿಸಬೇಕೆಂಬುದು ಆತನ ಉದ್ದೇಶವಾಗಿದೆ. ಕ್ರೈಸ್ತ ಸಭೆಯಲ್ಲಿ ಕಂಡುಬರುವ ಒಳ್ಳೇತನ, ದಯೆ, ಕರುಣೆ, ನ್ಯಾಯ ಹಾಗೂ ದೇವರ ಪ್ರೀತಿಯನ್ನು ಜನರು ನೋಡುವುದರಿಂದ ಈ ಲೋಕದಮೇಲೆ ಆತನ ಗುಣಸ್ವಭಾವವು ಸ್ಪಷ್ಟವಾದ ಪರಿಣಾಮಬೀರುವುದು. ಈ ರೀತಿಯಾಗಿ ದೇವರ ಆಜ್ಞೆಯು ಜೀವನದಲ್ಲಿ ಮಾದರಿಯಾದಾಗ ದೇವರನ್ನು ಪ್ರೀತಿಸಿ, ಆತನಿಗೆ ಭಯಪಟ್ಟು ಆತನನ್ನು ಸೇವಿಸುವವರು ಜಗತ್ತಿನ ಇತರೆಲ್ಲಾ ಜನರಿಗಿಂತ ಉನ್ನತರಾಗಿದ್ದಾರೆಂದು ಲೋಕವೇ ಅರಿತುಕೊಳ್ಳುವುದು.KanCCh 62.2

    ದೇವರು ತನ್ನ ಜನರಲ್ಲಿ ಪ್ರತಿಯೊಬ್ಬರನ್ನು ಗಮನಿಸುತ್ತಾನೆ ಹಾಗೂ ಅವರ ಬಗ್ಗೆ ತನ್ನದೇ ಆದ ಯೋಜನೆ ಹೊಂದಿದ್ದಾನೆ. ಪರಿಶುದ್ಧವಾದ ತನ್ನ ಆಜ್ಞೆಗಳನ್ನು ಅನುಸರಿಸಿ ನಡೆಯುವವರು ಒಂದು ವಿಶಿಷ್ಟ ಜನಾಂಗವಾಗಿರಬೇಕೆಂಬುದು ಆತನ ಉದ್ದೇಶವಾಗಿದೆ. ಪುರಾತನ ಇಸ್ರಾಯೇಲ್ಯರಿಗೆ ದೇವರು ಮೋಶೆಯ ಮೂಲಕ ತಿಳಿಸಿದ ಮಾತುಗಳು ಇಂದಿನ ದೇವಜನರಿಗೂ ಸಹ ಅನ್ವಯವಾಗುತ್ತದೆ : “ನೀವು ನಿಮ್ಮ ದೇವರಾದ ಯೆಹೋವನಿಗೆ ಮೀಸಲಾದ ಜನರಾಗಿದ್ದೀರಲ್ಲವೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯ ಜನವಾಗುವುದಕ್ಕೆ ಆರಿಸಿಕೊಂಡನು” (ಧರ್ಮೋಪದೇಶಕಾಂಡ 7:6).KanCCh 62.3