Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಶ್ರದ್ಧೆ ಮತ್ತು ಕ್ರಮಬದ್ಧವಾಗಿ ಅಧ್ಯಯನ ಮಾಡಬೇಕು

    ತಂದೆತಾಯಿಯರೇ, ನೀವು ಹಾಗೂ ನಿಮ್ಮ ಮಕ್ಕಳು ದೇವರಸೇವೆ ಮಾಡಬೇಕು ಹಾಗೂ ಜಗತ್ತಿಗೆ ಒಳ್ಳೆಯದು ಮಾಡಬೇಕೆಂಬ ಉದ್ದೇಶ ಹೊಂದಿದ್ದಲ್ಲಿ, ಸತ್ಯವೇದವು ನಿಮ್ಮ ಪಠ್ಯಪುಸ್ತಕವಾಗಿರಬೇಕು - ಅದು ಸೈತಾನನ ಎಲ್ಲಾ ಕುತಂತ್ರಗಳನ್ನು ಬಯಲು ಮಾಡುತ್ತದೆ. ಸತ್ಯವೇದವು ನೈತಿಕದುಷ್ಟತ್ವಗಳನ್ನು ಗದರಿಸಿ, ವಿಮರ್ಶಿಸುತ್ತದೆ, ಹಾಗೂ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಣ ವ್ಯತ್ಯಾಸವನ್ನು ತಿಳಿದುಕೊಳ್ಳುವ ಸಾಮರ್ಥ್ಯವನ್ನುನಮಗೆ ಕೊಡುತ್ತದೆ. ಶಾಲೆಯಲ್ಲಾಗಲಿ ಅಥವಾ ಮನೆಯಲ್ಲಾಗಲಿ ಯಾವುದೇ ಶಿಕ್ಷಣದೊರೆಯಲಿ, ಸತ್ಯವೇದವೆಂಬ ಮಹಾಶಿಕ್ಷಣವು ಮೊದಲು ದೊರೆಯಬೇಕು. ಸತ್ಯವೇದಕ್ಕೆಮೊದಲಸ್ಥಾನ ಕೊಟ್ಟಾಗ, ದೇವರು ಗೌರವಿಸಲ್ಪಡುತ್ತಾನೆ ಹಾಗೂ ನಿಮ್ಮ ಮಕ್ಕಳಪರಿವರ್ತನೆಯಲ್ಲಿ ಆತನು ಕಾರ್ಯ ಮಾಡುತ್ತಾನೆ. ಪರಿಶುದ್ಧವಾದ ಈ ಗ್ರಂಥದಲ್ಲಿಹೇರಳವಾದ ಸತ್ಯವಿದೆ ಮತ್ತು ಮಕ್ಕಳಿಗೆ ಅದರಲ್ಲಿ ತೀವ್ರವಾದ ಆಸಕ್ತಿ ಇರದಿದ್ದಲ್ಲಿ,ಅದಕ್ಕೆ ತಂದೆ ತಾಯಿಯರೇ ಹೊಣೆಯಾಗಿದ್ದಾರೆ.KanCCh 75.3

    ಶೋಧಕನಾದ ಸೈತಾನನು ಯೇಸುಸ್ವಾಮಿಯನ್ನು ತನ್ನ ಕಪಟದಿಂದ ಶೋಧಿಸಲುಬಂದಾಗ, “ಶಾಸ್ತ್ರದಲ್ಲಿ ಬರೆದಿದೆ” ಎಂಬ ಒಂದೇಒಂದು ಆಯುಧವನ್ನು ಆತನುಉಪಯೋಗಿಸಿದನು. ಸತ್ಯವೇದದಲ್ಲಿರುವ ಸತ್ಯವನ್ನು ಬೋಧಿಸುವುದೇ ಪ್ರತಿಯೊಬ್ಬತಂದೆತಾಯಿಯರು ಮಾಡಬೇಕಾದ ಮಹಾಕಾರ್ಯವಾಗಿದೆ. ಹಿತಕರವಾದ ಮತ್ತುಸಂತೋಷಕರವಾದ ಮನಸ್ಸಿನಿಂದ ದೇವರು ತಿಳಿಸಿರುವ ಸತ್ಯಗಳನ್ನು ಮಕ್ಕಳಿಗೆ ತಿಳಿಯಪಡಿಸಿ.ತಂದೆತಾಯಿಯರಾದ ನೀವು ಸ್ವತಃ ತಾಳ್ಮೆ, ಕರುಣೆ, ಪ್ರೀತಿಯನ್ನು ಅನುಸರಿಸುವ ಮೂಲಕದಿನನಿತ್ಯದ ಜೀವನದಲ್ಲಿ ನಿಮ್ಮ ಮಕ್ಕಳಿಗೆ ಮಾದರಿಯಾಗಿರಬೇಕು. ಅವರು ಇಷ್ಟಬಂದಂತೆ ಮಾಡಲು ಬಿಡಬಾರದು, ಬದಲಾಗಿ ದೇವರವಾಕ್ಯವನ್ನು ಜೀವನದಲ್ಲಿಅನುಸರಿಸಬೇಕಾದದ್ದು ನಿಮ್ಮ ಕರ್ತವ್ಯವೆಂದು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು.ತಂದೆತಾಯಿಯರಾದ ನೀವು ಅವರನ್ನು ದೇವರ ಭಯಭಕ್ತಿಯಲ್ಲಿ ಮತ್ತು ಎಚ್ಚರಿಕೆಯಲ್ಲಿಬೆಳೆಸಬೇಕು.KanCCh 76.1

    ಕುಟುಂಬಪ್ರಾರ್ಥನೆಯಲ್ಲಿ ಸತ್ಯವೇದ ಅಧ್ಯಯನಮಾಡುವಾಗ ಒಂದು ಕ್ರಮವನ್ನುಅನುಸರಿಸಬೇಕು. ಲೌಕಿಕವಾದ ಯಾವುದನ್ನೂ ಗಣನೆಗೆ ತೆಗೆದುಕೊಳ್ಳಬೇಡಿ, ಬದಲಾಗಿಕುಟುಂಬದವರಿಗೆ ಆತ್ಮೀಕವಾದ ಜೀವದರೊಟ್ಟಿ ದೊರೆಯುವಂತೆ ಮಾಡಬೇಕು.ದೇವರವಾಕ್ಯವನ್ನು ಕುಟುಂಬದಲ್ಲಿ ಸಂತೋಷದಿಂದಲೂ, ಸೌಹಾರ್ದವಾತಾವರಣದಲ್ಲಿಯೂ ಅರ್ಧಗಂಟೆ ಅಥವಾ ಒಂದುಗಂಟೆ ಸಮಯಅಧ್ಯಯನಮಾಡಿದಲ್ಲಿ ದೊರೆಯುವ ಉತ್ತಮ ಫಲಿತಾಂಶವನ್ನು ಅಂದಾಜು ಮಾಡುವುದುಅಸಾಧ್ಯ. ವಿವಿಧ ಸಮಯದಲ್ಲಿ, ಬೇರೆಬೇರೆ ಸಂದರ್ಭಗಳಲ್ಲಿ ಒಂದು ವಿಷಯದ ಬಗ್ಗೆತಿಳಿಸಲ್ಪಟ್ಟಿರುವ ಎಲ್ಲವುಗಳನ್ನು ಒಟ್ಟಾಗಿ ಅಧ್ಯಯನ ಮಾಡಬೇಕು. ಮನೆಗೆ ಅತಿಥಿಗಳುಅಥವಾ ಸ್ನೇಹಿತರು ಬಂದರೂ ಸಹ ಇದನ್ನು ಬಿಡಬಾರದು. ಅವರೂ ಸಹ ಅದರಲ್ಲಿಭಾಗಿಯಾಗಲಿ. ಈ ಲೋಕದಲ್ಲಿ ದೊರೆಯುವ ಸುಖಸಂತೋಷ ಅಥವಾಲಾಭಗಳಿಸುವುದಕ್ಕಿಂತಲೂ ಹೆಚ್ಚಾಗಿ, ದೇವರವಾಕ್ಯದ ಜ್ಞಾನ ಪಡೆದುಕೊಳ್ಳುವುದು ನಿಮ್ಮಕುಟುಂಬಕ್ಕೆ ಬಹಳ ಮುಖ್ಯವೆಂದು ಬಂದ ಅತಿಥಿಗಳಿಗೂ ಅಥವಾ ಸ್ನೇಹಿತರಿಗೂಮನವರಿಕೆಯಾಗಲಿ.KanCCh 76.2

    ನಾವು ಸತ್ಯವೇದವನ್ನು ಪ್ರತಿದಿನವೂ ಶ್ರದ್ಧೆಯಿಂದಲೂ ಮತ್ತು ಪ್ರಾರ್ಥನಾ ಪೂರ್ವಕವಾಗಿಯೂ ಅಧ್ಯಯನ ಮಾಡಿದಲ್ಲಿ, ಅದರಲ್ಲಿರುವ ಸುಂದರವಾದ ಸತ್ಯಗಳು ಪ್ರತಿದಿನವೂ ನಮಗೆ ಹೊಸದಾದ ಮತ್ತು ಸ್ಪಷ್ಟವಾದ ಬೆಳಕು ಪರಿಣಾಮಕಾರಿಯಾಗಿ ಕಂಡುಬರುತ್ತದೆ.KanCCh 77.1

    ದೇವರ ಭಯಭಕ್ತಿಯಲ್ಲಿಯೂ ಹಾಗೂ ಎಚ್ಚರಿಕೆಯಲ್ಲಿಯೂ ನಿಮ್ಮ ಮಕ್ಕಳನ್ನು ಬೆಳೆಸಬೇಕಾದಲ್ಲಿ, ಸತ್ಯವೇದವು ನಿಮಗೆ ದಾರಿದೀಪವೂ, ಮಾರ್ಗದರ್ಶನವೂ ಆಗಿರಬೇಕು. ಮಾದರಿಯಾದ ಕ್ರಿಸ್ತನ ಗುಣಸ್ವಭಾವ ಮತ್ತು ಜೀವನವನ್ನು ಅವರು ಅನುಸರಿಸಬೇಕು. ಒಂದುವೇಳೆ ಮಕ್ಕಳು ತಪ್ಪುಮಾಡಿದಲ್ಲಿ, ಅಂತಹ ಪಾಪ ಮಾಡಿದವರಿಗೆ ಸತ್ಯವೇದದಲ್ಲಿ ಕರ್ತನು ಏನು ತಿಳಿಸಿದ್ದಾನೆಂಬುದನ್ನು ಓದಿ ಮನವರಿಕೆ ಮಾಡಿ. ಅವರ ಒಂದೇಒಂದು ತಪ್ಪನ್ನು ತಂದೆತಾಯಿಗಳಾದ ನೀವು ಅಲಕ್ಷ್ಯ ಮಾಡಿದಲ್ಲಿ, ಶಿಕ್ಷಕರು ಕಂಡೂ ಕಾಣದಂತೆ ಮೌನವಹಿಸಿದಲ್ಲಿ, ಮುಂದೆ ಅವರ ಸಂಪೂರ್ಣ ಗುಣಸ್ವಭಾವವೇ ಕೆಟ್ಟದ್ದಾಗಬಹುದು. ಹೊಸಹೃದಯವು ಬರಬೇಕೆಂದು ಮಕ್ಕಳಿಗೆ ಬೋಧಿಸಿ, ಹೊಸಅಭಿರುಚಿ ಹುಟ್ಟಿಸಬೇಕು ಮತ್ತು ಹೊಸದಾದ ಉದ್ದೇಶಗಳನ್ನು ಅವರಲ್ಲಿ ಪ್ರೇರಿಸಬೇಕು. ಕ್ರಿಸ್ತನಿಂದ ಅವರು ಸಹಾಯಹೊಂದಬೇಕು. ದೇವರವಾಕ್ಯದಲ್ಲಿ ತಿಳಿಸಲ್ಪಟ್ಟಿರುವಂತೆ, ದೇವರ ಗುಣಸ್ವಭಾವದ ಪರಿಚಯವು ಅವರಿಗೆ ತಿಳಿದುಬರಬೇಕು.KanCCh 77.2