Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ತಂಬಾಕು ಸೇವನೆಯು ಸ್ತ್ರೀಯರಿಗೂ ಮತ್ತು ಮಕ್ಕಳಿಗೂ ಹಾನಿಕರ

    ಬೀಡಿ, ಸಿಗರೇಟು, ಚುಟ್ಟದಿಂದಲೂ ಮತ್ತು ಇದನ್ನು ಸೇವಿಸುವವರ ದುರ್ಗಂಧದಿಂದಲೂ ಸ್ತ್ರೀಯರು ಮತ್ತು ಮಕ್ಕಳು ಮಲಿನವಾದ ಗಾಳಿಯನ್ನು ಉಸಿರಾಡಬೇಕಾಗುತ್ತದೆ. ಇಂತಹ ಪರಿಸರದಲ್ಲಿ ವಾಸಿಸುವವರು ಯಾವಾಗಲೂ ಅನಾರೋಗ್ಯದಿಂದ ನರಳುವರು. ಧೂಮಪಾನಿಗಳ ಶ್ವಾಸಕೋಶಗಳು ಮತ್ತು ಚರ್ಮದ ರಂಧ್ರಗಳಿಂದ ಹೊರಬರುವ ತಂಬಾಕಿನ ವಿಷಯುಕ್ತ ದುರ್ಗಂಧದ ಹಬೆಯನ್ನು ಚಿಕ್ಕಮಕ್ಕಳು ಉಸಿರಾಟದ ಮೂಲಕ ಒಳಕ್ಕೆಳೆದುಕೊಳ್ಳುವುದರಿಂದ, ಅವರ ಶರೀರವುವಿಷಯುಕ್ತವಾಗುವುದು. ಕೆಲವು ಶಿಶುಗಳಲ್ಲಿ ಇದು ನಿಧಾನವಾಗಿ ವಿಷದಂತೆ ಹರಡಿ, ಅವುಗಳ ಮೆದುಳು, ಹೃದಯ, ಪಿತ್ತಜನಕಾಂಗ ಹಾಗೂ ಶ್ವಾಸಕೋಶಗಳ ಮೇಲೆ ಹಾನಿಕರ ಪರಿಣಾಮ ಬೀರುವವು. ಇದು ಕೆಲವು ವೇಳೆ ಅವರ ಮೇಲೆ ಶೀಘ್ರ ಪರಿಣಾಮಬೀರಿ, ಅವರಲ್ಲಿ ಸೆಡೆತ ಅಂದರೆ ಹಠಾತ್ತನೆ ಉಂಟಾಗುವ ಮಾಂಸಖಂಡಗಳ ಎಳೆತ ಉಂಟಾಗುವುದು. ಮತ್ತು ಇದಕ್ಕಿದ್ದಂತೆ ಶಿಶುಗಳು ಸಾಯಲೂ ಬಹುದು. ಧೂಮಪಾನದ ಚಟವುಳ್ಳವರು ತಮ್ಮ ಶ್ವಾಸಕೋಶಗಳಿಂದ ಉಸಿರನ್ನು ಹೊರಬಿಟ್ಟಾಗ, ಅವರ ಸುತ್ತಲಿರುವ ಗಾಳಿಯು ವಿಷಯುಕ್ತವಾಗುವುದು.KanCCh 103.3

    ಹಿಂದಿನ ತಲೆಮಾರಿನವರ ಅನಾರೋಗ್ಯಕರ ಅಭ್ಯಾಸಗಳು ಇಂದಿನ ಮಕ್ಕಳು ಮತ್ತು ಯೌವನಸ್ಥರ ಮೇಲೆ ಹಾನಿಕರ ಪರಿಣಾಮ ಬೀರುತ್ತದೆ. ತಂದೆ ತಾಯಿಗಳ ತಂಬಾಕು ಸೇವನೆಯ ದುಶ್ಚಟದಿಂದ ಮಕ್ಕಳಿಗೆ ಮಾನಸಿಕ ಅಸಾಮರ್ಥ್ಯ, ದೈಹಿಕ ಬಲಹೀನತೆ, ನರಗಳ ಅವ್ಯವಸ್ಥೆ ಮತ್ತು ಅಸಹಜವಾದ ಹಾತೊರೆತ ಉಂಟಾಗುತ್ತದೆ. ಇದೇ ದುರಭ್ಯಾಸವನ್ನು ಮಕ್ಕಳು ಮುಂದುವರಿಸಿದಲ್ಲಿ, ಅದರ ದುಷ್ಪರಿಣಾಮವು ಶಾಶ್ವತವಾಗಿ ಕಂಡುಬರುತ್ತದೆ.KanCCh 104.1