Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಪ್ರೀತಿಯುಕ್ರಿಸ್ತನಿಂದಬಂದಒಂದುಅಮೂಲ್ಯವರ

    ಪ್ರೀತಿಯು ಕ್ರಿಸ್ತನಿಂದ ನಿಮಗೆ ಬರುವಂತಹ ಒಂದು ಅಮೂಲ್ಯ ವರವಾಗಿದೆ. ನಿರ್ಮಲವಾದ ಹಾಗೂ ಪರಿಶುದ್ಧವಾದ ಪ್ರೀತಿಯ ಒಂದು ಭಾವನೆಯಲ್ಲ. ಬದಲಾಗಿ ಒಂದು ಸಿದ್ಧಾಂತವಾಗಿದೆ. ಯಥಾರ್ಥ ಪ್ರೀತಿಯಿಂದ ಪ್ರೇರಿಸಲ್ಪಡುವವರು ಎಂದಿಗೂ ಸಹ ಅವಿವೇಕಿಗಳು ಅಥವಾ ನಿರ್ಲಕ್ಷ್ಯದಿಂದ ನಡೆದುಕೊಳ್ಳುವವರೂ ಆಗಿರುವುದಿಲ್ಲ. ನಿಜವಾದ, ಯಥಾರ್ಥವಾದ, ಶ್ರದ್ಧೆಯುಳ್ಳ ಪರಿಶುದ್ಧ ಪ್ರೀತಿ ಬಹಳ ಅಪರೂಪವಾಗಿದೆ. ಬಲವಾದ ಕಾಮೋದ್ರೇಕದ ಲೈಂಗಿಕ ಭಾವನೆಯನ್ನು ಯಥಾರ್ಥ ಪ್ರೀತಿಯೆಂದು ತಪ್ಪಾಗಿ ತಿಳಿದುಕೊಳ್ಳಲಾಗಿದೆ. ಯಥಾರ್ಥವಾದ ಪ್ರೀತಿಯು ಉನ್ನತವೂ, ಪರಿಶುದ್ಧವೂ ಆದ ಸಿದ್ಧಾಂತವಾಗಿದೆ. ತತ್‍ಕ್ಷಣದಲ್ಲಿಭಾವೋದ್ರೇಕಕ್ಕೆ ಒಳಗಾಗಿ, ತೀವ್ರವಾಗಿ ಪರೀಕ್ಷೆಗೊಳಗಾದಾಗ ಮಾಯವಾಗುವಂತ ಪ್ರೀತಿಗಿಂತ ಇದು ಸಂಪೂರ್ಣವಾಗಿ ಭಿನ್ನವಾಗಿದೆ. ಪ್ರೀತಿಯು ಪರಲೋಕ ಬೆಳವಣಿಗೆಯ ಒಂದು ಸಸ್ಯವಾಗಿದೆ ಮತ್ತು ಅದನ್ನು ಪೋಷಿಸಿ ಆರೈಕೆ ಮಾಡಬೇಕು. ಪ್ರೀತಿಪೂರಿತ ಹೃದಯ, ಯಥಾರ್ಥವಾದ ಒಲವಿನ ಮಾತುಗಳು ಕುಟುಂಬವನ್ನು ಸಂತೋಷದಲ್ಲಿರಿಸುತ್ತವೆ. ಇವು ಇತರರ ಮೇಲೆ ಉನ್ನತ ಪ್ರಭಾವ ಬೀರುತ್ತವೆ.KanCCh 120.1

    ಪರಿಶುದ್ಧ ಪ್ರೀತಿಯು ಎಲ್ಲಾ ವಿಷಯಗಳಲ್ಲಿ, ಯೋಜನೆಯಲ್ಲಿಯೂ ದೇವರಿಗೆ ಪ್ರಾಮುಖ್ಯತೆ ನೀಡುವುದಲ್ಲದೆ, ದೇವರಾತ್ಮನೊಂದಿಗೆ ಪರಿಪೂರ್ಣ ಸಾಮರಸ್ಯ ಹೊಂದಿರುತ್ತದೆ. ಆದರೆ ಮೋಹವು ಹಠಮಾರಿ, ದುಡುಕಿನ ಸ್ವಭಾವವು. ಅವಿವೇಕತನದ್ದೂ ಆಗಿ, ಎಲ್ಲಾ ಇತಿಮಿತಿಗಳನ್ನು ಮೊಂಡುತನದಿಂದ ವಿರೋಧಿಸುತ್ತದೆ. ಹಾಗೂ ಅದರ ಆಯ್ಕೆ ಉದ್ದೇಶವನ್ನು ಒಂದು ವಿಗ್ರಹವನ್ನಾಗಿ ಅಂದರೆ ಪ್ರಾಮುಖ್ಯವಾಗಿ ಮಾಡಿಕೊಳ್ಳುತ್ತದೆ. ಯಥಾರ್ಥವಾದ ಪ್ರೀತಿ ಹೊಂದಿರುವವರ ಪ್ರತಿಯೊಂದು ನಡವಳಿಕೆಯಲ್ಲಿಯೂ, ದೇವರ ಕೃಪೆಯು ತೋರಿಸಲ್ಪಡುತ್ತದೆ. ವಿನಯತೆ, ಸರಳತೆ. ಪ್ರಾಮಾಣಿಕತೆ ಮತ್ತು ಧರ್ಮ ಮುಂತಾದ ಶೀಲ ಸ್ವಭಾವವು ಮದುವೆಯ ಪ್ರತಿಯೊಂದು ಹಂತದಲ್ಲಿಯೂ ಯಥಾರ್ಥ ಪ್ರೀತಿಯಿರುವ ಯುವಕ/ ಯುವತಿಯರಲ್ಲಿ ತೋರಿಬರುತ್ತದೆ. ಇಂತಹ ಸ್ವಭಾವ ಹೊಂದಿರುವವರು ಪ್ರಾರ್ಥನಾಕೂಟಗಳಲ್ಲಿ ಹಾಗೂ ಧಾರ್ಮಿಕಸೇವೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದಿಲ್ಲ. ಅಲ್ಲದೆ ಸತ್ಯದಲ್ಲಿ ಅವರಿಗಿರುವ ಉತ್ಸಾಹವು ಎಂದೂ ಕುಂದಿಹೋಗುವುದಿಲ್ಲ.KanCCh 120.2

    ಉತ್ತಮವಾದ ಅಡಿಪಾಯವಿಲ್ಲದಿರುವ, ಆದರೆ ಇಂದ್ರಿಯಗಳ ತೃಪ್ತಿಪಡಿಸುವಂತ ಪ್ರೀತಿಯು ಹಠಮಾರಿತನದಿಂದ ವರ್ತಿಸುವಂತದ್ದೂ, ವಂಚಿಸುವಂತದ್ದು ದೂರದೃಷ್ಟಿಯಿಲ್ಲದ ಹಾಗೂ ಹತೋಟಿಯಲ್ಲಿಡಲಾಗದಂತದ್ದು ಆಗಿದೆ. ಗೌರವ, ಸತ್ಯ ಮತ್ತು ಉನ್ನತವಾದ ಮನಸ್ಸಿನ ಪ್ರತಿಯೊಂದು ಸಾಮರ್ಥ್ಯವೂ ಮೋಹದ, ದಾಸತ್ವದಲ್ಲಿಬೀಳುತ್ತದೆ. ಇಂತಹ ವ್ಯಾಮೋಹವೆಂಬ ಅವಿವೇಕತನದ ಬಂಧನವೆಂಬ ಸರಪಳಿಯಲ್ಲಿ ಕಟ್ಟಲ್ಪಟ್ಟವನು ಮನಸ್ಸಾಕ್ಷಿ ಹಾಗೂ ವಿವೇಕದ ಮಾತುಗಳಿಗೆ ಕಿವುಡಾಗುವನು. ಮನವೊಲಿಸುವುದರಿಂದಾಗಲಿ ಇಲ್ಲವೆ ವಾದ ಮಾಡುವುದರಿಂದಾಗಲಿ ಅವನ ಮೂರ್ಖತನವನ್ನು ಅವನಿಗೆ ಮನವರಿಕೆ ಮಾಡಿಕೊಡಲಾಗುವುದು.KanCCh 120.3

    ಯಥಾರ್ಥ ಪ್ರೀತಿಯು ಮರ್ಯಾದೆಯ ಎಲ್ಲೆಮೀರಿ ಹೋಗುವಂತ, ಉತ್ಕಟವಾದ ಆಕ್ರಮಣಕಾರಿಯಾದಂತ, ದುಡುಕಿನಿಂದ ವರ್ತಿಸುವ ವ್ಯಾಮೋಹವಲ್ಲ. ವ್ಯತಿರಿಕ್ತವಾಗಿ ಇದು ಪ್ರಶಾಂತವಾಗಿಯೂ, ಗಾಂಭೀರ್ಯದಿಂದಲೂ ಕೂಡಿದೆ. ಇದು ಬಾಹ್ಯತೋರಿಕೆಯಿಂದಲ್ಲ. ಬದಲಾಗಿ ಉತ್ತಮ ಗುಣಗಳಿಂದ ಆಕರ್ಷಿತವಾಗುತ್ತದೆ. ಯಥಾರ್ಥವಾದ ಪ್ರೀತಿಯು ವಿವೇಕವುಳ್ಳದ್ದು ಮತ್ತು ವಿವೇಚನಾಯುಕ್ತ ವು ಆಗಿದ್ದು, ಅದರ ನಿಷ್ಠೆಯು ನಿಜವಾದದ್ದು ಹಾಗೂ ದೃಢವುಳ್ಳದ್ದಾಗಿದೆ.KanCCh 121.1

    ವ್ಯಾಮೋಹ ಮತ್ತು ಹಠಾತ್ ಪ್ರಚೋದನೆಯು ನಿಜವಾದ ಪ್ರೀತಿಯಲ್ಲ, ಈ ದುರ್ಗುಣಗಳನ್ನು ತೆಗೆದುಹಾಕುವಲ್ಲಿ, ಯಥಾರ್ಥವಾದ ಪ್ರೀತಿಯು ಉದಾತ್ತವಾಗಿ, ಅದರ ಫಲಿತಾಂಶವು ನಡೆನುಡಿಗಳಲ್ಲಿ ತೋರಿಬರುತ್ತದೆ. ಕ್ರೈಸ್ತರು ಪರಿಶುದ್ಧ ಪ್ರೀತಿ ಮತ್ತು ಕೋಮಲತೆ ಹೊಂದಿರಬೇಕು. ಇಂತಹ ಪ್ರೀತಿಯಲ್ಲಿ ಅಸಹನೆಯಾಗಲಿ ಅಥವಾ ಸಿಡುಕುತನವಾಗಲಿ ಇರುವುದಿಲ್ಲ. ಒರಟುತನ, ಕಠಿಣ ಸ್ವಭಾವಗಳನ್ನು ಕ್ರಿಸ್ತನ ಕೃಪೆಯಿಂದ ಮೆದುಗೊಳಿಸಬೇಕು.KanCCh 121.2