Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮುನ್ನುಡಿ

    ಪ್ರವಾದನಾತ್ಮಕವರ ಹಾಗೂ ಶ್ರೀಮತಿ ವೈಟಮ್ಮನವರು ಕ್ರಿಸ್ತನನ್ನು ಎದುರುಗೊಳ್ಳಲು ಸಿದ್ಧರಾಗುವುದು

    ಸೆವೆಂತ್ ಡೇ ಅಡ್ವೆಂಟಿಸ್ಟ್‍ರೆಲ್ಲರೂ ಕ್ರಿಸ್ತನು ತಮಗಾಗಿ ಸಿದ್ಧಪಡಿಸುತ್ತಿರುವ ಹೊಸ ಯೆರೂಸಲೇಮಿಗೆ ಕರೆದುಕೊಂಡು ಹೋಗುವ ಸಮಯಕ್ಕಾಗಿ ಕಾರಣದಿಂದ ಕಾದುಕೊಂಡಿದ್ದಾರೆ. ಆ ಪರಲೋಕದಲ್ಲಿ ಬಡತನ, ರೋಗರುಜಿನಗಳು, ನಿರಾಶೆ, ಪಾಪ, ಹಸಿವು, ಬಾಯಾರಿಕೆ ಹಾಗೂ ಮರಣವಾಗಲಿ ಇರುವುದೇ ಇಲ್ಲ. ತನಗೆ ಪ್ರಾಮಾಣಿಕರಾಗಿರುವವರಿಗಾಗಿ ದೇವರು ಸಿದ್ಧಪಡಿಸಿರುವುದನ್ನು ದರ್ಶನದಲ್ಲಿ ನೋಡಿದ ಯೋಹಾನನು “ದೇವರ ಮಕ್ಕಳೆಂಬ ಹೆಸರನ್ನು ನಮಗೆ ಕೊಡುವುದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನೆ ನೋಡಿರಿ. ಈಗ ನಾವು ದೇವರ ಮಕ್ಕಳಾಗಿದ್ದೇವೆ. ಮುಂದೆ ಏನಾಗುವೆವೋ ಅದು ಇನ್ನು ಪ್ರತ್ಯಕ್ಷವಾಗಲಿಲ್ಲ.ಕ್ರಿಸ್ತನು ಪ್ರತ್ಯಕ್ಷವಾದರೆ ಆತನ ಹಾಗಿರುವೆನೆಂದು ಬಲ್ಲೆವು” (1 ಯೋಹಾನನು 3:1,2) ಎಂದು ಹೇಳುತ್ತಾನೆ. KanCCh .0

    ಗುಣಸ್ವಭಾವದಲ್ಲಿ ನಾವು ಕ್ರಿಸ್ತನ ಹಾಗಿರಬೇಕೆಂಬುದು ದೇವರ ಉದ್ದೇಶ. ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟ ಮಾನವರು ಆತನ ಗುಣಸ್ವಭಾವ ಬೆಳೆಸಿಕೊಳ್ಳಬೇಕೆಂದೇ ಆರಂಭದಿಂದಲೂ ದೇವರ ಯೋಜನೆಯಾಗಿದೆ. ಇದನ್ನು ಸಾಧಿಸಲು ನಮ್ಮ ಆದಿ ತಂದೆ-ತಾಯಿಯರಾದ ಆದಾಮ ಹವ್ವಳು ಏದೆನ್ ತೋಟದಲ್ಲಿ ಕ್ರಿಸ್ತನು ಹಾಗೂ ದೇವದೂತರೊಂದಿಗೆ ಮುಖಾಮುಖಿಯಾಗಿ ಸಂಭಾಷಿಸಿ ಸಲಹೆಗಳನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ ಅವರು ಪಾಪ ಮಾಡಿದ ನಂತರ ಪರಲೋಕದ ದೂತರೊಂದಿಗೂ ಹಾಗೂ ಕ್ರಿಸ್ತನೊಂದಿಗೂ ಈ ರೀತಿ ಮುಖಾಮುಖಿಯಾಗಿ ಮುಕ್ತವಾಗಿ ಮಾತನಾಡಲು ಸಾಧ್ಯವಾಗಲಿಲ್ಲ. KanCCh .0

    ಆದಾಗ್ಯೂ ಮಾನವರು ಯಾವುದೇ ಮಾರ್ಗದರ್ಶನದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ದೇವರು ತನ್ನ ಜನರೊಂದಿಗೆ ಬೇರೆ ಮಾರ್ಗಗಳ ಮೂಲಕ ಸಂಪರ್ಕಿಸಿ ತನ್ನ ಚಿತ್ತವನ್ನು ತಿಳಿಸಿದನು. ಪ್ರವಾದಿಗಳ ಮೂಲಕ ತಿಳಿಸುವುದು ಅಂತಹ ಮಾಧ್ಯಮಗಳಲ್ಲಿ ಒಂದಾಗಿದೆ. ದೇವರು ಇಸ್ರಾಯೇಲ್ಯರಿಗೆ “ನನ್ನ ಮಾತನ್ನು ಕೇಳಿರಿ; ನಿಮ್ಮಲ್ಲಿ ಪ್ರವಾದಿಯಿದ್ದರೆ ನಾನು ಅವನಿಗೆ ಜ್ಞಾನದೃಷ್ಟಿಯಲ್ಲಿ ಕಾಣಿಸಿಕೊಳ್ಳುವೆನು. ಇಲ್ಲವೆ ಸ್ವಪ್ನದಲ್ಲಿ ಅವನ ಸಂಗಡ ಮಾತಾಡುವೆನು” ಎಂದು ವಿವರಿಸಿದ್ದಾನೆ (ಅರಣ್ಯಕಾಂಡ 12:6). KanCCh .0

    ತನ್ನ ಜನರು ತಾವು ಜೀವಿಸುವ ಸಮಯದ ಬಗ್ಗೆ ಮಾತ್ರವಲ್ಲ, ಮುಂದೆ ಬರಲಿರುವ ಸಮಯದ ವಿಷಯದಲ್ಲಿಯೂ ಅರಿತು ಮನವರಿಕೆ ಮಾಡಿಕೊಳ್ಳಬೇಕೆಂಬುದು ದೇವರ ಉದ್ದೇಶ. “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು” (ಆಮೋಸ 3:7) ನಾವು ಲೋಕದ ಇತರ ಅನ್ಯಜನರಂತೆ ಕತ್ತಲೆಯಲ್ಲಿರುವವರಲ್ಲ ನೀವೆಲ್ಲರೂ ಬೆಳಕಿನವರೂ, ಹಗಲಿನವರೂ ಆಗಿದ್ದೀರಷ್ಟೆ” ಎಂದು ಪೌಲನು ಹೇಳುತ್ತಾನೆ (1 ಥೆಸಲೋನಿಕ 5:5). ಪ್ರವಾದಿಯ ಕಾರ್ಯವು ಕೇವಲ ಮುಂದೆ ನಡೆಯುವುದನ್ನು ತಿಳಿಸುವುದಕ್ಕಿಂತಲೂ ಬಹಳ ಹೆಚ್ಚಿನದಾಗಿದೆ. ದೇವರ ಮಹಾನ್ ಪ್ರವಾದಿಗಳಲ್ಲಿ ಒಬ್ಬನಾಗಿದ್ದ ಮೋಶೆಯು ಸತ್ಯವೇದದ ಒಟ್ಟು ಆರು ಪುಸ್ತಕಗಳನ್ನು ಅಂದರೆ ಮೊದಲ ಐದು ಪುಸ್ತಕಗಳು ಹಾಗೂ ಯೋಬನ ಪುಸ್ತಕಗಳನ್ನು ಬರೆದನು. ಆದರೆ ಮುಂದೆ ನಡೆಯಲಿರುವ ಪ್ರವಾದನೆಗಳ ಬಗ್ಗೆ ಅಷ್ಟಾಗಿ ಅವನು ತಿಳಿಸಿಲ್ಲ. ಅವನು ಮಾಡಿದ ಕಾರ್ಯದ ಬಗ್ಗೆ ಹೋಶೇಯನು “ಯೆಹೋವನು ಪ್ರವಾದಿಯ ಮುಖಾಂತರ ಇಸ್ರಾಯೇಲನ್ನು ಐಗುಪ್ತದೊಳಗಿಂದ ಪಾರು ಮಾಡಿದನು, ಪ್ರವಾದಿಯ ಮೂಲಕ ಅದು ರಕ್ಷಿತವಾಯಿತು” ಎಂದು ಹೇಳುತ್ತಾನೆ (12:13). KanCCh .0

    ಪ್ರವಾದಿಯು ಇತರ ಜನರಿಂದಾಗಲಿ ಅಥವಾ ಸ್ವತಃ ತಾನಾಗಿಯೇ ಆರಿಸಲ್ಪಟ್ಟವನಲ್ಲ ಅಥವಾ ನೇಮಿಸಲ್ಪಟ್ಟವನಲ್ಲ. ಪ್ರವಾದಿಯ ಆಯ್ಕೆಯು ಸಂಪೂರ್ಣವಾಗಿ ದೇವರದ್ದು. ದೇವರು ಕಾಲಕಾಲದಲ್ಲಿ ಸ್ತ್ರೀಪುರುಷರಿಬ್ಬರನ್ನೂ ತನ್ನ ಪ್ರವಾದಿಗಳನ್ನಾಗಿ ಆರಿಸಿಕೊಂಡಿದ್ದಾರೆ. ದೇವರಿಂದ ಆರಿಸಲ್ಪಟ್ಟ ಪ್ರವಾದಿಗಳಾದ ಈ ಸ್ತ್ರೀಪುರುಷರು ತಮಗೆ ದೇವರು ಪವಿತ್ರ ದರ್ಶನಗಳ ಮೂಲಕ ತಿಳಿಸಿದ್ದನ್ನು ಜನರಿಗೆ ಹೇಳಿದ್ದಾರೆ ಹಾಗೂ ಬರೆದಿದ್ದಾರೆ. ದೇವರ ಅಮೂಲ್ಯವಾದ ಸತ್ಯವೇದವು ಈ ಸಂದೇಶಗಳನ್ನು ಒಳಗೊಂಡಿದೆ. ಈ ಪ್ರವಾದಿಗಳ ಮೂಲಕ ಮಾನವ ಜನಾಂಗವು ಕ್ರಿಸ್ತನು ಹಾಗೂ ಆತನ ದೇವದೂತರು ಮತ್ತು ಸೈತಾನನು ಹಾಗೂ ಅವನ ಕೆಟ್ಟದೂತರ ನಡುವೆ ಮನುಷ್ಯರಾದ ನಮಗಾಗಿ ನಡೆಯುವ ಮಹಾಹೋರಾಟವನ್ನು ಮನವರಿಕೆ ಮಾಡಿಕೊಳ್ಳಲು ಮಾರ್ಗದರ್ಶನ ಪಡೆದಿದೆ. ಈ ಲೋಕದ ಕೊನೆಯದಿನಗಳಲ್ಲಿ ಈ ಹೋರಾಟವನ್ನು ಅರ್ಥಮಾಡಿಕೊಳ್ಳುವುದಲ್ಲದೆ, ದೇವರು ತನ್ನ ಸೇವೆಗಾಗಿ ದಯಪಾಲಿಸುವ ಮಾರ್ಗಗಳು ಹಾಗೂ ಆತನ ಗುಣಸ್ವಭಾವವನ್ನು ಪರಿಪೂರ್ಣಮಾಡಲು ಪ್ರವಾದಿಗಳ ಸಂದೇಶಗಳಿಂದ ಸಾಧ್ಯವಾಗುತ್ತದೆ. KanCCh .0

    ಯೇಸುಸ್ವಾಮಿಯ ಶಿಷ್ಯರು ಹಾಗೂ ಅಪೋಸ್ತಲರು ಕೊನೆಯದಿನಗಳಲ್ಲಿ ನಡೆಯುವ ಘಟನೆಗಳ ಸ್ಪಷ್ಟ ಚಿತ್ರಣ ನೀಡಿದ್ದಾರೆ. ಪೌಲನು ಸಂಕಟದ ಸಮಯವೆಂದು ತಿಳಿಸುತ್ತಾನೆ. ಪೇತ್ರನು “ಕಡೇ ದಿನಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ- ಆತನ (ಕ್ರಿಸ್ತನ) ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು?” ಎಂದು ಕೇಳುತ್ತಾರೆಂದು ತಿಳಿಸುತ್ತಾನೆ (2 ಪೇತ್ರನು 3:4) ಕೊನೆಯ ಈ ಕಾಲದಲ್ಲಿ ಕ್ರಿಸ್ತನ ಸಭೆಯು ಒಂದು ಮಹಾಹೋರಾಟದಲ್ಲಿದೆ. ಇದರ ಬಗ್ಗೆ ಯೋಹಾನನು “ಉಳಿದವರ ಮೇಲೆಯುದ್ಧ ಮಾಡುವುದಕ್ಕೆ ಸೈತಾನನು ಹೊರಟನು” ಎಂದು ತಿಳಿಸುತ್ತಾನೆ. ಅವನು ಕೊನೆಯ ಕಾಲದ ಸಭೆಯ ಸದಸ್ಯರು ಅಂದರೆ ಉಳಿದವರು “ದೇವರ ಆಜ್ಞೆಗಳನ್ನು ಕೈಕೊಂಡು ನಡೆಯುವವರು” ಎಂದು ಗುರುತಿಸುತ್ತಾನೆ (ಪ್ರಕಟನೆ 12:17) ಅಂದರೆ ಅವರು ದೇವರಾಜ್ಞೆಗಳನ್ನು ಕೈಕೊಂಡು ನಡೆಯುವ ಸಭೆಗೆ ಸೇರಿದವರೆಂದು ಯೋಹಾನನು ತಿಳಿಸುತ್ತಾನೆ. ಈ ಉಳಿದ ಸಭೆಯು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೊಂದಿರುತ್ತದೆ. ಯೇಸುವಿನ ವಿಷಯವಾದ ಸಾಕ್ಷಿ ಎಂದರೆ, ಪ್ರವಾದನಾಆತ್ಮವೆಂದು ಸತ್ಯವೇದವು ತಿಳಿಸುತ್ತದೆ (ಪ್ರಕಟನೆ 19:10). “ಕ್ರೈಸ್ತ ಸಭೆಯು ಯಾವ ಕೃಪಾವರದಲ್ಲಿಯೂ ಕೊರತೆಯಿಲ್ಲದಂತೆ ನಮ್ಮ ಕರ್ತನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಇದೆ” ಎಂದು ಪೌಲನು ಹೇಳುತ್ತಾನೆ (1 ಕೊರಿಂಥ 1:7,8). ಸಭೆಯು ಯೇಸುಕ್ರಿಸ್ತನ ವಿಷಯವಾದ ಸಾಕ್ಷಿಯ ವರದಿಂದ ಆಶೀರ್ವದಿಸಲ್ಪಡುತ್ತದೆ. KanCCh .0

    ದೇವರ ಯೋಜನೆಯಂತೆ ಅಂತ್ಯಕಾಲದಲ್ಲಿ ಸಭೆಯು ಅಸ್ತಿತ್ವಕ್ಕೆ ಬಂದಾಗ ಪ್ರವಾದನಾ ಆತ್ಮ ಇರುತ್ತದೆಂದು ಇದರಿಂದ ಸ್ಪಷ್ಟವಾಗುತ್ತದೆ. ಶತಶತಮಾನಗಳ ಹಿಂದೆ ಅತ್ಯಗತ್ಯವಾದ ಸಂದರ್ಭದಲ್ಲಿ ದೇವರು ತನ್ನ ಜನರೊಂದಿಗೆ ಮಾತಾಡಿದ ಹಾಗೆಯೇ, ಲೋಕದ ಕೊನೆಯ ಕಾಲದಲ್ಲಿಯೂ ದೇವರು ತನ್ನ ಜನರೊಂದಿಗೆ ಪ್ರವಾದನೆಯ ಮೂಲಕ ಮಾತಾಡುತ್ತಾನೆಂಬುದು ಎಷ್ಟೊಂದು ಯುಕ್ತವಾಗಿದೆಯಲ್ಲವೇ! KanCCh .0

    19ನೇ ಶತಮಾನದ ಮಧ್ಯಭಾಗದಲ್ಲಿ ಅಂದರೆ 1844-1863ರ ಅವಧಿಯಲ್ಲಿ ಪ್ರವಾದನಾ ಸಭೆಯಾದ ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯು ಅಸ್ತಿತ್ವಕ್ಕೆ ಬಂದಾಗ “ಪರಿಶುದ್ಧ ದರ್ಶನದಲ್ಲಿ ದೇವರು ನನಗೆ ತೋರಿಸಿದನು” ಎಂದು ಹೇಳುವ ಶಬ್ದವು ನಮ್ಮಲ್ಲಿ ಕೇಳಿಸಿತು. ಇದು ಅಹಂಕಾರದ ಮಾತಲ್ಲ. ಬದಲಾಗಿ ದೇವರಿಗಾಗಿ ಮಾತನಾಡಲು ಕರೆಯಲ್ಪಟ್ಟ 17 ವರ್ಷದ ಯುವತಿಯಾದ ಎಲೆನ್ ಹಾರ್ಮೊನ್ ಗೌಲ್ಡ್ ಎಂಬುವವರ ಬಾಯಿಂದ ಬಂದ ಮಾತುಗಳು. ಸುಮಾರು 70 ವರ್ಷಗಳ ಕಾಲ ಅವರ ಪ್ರಾಮಾಣಿಕಸೇವೆಯ ಮೂಲಕ ಸಲಹೆ, ಮಾರ್ಗದರ್ಶನ, ಎಚ್ಚರಿಕೆಗಳು ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಗೆ ಕೊಡಲ್ಪಟ್ಟವು. ಅದೇಶಬ್ದವು ಇಂದಿಗೂಸಹ ದೇವರಿಂದ ಆರಿಸಲ್ಪಟ್ಟ ಸಂದೇಶಕರಾದ ಪ್ರವಾದಿನಿ ಶ್ರೀಮತಿ ವೈಟಮ್ಮನವರು ಬರೆದ ನೂರಾರು ಪುಸ್ತಕಗಳ ಮೂಲಕ ನಮ್ಮೊಂದಿಗೆ ಮಾತಾಡುತ್ತಿವೆ. KanCCh .0