Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಎರಡು ಜೀವಗಳು ಒಂದಾಗುವುದು

    ವೈವಾಹಿಕ ಜೀವನದಲ್ಲಿ ಕಷ್ಟಗಳು, ಸಮಸ್ಯೆಗಳು ಮತ್ತು ನಿರಾಶೆಗಳು ಬಂದಾಗ್ಯೂ, ಪತಿ ಪತ್ನಿಯರು ತಾವಿಬ್ಬರೂ ಮದುವೆಯಾದದ್ದು ತಪ್ಪು ಅಥವಾ ನಿರಾಶೆ ಉಂಟುಮಾಡುವಂತದ್ದೆಂದು ಯೋಚಿಸಬಾರದು. ಜೀವನದ ಹೋರಾಟವನ್ನು ಎದುರಿಸುವಾಗ ಪರಸ್ಪರ ಉತ್ತೇಜಿಸಬೇಕು. ನಿಮ್ಮ ಸಂಗಾತಿಯ ಸಂತೋಷಕ್ಕಾಗಿ ಪ್ರಯತ್ನಪಡಿ. ಇಬ್ಬರ ನಡುವೆ ಪ್ರೀತಿ ಹಾಗೂ ತಾಳ್ಮೆ ಇರಲಿ ಈಗ ಮದುವೆಯು ಪ್ರೀತಿಯ ಮುಕ್ತಾಯಕ್ಕೆ ಬದಲಾಗಿ, ಪ್ರೀತಿಯ ಆರಂಭ ಎಂದು ಕಂಡುಬರುತ್ತದೆ. ನಿಜವಾದ ಸ್ನೇಹ, ಸೌಹಾರ್ದತೆ, ಹೃದಯಗಳನ್ನು ಬಂಧಿಸುವ ಪ್ರೀತಿಯಲ್ಲಿ ಪರಲೋಕದ ಸಂತೋಷದ ಮುನ್ಸೂಚನೆಯಾಗಿದೆ. KanCCh 143.2

    ಎಲ್ಲರೂ ಸಹ ತಾಳ್ಮೆಯನ್ನು ಅನುಸರಿಸುವ ಮೂಲಕ ಅದನ್ನು ಬೆಳೆಸಿಕೊಳ್ಳಬೇಕು. ಕರುಣೆ ಮತ್ತು ತಾಳ್ಮೆ ತೋರುವ ಮೂಲಕ ನಿಜವಾದ ಪ್ರೀತಿಯು ಪರಲೋಕಕ್ಕೆ ಮೆಚ್ಚುಗೆಯಾಗುವಂತ ಉತ್ತಮ ಸ್ವಭಾಗಳು ಕಂಡುಬರುವವು.KanCCh 143.3

    ದಂಪತಿಗಳಲ್ಲಿ ಕಂಡುಬರುವ ಯಾವುದೇ ವ್ಯತ್ಯಾಸಗಳನ್ನು ದುರುಪಯೋಗಪಡಿಸಿಕೊಳ್ಳಲು ಸೈತಾನನು ಯಾವಾಗಲೂ ಕಾದುಕೊಂಡಿದ್ದಾನೆ. ಅವರಲ್ಲಿರಬಹುದಾದ ತಪ್ಪುಗಳನ್ನು ದೊಡ್ಡದಾಗಿ ಎತ್ತಿ ಹಿಡಿದು, ದೇವರ ಮುಂದೆ ಗಂಭೀರವಾದ, ಪವಿತ್ರವಾದ ಒಡಂಬಡಿಕೆ ಮಾಡಿಕೊಂಡು ಒಂದಾಗಿರುವ ಗಂಡ ಹೆಂಡತಿ ಸಂಬಂಧದಲ್ಲಿ ಬಿರುಕುಂಟುಮಾಡಲು ಪ್ರಯತ್ನಿಸುತ್ತಾನೆ. ಮದುವೆಯಾಗುವಾಗ ಹೆಂಡತಿಯು ತನ್ನ ಗಂಡನನ್ನು ಪ್ರೀತಿಸಿ ಆತನಿಗೆ ವಿಧೇಯಳಾಗುತ್ತೇನೆಂದು ಹಾಗೂ ಗಂಡನು ತನ್ನ ಹೆಂಡತಿಯನ್ನು ಪ್ರೀತಿಸಿ, ಪೋಷಿಸಿ ಸಲಹುತ್ತೇನೆಂದೂ ಪರಸ್ಪರ ವಾಗ್ದಾನ ಮಾಡಿರುತ್ತಾರೆ. ದೇವರ ನಿಯಮಗಳಿಗೆ ವಿಧೇಯರಾದಲ್ಲಿ, ಸೈತಾನನು ಉಂಟು ಮಾಡಲು ಪ್ರಯತ್ನಿಸುವ ಭಿನ್ನಾಭಿಪ್ರಾಯ ದೂರವಾಗುವುದು ಹಾಗೂ ಗಂಡಹೆಂಡತಿಯರಲ್ಲಿ ಪ್ರೀತಿ ಇರುವುದು.KanCCh 143.4

    ಇದು ವೈವಾಹಿಕ ಜೀವನದ ಪ್ರಮುಖ ಸಮಯವಾಗಿದೆ. ಆತ್ಮಗಳನ್ನು ರಕ್ಷಿಸುವಂತಹ ಸೇವೆಯಲ್ಲಿ ಗಂಡ ಹೆಂಡತಿ ನಡುವಿನ ಪ್ರೀತಿ, ಆಸಕ್ತಿ, ಶ್ರಮ ಅನುಕಂಪಗಳು ಪರಸ್ಪರ ಒಂದಾಗಿದೆ. ಮದುವೆ ಸಂಬಂಧದಲ್ಲಿ ಎರಡು ಜೀವಗಳು ಒಂದಾಗುವ ಅತಿಪ್ರಾಮುಖ್ಯವಾದ ಹೆಜ್ಜೆ ತೆಗೆದುಕೊಂಡಾಗಿದೆ. ತನ್ನ ಸೇವೆಯಲ್ಲಿ ಅವರು ಒಂದಾಗಬೇಕು ಹಾಗೂ ಆ ಸೇವೆಯನ್ನು ಸಂಪೂರ್ಣವಾಗಿಯೂ ಪಾವಿತ್ರತೆಯಿಂದಲೂ ಮುಂದುವರಿಸಬೇಕೆಂಬುದು ದೇವರು ಪ್ರತಿಷ್ಠೆ ಪಡಿಸಿದ ಚಿತ್ತವಾಗಿದೆ. ದಂಪತಿಗಳು ಆತನ ಚಿತ್ತವನ್ನು ಪೂರೈಸಬಲ್ಲರು.KanCCh 144.1

    ಇಂತಹ ಐಕ್ಯತೆ ಕಂಡುಬರುವ ಮನೆಗಳಲ್ಲಿ ಪರಲೋಕದ ಸೂರ್ಯನ ಬೆಳಕಿನಂತೆ ಆಶೀರ್ವಾದವು ಕಂಡುಬರುವುದು. ಯೇಸುಕ್ರಿಸ್ತನಲ್ಲಿ ಗಂಡ ಹೆಂಡತಿಯರು ಪವಿತ್ರವಾದ ಮದುವೆಯ ಬಂಧನದಲ್ಲಿ ಒಂದಾಗಬೇಕು. ಆತನ ನಿಯಂತ್ರಣದಲ್ಲಿ ಅವರು ಪವಿತ್ರಾತ್ಮ ಮಾರ್ಗದರ್ಶನದಿಂದ ಜೀವನ ಸಾಗಿಸಬೇಕೆಂಬುದು ಕರ್ತನ ಚಿತ್ತವಾಗಿದೆ. ಕುಟುಂಬವು ಈ ಲೋಕದಲ್ಲಿ ಅತ್ಯಂತ ಸಂತೋಷಕರವಾದ ಸ್ಥಳವೂ, ಪರಲೋಕ ಕುಟುಂಬದ ಸಂಕೇತವೂ ಆಗಿರಬೇಕೆಂದು ದೇವರು ಬಯಸುತ್ತಾನೆ. ಕುಟುಂಬದಲ್ಲಿ ಮದುವೆಯ ಜವಾಬ್ದಾರಿಗಳನ್ನು ಒಟ್ಟಾಗಿ ನಿರ್ವಹಿಸುವುದು, ಕ್ರಿಸ್ತನಲ್ಲಿ ಆತುಕೊಂಡು ಆತನಲ್ಲಿ ಭರವಸವಿಡುವುದು ಹಾಗೂ ಕ್ರಿಸ್ತನ ಆಸಕ್ತಿಯೇ ತಮ್ಮ ಆಸಕ್ತಿಯೆಂದು ಭಾವಿಸಿದಲ್ಲಿ, ಗಂಡ ಹೆಂಡತಿಯರು ತಮ್ಮ ಮದುವೆ ಸಂಬಂಧದಲ್ಲಿ ಉಲ್ಲಾಸಿಸುವರು ಹಾಗೂ ದೇವದೂತರಿಗೂ ಇದು ಸಂತೋಷ, ಮೆಚ್ಚುಗೆ ತರುವುದು.KanCCh 144.2