Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ತಂದೆತಾಯಿಯರ ಸ್ಥಾನ

    ತಾಯಿಯಾಗಲಿರುವ ಮಹಿಳೆಯು ತನ್ನ ಸುತ್ತಲಿನ ಪರಿಸ್ಥಿತಿಯು ಹೇಗೇ ಇರಲಿ, ಯಾವಾಗಲೂ ಸಂತೋಷಕರವೂ, ಹರ್ಷದಾಯಕವೂ ಹಾಗೂ ತೃಪ್ತಿಕರವೂ ಆದ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ಈ ವಿಷಯದಲ್ಲಿ ತಾನು ಮಾಡುವ ಎಲ್ಲಾ ಪ್ರಯತ್ನಗಳೂ ಮಗುವಿನ ನೈತಿಕ ಮತ್ತು ಶಾರೀರಿಕ ಸ್ವಭಾವದಲ್ಲಿ ಹತ್ತುಪಟ್ಟು ಹೆಚ್ಚಾಗಿ ಪ್ರತಿಫಲ ಕೊಡುವುದೆಂದು ತಾಯಿ ತಿಳಿದಿರಬೇಕು. ಇಷ್ಟು ಮಾತ್ರವೇ ಅಲ್ಲ, ಅವಳು ಹರ್ಷದಾಯಕವಾಗಿ ಆಲೋಚಿಸುವ ಆರೋಗ್ಯಕರ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ತಾಯಿಯ ಮಾನಸಿಕ ಸ್ಥಿತಿಯು ಆನಂದಕರವಾಗಿದ್ದು, ಆಕೆಯ ಸಂತೋಷದಲ್ಲಿ ಮಾತ್ರವಲ್ಲ, ತನ್ನ ಕುಟುಂಬ ಹಾಗೂ ಒಡನಾಟಕ್ಕೆ ಬರುವ ಎಲ್ಲರಲ್ಲಿಯೂ ಅವಳ ಸಂತೋಷದ ಪ್ರತಿಫಲಿಸುವಿಕೆ ಕಂಡುಬರುವುದು. ಇದರಿಂದ ಆಕೆಯ ಶಾರೀರಿಕ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆಯಾಗುವುದು ಹಾಗೂ ಒಂದು ಚಾಲಕ ಶಕ್ತಿ ಗರ್ಭದಲ್ಲಿರುವ ಮಗುವಿಗೆ ಉಂಟಾಗುತ್ತದೆ. ಆದರೆ ತಾಯಿಯು ಹತಾಶೆಯಿಂದ ಖಿನ್ನತೆಗೊಳಗಾಗಿದ್ದಲ್ಲಿ, ರಕ್ತವು ನಿಧಾನವಾಗಿ ಚಲಿಸುವುದಿಲ್ಲ. ಆಕೆಯ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಆಕೆಯ ಮನಸ್ಸಿನ ಚೈತನ್ಯದಿಂದ ಉತ್ತೇಜಿಸಲ್ಪಡುವುದು. ತಾಯಿಯ ಇಚ್ಛಾಶಕ್ತಿಯು ಮನಸ್ಸಿನ ಅಭಿಪ್ರಾಯಗಳನ್ನು ಎದುರಿಸಿ ನರಗಳನ್ನು ಶಮನಗೊಳಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ತಂದೆ ತಾಯಿಯರಿಂದ ಅಂತಹ ಚೈತನ್ಯವನ್ನು ಪಡೆದುಕೊಳ್ಳಬೇಕಾದ ಮಕ್ಕಳು ಅದರಿಂದ ವಂಚಿತರಾದಲ್ಲಿ, ಅವರು ಬಹಳ ಎಚ್ಚರಿಕೆ ವಹಿಸಬೇಕು. ಆರೋಗ್ಯದ ನಿಯಮಗಳಿಗೆ ಹೆಚ್ಚಾದ ಗಮನಕೊಡುವ ಮೂಲಕ ಅವರ ಪರಿಸ್ಥಿತಿಯು ಉತ್ತಮಗೊಳ್ಳುವುದು.KanCCh 155.3

    ಗರ್ಭವತಿಯಾದ ಮಹಿಳೆಯು ದೇವರ ಪ್ರೀತಿಗೆ ತನ್ನನ್ನು ಒಪ್ಪಿಸಿ ಕೊಡಬೇಕು, ಆಕೆಯ ಮನಸ್ಸು ಸಮಾಧಾನವಾಗಿರಬೇಕು. ಕ್ರಿಸ್ತನ ವಾಕ್ಯಗಳನ್ನು ಅನುಸರಿಸಿ, ಆತನ ಪ್ರೀತಿಯಲ್ಲಿ ಆತುಕೊಳ್ಳಬೇಕು. ದೇವರೊಂದಿಗೆ ಒಟ್ಟಾಗಿ ಕೆಲಸ ಮಾಡುವವಳಾಗಿದ್ದಾಳೆಂದು ಆಕೆಯು ನೆನಪಿನಲ್ಲಿಡಬೇಕು.KanCCh 156.1

    ಗಂಡ-ಹೆಂಡತಿಯರು ಪರಸ್ಪರ ಸಹಕಾರ ತೋರಬೇಕು. ಎಲ್ಲಾ ತಾಯಂದಿರೂ ತಮ್ಮನ್ನು ಮಾತ್ರವಲ್ಲದೆ ಮಕ್ಕಳು ಹುಟ್ಟುವ ಮೊದಲು ಹಾಗೂ ಹುಟ್ಟಿದ ನಂತರ ಅವರನ್ನೂ ಸಹ ದೇವರಿಗೆ ಸಮರ್ಪಿಸಿಕೊಂಡಲ್ಲಿ ಈ ಲೋಕವು ಹೇಗಿರುತ್ತೆ ಗೊತ್ತೆ? ಹೆರಿಗೆಗೆ ಮೊದಲು ಮಗುವಿನ ಮೇಲಾಗುವ ಪ್ರಭಾವದ ಪರಿಣಾಮಗಳ ಬಗ್ಗೆ ಹೆಚ್ಚಿನ ತಂದೆ ತಾಯಿಯರು ಮಹತ್ವ ಕೊಡುವುದಿಲ್ಲ. ಆದರೆ ಪರಲೋಕವು ಅದಕ್ಕೆ ಬಹಳ ಮಹತ್ವ ನೀಡುತ್ತದೆ. ದೇವದೂತನು ತಂದ ಸಂದೇಶ ಹಾಗೂ ಎರಡುಸಾರಿ ಅದನ್ನು ಬಹಳ ಗೌರವದಿಂದ ತಿಳಿಸಿದ್ದನ್ನು ಗಮನಿಸಿದಾಗ, ಅದರ ಪ್ರಾಮುಖ್ಯತೆ ನಮಗೆ ಅರಿವಾಗುತ್ತದೆ ಹಾಗೂ ಅದರ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕು.KanCCh 156.2

    ಸಂಸೋನನ ತಾಯಿಯೂ, ಮಾನೋಹನ ಹೆಂಡತಿಯೂ ಆದ ಇಬ್ರಿಯ ಮಹಿಳೆಗೆ ದೇವರು ಹೇಳಿದ ಎಚ್ಚರಿಕೆಯ ಮಾತುಗಳು ಎಲ್ಲಾಕಾಲದ ತಾಯಂದಿರಿಗೂ ಅನ್ವಯಿಸುತ್ತದೆ.KanCCh 156.3

    “ನಾನು ಹೇಳಿದ್ದನ್ನೆಲ್ಲಾ ಈಕೆಯು ಜಾಗರೂಕತೆಯಿಂದ ಕೈಕೊಳ್ಳಲಿ... ಹೀಗೆ ನಾನು ಆಜ್ಞಾಪಿಸಿದ್ದನ್ನೆಲ್ಲಾ ಕೈಕೊಳ್ಳಲಿ” ಎಂದು ದೇವದೂತನು ಆಕೆಗೆ ಎರಡನೇ ಸಾರಿ ತಿಳಿಸಿದನು (ನ್ಯಾಯಸ್ಥಾಪಕರು 13:7; 13, 14). ತಾಯಿಯ ಅಭ್ಯಾಸಗಳು ಮಗುವಿನ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತವೆ. ಆಕೆಯು ಸಿದ್ಧಾಂತಕ್ಕೆ ಬದ್ಧಳಾಗಿ ತನ್ನ ಆಹಾರ, ಸ್ವಾಭಾವಿಕ ಅವಶ್ಯಕತೆಗಳಾದ ಲೈಂಗಿಕ ಕಾಮನೆಗಳನ್ನು ತೀರಿಸಿಕೊಳ್ಳುವ ಅಪೇಕ್ಷೆ ಹಾಗೂ ಬಲವಾದ ಮನೋಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ತನಗೆ ಮಗುವನ್ನು ಕೊಡುವುದರಲ್ಲಿ ದೇವರ ಉದ್ದೇಶವೇನೆಂದು ತಾಯಿಯು ಅರಿತುಕೊಂಡು ಅದನ್ನು ನೆರವೇರಿಸಿದಾಗ, ಕೆಲವು ವಿಷಯಗಳನ್ನು ತ್ಯಜಿಸುತ್ತಾಳೆ ಮತ್ತು ಕೆಲವುಗಳ ವಿರುದ್ಧವಾಗಿರುತ್ತಾಳೆ.KanCCh 157.1

    ಯುವಕ ಯುವತಿಯರನ್ನು ಶೋಧನೆಗೆ ಒಳಪಡಿಸುವಂತ ಆಕರ್ಷಣೆಯ ಮೋಹಕ ಜಾಲಗಳು ಲೋಕದಲ್ಲಿ ತುಂಬಿವೆ. ಸ್ವಾರ್ಥ ಮತ್ತು ಇಂದ್ರಿಯಗಳ ಸುಖಭೋಗ ಜೀವನದಿಂದ ಹೆಚ್ಚಾದ ಜನರು ಆ ಬಲೆಯಲ್ಲಿ ಬೀಳುತ್ತಿದ್ದಾರೆ. ಇದೇ ಆನಂದದ ದಾರಿಯೆಂದು ಯೌವನಸ್ಥರು ತಿಳಿದುಕೊಂಡಿದ್ದಾರೆ. ಆದರೆ ಅದರಲ್ಲಿರುವ ಗುಪ್ತವಾದ ಅಪಾಯಗಳು ಮತ್ತು ಭಯಾನಕ ಅಂತ್ಯವನ್ನು ಅವರು ಮನವರಿಕೆ ಮಾಡಿಕೊಳ್ಳುತ್ತಿಲ್ಲ. ಸಹಜವಾದ ಹಸಿವು ಮತ್ತು ಲೈಂಗಿಕ ಕಾಮನೆಗಳನ್ನು ತೀರಿಸಿಕೊಳ್ಳುವ ಅಪೇಕ್ಷೆ ಅವರಲ್ಲಿ ಮಿತಿಮೀರಿದ್ದು, ಅದರಿಂದ ಅವರ ಶಕ್ತಿ ಸಾಮರ್ಥ್ಯಗಳು ಕುಂದಿ ಹೋಗಿ ಕೋಟ್ಯಾಂತರ ಯೌವನಸ್ಥರು ಈ ಲೋಕದಲ್ಲಿಯೇ ಹಾಳಾಗುವುದಲ್ಲದೆ, ಮುಂದೆ ಬರಲಿರುವ ಪರಲೋಕವನ್ನೂ ಸಹ ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಮಕ್ಕಳು ಇಂತಹ ಶೋಧನೆಗಳನ್ನು ಎದುರಿಸಲೇ ಬೇಕೆಂದು ತಂದೆ ತಾಯಿಗಳು ನೆನಪಿನಲ್ಲಿಡಬೇಕು. ಮಗುವು ಹುಟ್ಟುವುದಕ್ಕೆ ಮೊದಲೇ, ದುಷ್ಟತನದ ವಿರುದ್ಧವಾದ ಹೋರಾಟವನ್ನು ಯಶಸ್ವಿಯಾಗಿ ಎದುರಿಸಲು ಬೇಕಾದ ಸಿದ್ಧತೆಗಳನ್ನು ತಾಯಿ ಮಾಡಿಕೊಳ್ಳಬೇಕು.KanCCh 157.2

    ಆದರೆ ತಾಯಿ ಸರಿಯಾದ ಕ್ರೈಸ್ತ ಸಿದ್ಧಾಂತಗಳಿಗೆ ದೃಢನಿಶ್ಚಯದಿಂದ ಬದ್ಧಳಾಗಿದ್ದು, ಮಿತ ಸಂಯಮಿಯೂ, ನಿಸ್ವಾರ್ಥಿಯೂ, ಕರುಣೆ, ದಯೆಯುಳ್ಳ ಸೌಮ್ಯ ಸ್ವಭಾವ ಹೊಂದಿದಲ್ಲಿ ಅವಳ ಮಗುವಿಗೆ ಸಹ ಇದೇರೀತಿಯ ಅಮೂಲ್ಯವಾದ ಸ್ವಭಾವವನ್ನು ಕೊಡುವಳು. ಶಿಶುಗಳು ಒಂದು ಕನ್ನಡಿಯಂತಿದ್ದು, ತಾಯಿ ಅದರಲ್ಲಿ ತನ್ನದೇಆದ ಅಭ್ಯಾಸಗಳು ಹಾಗೂ ನಡವಳಿಕೆಗಳು ಪ್ರತಿಫಲಿಸುವುದನ್ನು ಕಾಣಬಹುದು. ಆದುದರಿಂದ ಇಂತಹ ಶಿಶುಗಳ ಮುಂದೆ ಉಪಯೋಗಿಸುವ ಭಾಷೆ ಮತ್ತು ನಡವಳಿಕೆಗಳ ಬಗ್ಗೆ ತಾಯಿ ಎಷ್ಟೊಂದು ಎಚ್ಚರಿಕೆಯಿಂದ ಇರಬೇಕಲ್ಲವೇ! ತನ್ನ ಮಕ್ಕಳಲ್ಲಿ ಅಂತಹ ಗುಣ ಸ್ವಭಾವ ಕಂಡು ಬರಬೇಕೆಂದು ತಾಯಿ ಬಯಸಿದಲ್ಲಿ, ಮೊದಲು ಆಕೆ ತನ್ನ ಜೀವನದಲ್ಲಿ ಅಂತಹ ಸ್ವಭಾವಗಳನ್ನು ಬೆಳೆಸಿಕೊಂಡಿರಬೇಕು.KanCCh 157.3