Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ತಾಯಿಯ ಕರ್ತವ್ಯಗಳು ಹಗುರವಾಗಬೇಕು

    ತಾಯಿಯಾಗುವುದಕ್ಕೆ ಮೊದಲು ಹಾಗೂ ತಾಯಿಯಾದ ನಂತರ ಮಹಿಳೆಯರ ಜೀವನದಲ್ಲಿ ವ್ಯತ್ಯಾಸ ತೋರುವುದನ್ನು ಗಮನಿಸಬೇಕು. ಈ ಪ್ರಮುಖ ಅವಧಿಯಲ್ಲಿ ಆಕೆಯ ಕೆಲಸಕಾರ್ಯಗಳನ್ನು ಹಗುರಗೊಳಿಸಬೇಕು. ಆಕೆಯ ಶಾರೀರಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಉಂಟಾಗಲಿವೆ. ಹೆಚ್ಚಿನ ರಕ್ತದ ಅಗತ್ಯ ಅವಳಿಗಿರುವುದರಿಂದ, ಪೋಷಕಾಂಶ ಹೆಚ್ಚಾಗಿರುವ ಆಹಾರಗಳನ್ನು ಗರ್ಭಿಣಿಗೆ ಕೊಡಬೇಕು. ಇದು ರಕ್ತವಾಗಿ ಬದಲಾವಣೆಯಾಗುತ್ತದೆ. ಪೌಷ್ಟಿಕವಾದ ಆಹಾರವು ಆಕೆಗೆ ಸಮೃದ್ಧವಾಗಿ ದೊರೆಯದಿದ್ದಲ್ಲಿ, ಆಕೆಗೆ ಮೊದಲಿದ್ದ ಶಾರೀರಿಕ ಬಲವನ್ನು ಉಳಿಸಿಕೊಳ್ಳಲಾಗದು ಹಾಗೂ ಮಗುವೂ ಸಹ ದುರ್ಬಲವಾಗಿರುವುದು.KanCCh 158.1

    ತಾಯಿ ಉಡುಪಿನ ಕಡೆಗೆ ಗಮನ ಕೊಡಬೇಕು. ಅವಳು ತನ್ನ ಶರೀರವನ್ನು ಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳಬೇಕು. ಇದರಿಂದ ರಕ್ಷಿಸಿಕೊಳ್ಳಲು ಸಾಕಷ್ಟು ಬಟ್ಟೆಯಿಲ್ಲದಿದ್ದರೆ, ಆಕೆಯು ಶರೀರದಲ್ಲಿರುವ ಜೀವಶಕ್ತಿ ಅಥವಾ ಜೀವ ಚೈತನ್ಯವನ್ನು (Vitality) ಅನಾವಶ್ಯಕವಾಗಿ ಉಪಯೋಗಿಸಬೇಕಾಗುತ್ತದೆ. ತಾಯಿಗೆ ಪರಿಪೂರ್ಣವಾದ ಹಾಗೂ ಪೌಷ್ಟಿಕಭರಿತವಾದ ಆಹಾರವು ಸಮೃದ್ಧಿಯಾಗಿ ದೊರೆಯದಿದ್ದಲ್ಲಿ, ಆಕೆಯ ರಕ್ತದ ಗುಣಮಟ್ಟ ಮತ್ತು ಪರಿಮಾಣವೂ ಸಹ ಕೊರತೆಯಾಗುವುದು. ದೇಹದಲ್ಲಿ ರಕ್ತಸಂಚಾರವು ಕಡಿಮೆಯಾಗುವುದು ಹಾಗೂ ಮಗುವೂ ಸಹ ರಕ್ತದ ಕೊರತೆಯಿಂದ ಬಳಲುವುದು. ಶಿಶುವಿಗೆ ಆಹಾರವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಸಾಮರ್ಥ್ಯ ಇಲ್ಲದಿರುವುದರಿಂದ, ದೇಹದ ಪೋಷಣೆಗಾಗಿ ಶುದ್ಧರಕ್ತವನ್ನು ಪರಿವರ್ತಿಸಿಕೊಳ್ಳಲಾರದು. ತಾಯಿ ಹಾಗೂ ಮಗುವಿನ ಬೆಳವಣಿಗೆಯು ಉತ್ತಮವಾದ ಹಾಗೂ ಬೆಚ್ಚನೆಯ ಉಡುಪು ಹಾಗೂ ಪೌಷ್ಟಿಕಾಂಶಭರಿತ ಆಹಾರಸೇವನೆಯ ಮೇಲೆ ಹೆಚ್ಚಾಗಿ ಆತುಕೊಂಡಿದೆ.KanCCh 158.2

    Larger font
    Smaller font
    Copy
    Print
    Contents