Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮಗುವನ್ನು ಶಿಸ್ತಿಗೆ ಒಳಪಡಿಸುವಾಗ ಸ್ವ ನಿಯಂತ್ರಣದ ಅಗತ್ಯ

    ಮಗುವು ಹಠಮಾರಿಯಾಗಿ ಅಶಿಸ್ತಿನಿಂದಲೂ, ವಿವೇಕರಹಿತವಾಗಿಯೂ ವರ್ತಿಸುವಾಗ, ತಾಯಿ ದೃಢ ನಿರ್ಧಾರ ತೆಗೆದುಕೊಂಡು ಅವನನ್ನು ತಿದ್ದುವುದು ಬಹಳ ಮುಖ್ಯ. ಅಂತಹ ಸಮಯದಲ್ಲಿ ತಾಯಿಗೆ ಅಪಾರವಾದ ವಿವೇಕದ ಅಗತ್ಯವಿದೆ. ಅವಿವೇಕಿತನದ ನಿರ್ವಹಣೆ ಮತ್ತು ಕಠಿಣವಾದ ಶಿಸ್ತಿನಿಂದ ಮಗುವಿಗೆ ಹೆಚ್ಚು ಹಾನಿಯಾಗುವ ಸಂಭವವಿದೆ. ಸಾಧ್ಯವಾದಷ್ಟು ಮಟ್ಟಿಗೆ ಇಂತಹ ಇಕ್ಕಟ್ಟಿನ ಪರಿಸ್ಥಿತಿ ಗಳನ್ನು ತಡೆಗಟ್ಟಬೇಕು. ಆಗ ತಾಯಿ ಮಗು ಇಬ್ಬರೂ ತೀವ್ರವಾದ ತೊಳಲಾಟಕ್ಕೆ ಒಳಗಾಗುತ್ತಾರೆ. ಆದರೆ ಮಗು ತನ್ನ ತಂದೆತಾಯಿಯರ ವಿವೇಕಯುತವಾದ ನಿರ್ಧಾರಕ್ಕೆ ತಲೆಬಾಗಬೇಕೆಂದು ಮನವರಿಕೆ ಮಾಡಿಕೊಡಬೇಕು.KanCCh 161.1

    ಮಗುವನ್ನು ಶಿಕ್ಷಿಸುವಾಗ, ಅವನು ಮೊಂಡುತನದಿಂದ ಅವಿಧೇಯತೆ ತೋರಿಸದಂತೆ, ತಾಯಿ ಮೊದಲು ತನ್ನನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಗಟ್ಟಿಯಾದ ಸ್ವರದಲ್ಲಿ ಯಾವುದೇ ಆಜ್ಞೆ ಪಾಲಿಸುವಂತೆ ಮಗುವಿಗೆ ಹೇಳಬಾರದು. ಸಾಧ್ಯವಾದಷ್ಟು ತಗ್ಗಿದ ಸ್ವರದಿಂದ ಮೆದು ಮಾತಿನಲ್ಲಿ ಹೇಳುವಾಗ ಮಕ್ಕಳು ಕೇಳುತ್ತಾರೆ. ಅವರು ಕ್ರಿಸ್ತನ ಬಳಿಗೆ ಬರುವ ರೀತಿಯಲ್ಲಿ ತಾಯಿ ಅವರೊಡನೆ ವರ್ತಿಸಬೇಕು. ಪ್ರೀತಿ ಸ್ವರೂಪನಾದ ದೇವರು ತನ್ನ ಸಹಾಯಕನೂ, ತನ್ನ ಶಕ್ತಿಯೂ ಆಗಿದ್ದಾನೆಂದು ಅವಳು ತಿಳಿದುಕೊಳ್ಳಬೇಕು.KanCCh 161.2

    ತಾಯಿ ವಿವೇಕಿನಿಯಾದ ಕ್ರೈಸ್ತಳಾಗಿದ್ದಲ್ಲಿ, ಮಗುವು ನಾನು ಹೇಳಿದ್ದಕ್ಕೆಲ್ಲ ವಿಧೇಯನಾಗಬೇಕೆಂದು ಬಲವಂತ ಮಾಡಬಾರದು. ಶತ್ರುವಾದ ಸೈತಾನನು ಜಯ ಹೊಂದಬಾರದೆಂದು ಆಕೆ ಮನಃಪೂರ್ವಕವಾಗಿ ಪ್ರಾರ್ಥಿಸಬೇಕು ಹಾಗೂ ಪ್ರಾರ್ಥಿಸುವಾಗ ತನ್ನ ಆತ್ಮೀಕ ಜೀವನವೂ ಸಹ ಪುನರುಜೀವನಗೊಳ್ಳುತ್ತದೆಂದು ಅವಳಿಗೆ ತಿಳಿದಿರಬೇಕು. ಈಗ ತನ್ನಲ್ಲಿ ಕಾರ್ಯಮಾಡುತ್ತಿರುವ ಪವಿತ್ರಾತ್ಮನ ಅದೇ ಶಕ್ತಿಯು, ತನ್ನ ಮಗನಲ್ಲಿಯೂ ಕಾರ್ಯಮಾಡುತ್ತಿರುವುದನ್ನು ಆಕೆಯು ತಿಳಿದುಕೊಳ್ಳುವಳು. ಮಗುವು ಹೆಚ್ಚು ವಿಧೇಯನಾಗುವನು ಮತ್ತು ಸೌಮ್ಯಸ್ವಭಾವ ಬೆಳೆಸಿಕೊಳ್ಳುವನು. ಆಗ ತಾಯಿಯಾಗಿ ನಿಮ್ಮ ಹೋರಾಟದಲ್ಲಿ ನೀವು ಜಯ ಹೊಂದುವಿರಿ. ನಿಮ್ಮ ಕರುಣೆ, ವಿವೇಕವುಳ್ಳ ಮಾತುಗಳು, ನಿಮ್ಮ ತಾಳ್ಮೆಯಿಂದ ಮಗುವನ್ನು ತಿದ್ದುವ ಕಾರ್ಯ ಸಫಲವಾಯಿತು. ಮಳೆಯಾದ ನಂತರ ಸೂರ್ಯನು ಹೊಳೆಯುವಂತೆ, ಬಿರುಗಾಳಿಯ ನಂತರ ಸಮಾಧಾನ ಉಂಟಾಗುತ್ತದೆ. ಈ ದೃಶ್ಯವನ್ನು ಗಮನಿಸುತ್ತಿರುವ ದೇವದೂತರು ಆಗ ಹರ್ಷದಿಂದಲೂ ಉಲ್ಲಾಸದಿಂದಲೂ ಹಾಡುವರು.KanCCh 161.3

    ಇಂತಹ ಸಂದಿಗ್ಧ ಪರಿಸ್ಥಿತಿ ಗಂಡ ಹೆಂಡತಿಯರಲ್ಲಿಯೂ ಉಂಟಾಗಬಹುದು. ಆಗ ನೀವು ಪರಿಶುದ್ಧಾತ್ಮನಿಂದ ಸಹಾಯ ಹೊಂದಿ ನಿಮ್ಮನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ನಿಮ್ಮ ಮಕ್ಕಳಲ್ಲಿ ಕಂಡುಬರುವಂತ ಒರಟು ಸ್ವಭಾವ, ಅವಿಧೇಯತೆ,ಅವಿವೇಕತನದ ವರ್ತನೆಗಳು ಗಂಡ ಹೆಂಡತಿಯರಾದ ನಿಮ್ಮಲ್ಲಿಯೂ ಕಂಡು ಬರುವುದು. ಚಕಮುಕಿ ಕಲ್ಲನ್ನು ಮತ್ತೊಂದು ಚಕಮುಕಿ ಕಲ್ಲಿನಲ್ಲಿ ಉಜ್ಜಿದಾಗ ಮೊದಲು ಕಿಡಿಹಾರಿ, ಅನಂತರ ಬೆಂಕಿ ಹತ್ತಿಕೊಳ್ಳುವುದು. ಅದೇ ರೀತಿಯಾಗಿ ಗಂಡ ಹೆಂಡತಿಯರಾದ ನೀವು ನಿಮ್ಮನ್ನು ಸಂಪೂರ್ಣವಾಗಿ ಸ್ವನಿಯಂತ್ರಣದಲ್ಲಿಟ್ಟುಕೊಳ್ಳದೆ ಪರಸ್ಪರ ದೋಷಾರೋಪಣೆ ಮಾಡಿದಲ್ಲಿ, ಇದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಾಗಿ ಬೆಂಕಿಹತ್ತಿಕೊಳ್ಳುವುದು.KanCCh 161.4

    *****