Go to full page →

ಪುಸ್ತಕಗಳ ಪ್ರಭಾವ ಕೊಕಾಘ 123

ಒಂದು ದಿನದಲ್ಲಿ ಸಾವಿರಕ್ಕೂ ಹೆಚ್ಚು ಜನರು ದೀಕ್ಷಾಸ್ನಾನ ತೆಗೆದುಕೊಳ್ಳುವರು. ತಾವು ಅಡ್ವೆಂಟಿಸ್ಟ್ ಪುಸ್ತಕಗಳನ್ನು ಓದಿ ಮೊದಲನೆಯದಾಗಿ ಸತ್ಯ ತಿಳಿದುಕೊಂಡೆವೆಂದು ಹೆಚ್ಚಿನವರು ಸಾಕ್ಷಿಕೊಡುವರು. (ಎವಾಂಜಲಿಸಮ್ 693, 1885). ಕೊಕಾಘ 123.4

ಮಹಾಹೋರಾಟ (ಗ್ರೇಟ್ ಕಾಂಟ್ರೊವರ್ಸಿ) ಪುಸ್ತಕದ ಪರಿಣಾಮವನ್ನು ಈಗ ಕಂಡುಬರುವಂತೆ ನಿರ್ಣಯಿಸಬೇಡಿ, ಅದನ್ನು ಓದಿದ ಕೆಲವರು ಧೈರ್ಯಗೊಂಡು ದೇವರಾಜ್ಞೆಗಳನ್ನು ಕೈಕೊಂಡು ನಡೆಯುವವರೊಂದಿಗೆ ಸೇರಿಕೊಳ್ಳುವರು. ಆದರೆ ಈ ಪುಸ್ತಕ ಓದಿದವರಲ್ಲಿ ಅಪಾರ ಸಂಖ್ಯೆಯ ಜನರು ಇದರಲ್ಲಿ ಮುಂದಾಗಿ ತಿಳಿಸಿರುವ ಘಟನೆಗಳು ಒಂದೊಂದಾಗಿ ನೆರವೇರುವುದನ್ನು ನೋಡಿದಾಗ, ಸತ್ಯ ಸಭೆಗೆ ಸೇರಿಕೊಳ್ಳಲು ನಿರ್ಧರಿಸುವರು. ಗ್ರೇಟ್ ಕಾಂಟ್ರೊವರ್ಸಿ (ಕನ್ನಡದಲ್ಲಿ ಮಹಾಹೋರಾಟ) ಪುಸ್ತಕದಲ್ಲಿ ಮುಂದಾಗಿ ನಡೆಯುವುದೆಂದು ತಿಳಿಸಿರುವ ಘಟನೆಗಳಲ್ಲಿ ಕೆಲವು ನೆರವೇರಿದಾಗ, ಉಳಿದವೂ ಸಹ ನೆರವೇರುವುದೆಂಬ ನಂಬಿಕೆ ಅವರಲ್ಲಿ ಉಂಟಾಗುವುದು. ಸುವಾರ್ತಾ ಸೇವೆಯ ಮುಕ್ತಾಯದಲ್ಲಿ ಲೋಕವು ದೇವರ ಮಹಿಮೆಯಿಂದ ಪ್ರಕಾಶಗೊಂಡಾಗ, ಅನೇಕರು ದೇವರಾಜ್ಞೆಗಳನ್ನು ಕೈಗೊಳ್ಳಲು ನಿರ್ಧರಿಸುವರು (ಕೋಲ್‌ಫೋರ್ಟರ್ ಮಿನಿಸ್ಟ್ರಿ, ಪುಟಗಳು 128, 129, 1890). ಕೊಕಾಘ 123.5

ನಮ್ಮ ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯ ಪ್ರಕಟನಾ ಸಂಸ್ಥೆಗಳು ಮಹಾ ಅಧಿಕಾರವುಳ್ಳ ಮತ್ತೊಬ್ಬ ದೂತನ ಪ್ರಭಾವದೊಂದಿಗೆ ಸೇರಿಕೊಂಡು ಮೂರನೇ ದೂತನ ವರ್ತಮಾನವು ಹೆಚ್ಚಿನ ಪ್ರಮಾಣದಲ್ಲಿ ಸಾರಲ್ಪಡುವುದು (ಪ್ರಕಟನೆ 18:1) ಟೆಸ್ಟಿಮೊನಿಸ್ ಸಂಪುಟ 7, ಪುಟ 140, 1902. ಕೊಕಾಘ 124.1

*****