Go to full page →

ಆತ್ಮ ಶುದ್ಧಿಯುಳ್ಳವರು ತಡಮಾಡುವುದಿಲ್ಲ ಕೊಕಾಘ 123

ಈಗ ಸಾಕಷ್ಟು ಸಂಖ್ಯೆಯಲ್ಲಿ ಜನರು ಸತ್ಯವನ್ನು ಸ್ವೀಕರಿಸಲು ನಿರ್ಧರಿಸುತ್ತಿಲ್ಲ. ಆದರೆ ಇವೆಲ್ಲವೂ ಅವರ ಜೀವನದಲ್ಲಿ ಪರಿಣಾಮ ಬೀರಿದಾಗ ಹಾಗೂ ಮಹಾಧ್ವನಿಯಿಂದ ಕೊನೆಯ ಕಾಲದ ಎಚ್ಚರಿಕೆಯ ಸಂದೇಶವು ಸಾರಲ್ಪಟ್ಟಾಗ, ಅವರು ಇನ್ನೂ ಹೆಚ್ಚು ತಡಮಾಡದೆ ದೃಢನಿರ್ಧಾರ ತೆಗೆದುಕೊಂಡು ಸತ್ಯವನ್ನು ಅಂಗೀಕರಿಸುವರು (ಏವಾಂಜಲಿಸಮ್, ಪುಟಗಳು 300, 301, 1890). ಕೊಕಾಘ 123.1

ಶೀರ್ಘದಲ್ಲಿಯೇ ಜಗತ್ತಿನ ಎಲ್ಲಾ ಜನರ ಮೇಲೆ ಕೊನೆಯ ಶೋಧನೆ ಹಾಗೂ ಪರೀಕ್ಷೆ ಬರಲಿದೆ. ಆಗ ಪ್ರಾಮಾಣಿಕವಾದ ನಿರ್ಧಾರ ಜನರು ಮಾಡುತ್ತಾರೆ. ದೇವರ ವಾಕ್ಯ ಕೇಳಿ ತಾವು ಪಾಪ ಮಾಡಿದ್ದೇವೆಂದು ತಿಳಿದುಕೊಂಡವರು ರಾಜಕುಮಾರನಾದ ಇಮ್ಯಾನುವೇಲನ ಜೊತೆ ಸೇರಿಕೊಳ್ಳುವರು (ಟೆಸ್ಟಿಮೋನೀಸ್, ಸಂಪುಟ 9, ಪುಟ 149, 1909). ನಿಜವಾಗಿಯೂ ಪ್ರಾಮಾಣಿಕರಾದವರು ಸತ್ಯದ ಬೆಳಕಿಗೆ ಬರುವರು (ಗ್ರೇಟ್ ಕಾಂಟ್ರೊವರ್ಸಿ 522, 1911). ಕೊಕಾಘ 123.2

ದೇವರ ಸಂದೇಶವು ವಾದವಿವಾದಗಳಿಂದಲ್ಲ, ಬದಲಾಗಿ ಪರಿಶುದ್ಧಾತ್ಮನ ಶಕ್ತಿಯಿಂದ ಮಾತ್ರ ಸಾರಲ್ಪಡುತ್ತದೆ. ಬೀಜ ಬಿತ್ತಲ್ಪಟ್ಟಿದೆ, ಈಗ ಅದು ಮೊಳಕೆ ಒಡೆದು ಫಲಕೊಡಲಿದೆ. ದೇವರ ಸೇವಕರು ಹಂಚಿದ ಸುವಾರ್ತೆಯ ಕರಪತ್ರಗಳು, ಪುಸ್ತಕಗಳು ತಮ್ಮ ಪ್ರಭಾವ ಬೀರಿವೆ. ಆದಾಗ್ಯೂ, ಈ ಪ್ರಭಾವಕ್ಕೆ ಒಳಪಟ್ಟವರು ಸತ್ಯವನ್ನು ಸಂಪೂರ್ಣವಾಗಿ ಮನವರಿಕೆ ಮಾಡಿಕೊಳ್ಳಲು ಅಥವಾ ವಿಧೇಯತೆ ತೋರದಂತೆ ತಡೆಯಲಟ್ಟಿದ್ದಾರೆ. ಈಗ ಬೆಳಕಿನ ಕಿರಣಗಳು ಎಲ್ಲಾ ಕಡೆಯಲ್ಲಿಯೂ ವ್ಯಾಪಿಸಿಕೊಂಡು ಸತ್ಯವು ಸಷ್ಟವಾಗಿ ಕಂಡುಬರುತ್ತಿದೆ. ಪ್ರಾಮಾಣಿಕರಾದ ದೇವರಮಕ್ಕಳು ತಮ್ಮನ್ನು ಹಿಡಿದುಕೊಂಡಿದ್ದ ಬಂಧನದಿಂದ ಸಂಬಂಧ, ಸಭೆಯ ಪ್ರಭಾವ ಯಾವುದೂ ಸಹ ಅವರನ್ನು ಈಗ ಹಿಡಿದಿಡಲು ಸಾಧ್ಯವಾಗದು. ಇವೆಲ್ಲವುಗಳಿಗಿಂತ ಅವರಿಗೆ ಸತ್ಯವು ಬಹಳ ಅಮೂಲ್ಯವೆನಿಸಿದೆ. ಸತ್ಯಕ್ಕೆ ವಿರುದ್ಧವಾಗಿ ಎಲ್ಲರೂ ಒಟ್ಟಾಗಿದ್ದರೂ, ಅಪಾರ ಸಂಖ್ಯೆಯಲ್ಲಿ ಜನರು ಕರ್ತನನ್ನು ಸೇರಿಕೊಳ್ಳುವ ನಿರ್ಧಾರ ಮಾಡುವರು (ಗ್ರೇಟ್ ಕಾಂಟ್ರೊವರ್ಸಿ, 612, 1911). ಕೊಕಾಘ 123.3