Go to full page →

ಮೃಗದ ಗುರುತು ಎಂದರೇನು? ಕೊಕಾಘ 130

ಮೃಗ ಹಾಗೂ ಅದರ ವಿಗ್ರಹಕ್ಕೆ ನಮಸ್ಕರಿಸಿ ವಾರದ ಮೊದಲನೆ ದಿನವನ್ನು ಆಚರಿಸುವವರಿಗಿಂತ ಭಿನ್ನವಾದ ವಿಶಿಷ್ಟ ಜನರನ್ನು ಯೋಹಾನನು ದರ್ಶನದಲ್ಲಿ ನೋಡಿದನು. ವಾರದ ಮೊದಲನೆ ದಿನವಾದ ಭಾನುವಾರವನ್ನು ದೇವರ ಸಬ್ಬತ್ ದಿನವೆಂದು ಆಚರಿಸುವುದು ಮೃಗದ ಗುರುತಾಗಿದೆ (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 133, 1898), ರೋಮನ್ ಕಥೋಲಿಕ್ ಸಭೆಯು ಜಾರಿಗೆ ತಂದ ವಾರದ ಮೊದಲನೆ ದಿನದ ಸುಳ್ಳು ಸಬ್ಬತ್ತು ಮೃಗದ ಗುರುತಾಗಿದೆ (ಎವಾಂಜಲಿಸಮ್ ಪುಟ 234, 1899). ಕೊಕಾಘ 130.2

ಇಕ್ಕಟ್ಟಿನ ಪರೀಕ್ಷೆಯ ಸಮಯ ಬಂದಾಗ, ಮೃಗದ ಗುರುತು ಏನೆಂದು ಸ್ಪಷ್ಟವಾಗಿ ತಿಳಿದುಬರುವುದು. ಅದೇನೆಂದರೆ ಭಾನುವಾರಾಚರಣೆಯೇ ಆಗಿದೆ (ಬೈಬಲ್ ವ್ಯಾಖ್ಯಾನ, ಸಂಪುಟ 7, ಪುಟ 980, 1900). ಕೊಕಾಘ 130.3

ದೇವರ ಮುದ್ರೆಯು ಕರ್ತನ ಸೃಷಿಯ ಸಾರಕವಾದ ಏಳನೇದಿನದ ಸತನ್ನು ಪರಿಶುದ್ಧವಾಗಿ ಆಚರಿಸುವುದೇ ಆಗಿದೆ. ಮೃಗದ ಗುರುತು ಇದಕ್ಕೆ ವಿರುದ್ಧವಾಗಿದೆ. ಅಂದರೆ ವಾರದ ಮೊದಲನೆ ದಿನವನ್ನು ಆಚರಿಸುವುದು (ಟೆಸ್ಟಿಮೊನಿಸ್, ಸಂಪುಟ 8, ಪುಟ 117, 1904). ಕೊಕಾಘ 130.4

‘ಈ ಎರಡನೇ ಮೃಗವು ದೊಡ್ಡವರು ಚಿಕ್ಕವರು... ಎಲ್ಲರೂ ತಮ್ಮ ತಮ್ಮ ಬಲಗೈ ಮೇಲಾಗಲಿ, ಹಣೆಯ ಮೇಲಾಗಲಿ ಗುರುತು ಹೊಂದುವಂತೆ... ಆಜ್ಞೆ ಮಾಡುತ್ತದೆ’ (ಪ್ರಕಟನೆ 13:16), ಮನುಷ್ಯರು ತಮ್ಮ ಕೈಗಳಿಂದ ಭಾನುವಾರ ಕೆಲಸ ಮಾಡಬಾರದು. ಮಾತ್ರವಲ್ಲದೆ, ತಮ್ಮ ಮನಸ್ಸಿನಲ್ಲಿ ಭಾನುವಾರವು ಸಬ್ಬತ್ ದಿನವೆಂದು ನಿಜವಾಗಿಯೂ ಅಂಗೀಕರಿಸಿಕೊಳ್ಳಬೇಕು (ಸ್ಪೆಷಲ್ ಟೆಸ್ಟಿಮೊನೀಸ್‌ ಟು ಬ್ಯಾಟಲ್ ಕ್ರೀಕ್‌ಚರ್ಚ್ (ಕರಪತ್ರ) ಪುಟಗಳು 6, 7, 1897). ಕೊಕಾಘ 130.5