Go to full page →

ಮೃಗದ ಗುರುತು ಯಾವಾಗ ಹಾಕಲ್ಪಡುವುದು? ಕೊಕಾಘ 130

ಇದುವರೆಗೆ ಇನ್ನೂ ಯಾರೂ ಸಹ ಮೃಗದ ಗುರುತನ್ನು ಹೊಂದಿಕೊಂಡಿಲ್ಲ (ಎವಾಂಜಲಿಸಮ್, 234, 1899), ಕೊಕಾಘ 130.6

ಭಾನುವಾರಾಚರಣೆಯು ಇನ್ನೂ ಸಹ ಮೃಗದ ಗುರುತಾಗಿಲ್ಲ. ವಾರದ ಮೊದಲನೆ ದಿನವಾದ ಭಾನುವಾರದ ವಿಗ್ರಹಾರಾಧಕ ಸಬ್ಬತ್ತಿಗೆ ಜನರಲ್ಲರೂ ಅಡ್ಡ ಬೀಳಬೇಕೆಂಬ ಆಜ್ಞೆ ಹೊಂದುವವರೆಗೆ ಆ ದಿನವು ಮೃಗದ ಗುರುತಾಗಿರುವುದಿಲ್ಲ. ಈ ದಿನವು ಜನರ ನಂಬಿಕೆಯನ್ನು ಪರೀಕ್ಷಿಸುವ ಸಮಯವು ಬರಲಿದೆ. ಆದರೆ ಆ ಸಮಯವು ಇನ್ನೂ ಬಂದಿಲ್ಲ. ಬೈಬಲ್ ವ್ಯಾಖ್ಯಾನ, ಸಂಪುಟ 7, ಪುಟ 977, 1899). ಕೊಕಾಘ 130.7

ಮನುಷ್ಯರಿಗೂ ಮತ್ತು ತನಗೂ ನಡುವೆ ಒಂದು ಗುರುತಾಗಿಯೂ ಮತ್ತು ಅವರ ನಿಷ್ಠೆಯನ್ನು ಪರೀಕ್ಷಿಸಲು ಸಬ್ಬತ್ತನ್ನು ದೇವರು ಮನುಷ್ಯರಿಗೆ ಕೊಟ್ಟಿದ್ದಾನೆ. ದೇವರಾಜ್ಞೆಯ ಬಗ್ಗೆ ದೈವೀಕ ಬೆಳಕು ಕೊಡಲ್ಪಟ್ಟ ನಂತರವೂ, ಮನುಷ್ಯರು ಅದಕ್ಕೆ ಅವಿಧೇಯರಾಗಿ, ದೇವರಾಜ್ಞೆಗಳಿಗಿಂತ ಮುಂದೆ ಬರಲಿರುವ ಇಕ್ಕಟ್ಟಿನ ಸಮಯದಲ್ಲಿ ಮನುಷ್ಯರ ಆಜ್ಞೆಯನ್ನು ಹೆಚ್ಚಾಗಿ ಗೌರವಿಸುವವರು ಮೃಗದ ಗುರುತು ಹೊಂದುವರು (ಎವಾಂಜಲಿಸಮ್, 235, 1900). ಕೊಕಾಘ 130.8

ಸಬ್ಬತ್ತು ದೇವರ ಬಗ್ಗೆ ನಿಷ್ಠೆ ತೋರಿಸುವ ಒಂದು ಮಹಾಪರೀಕ್ಷೆಯಾಗಿದೆ. ಯಾಕೆಂದರೆ ವಿಶೇಷವಾಗಿ ಈ ವಿಷಯವು ಹೆಚ್ಚು ವಿವಾದಾಸ್ಪದವಾಗಿದೆ. ಮಾನವರಿಗೆ ಅಂತಿಮ ಪರೀಕ್ಷೆ ಎದುರಿಸಬೇಕಾದ ಸಮಯ ಬಂದಾಗ ದೇವರನ್ನು ಆರಾಧಿಸುವವರು ಮತ್ತು ಆರಾಧಿಸದವರನ್ನು ಪ್ರತ್ಯೇಕಿಸುವ ಒಂದು ವಿಶಿಷ್ಟ ಗೆರೆಯು ಎಳೆಯಲ್ಪಡುವುದು. ಕೊಕಾಘ 131.1

ದೇಶದ ಆಜ್ಞೆಯ ಪ್ರಕಾರವಾಗಿ ವಾರದ ಮೊದಲನೇ ದಿನವಾದ ಭಾನುವಾರದ ಸುಳ್ಳು ಸುತ್ತಿನ ಆಚರಣೆಯು ದೇವರ ನಾಲ್ಕನೇ ಆಜ್ಞೆಗೆ ವ್ಯತಿರಿಕ್ತವಾಗಿದೆ ಹಾಗೂ ದೇವರ ವಿರುದ್ಧವಾಗಿ ಸೈತಾನನಿಗೆ ನಿಷ್ಠಾವಂತರಾಗಿದ್ದೇವೆಂಬುದನ್ನು ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡಂತಾಗುತ್ತದೆ. ದೇವರಾಜ್ಞೆಗೆ ವಿಧೇಯತೆ ತೋರಿ, ಏಳನೇ ದಿನವಾದ ಶನಿವಾರ ನಿಜಸಬ್ಬತ್ತನ್ನು ಕೈಕೊಂಡು ನಡೆಯುವುದು ಸೃಷ್ಟಿಕರ್ತನಿಗೆ ನಿದ್ದೆ ತೋರಿಸುವ ಪುರಾವೆಯಾಗಿದೆ. ಲೋಕದ ಶಕ್ತಿಗಳಿಗೆ ಒಳಗಾಗಿ ಸುಳ್ಳು ಸಬ್ಬತ್ತನ್ನು ಒಪ್ಪಿಕೊಳ್ಳುವ ಒಂದು ವರ್ಗದ ಜನರು ಮೃಗದ ಗುರುತನ್ನು ಹೊಂದಿದರೆ, ದೈವೀಕ ಅಧಿಕಾರಕ್ಕೆ ನಿಷ್ಠೆಯನ್ನು ತೋರಿಸಿ ಏಳನೇ ದಿನದ ಸತ್ಯ ಸಬ್ಬತ್ತನ್ನು ಅಂಗೀಕರಿಸುವ ಮತ್ತೊಂದು ವರ್ಗದವರು ದೇವರ ಮುದ್ದೆ ಹೊಂದುವರು (ಗ್ರೇಟ್ ಕಾಂಟ್ರೊವರ್ಸಿ, ಪುಟ 605, 1911). ಕೊಕಾಘ 131.2