Go to full page →

ದೇವರಾಜ್ಞೆಗಳು ಆಕಾಶದಲ್ಲಿ ಕಾಣಿಸಿಕೊಳ್ಳುವವು ಕೊಕಾಘ 144

ಆಗ ಆಕಾಶದಲ್ಲಿ ಎರಡು ಕಲ್ಲಿನ ಹಲಗೆಗಳನ್ನು ಜೊತೆಯಾಗಿ ಮಡಚಿಕೊಂಡಿರುವ ಒಂದು ಕೈ ಕಂಡುಬರುವುದು. ಇದನ್ನು ಕೀರ್ತನೆಗಾರನಾದ ಲೇವಿಕುಲದ ಆಸಾಫನೆಂಬ ಪ್ರವಾದಿಯು ‘ದೇವರು ತಾನೇ ನ್ಯಾಯಾಧಿಪತಿ, ಆತನು ನೀತಿಸ್ವರೂಪನೆಂದು ಆಕಾಶ ಮಂಡಲವು ಘೋಷಿಸುತ್ತದೆ” ಎಂದು ವರ್ಣಿಸುತ್ತಾನೆ (ಕೀರ್ತನೆ 50:6). ಸೀನಾಯಿ ಬೆಟ್ಟದಲ್ಲಿ ಇಸ್ರಾಯೇಲ್ಯರಿಗೆ ಜೀವನದ ಮಾರ್ಗದರ್ಶನವಾಗಿ ಗುಡುಗು, ಸಿಡಿಲು, ಉರಿಜ್ವಾಲೆಯ ನಡುವೆ ದೇವರಿಂದ ಪ್ರಕಟಿಸಲ್ಪಟ್ಟ, ಆತನ ನೀತಿಯಾಗಿರುವ ಪರಿಶುದ್ಧವಾದ ಹತ್ತು ಆಚ್ಚೆಗಳು, ಈಗ ದುಷ್ಟರಿಗೆ ನ್ಯಾಯದಂಡನೆಯ ತೀರ್ಪಿನಂತೆ ತೋರಿಬರುವುದು. ಆ ಕೈ ಕಲ್ಲಿನ ಹಲಗೆಗಳನ್ನು ತೆರೆದಾಗ, ಬೆಂಕಿಯ ಲೇಖನಿಯಿಂದ ಕೆತ್ತಿದಂತಿರುವ ಹತ್ತು ಆಜ್ಞೆಗಳು ಕಂಡುಬರುವವು. ಆ ಪದಗಳು ಎಷ್ಟೊಂದು ಸ್ಪಷ್ಟವೂ, ಸರಳವೂ ಆಗಿರುತ್ತದೆಂದರೆ, ಎಲ್ಲರೂ ಅದನ್ನು ಓದಬಹುದು. ಎಲ್ಲಿರ ಮನಸ್ಸಿನಿಂದ ಮೂಢನಂಬಿಕೆ ಮತ್ತು ಪಾಷಂಡಿತನ ಅಂದರೆ ಸತ್ಯವೇದಕ್ಕೆ ವಿರುದ್ಧವಾದ ಅಭಿಪ್ರಾಯವು ತೊಲಗಿ, ಅವರ ನೆನಪು ಮರುಕಳಿಸುವುದು ಮತ್ತು ದೇವರ ಹತ್ತು ಆಜ್ಞೆಗಳು ಸಂಕ್ಷಿಪ್ತವಾಗಿಯೂ ಎಲ್ಲರೂ ತಿಳಿದುಕೊಳ್ಳುವಂತೆ ಅಧಿಕಾರಯುಕ್ತವಾಗಿ ಜಗತ್ತಿನ ಎಲ್ಲಾ ಜನರು ಕಾಣುವಂತೆ ಆಕಾಶದಲ್ಲಿ ತೋರಿಬರುವುದು (ಗ್ರೇಟ್ ಕಾಂಟ್ರೊವರ್ಸಿ,639). ಕೊಕಾಘ 144.3