Go to full page →

ನಾಶಕ್ಕೆ ಗುರಿಯಾದವರು ಸುಳ್ಳು ಕುರುಬರಾದ ಬೋಧಕರನ್ನು ಖಂಡಿಸುವರು ಕೊಕಾಘ 144

ಸತ್ಯದ ಬೆಳಕನ್ನು ತಿಳಿದುಕೊಂಡು, ತಾವು ಪಾಪಿಗಳೆಂದು ಮನವರಿಕೆಯಾಗಿದ್ದರೂ, ತಮ್ಮ ರಕ್ಷಣೆಗೆ ಬೋಧಕರು, ಸಭಾಪಾಲಕರ ಮೇಲೆ ಭರವಸೆ ಇಟ್ಟಿದ್ದ ಸಭಾಸದಸ್ಯರು. ಆ ದಿನದಲ್ಲಿ ತಮ್ಮ ಪಾಪದ ಉಲ್ಲಂಘನೆಗೆ ಬೇರೆ ಯಾರೂ ಸಹ ಈಡುಕೊಡಲಾಗದೆಂದು ತಿಳಿದುಕೊಳ್ಳುವರು. ದುಃಖದಿಂದ ಅವರು ಗೋಳಾಡುತ್ತಾ “ನಾವು ನಾಶವಾದೆವು, ನಿತ್ಯನಿತ್ಯಕ್ಕೂ ನಾಶವಾದೆವು’ ಎಂದು ಕೂಗಾಡುವರು. ಸುಳ್ಳು ಬೋಧನೆ ಮಾಡಿದ ಬೋಧಕರನ್ನು ಸೀಳಿ ಹಾಕುವಷ್ಟು ಕೋಪದ ಭಾವನೆ ಸಭಾಸದಸ್ಯರಲ್ಲಿ ಉಂಟಾಗುವುದು (ಅಡ್ರೆಂಟಿಸ್ಟ್ ಸತ್ಯವೇದ ವ್ಯಾಖ್ಯಾನ, ಸಂಪುಟ 4, ಪುಟ 1157). ಕೊಕಾಘ 144.4

ಎಲ್ಲಾ ಸಭಿಕರು ಒಟ್ಟಾಗಿ ಸೇರಿ ತಮ್ಮ ಬೋಧಕರು, ಸಭಾಪಾಲಕರನ್ನು ಅತ್ಯಂತ ಕಠಿಣವಾಗಿ ಶಪಿಸುತ್ತಾ ಖಂಡಿಸುವರು. ಅಪ್ರಾಮಾಣಿಕರಾದ ಬೋಧಕರು ತಮ್ಮ ಸಭಿಕರಿಗೆ ಕಿವಿಗಿಂಪಾದ ವಿಷಯಗಳನ್ನು ಪ್ರವಾದಿಸಿದ್ದರು. ದೇವರಾಜ್ಞೆಗಳು ರದ್ದಾಗಿ ಹೋಗಿವೆ ಎಂದು ಅವರಿಗೆ ಬೋಧಿಸಿದ್ದಲ್ಲದೆ, ಅವುಗಳನ್ನು ಪರಿಶುದ್ಧವಾಗಿ ಕೈಕೊಂಡವರನ್ನು ಹಿಂಸೆಪಡಿಸಿದ್ದರು. ಈಗ ಬೇರೆ ದಾರಿಯಿಲ್ಲದೆ ಹತಾಶರಾದ ಈ ಸುಳ್ಳು ಬೋಧಕರು ಜನರು ಹಾಗೂ ಲೋಕದ ಮುಂದೆ ತಮ್ಮ ಮೋಸದ ಕಾರ್ಯಗಳನ್ನು ಒಪ್ಪಿಕೊಳ್ಳುವರು. ಜನರೆಲ್ಲರೂ ಉಗ್ರಕೋಪಗೊಂಡು “ನಾವು ನಾಶವಾದವು, ಇದಕ್ಕೆ ನೀವೇ ಕಾರಣ’ ಎಂದು ಕೂಗುತ್ತಾ ಸುಳ್ಳುಬೋಧಕರನ್ನು ನಾಶಮಾಡಲು ಮುಂದಾಗುವರು. ಒಂದು ಸಮಯದಲ್ಲಿ ಈ ಸುಳ್ಳು ಬೋಧಕರನ್ನು ಬಹಳವಾಗಿ ಸನ್ಮಾನಿಸಿ ಹೊಗಳಿದ್ದ ಜನರು ಈಗ ಅವರ ಮೇಲೆ ಅತ್ಯಂತ ಭಯಾನಕವಾದ ರೀತಿಯಲ್ಲಿ ಶಪಿಸುವರು. ಅವರ ನಾಶಕ್ಕಾಗಿ ಕೈ ಎತ್ತುವರು. ದೇವರ ಜನರನ್ನು ಕೊಲ್ಲಲು ಉಪಯೋಗಿಸಬೇಕೆಂದು ಇಟ್ಟಿದ್ದ ಆಯುಧಗಳನ್ನು ಈಗ ತಮ್ಮ ಶತ್ರುಗಳಾದ ಸುಳ್ಳು ಬೋಧಕರು ಹಾಗೂ ಸಭಾಪಾಲಕರನ್ನು ಕೊಲ್ಲಲು ಸಭಾಸದಸ್ಯರು ಉಪಯೋಗಿಸುವರು (ಗ್ರೇಟ್ ಕಾಂಟ್ರೊವರ್ಸಿ 65, 656). ಕೊಕಾಘ 145.1

ಕರ್ತನಾದ ದೇವರ ಪರಿಶುದ್ಧ ದೇವಾಲಯವು ತನ ಉಗ್ರಕೋಪವನ್ನು ಮೊದಲಿಗೆ ಎದುರಿಸುತ್ತದೆ. ದೇವರು ತನ್ನ ಸತ್ಯದ ಮಹಾಬೆಳಕನ್ನು ನೀಡಿ, ಜನರ ಆತ್ಮೀಕ ವಿಷಯಗಳ ಪೋಷಕರಾಗಿದ್ದ, ಪುರಾತನ ಕಾಲದ ಜನರು ನಂಬಿಕೆ ದ್ರೋಹ ಮಾಡಿದ್ದರು (ಯೆಹೆಜ್ಯೇಲನು 9:6) (ಟೆಸ್ಟಿಮೊನೀಸ್, ಸಂಪುಟ 5, ಪುಟ 211) ಕೊಕಾಘ 145.2

ಸುಳ್ಳು ಬೋಧಕರಿಂದ ದೇವರ ವಾಕ್ಯದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಶೀಘ್ರದಲ್ಲಿಯೇ ಅವರ ಕೆಲಸಗಳು ಅವರ ಮೇಲೆ ಪ್ರತಿಕ್ರಿಯೆ ಬೀರುತ್ತವೆ. ಆಗ ಅತೀಂದ್ರಿಯ ಶಕ್ತಿಯುಳ್ಳ ಬಾಬೆಲಿನ ಮೇಲೆ ದೇವರ ದಂಡನೆ ಬಂದಾಗ ಪ್ರಕಟನೆ 18ನೇ ಅಧ್ಯಾಯದಲ್ಲಿ ವಿವರಿಸಿರುವ ದೃಶ್ಯಗಳು ಕಂಡುಬರುತ್ತವೆ. ಕೊಕಾಘ 145.3