Go to full page →

ದಶಾಂಶ ಹಾಗೂ ಕಾಣಿಕೆ ಕೊಡುವುದರಲ್ಲಿ ಪ್ರಾಮಾಣಿಕತೆ ಕೊಕಾಘ 46

ದಶಾಂಶವು ಪವಿತ್ರವಾಗಿದ್ದು, ದೇವರು ಅದನ್ನು ಸ್ವತಃ ತನಗಾಗಿ ಕಾದಿರಿಸಿಕೊಂಡಿದ್ದಾನೆ. ಅದನ್ನು ಸುವಾರ್ತಾ ಸೇವಕರ ಕೆಲಸಕ್ಕಾಗಿ ಉಪಯೋಗವಾಗುವಂತೆ ದೇವರ ಭಂಡಾರಕ್ಕೆ ತರಬೇಕು. ಮಲಾಕಿಯ 3ನೇ ಅಧ್ಯಾಯವನ್ನು ಎಚ್ಚರಿಕೆಯಿಂದ ಓದಿ, ದೇವರು ದಶಾಂಶದ ಬಗ್ಗೆ ಏನು ಹೇಳುತ್ತಿದ್ದಾನೆಂದು ಗಮನಿಸಿ (ಟೆಸ್ಟಿಮೊನೀಸ್, ಸಂಪುಟ 9, ಪುಟ 249, 1909). ಕೊಕಾಘ 46.2

ಹೊಸ ಒಡಂಬಡಿಕೆಯಲ್ಲಿ ದಶಾಂಶಕ್ಕೆ ಸಂಬಂಧಪಟ್ಟ ನಿಯಮವು ಸಬ್ಬತ್ ದಿನದಂತೆಯೇ ಪುನಃ ಮತ್ತೆ ವಿಧಿಸಲ್ಪಡುತ್ತಿಲ್ಲ. ಯಾಕೆಂದರೆ ಇವೆರಡರ ನ್ಯಾಯಸಮ್ಮತತೆಯು (Validity) ಖಚಿತಪಡಿಸಲ್ಪಟ್ಟಿದೆ ಹಾಗೂ ಅವುಗಳ ಆಳವಾದ ಆತ್ಮೀಕ ಅರ್ಥವು ವಿವರಿಸಲ್ಪಟ್ಟಿದೆ (ಕೌನ್ಸೆಲ್ಸ್ ಟು ಸ್ಟೀವರ್ಡ್ ಶಿಪ್, ಪುಟ 66 , 1882). ಕರ್ತನು ಈಗ ಎಲ್ಲೆಲ್ಲಿಯೂ ಇರುವ ಸೆವೆಂತ್ ಡೇ ಅಡ್ವೆಂಟಿಸ್ಟರು ತಮ್ಮನ್ನು ಆತನಿಗೆ ಪ್ರತಿಷ್ಟಿಸಿಕೊಂಡು ಸಂದರ್ಭ, ಸನ್ನಿವೇಶಗಳಿಗೆ ಅನುಗುಣವಾಗಿ ಅಗತ್ಯವಾದ ರೀತಿಯಲ್ಲಿ ಸೇವೆ ಮಾಡಬೇಕು, ತಮ್ಮ ಕಾಣಿಕೆ, ದಶಾಂಶ ಹಾಗೂ ಉಡುಗೊರೆಗಳನ್ನು ಉದಾರವಾಗಿ ಕೊಡುವುದರ ಮೂಲಕ ಅವರು ದೇವರ ಅಶೀರ್ವಾದಗಳಿಗಾಗಿ ಸ್ತೋತ್ರ ಸಲ್ಲಿಸಬೇಕು ಹಾಗೂ ಆತನ ಕರುಣೆಗಾಗಿ ಕೃತಜ್ಞತೆ ಅರ್ಪಿಸಬೇಕೆಂದು ದೇವರು ಅವರಿಂದ ಬಯಸುತ್ತಾನೆ (ಟೆಸ್ಟಿಮೊನೀಸ್, ಸಂಪುಟ 9, ಪುಟ 132, 1909). ಕೊಕಾಘ 46.3

ದುಃಖದಿಂದ ಕೊಡುವ ದಾನಧರ್ಮವು, ಸಂತೋಷವಾಗಿ ಕೊಡುವ ಔದಾರ್ಯಕ್ಕೆ ಸಮವಾಗಲಾರದು (ಟೆಸ್ಟಿಮೊನೀಸ್, ಸಂಪುಟ 5, ಪುಟ 15%, 1882). ನಮ್ಮ ಮುಂದಿನ ಜೀವನಕ್ಕೆ ನಮ್ಮನ್ನು ಯೋಗ್ಯರನ್ನಾಗಿ ಮಾಡಲು ನಿರ್ಧರಿಸುವುದಕ್ಕಾಗಿ ಈ ಲೋಕದಲ್ಲಿ ನಾವು ಪರೀಕ್ಷೆಗಾಗಿ ಇಡಲ್ಪಟ್ಟಿದ್ದೇವೆ. ಸ್ವಾರ್ಥವೆಂಬ ಕಳಂಕದಿಂದ ಮಲಿನರಾದ ಯಾರೂ ಸಹ ಪರಲೋಕ ರಾಜ್ಯಕ್ಕೆ ಸೇರಲಾರರು. ಆದುದರಿಂದ ದೇವರು ಈ ಲೋಕದಲ್ಲಿ ನಮಗೆ ತಾತ್ಕಾಲಿಕವಾದ ಹಣ, ಐಶ್ವರ್ಯ ಕೊಟ್ಟು ಪರೀಕ್ಷಿಸುತ್ತಾನೆ. ಈ ಹಣ ಐಶ್ವರ್ಯಗಳನ್ನು ನಾವು ಯಾವ ರೀತಿ ಉಪಯೋಗಿಸುತ್ತೇವೆಂಬುದು ನಮಗೆ ನಿತ್ಯವಾದ ಐಶ್ವರ್ಯವು ವಹಿಸಿಕೊಟ್ಟಿದೆಯೇ ಎಂಬುದನ್ನು ತೋರಿಸಿಕೊಡುತ್ತದೆ (ಕೌನ್ಸೆಲ್ಸ್ ಆನ್ ಸ್ಟೀವರ್ಡ್ ಶಿಪ್, ಪುಟ 22, 1893). ಕೊಕಾಘ 46.4