Go to full page →

ಹೊಸ ಸಂಸ್ಥೆಗಳನ್ನು ಸ್ಥಾಪಿಸಿ ಕೊಕಾಘ 46

‘ಕರ್ತನು ಶೀಘ್ರದಲ್ಲಿಯೇ ಬರುವುದಾದರೆ, ಹೊಸದಾಗಿ ಶಾಲಾಕಾಲೇಜುಗಳು ಸಂಸ್ಥೆಗಳು ಆಸ್ಪತ್ರೆಗಳನ್ನು ಸ್ಥಾಪಿಸುವುದು ಯಾಕೆ? ನಮ್ಮ ಯುವಜನರು ಹೊಸದಾದ ಉದ್ಯೋಗಗಳನ್ನು ಕಲಿಯುವ ಅಗತ್ಯವಾದರೂ ಏನು?” ಎಂದು ಕೆಲವರು ಪ್ರಶ್ನಿಸಬಹುದು, ನಮಗೆ ದೇವರು ಕೊಟ್ಟಿರುವ ತಲಾಂತುಗಳನ್ನು ಯಾವಾಗಲೂ ಅಭಿವೃದ್ಧಿ ಪಡಿಸಿಕೊಳ್ಳಬೇಕೆಂಬುದು ದೇವರ ಯೋಜನೆಯಾಗಿದೆ. ಅವುಗಳನ್ನು ಉಪಯೋಗಿಸದಿದ್ದರೆ, ಅಭಿವೃದ್ಧಿಪಡಿಸಿಕೊಳ್ಳಲಾಗದು. ಕ್ರಿಸ್ತನ ಶೀಘ್ರ ಬರೋಣದ ನಿರೀಕ್ಷೆಯು ನಮ್ಮಲ್ಲಿ ಸೋಮಾರಿತನಕ್ಕೆ ಕಾರಣವಾಗಬಾರದು. ಬದಲಾಗಿ ಮಾನವ ಸಮುದಾಯಕ್ಕೆ ಪ್ರಯೋಜನಕಾರವಾಗಿಯೂ, ಆಶೀರ್ವಾದಕರವಾಗಿಯೂ ಇರಲು ಸಾಧ್ಯವಾದ ಎಲ್ಲವನ್ನೂ ಮಾಡಲಿಕ್ಕೆ ನಮಗೆ ಸ್ಫೂರ್ತಿಯಾಗಬೇಕು (ಮೆಡಿಕಲ್ ಮಿನಿಸ್ಟ್ರಿ, ಪುಟ 268, 1902). ಕೊಕಾಘ 46.5

ಜಗತ್ತಿನಾದ್ಯಂತ ಮಹಾಕಾರ್ಯವು ನಡೆಯಬೇಕಾಗಿದೆ. ಲೋಕದ ಅಂತ್ಯವು ಸಮೀಪವಾಗಿರುವುದರಿಂದ ಅಗತ್ಯಗಳಿಗೆ ತಕ್ಕಂತೆ ವಿವಿಧವಾದ ಶಾಲಾಕಾಲೇಜು, ಸಂಸ್ಥೆಗಳನ್ನು ಕಟ್ಟಲು ವಿಶೇಷ ಪ್ರಯತ್ನದ ಅಗತ್ಯವಿಲ್ಲವೆಂದು ಯಾರೂ ಸಹ ನಿರ್ಧಾರಕ್ಕೆ ಬರಬಾರದು. ಶಾಲಾಕಾಲೇಜುಗಳು ಆಸ್ಪತ್ರೆಗಳು, ಪುಸ್ತಕ ಪ್ರಕಟಣಾ ಸಂಸ್ಥೆಗಳನ್ನು ಕಟ್ಟಬಾರದೆಂದು ದೇವರು ನಮಗೆ ಅಪ್ಪಣೆ ಮಾಡಿದಾಗ, ನಾವು ಆತನ ಚಿತ್ರಕ್ಕೆ ವಿಧೇಯರಾಗಿ ಕರ್ತನೇ ಆ ಕಾರ್ಯವನ್ನು ಮುಕ್ತಾಯಗೊಳಿಸಲು ಅನುವು ಮಾಡಬೇಕು. ಆದರೆ ಈಗ ದೇವರಿಗೆ ನಮ್ಮ ಉತ್ಸಾಹ ಮತ್ತು ಮಾನವರಿಗೆ ಪ್ರೀತಿ ತೋರಿಸುವುದಕ್ಕೆ ನಮಗೆ ಅವಕಾಶವಿದೆ (ಟೆಸ್ಟಿಮೊನಿಸ್, ಸಂಪುಟ 6, ಪುಟ 440, 1900). ಕೊಕಾಘ 47.1