Go to full page →

ಸತ್ತು ಹೋಗಿರುವ ಪ್ರೀತಿಪಾತ್ರರಂತೆ ಕಾಣಿಸಿಕೊಳ್ಳುವುದು ಕೊಕಾಘ 92

ಸತ್ತು ಹೋಗಿರುವ ಒಳ್ಳೆಯವರು ಮತ್ತು ಕೆಟ್ಟವರಂತೆ ಮನುಷ್ಯರಿಗೆ ಕಾಣಿಸಿಕೊಳ್ಳುವುದು ಕೆಟ್ಟ ದೂತರಿಗೆ ಕಷ್ಟದ ಕೆಲಸವೇನಲ್ಲ. ಇಂತ ಘಟನೆಗಳು ಆಗಾಗ್ಗೆ ಸಂಭವಿಸುತ್ತವೆ ಮತ್ತು ಕೊನೆಯ ಕಾಲವು ಮುಕ್ತಾಯವಾಗುವ ಸಮಯ ಹತ್ತಿರವಾದಾಗ, ಆಶ್ಚರ್ಯದಿಂದ ಬೆಚ್ಚಿ ಬೀಳಿಸುವಂತ ವಿಲಕ್ಷಣ ವ್ಯಕ್ತಿಗಳು ಕಾಣಿಸಿಕೊಳ್ಳುವರು (ಎವಾಂಜಲಿಸಮ್, ಪುಟ 604, 1875). ಕೊಕಾಘ 92.4

ಸತ್ತವರ ರೂಪದಲ್ಲಿ ಕಾಣಿಸಿಕೊಳ್ಳುವುದು ಸೈತಾನನ ಅತ್ಯಂತ ಯಶಸ್ವಿಯಾದ ಹಾಗೂ ವಶೀಕರಣ ಶಕ್ತಿಯುಳ್ಳ ವಂಚನೆಯಾಗಿದೆ. ಇದರಿಂದ ಅವನು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವವರ ಅನುಕಂಪವನ್ನು ಗಳಿಸಿಕೊಳ್ಳಲು, ಬುದ್ದಿವಂತಿಕೆಯಿಂದ ಉದ್ದೇಶಪೂರ್ವಕವಾಗಿ ಮಾಡುವ ಮೋಸವಾಗಿದೆ. ಸೈತಾನನ ದೂತರು ಸತ್ತುಹೋಗಿರುವ ಪ್ರೀತಿಪಾತ್ರರ ರೂಪದಲ್ಲಿ ಅವರ ಸಂಬಂಧಿಕರ ಬಳಿ ಬಂದು ಅವರ ಜೀವನಕ್ಕೆ ಸಂಬಂಧಿಸಿದ ಘಟನೆಗಳನ್ನು ವಿವರಿಸುತ್ತಾರೆ. ಅಲ್ಲದೆ ಅವರು ಜೀವದಿಂದಿದಾಗ ಮಾಡಿದ ಕಾರ್ಯಗಳನ್ನು ಮಾಡುತ್ತಾರೆ. ಈ ರೀತಿಯಾಗಿ ಸೈತಾನನ ಕೆಟ್ಟ ದೂತರು ಸತ್ತುಹೋಗಿರುವ ತಮ್ಮ ಸ್ನೇಹಿತರು, ಪ್ರೀತಿಪಾತ್ರರು ದೇವದೂತರಾಗಿದ್ದು, ತಮ್ಮ ಮೇಲೆ ಹಾರಾಡುತ್ತಿದ್ದು, ತಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಜನರು ತಿಳಿದುಕೊಳ್ಳುವಂತೆ ವಂಚಿಸುತ್ತಾರೆ. ಸತ್ತುಹೋಗಿರುವ ತಮ್ಮ ಸ್ನೇಹಿತರಂತೆ ಕಾಣಿಸಿಕೊಂಡಿರುವ ಈ ಕೆಟ್ಟ ದೂತರನ್ನು ಜನರು ಒಂದು ರೀತಿಯಲ್ಲಿ ದೇವರಂತೆ ಪರಿಗಣಿಸುವರು ಹಾಗೂ ಅವರ ಮಾತುಗಳು ದೇವರ ವಾಕ್ಯಕ್ಕಿಂತಲೂ ಹೆಚ್ಚಿನದೆಂದು ಜನರು ತಿಳಿದುಕೊಳ್ಳುವರು (ದಿ ಸೈನ್ಸ್ ಆಫ್ ದಿ ಟೈಮ್ಸ್, ಆಗಸ್ಟ್ 26, 1889), ಸತ್ತು ಹೋಗಿರುವವರಂತೆ ಸೈತಾನನ ದೂತರು ಕಾಣಿಸಿಕೊಳ್ಳುವುದರ ವಿಷಯದಲ್ಲಿ ಶ್ರೀಮತಿ ವೈಟಮ್ಮನವರು ದಿ ಗ್ರೇಟ್ ಕಾಂಟ್ರೊವರ್ಸಿ ಪುಸ್ತಕದ 552, 560ನೇ ಪುಟಗಳಲ್ಲಿ ಹೀಗೆ ತಿಳಿಸುತ್ತಾರೆ : ಕೊಕಾಘ 92.5

“ಸತ್ತು ಹೋಗಿರುವ ಸ್ನೇಹಿತರಂತೆ ಕಾಣಿಸಿಕೊಳ್ಳುವ ಶಕ್ತಿ ಸೈತಾನನಿಗಿದೆ. ಈ ಮೋಸದ ಅನುಕರಣೆಯು ಪರಿಪೂರ್ಣವಾಗಿರುತ್ತದೆ. ಸತ್ತು ಹೋಗಿರುವವರ ಪರಿಚಿತ ನೋಟ, ಮಾತುಗಳು, ಸ್ವರ ಇವೆಲ್ಲವೂ ವಿಸ್ಮಯಕರವಾದ ವೈಶಿಷ್ಟತೆಯಿಂದ ಸ್ವಾಭಾವಿಕ ರೀತಿಯಲ್ಲಿ ನಕಲು ಮಾಡಲ್ಪಡುತ್ತದೆ. ಸತ್ತುಹೋಗಿರುವ ತಮ್ಮ ಸ್ನೇಹಿತರು ಮತ್ತು ಸಂಬಂಧಿಗಳಂತೆ ಕಾಣಿಸಿಕೊಳ್ಳುವ ಸೈತಾನನ ಕೆಟ್ಟ ದೂತರು ಅತ್ಯಂತ ಅಪಾಯಕಾರಿಯಾದ ಸತ್ಯವೇದಕ್ಕೆ ವಿರುದ್ಧವಾದದ್ದನ್ನು ತಿಳಿಸುವುದನ್ನು ಅನೇಕರು ಮುಖಾಮುಖಿಯಾಗಿ ನೋಡುತ್ತಾರೆ. ಸೈತಾನನ ದೂತರು ನಮ್ಮಲ್ಲಿ ಅನುಕಂಪ ಹುಟ್ಟಿಸುವಂತ ರೀತಿಯಲ್ಲಿ ಮನವಿ ಮಾಡುತ್ತಾರೆ ಹಾಗೂ ತಮ್ಮ ವಂಚನೆಯನ್ನು ಸಮರ್ಥಿಸಿಕೊಳ್ಳಲು ಅದ್ಭುತಕಾರ್ಯಗಳನ್ನು ಮಾಡುತ್ತಾರೆ (ಗ್ರೇಟ್ ಕಾಂಟ್ರೊವರ್ಸಿ, 1, ಪುಟಗಳು 552, 560, 1911). ಕೊಕಾಘ 93.1