Go to full page →

ಸೈತಾನನು ಕ್ರಿಸ್ತನಂತೆ ವೇಷ ಧರಿಸುವನು ಕೊಕಾಘ 93

ವೈರಿಯಾದ ಸೈತಾನನು ತನ್ನ ಅದ್ಭುತಗಳನ್ನು ಮಾಡುವ ಶಕ್ತಿಯಿಂದ ಸಮಸ್ತ ಲೋಕವನ್ನೇ ಮರುಳುಗೊಳಿಸಲು ಸಿದ್ಧನಾಗುತ್ತಿದ್ದಾನೆ. ಅವನು ಪ್ರಕಾಶಮಾನವಾದ ದೂತನಂತೆ ವೇಷ ಹಾರಿಕೊಳ್ಳುವನು, ಮಾತ್ರವಲ್ಲದೆ ಮೋಸದ ಉದ್ದೇಶದಿಂದ ಕ್ರಿಸ್ತನಂತೆ ರೂಪ ಧರಿಸಿಕೊಳ್ಳುತ್ತಾನೆ (ಸೆಲೆಕ್ಟರ್ ಮೆಸೇಜಸ್, ಸಂಪುಟ 2, ಪುಟ 96, 1894). ಕೊಕಾಘ 93.2

ಮನುಷ್ಯರು ಈಗಲೇ ಸೈತಾನನಿಂದ ತಪ್ಪು ಮಾರ್ಗಕ್ಕೆ ಎಳೆಯಲ್ಪಟ್ಟಲ್ಲ, ಸೈತಾನನು ಕ್ರಿಸ್ತನಂತೆ ವೇಷ ಧರಿಸಿಕೊಂಡು ಅದ್ಭುತ ಕಾರ್ಯಗಳನ್ನು ಮಾಡುವಾಗ ಅದಕ್ಕೆ ವಿರುದ್ಧವಾಗಿ ಹೇಗೆ ನಿಲ್ಲಬಲ್ಲರು? ಕ್ರಿಸ್ತನ ಕಾರ್ಯಗಳನ್ನು ಅವನು ಮಾಡುವಾಗ, ತಾನೇ ಕ್ರಿಸ್ತನೆಂದು ಹೇಳಿಕೊಳ್ಳುವಾಗ ಯಾರು ಸೈತಾನನ ತಪ್ಪು ನಿರೂಪಣೆಗೆ ವಿರುದ್ಧವಾಗಿ ದೃಢ ಸಂಕಲ್ಪದಿಂದ ಅಚಲವಾಗಿ ನಿಲ್ಲುವರು? (ಪುಟ 394). ಕೊಕಾಘ 93.3

ಸೈತಾನನು ರಣರಂಗಕ್ಕಿಳಿದು ಯುದ್ಧ ಆರಂಭಿಸಿ ಕ್ರಿಸ್ತನಂತೆ ವೇಷ ಧರಿಸುವನು. ಅವನು ತನಗೆ ಸಾಧ್ಯವಾಗುವ ಎಲ್ಲಾ ಕುತಂತ್ರ ಉಪಯೋಗಿಸಿ ದುರುಪಯೋಗಪಡಿಸಿಕೊಂಡು ಅಡ್ಡದಾರಿ ಹಿಡಿಯುವಂತೆ ಮಾಡುತ್ತಾನೆ (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 411, 1898). ಅದು ಕ್ರಿಸ್ತನ ಮತ್ತು ಸೈತಾನನ ನಡುವಣ ಮಹಾಹೋರಾಟದ ಕೊನೆಯ ಮಹಾ ಘಟನೆಯಾಗಿದೆ. ಕೊಕಾಘ 93.4