Go to full page →

ಪ್ರತಿಯೊಬ್ಬ ಕ್ರೈಸ್ತನಿಗೂ ವೈಯಕ್ತಿಕ ಅನ್ವಯ ಕೊಕಾಘ 108

ಮುಂಗಾರು ಮಳೆಯು ಬದಲಾವಣೆ ತಂದಿತು; ಹಿಂಗಾರು ಮಳೆಯು ಕ್ರಿಸ್ತನ ಗುಣಸ್ವಭಾವ ಬೆಳೆಸುತ್ತದೆ. ಮುಂಗಾರು ಮಳೆಯಲ್ಲಿ ಸ್ವೀಕರಿಸಿದ ಆಶೀರ್ವಾದವು ಅಂತ್ಯದಲ್ಲಿಯೂ ಸಹ ನಮಗೆ ಅಗತ್ಯವಾಗಿದೆ... ಪವಿತ್ರಾತ್ಮನಿಗಾಗಿ ನಾವು ದೇವರಲ್ಲಿ ಬೇಡಿಕೊಂಡಾಗ, ಆತನು ಹಿಂಗಾರು ಮಳೆಯನ್ನು ಪರಿಪೂರ್ಣ ಮಾಡಲು ನಮ್ಮ ದೀನಸ್ವಭಾವ ನಮ್ರತೆ ಹಾಗೂ ದೇವರ ಮೇಲೆ ಸಂಪೂರ್ಣವಾಗಿ ಆತುಕೊಳ್ಳಲು ಬೇಕಾದ ಶಕ್ತಿ ನೀಡುತ್ತಾನೆ (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟಗಳು 507, 509, 1897). ಕೊಕಾಘ 108.2

ಪರಿಶುದ್ಧಾತ್ಮನು ಪ್ರತಿಯೊಬ್ಬರ ಹೃದಯದಲ್ಲಿಯೂ ನೆಲೆಸಲು ಬಯಸುತ್ತಾನೆ. ಆತನನ್ನು ನಾವು ಗೌರವಾನ್ವಿತ ಅತಿಥಿಯಂತೆ ಸ್ವಾಗತಿಸಿ ಅಂಗೀಕರಿಸಿಕೊಂಡವರು ಕ್ರಿಸ್ತನಲ್ಲಿ ಪರಿಪೂರ್ಣತೆ ಹೊಂದುತ್ತಾರೆ, ಆರಂಭವಾಗಿರುವ ಒಳ್ಳೇ ಕಾರ್ಯಗಳು ಮುಕ್ತಾಯವಾಗುತ್ತವೆ. ಅಶುದ್ಧ ಆಲೋಚನೆಗಳು, ಉದ್ದೇಶ ಪೂರ್ವಕವಾದ ಹಠಮಾರಿತನದ ಭಾವನೆಗಳು ಮತ್ತು ದೇವವಿರೋಧಿ ಕಾರ್ಯಗಳಿಗೆ ಬದಲಾಗಿ ನಮ್ಮಲ್ಲಿ ಪರಿಶುದ್ದ ಆಲೋಚನೆಗಳು, ಪರಲೋಕದ ಮೇಲೆ ಪ್ರೀತಿ ಹಾಗೂ ಕ್ರಿಸ್ತನಂತ ನಡೆನುಡಿಗಳು ನಮ್ಮಲ್ಲಿ ಕಂಡುಬರುತ್ತವೆ (ಕೌನೆಲ್ಸ್ ಆನ್ ಹೆಲ್, 561, 1896). ಕೊಕಾಘ 108.3

ನಮ್ಮಲ್ಲಿ ದೇವರಾತ್ಮನು ಸ್ವಲ್ಪಮಟ್ಟಿಗೆ ಇರಬಹುದು. ಆದರೆ ಪ್ರಾರ್ಥನೆ ಹಾಗೂ ನಂಬಿಕೆಯಿಂದ ಯಾವಾಗಲೂ ಆತನಿಗಾಗಿ ಬೇಡಿಕೊಳ್ಳಬೇಕು. ನಾವು ಈ ಪ್ರಯತ್ನವನ್ನು ಎಂದಿಗೂ ಬಿಡಬಾರದು. ನಮ್ಮಲ್ಲಿ ಆತ್ಮೀಕ ಬೆಳವಣಿಗೆ ಕಾಣಬರದಿದ್ದಲ್ಲಿ ಮತ್ತು ಮುಂಗಾರು ಹಾಗೂ ಹಿಂಗಾರು ಮಳೆಯನ್ನು ಸ್ವೀಕರಿಸುವ ಮನೋಭಾವನೆ ಇಲ್ಲದಿದಲ್ಲಿ, ನಾವು ನಮ್ಮ ರಕ್ಷಣೆ ಕಳೆದುಕೊಳ್ಳುತ್ತೇವೆ. ಅದಕ್ಕೆ ನಾವೇ ಜವಾಬ್ದಾರಿಯಾಗಿರುತ್ತೇವೆ (ಲಾಸ್ಟ್ ಡೇ ಈವೆಂಟ್ಸ್, ಪುಟ 187). ಕೊಕಾಘ 108.4

ಸಭೆಯಲ್ಲಿ ನಡೆಯುವ ಕೂಟಗಳು, ಯೌವನಸ್ಥರ ಕ್ಯಾಂಪ್ ಅಂದರೆ ಶಿಬಿರಗಳು, ಮನೆಗಳಲ್ಲಿ ನಡೆಯುವ ಆರಾಧನೆಗಳಲ್ಲಿ ಹಾಗೂ ವೈಯಕ್ತಿಕವಾಗಿ ಸುವಾರ್ತೆ ಸಾರಲು ದೊರೆಯುವ ಎಲ್ಲಾ ಸಂದರ್ಭಗಳೂ ಮುಂಗಾರು ಹಾಗೂ ಹಿಂಗಾರು ಮಳೆ ಅಂದರೆ ಪವಿತ್ರಾತ್ಮನ ವರವನ್ನೂ ಪಡೆದುಕೊಳ್ಳಲು ದೇವರು ನೇಮಿಸಿದ ಅವಕಾಶಗಳಾಗಿವೆ (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, 508, 1897). ಕೊಕಾಘ 108.5

ದೇವರಾತ್ಮನಿಗಾಗಿ ದಾರಿಯನ್ನು ಸಿದ್ದಪಡಿಸಿದಾಗ, ಆಶೀರ್ವಾದ ಬರುತ್ತದೆ, ಮಳೆಯನ್ನು ತಡೆಯಲು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿ ದೇವರ ಮಕ್ಕಳಿಗೆ ಪರಲೋಕದಿಂದ ಇಳಿದು ಬರುವ ಆಶೀರ್ವಾದವನ್ನು ಸೈತಾನನು ತಡೆಯಲಾಗದು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 1, ಪುಟ 124, 1887), ಕೊಕಾಘ 109.1