Go to full page →

ಪವಿತ್ರಾತ್ಮನ ಸುರಿಸುವಿಕೆಗಾಗಿ ಪ್ರಾಮಾಣಿಕವಾಗಿ ನಾವು ಪ್ರಾರ್ಥಿಸಬೇಕು ಕೊಕಾಘ 109

ಪಂಚಾಶತ್ತಮ ದಿನದಲ್ಲಿ ಶಿಷ್ಯರು ಹೇಗೆ ಪ್ರಾಮಾಣಿಕವಾಗಿಯೂ, ಮನಃಪೂರ್ವಕವಾಗಿಯೂ ಪ್ರಾರ್ಥಿಸಿದರೋ, ಅದೇ ರೀತಿ ನಾವೂ ಸಹ ಪವಿತ್ರಾತ್ಮನ ಸುರಿಸುವಿಕೆಗಾಗಿ ಪ್ರಾರ್ಥಿಸಬೇಕು. ಅವರಿಗೆ ಆತನ ಶಕ್ತಿಯು ಅಂದು ಅಗತ್ಯವಿದ್ದಲ್ಲಿ, ಇಂದು ನಮಗೆ ಪವಿತ್ರಾತ್ಮನ ಅಗತ್ಯವು ಇನ್ನೂ ಹೆಚ್ಚಾಗಿದೆ (ಟೆಸ್ಟಿಮೊನೀಸ್ ಸಂಪುಟ 5, ಪುಟ 158, 1882). ಇದು ಮುಂದೆ ನಡೆಯಲಿದೆ ಎಂದು ಸಭೆಯು ಎದುರು ನೋಡಬಹುದು. ಪವಿತ್ರಾತ್ಮನ ಶಕ್ತಿಯನ್ನು ಈಗ ಹೊಂದಲು ಸಭೆಗೆ ಇದು ಒಂದು ವಿಶೇಷ ಸೌಲಭ್ಯವಾಗಿದೆ. ಅದಕ್ಕಾಗಿ ಹುಡುಕಿರಿ, ಅದಕ್ಕಾಗಿ ಪ್ರಾರ್ಥಿಸಿರಿ ಹಾಗೂ ಅದರಲ್ಲಿ ವಿಶ್ವಾಸವಿಡಿ. ಅದನ್ನು ನಾವು ಪಡೆದುಕೊಳ್ಳಬೇಕು ಹಾಗೂ ಪರಲೋಕವು ನಮಗೆ ಅದನ್ನು ಕೊಡಲು ಕಾದುಕೊಂಡಿದೆ (ಎವಾಂಜಲಿಸಮ್, 701, 1885). ಕೊಕಾಘ 109.2

ನಾವು ಪಡೆದುಕೊಳ್ಳುವ ಪವಿತ್ರಾತ್ಮನ ವರದ ಪ್ರಮಾಣವು, ಅದನ್ನು ಪಡೆದುಕೊಳ್ಳಲು ನಮಗಿರುವ ಬಯಕೆ ಮತ್ತು ನಂಬಿಕೆ ಹಾಗೂ ನಮಗೆ ಕೊಡಲ್ಪಡುವ ಜ್ಞಾನ ಮತ್ತು ಬೆಳಕನ್ನು ಹೇಗೆ ಉಪಯೋಗಿಸುತ್ತೇವೆಂಬುದಕ್ಕೆ ಸಮಾನವಾಗಿರುತ್ತದೆ (ರಿವ್ಯೂ ಅಂಡ್ ಹೆರಾಲ್ಡ್, ಮೇ 5, 1896), ನಮ್ಮ ಬೇಡಿಕೆಗಳ ಮೂಲಕ ದೇವರನ್ನು ನಾವು ಸಾಕಷ್ಟು ಕಾಡಿಸುವುದಿಲ್ಲ ಹಾಗೂ ಪವಿತ್ರಾತ್ಮನ ವರಕ್ಕಾಗಿ ಬೇಡಿಕೊಳ್ಳುವುದಿಲ್ಲ. ಈ ವಿಷಯದಲ್ಲಿ ನಾವು ಆತನನ್ನು ಕಾಡಿಸಬೇಕೆಂದು ದೇವರು ಬಯಸುತ್ತಾನೆ. ನಮ್ಮೆಲ್ಲಾ ಬೇಡಿಕೆಗಳನ್ನು ದೇವರ ಸಿಂಹಾಸನಕ್ಕೆ ಸಲ್ಲಿಸಬೇಕೆಂದು ಆತನು ಹಂಬಲಿಸುತ್ತಾನೆ (ಫಂಡಮೆಂಟಲ್ಸ್ ಆಫ್ ಕ್ರಿಶ್ಚಿಯನ್ ಎಜುಕೇಷನ್, ಪುಟ 537, 1909). ಕೊಕಾಘ 109.3