ತಂದೆತಾಯಿಯರು ತಮ್ಮ ಮಕ್ಕಳ ಮನಸ್ಸಿನಲ್ಲಿ ಕ್ರೈಸ್ತತ್ವದ ಬಗ್ಗೆ ಉನ್ನತ ಭಾವನೆಬೆಳೆಯುವಂತೆ ಮಾಡಬೇಕು. ದೇವಾಲಯದ ಬಗ್ಗೆ ಅವರು ಹೆಚ್ಚಿನ ಗೌರವ ಭಾವನೆಹೊಂದಿರುವಂತೆ ಪೋಷಕರು ಅವರಿಗೆ ಬಾಲ್ಯದಿಂದಲೇ ಕಲಿಸಿಕೊಡಬೇಕು. ಅಲ್ಲದೆದೇವಾಲಯ ಪ್ರವೇಶಿಸುವಾಗ “ಇಲ್ಲಿ ದೇವರಿದ್ದಾನೆ; ಇದು ಆತನ ಮನೆ, ನನ್ನಲ್ಲಿ ಶ್ರೇಷ್ಠಆಲೋಚನೆಗಳು ಹಾಗೂ ಪವಿತ್ರವಾದ ಉದ್ದೇಶಗಳಿರಬೇಕು. ನಾನು ಪರಿಶುದ್ಧದೇವರಸನ್ನಿಧಾನಕ್ಕೆ ಹೋಗುತ್ತಿರುವುದರಿಂದ ನನ್ನಲ್ಲಿ ಯಾವುದೇ ರೀತಿಯ ಅಹಂಕಾರ,ದ್ವೇಷ, ಹೊಟ್ಟೆಕಿಚ್ಚು, ಕೆಟ್ಟ ಅನುಮಾನ, ಹೃದಯದಲ್ಲಿ ವಂಚನೆ ಮುಂತಾದ ಇರಬಾರದು.ದೇವಾಲಯದಲ್ಲಿ ತಾನೇ ದೇವರು ತನ್ನ ಜನರನ್ನು ಸಂಧಿಸಿ ಆಶೀರ್ವದಿಸುತ್ತಾನೆ.ಉನ್ನತೋನ್ನತನು ನನ್ನನ್ನು ದೃಷ್ಟಿಸುತ್ತಾನೆ, ನನ್ನ ಹೃದಯಗಳನ್ನು ಪರಿಶೋಧಿಸಿ ಅತ್ಯಂತರಹಸ್ಯವಾದ ನನ್ನ ಆಲೋಚನೆಗಳೆಲ್ಲಾ ಆತನಿಗೆ ಗೋಚರವಾಗಿವೆ’ ಎಂಬ ಭಾವನೆಮಕ್ಕಳಲ್ಲಿರಬೇಕು. KanCCh 315.2
ಮಕ್ಕಳ ಮನಸ್ಸು ಕೋಮಲವೂ ಹಾಗೂ ಸುಲಭವಾಗಿ ಪ್ರಭಾವಕ್ಕೆ ಒಳಗಾಗುವುದೂಆಗಿರುವುದು. ಇದರಿಂದಾಗಿ ತಂದೆತಾಯಿಯರು ಬೋಧಕರ ಸೇವೆಯ ಬಗ್ಗೆ ಏನು ಮಾತಾಡುತ್ತಾರೋ, ಅದು ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ದೇವಾರಾಧನೆನಂತರ ಮನೆಗೆ ಹೋದಮೇಲೆ ಅನೇಕ ತಂದೆತಾಯಿಯರು ಬೋಧಕರು ನೀಡಿಸಂದೇಶದ ಬಗ್ಗೆ ಟೀಕೆ ಮಾಡುತ್ತಾರೆ ಹಾಗೂ ಕೆಲವು ವಿಷಯಗಳ ಬಗ್ಗೆ ಮೆಚ್ಚುಗೆವ್ಯಕ್ತಪಡಿಸುತ್ತಾರೆ. ಈ ರೀತಿಯಾಗಿ ದೇವರ ಸಂದೇಶವು ಟೀಕೆಗೆ ಒಳಗಾಗಿಪ್ರಶ್ನಿಸಲ್ಪಡುವುದರಿಂದ ತಮಾಷೆಯ ವಿಷಯವಾಗುತ್ತದೆ. ಪೋಷಕರು ಮಾಡುವಂತಇಂತಹ ತಾತ್ಸಾರವಾದ ಭಯಭಕ್ತಿಯಿಲ್ಲದ ಮಾತುಗಳಿಂದ ಯುವಕಯುವತಿಯರಮನಸ್ಸಿನಲ್ಲಾಗುವ ಪರಿಣಾಮವು ಪರಲೋಕದ ಪುಸ್ತಕಗಳಲ್ಲಿ ಮಾತ್ರ ತಿಳಿದುಬರುತ್ತದೆ.ತಂದೆ ತಾಯಿಯರು ಎಣಿಸುವುದಕ್ಕಿಂತಲೂ ಹೆಚ್ಚಾಗಿ ಇಂತಹ ವಿಷಯಗಳನ್ನು ಮಕ್ಕಳುನೋಡಿ ಬೇಗನಅರ್ಥಮಾಡಿಕೊಳ್ಳುತ್ತಾರೆ. ಇದು ಅವರ ಮನಸ್ಸಿನಿಂದ ಎಂದಿಗೂಬದಲಾಗುವುದಿಲ್ಲ. ತಮ್ಮ ಮಕ್ಕಳ ಹೃದಯವು ಬಹಳ ಕಠಿಣವಾಗಿರುವುದಕ್ಕೆತಂದೆತಾಯಿಯರು ದುಃಖಿಸುತ್ತಾರೆ. ಇದಕ್ಕೆ ತಾವೇ ಕಾರಣವೆಂದು ಅವರು ತಿಳಿಯಬೇಕು. KanCCh 315.3
ದೇವರನಾಮಕ್ಕೆ ಭಯಭಕ್ತಿ, ಗೌರವ ಸಲ್ಲಿಸಬೇಕು. ದೇವರ ಹೆಸರನ್ನು ಎಂದೂ ಸಹವಿವೇಚನಾರಹಿತವಾಗಿ ಅಥವಾ ಹಗುರವಾಗಿ ಪರಿಗಣಿಸಬಾರದು ಅಥವಾ ಮಾತಾಡಬಾರದು.ಪ್ರಾರ್ಥನೆಯಲ್ಲಿಯೂ ಸಹ ಅನಗತ್ಯವಾಗಿ ಅಥವಾ ಪದೇಪದೇ ಹೇಳುವುದನ್ನುತಡೆಗಟ್ಟಬೇಕು. “ದೇವರ ನಾಮವು ಭಯಂಕರವೂ ಪರಿಶುದ್ಧವೂ ಆಗಿದೆ” ಎಂಬುದನ್ನುನೆನಪಿನಲ್ಲಿಡಬೇಕು (ಕೀರ್ತನೆ 111:9), ದೇವದೂತರು ದೇವರ ಹೆಸರನ್ನು ಹೇಳುವಾಗತಮ್ಮ ಮುಖವನ್ನು ಮುಚ್ಚಿಕೊಳ್ಳುತ್ತಾರೆ. ಪರಿಶುದ್ಧರಾದ ದೇವದೂತರು ದೇವರ ಹೆಸರನ್ನುಎತ್ತುವಾಗ ಇಷ್ಟೊಂದು ಗೌರವ ಭಾವನೆ ಹೊಂದಿರುವಾಗ, ಪಾಪಿಗಳಾದ ನಾವುಅದನ್ನು ಭಯಭಕ್ತಿಯಿಂದ ಉಚ್ಚರಿಸಬೇಕಲ್ಲವೇ! KanCCh 316.1
ದೇವರ ಹೆಸರನ್ನು ಗೌರವದಿಂದಲೂ ಹಾಗೂ ಭಯಭಕ್ತಿಯಿಂದಲೂಉಪಯೋಗಿಸಬೇಕೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ಪ್ರಾರ್ಥನೆಯಲ್ಲಿ ಆತನನಾಮವನ್ನು ತಾತ್ಸಾರದಿಂದಲೂ, ನಿರ್ಲಕ್ಷ್ಯದಿಂದಲೂ ಉಪಯೋಗಿಸುವುದು ದೇವರಿಗೆಮೆಚ್ಚುಗೆಯಾಗಲಾರದು. ಇಂತವರಿಗೆ ದೇವರ ಬಗ್ಗೆ ಅಥವಾ ಆತನ ಸತ್ಯದ ಬಗ್ಗೆಸರಿಯಾಗಿ ತಿಳಿದಿಲ್ಲ. ತಿಳಿದಿದ್ದರೆ ಅವರು ಶೀಘ್ರದಲ್ಲಿಯೇ ನಮಗೆ ನ್ಯಾಯತೀರ್ಪುಕೊಡುವಮಹೋನ್ನತನೂ ಭಯಂಕರನೂ ಆದ ದೇವರ ಬಗ್ಗೆ ಅಷ್ಟೊಂದು ಹಗುರವಾಗಿಮಾತಾಡುವುದಿಲ್ಲ. ದೇವರ ಮಹೋನ್ನತೆ ಹಾಗೂ ಮಹಿಮೆಯನ್ನು ತಿಳಿದುಕೊಂಡವರುಆತನ ಹೆಸರನ್ನು ಪವಿತ್ರವಾದ ಭಕ್ತಿಭಾವದಿಂದ ಹೇಳುತ್ತಾರೆ. ದೇವರು ಯಾರೂ ಸಹತಲುಪಲಾಗದ ಅಗಮ್ಯವಾದ ಬೆಳಕಿನಲ್ಲಿ ವಾಸಿಸುತ್ತಾನೆ, ಮನುಷ್ಯರಲ್ಲಿ ಯಾರೂ ಸಹಆತನನ್ನು ನೋಡಲಾರರು ಅಥವಾ ನೋಡಿದವರು ಬದುಕಲಾರರು. ಸಭೆಯು ಆತ್ಮೀಯಬೆಳವಣಿಗೆ ಹೊಂದಬೇಕಾದಲ್ಲಿ ಇಂತಹ ವಿಷಯಗಳನ್ನು ನಾವು ತಿಳಿದು ದೇವರ ಬಗ್ಗೆಭಯಭಕ್ತಿಯಿಂದ ಗಂಭೀರವಾಗಿ ವರ್ತಿಸಬೇಕು. KanCCh 316.2
ದೇವರವಾಕ್ಯವಾದ ಸತ್ಯವೇದವನ್ನು ನಾವು ಆರಾಧನಾಭಾವದಿಂದ ಕಾಣಬೇಕು.ಅದಕ್ಕೆ ಗೌರವ ನೀಡಬೇಕು. ಸಾಮಾನ್ಯವಾದ ಉಪಯೋಗಕ್ಕೆ ಅದನ್ನುಉಪಯೋಗಿಸಬಾರದು ಅಥವಾ ಅಲಕ್ಷದಿಂದ ಸತ್ಯವೇದವನ್ನು ಹಿಡಿದುಕೊಳ್ಳಬಾರದು.ತಮಾಷೆಗಾಗಿ ಎಂದಿಗೂಸಹ ದೇವರ ವಾಕ್ಯವನ್ನು ಉದಾಹರಿಸಬಾರದು ಅಥವಾಯಾವುದನ್ನಾದರೂ ನಿರೂಪಿಸಲು ಅದನ್ನು ಬುದ್ಧಿವಂತಿಕೆಯಿಂದ ಹಾಸ್ಯವಾಗಿಉಪಯೋಗಿಸಬಾರದು. “ದೇವರ ಪ್ರತಿಯೊಂದು ಮಾತು ಶುದ್ಧವಾದದ್ದು” (ಜ್ಞಾನೋಕ್ತಿ30:5) ಹಾಗೂ “ಯೆಹೋವನ ಮಾತುಗಳು ಯಥಾರ್ಥವಾದವುಗಳೇ; ಅವು ಏಳುಸಾರಿಪುಟಕ್ಕೆ ಹಾಕಿದ ಬೊಕ್ಕ ಬೆಳ್ಳಿಯೋಪಾದಿಯಲ್ಲಿವೆ” (ಕೀರ್ತನೆ 12:6). KanCCh 317.1
ಎಲ್ಲಕ್ಕಿಂತಲೂ ಹೆಚ್ಚಾಗಿ ವಿಧೇಯತೆಯ ಮೂಲಕ ದೇವರಿಗೂ ಹಾಗೂ ಸತ್ಯವೇದಕ್ಕೂನಿಜವಾದ ಭಯಭಕ್ತಿ, ಗಾಂಭೀರ್ಯ ತೋರಿಸಬೇಕೆಂದು ಮಕ್ಕಳಿಗೆ ಚಿಕ್ಕಂದಿನಿಂದಲೇಕಲಿಸಬೇಕು. ಅನಗತ್ಯವಾದ ಯಾವಆದೇಶವನ್ನೂ ದೇವರು ಕೊಟ್ಟಿಲ್ಲ. ದೇವರಿಗೆಎಧೇಯರಾಗುವುದರ ಮೂಲಕ ನಾವು ಆತನಿಗೆ ಗೌರವ ನೀಡಬೇಕು ಹಾಗೂ ಅದರಿಂದಆತನಿಗೆ ಸಂತೋಷವಾಗುತ್ತದೆ. ಬೋಧಕರು, ಶಿಕ್ಷಕರು ಹಾಗೂತಂದೆತಾಯಿಯರುದೇವರಿಗೆ ಬದಲಾಗಿ ಮಾತಾಡಲು, ಬೋಧಿಸಲು, ಬುದ್ಧಿವಾದ ಹೇಳಲು ಹಾಗೂಕಾರ್ಯ ಮಾಡಲು ಕರೆಯಲ್ಪಟ್ಟಿದ್ದಾರೆ. ಆದುದರಿಂದ ದೇವರ ಪ್ರತಿನಿಧಿಗಳಾದ ಅವರಿಗೆಗೌರವ ಸಲ್ಲಿಸಬೇಕು. ಅವರಿಗೆ ಮರ್ಯಾದೆ ಕೊಡುವುದರಿಂದ ದೇವರುಗೌರವಿಸಲ್ಪಡುತ್ತಾನೆ. KanCCh 317.2
ದೇವರ ವಿಶೇಷ ಪ್ರಸನ್ನತೆ ಹಾಗೂ ಆತನ ಸನ್ನಿಧಾನವಾದ ದೇವಾಲಯಕ್ಕೆ ಬರುವಾಗಯಾವರೀತಿ ನಡೆದುಕೊಳ್ಳಬೇಕೆಂದು ಸತ್ಯವೇದದ ವಾಕ್ಯಗಳಲ್ಲಿ ತಿಳಿಸಿರುವುದನ್ನು ದೊಡ್ಡವರುಚಿಕ್ಕವರೆಲ್ಲರೂ ಯಾವಾಗಲೂಮನಸ್ಸಿನಲ್ಲಿಡಬೇಕು. ದೇವರು ಉರಿಯುವ ಪೊದೆಯಲ್ಲಿಮೋಶೆಗೆ ಕಾಣಿಸಿಕೊಂಡಾಗ “.... ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು; ನೀನುನಿಂತಿರುವ ಸ್ಥಳವು ಪರಿಶುದ್ಧ ಭೂಮಿ” ಎಂದು ಹೇಳಿದನು (ವಿಮೋಚನಕಾಂಡ3:5).ಕನಸಿನಲ್ಲಿ ಯಾಕೋಬನು ದೇವದೂತರನ್ನು ನೋಡಿದಾಗ “ನಿಜವಾಗಿ ಈ ಸ್ಥಳದಲ್ಲಿಯೆಹೋವನು ಇದ್ದಾನೆ; ಅದು ನನಗೆ ತಿಳಿಯದೆ ಹೋಯಿತು... ಈ ಸ್ಥಳವು ಎಷ್ಟೋಭಯಂಕರವಾದದ್ದು; ಇದು ದೇವರಮನೆಯೇ ಹೊರತು ಬೇರೆಯಲ್ಲ. ಇದು ಪರಲೋಕದಬಾಗಿಲು” ಎಂದು ಹೇಳಿದನು (ಆದಿಕಾಂಡ 28:16,17). KanCCh 317.3
ಈ ಉದಾಹರಣೆಗಳಿಂದ ಹಾಗೂ ದೈವಾಜ್ಞೆಯು ತಿಳಿಸುವಂತೆ ಪರಿಶುದ್ಧ ವಸ್ತುಗಳವಿಷಯದಲ್ಲಿ ನಾವುಗಾಂಭೀರ್ಯ ಹಾಗೂ ಗೌರವದಿಂದ ಮಾತಾಡಿ ನಿಮ್ಮನಂಬಿಕೆಯನ್ನೂ ಸಹ ಗೌರವಿಸುತ್ತೀರೆಂದು ತೋರಿಸಬೇಕು. ಸತ್ಯವೇದದ ವಾಕ್ಯಗಳನ್ನುಉದಾಹರಿಸುವಾಗ ಹಗುರವಾಗಿ ಅಥವಾ ಕ್ಷುಲ್ಲಕವಾದ ರೀತಿಯಲ್ಲಿ ವ್ಯಕ್ತಪಡಿಸಬಾರದು ಸತ್ಯವೇದವನ್ನು ನಿಮ್ಮ ಕೈಯಲ್ಲಿ ಹಿಡುಕೊಂಡಾಗ, ಪರಿಶುದ್ಧ ಸ್ಥಳದಲ್ಲಿ ನಿಂತಿದ್ದೀರೆಂಬುದನ್ನು ನೆನಪಿನಲ್ಲಿಡಿ. ದೇವದೂತರು ನಿಮ್ಮ ಸುತ್ತಲೂ ಇದ್ದಾರೆ; ಒಂದುವೇಳೆ ನಿಮ್ಮ ಆತ್ಮೀಕ ಕಣ್ಣುಗಳು ತೆರೆಯಲ್ಪಟ್ಟಲ್ಲಿ ಅವರನ್ನು ನೀವು ಕಾಣಬಹುದು. ಪರಿಶುದ್ಧವೂ, ನಿರ್ಮಲವೂ ಆದ ವಾತಾವರಣವು ನಿಮ್ಮನ್ನು ಆವರಿಸಿಕೊಂಡಿದೆ ಎಂಬ ಭಾವನೆ ಎಲ್ಲರಲ್ಲಿಯೂ ಬರುವ ರೀತಿಯಲ್ಲಿ ನೀವು ನಡೆದುಕೊಳ್ಳಬೇಕು. ವ್ಯರ್ಥವಾದ ಒಂದು ಮಾತು, ಹಗುರವಾಗಿ ಹಾಸ್ಯ ಮಾಡಿ ನಗುವುದು ವಿಶ್ವಾಸಿಗಳನ್ನು ತಪ್ಪಾದ ಮಾರ್ಗಕ್ಕೆ ನಡೆಸಬಹುದು. ದೇವರ ವಾಕ್ಯವನ್ನು ಓದುವುದು ಹಾಗೂ ಪ್ರಾರ್ಥಿಸುವ ಮೂಲಕ ದೇವರೊಂದಿಗೆ ಅನ್ನೋನ್ಯವಾದ ಸಂಬಂಧ ಇಲ್ಲದಿದ್ದಲ್ಲಿ ಅದರಿಂದಾಗುವ ಪರಿಣಾಮವು ಭಯಂಕರವಾದದ್ದು. KanCCh 317.4