Go to full page →

ಅಧ್ಯಾಯ-45 — ಸಭೆಯಲ್ಲಿ ತಪ್ಪು ಮಾಡಿದವರೊಂದಿಗೆ ವ್ಯವಹರಿಸುವ ವಿಧಾನ KanCCh 320

ಎಲ್ಲರಿಗೂ ರಕ್ಷಣೆ ಕೊಡಬೇಕೆಂದು ಕ್ರಿಸ್ತನು ಈ ಲೋಕಕ್ಕೆ ಬಂದನು. ಪಾಪದಿಂದಬಿದ್ದು ಹೋಗಿ ಸೈತಾನನ ವಶವಾಗಿದ್ದ ಈ ಜಗತ್ತನ್ನು ರಕ್ಷಿಸಬೇಕೆಂದು ಆತನು ಕಲ್ಯಾರಿಶಿಲುಬೆಯಲ್ಲಿಅಮೂಲ್ಯವಾದ ವಿಮೋಚನೆಯ ಕ್ರಿಯೆ ನೀಡಿದನು. ಕ್ರಿಸ್ತನ ತ್ಯಾಗ,ನಿಸ್ವಾರ್ಥ ಸೇವೆ, ದೀನತೆ ಎಲ್ಲಕ್ಕಿಂತಲೂ ಹೆಚ್ಚಾಗಿ ಆತನ ಬಲಿದಾನವು ಪಾಪದಿಂದಬಿದ್ದುಹೋದ ಮನುಷ್ಯನ ಮೇಲೆ ಆತನಿಗಿದ್ದ ಅಪಾರವಾದ ಪ್ರೀತಿಯನ್ನು ತಿಳಿಸುತ್ತದೆ.ಕೆಟ್ಟುಹೋಗಿರುವ ಪಾಪಿಗಳನ್ನು ಹುಡುಕಿ ರಕ್ಷಿಸುವುದಕ್ಕಾಗಿ ಕ್ರಿಸ್ತನು ಈ ಲೋಕಕ್ಕೆ ಬಂದನು.ಆತನ ಸೇವೆಯು ಸಕಲ ಜನಾಂಗ, ಕುಲ, ಪ್ರಜೆ, ಭಾಷೆಗಳವರಿಗೂ ಮತ್ತು ಅತ್ಯಂತನೀಚನಾದ ಪಾಪಿಗೂ ಸಹ ಮೀಸಲಾಗಿತ್ತು. ಕ್ರಿಸ್ತನು ಸಮಸ್ತ ಪಾಪಿಗಳನ್ನೂ ತನ್ನಬಲಿದಾನದ ಮೂಲಕ ಅಮೂಲ್ಯಕ್ರಯದಿಂದ ತನ್ನೊಂದಿಗೆ ಒಂದಾಗಿಸಿಕೊಳ್ಳಬೇಕೆಂಬಉದ್ದೇಶದಿಂದ ಈಡುಕೊಟ್ಟು ವಿಮೋಚಿಸಿದನು. ಯಾವುದೇ ರೀತಿಯ ನೀಚತನದಪಾಪಿಗಳನ್ನೂ ಸಹ ಆತನು ಕಡೆಗಣಿಸಲಿಲ್ಲ. ರಕ್ಷಣೆಯು ಯಾರಿಗೆ ಹೆಚ್ಚು ಅಗತ್ಯವಿತ್ತೋ,ಅವರಿಗಾಗಿ ವಿಶೇಷವಾದ ಸೇವೆಯನ್ನು ಕ್ರಿಸ್ತನು ಮಾಡಿದನು. ಅಂತವರ ಮೇಲೆ ಆತನುವಿಶೇಷ ಆಸಕ್ತಿ ಹಾಗೂ ಅನುಕಂಪ ತೋರಿಸಿ ಕಳಕಳಿಯಿಂದ ಅವರ ಸೇವೆಮಾಡಿದನು.ಹತಾಶೆಯಿಂದ ನಿರಾಶಜನಕ ಸ್ಥಿತಿಯಲ್ಲಿದ್ದವರು ಹಾಗೂ ತನ್ನ ಬದಲಾವಣೆ ತರುವಂತಕೃಪೆಯ ಅಗತ್ಯ ಹೆಚ್ಚಾಗಿ ಬೇಕಾಗಿದ್ದವರನ್ನು ನೋಡಿ ಕ್ರಿಸ್ತನ ಪ್ರೀತಿಯುಳ್ಳ ಹೃದಯವುಕರುಣೆ ಹಾಗೂ ಅನುಕಂಪದಿಂದ ತುಂಬಿತು. KanCCh 320.1

ಆದರೆ ಶೋಧನೆಗೆ ಒಳಗಾಗುವ ಮತ್ತು ಸಭೆಗೆ ವಿರುದ್ಧವಾಗಿ ತಪ್ಪು ಮಾಡುವಂತವಿಶ್ವಾಸಿಗಳಿಗೆ ದಯೆ, ಕರುಣೆ, ಅನುಕಂಪ ತೋರದಂತ ನಾಯಕರು ಕ್ರೈಸ್ತ ಸಭೆಯಲ್ಲಿದ್ದಾರೆ.ಅಲ್ಲದೆ ತಮ್ಮ ಸಹಾಯ, ನೈತಿಕ ಸೈರ್ಯ ಬೇಕಾದಂತ ವ್ಯಕ್ತಿಗಳಿಂದ ಆದಷ್ಟು ದೂರವಿದ್ದುಅವರ ವಿಷಯದಲ್ಲಿ ಉದಾಸೀನತೆ ಮಾಡಿ ಅವರನ್ನು ನಿರ್ಲಕ್ಷಿಸುತ್ತಾರೆ. ಹೊಸದಾಗಿಕ್ರಿಸ್ತನನ್ನು ಅಂಗೀಕರಿಸಿಕೊಂಡವರು ಶೋಧನೆಗಳನ್ನು ಎದುರಿಸುವಾಗ ಅಥವಾ ತಮ್ಮಹಿಂದಿನ ಕೆಟ್ಟ ಅಭ್ಯಾಸಗಳನ್ನು ಬಿಡುವಾಗ ಬಹಳವಾದ ಹೋರಾಟಕ್ಕೆ ಒಳಗಾಗುತ್ತಾರೆ.ಒಂದು ವೇಳೆ ಅಂತವರು ಶೋಧನೆಗೆ ಒಳಗಾಗಿ ತಪ್ಪುಮಾಡಿ ಅಪರಾಧಿಗಳಾಗಬಹುದು.ಅಂತ ಸಮಯದಲ್ಲಿ ತಪ್ಪು ಮಾಡಿದ ಸಹೋದರನು ಪುನಃ ಆತ್ಮೀಕವಾಗಿ ಬಲಹೊಂದುವಂತೆಮಾಡಲು ಸಭಾ ಹಿರಿಯರಲ್ಲಿ, ನಾಯಕರಲ್ಲಿ ಅಪಾರವಾದ ತಾಳ್ಮೆ, ವಿವೇಕ,ಸಮಯೋಚಿತವಾದ ಜಾಣತನ ಬೇಕಾಗುತ್ತದೆ. ಆಗ ಸಭಾ ನಾಯಕರು ದೇವರು ಸತ್ಯವೇದದ ಮೂಲಕ ನೀಡಿರುವ ಸಲಹೆಗಳನ್ನು ಪಾಲಿಸಬೇಕು. ಈ ವಿಷಯದಲ್ಲಿ ಪೌಲನು “ದೃಢವಾದ ನಂಬಿಕೆಯುಳ್ಳ ನಾವು ನಮ್ಮ ಸುಖವನ್ನು ನೋಡಿಕೊಳ್ಳದೆ ದೃಢವಿಲ್ಲದವರ ಅನುಮಾನಗಳನ್ನು ಸಹಿಸಿಕೊಳ್ಳಬೇಕು. ನಮ್ಮಲ್ಲಿ ಪ್ರತಿಯೊಬ್ಬನು ತನ್ನನೆರೆಯವನ ಹಿತವನ್ನೂ, ಭಕ್ತಿವೃದ್ಧಿಯನ್ನೂ ಅಪೇಕ್ಷಿಸುವವನಾಗಿ, ಅವನ (ನೆರೆಯವನ)ಸುಖವನ್ನು ನೋಡಿಕೊಳ್ಳಲಿ” ಎಂದು ಹೇಳುತ್ತಾನೆ (ರೋಮಾಯ 15:1). KanCCh 320.2

ತಪ್ಪು ಮಾಡಿದವರಿಗೆ ಸೌಮ್ಯವಾದ ಕ್ರಮ, ಮೃದು ಉತ್ತರ ಹಾಗೂ ಒಳ್ಳೆಯ ಮಾತುಗಳಿಂದತಿಳಿಹೇಳುವುದು ಉತ್ತಮ ವಿಧಾನ. ಇದರಿಂದ ಅವರು ಪುನಃ ಪರಿವರ್ತನೆಗೊಳ್ಳುವರು ಹಾಗೂ ಒಂದು ಆತ್ಮವನ್ನು ನಾಶದಿಂದ ತಪ್ಪಿಸಬಹುದು. ಕರುಣೆಯಿಲ್ಲದೆ ನಿಷ್ಟುರವಾಗಿಯೂ ಹಾಗೂ ಕನಿಕರವಿಲ್ಲದೆ ಕ್ರೂರವಾಗಿ ವರ್ತಿಸುವುದರಿಂದ ಅಂತವರ ಮನಸ್ಸಿನಲ್ಲಿ ಬದಲಾವಣೆ ಆಗುವುದು ಕಷ್ಟಸಾಧ್ಯ. ಕ್ಷಮಿಸುವ ಭಾವವನ್ನು ಸಭಾನಾಯಕರು ಹಾಗೂ ಅಧಿಕಾರಿಗಳು ಹೊಂದಿರಬೇಕು. KanCCh 321.1