Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-16 — ಪರಿಶುದ್ಧ ಹೃದಯ ಮತ್ತು ಜೀವನ

    ದೇವರು ನಮಗೆ ಒಂದು ವಾಸಸ್ಥಳವನ್ನು ಕೊಟ್ಟಿದ್ದಾನೆ. ಅದನ್ನು ಆತನ ಮಹಿಮೆ ಹಾಗೂ ಸೇವೆಗಾಗಿ ಉತ್ತಮ ಸ್ಥಿತಿಯಲ್ಲಿಟ್ಟು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಶರೀರಗಳು ನಿಮ್ಮ ಸ್ವಂತ ಸ್ವತ್ತಲ್ಲ. “ದೇವರಿಂದ ದೊರಕಿ ನಿಮ್ಮೊಳಗೆ ನೆಲೆಗೊಂಡಿರುವ ಪವಿತ್ರಾತ್ಮನಿಗೆ ನಿಮ್ಮ ದೇಹವು ಗರ್ಭಗುಡಿಯಾಗಿದೆ ಎಂಬುದು ನಿಮಗೆ ತಿಳಿಯದೇ? ನೀವು ನಿಮ್ಮ ಸ್ವಂತ ಸ್ವತ್ತಲ್ಲ, ನೀವು ಕ್ರಯಕ್ಕೆ ಕೊಳಲ್ಪಟ್ಟವರು” (1 ಕೊರಿಂಥ 5:19,20). “ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದು ನಿಮಗೆ ಗೊತ್ತಿಲ್ಲವೇ? ಯಾವನಾದರೂ ದೇವರ ಆಲಯವನ್ನು ಕೆಡಿಸಿದರೆ, ದೇವರು ಅವನನ್ನು ಕೆಡಿಸಿದನು. ಯಾಕೆಂದರೆ ದೇವರ ಆಲಯವು ಪವಿತ್ರವಾದದ್ದು, ಆ ಆಲಯವು ನೀವೇ” (1 ಕೊರಿಂಥ 3:16).KanCCh 108.1

    ನಾವು ಜೀವಿಸುತ್ತಿರುವ ಈ ಕಾಲವು ಕೆಟ್ಟದ್ದಾಗಿದೆ. “ನಮ್ಮ ವೈರಿಯಾದ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ” ಎಂದು ಅಪೋಸ್ತಲನಾದ ಪೇತ್ರನು ಹೇಳುತ್ತಾನೆ (1 ಪೇತ್ರನು 5:8). ಆದುದರಿಂದ ಶ್ರೀಮತಿ ವೈಟಮ್ಮನವರು ದೊಡ್ಡ ಧ್ವನಿಯಲ್ಲಿ ನಮಗೆ “ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ” ಎಂದು ಕ್ರಿಸ್ತನು ಹೇಳಿದ ಮಾತಿನ ಮೂಲಕ ನಮ್ಮನ್ನು ಎಚ್ಚರಿಸುತ್ತಾರೆ. ಅಪಾರವಾದ ಪ್ರತಿಭೆಯುಳ್ಳ ಮೇಧಾವಿಗಳು ಅನೇಕರಿದ್ದಾರೆ. ಆದರೆ ಅವರು ದುಷ್ಟತನದಿಂದ ತಮ್ಮನ್ನು ತಾವೇ ಸೈತಾನನ ಸೇವೆಗೆ ಒಪ್ಪಿಸಿ ಕೊಟ್ಟಿದ್ದಾರೆ. ಲೋಕದಿಂದ ಹೊರಬಂದು, ಅದರಲ್ಲಿನ ಕೆಟ್ಟತನದ ಕಾರ್ಯಗಳನ್ನು ಬಿಟ್ಟಿದ್ದೇವೆಂದು ಹೇಳಿಕೊಳ್ಳುವವರಿಗೆ ನಾನು ಯಾವ ಎಚ್ಚರಿಕೆ ಕೊಡಲಿ? ತನ್ನ ಆಜ್ಞೆಗಳ ಭಂಡಾರವನ್ನೇ ದೇವರು ತನ್ನ ಜನರಿಗೆ ಕೊಟ್ಟಿದ್ದಾನೆ. ಅಂಜೂರದ ಮರ ದಂತೆ ಎಲ್ಲಾ ಕೊಂಬೆಗಳು ಹಸಿರಾದ ಎಲೆಗಳಿಂದ ಸಮೃದ್ಧಿಯಾಗಿ ಕೂಡಿದ್ದರೂ, ಫಲ ಕೊಟ್ಟಿರಲಿಲ್ಲ. ಅದರಂತೆ ಅವರೂ ಸಹ ಹೊರತೋರಿಕೆಯ ಡಾಂಭಿಕತೆಯಲ್ಲಿ ಮುಳುಗಿ, ದೇವರಿಗೆ ಯಾವುದೇ ಫಲ ಕೊಡುತ್ತಿಲ್ಲ. ಇಂತವರಿಗೆ ನಾನು ಹೇಗೆ ಎಚ್ಚರಿಸಲಿ ಎಂದು ಶ್ರೀಮತಿ ವೈಟಮ್ಮನವರು ಕೇಳುತ್ತಾರೆ.KanCCh 108.2

    ಅವರಲ್ಲಿ ಅನೇಕರು ಅಶುದ್ಧವಾದ ಆಲೋಚನೆಗಳು, ಅಪವಿತ್ರವಾದ ಕಲ್ಪನೆ, ಬಯಕೆಗಳು ಹಾಗೂ ನಿಜವಾದ ಲೈಂಗಿಕ ಕಾಮನೆಗಳನ್ನು ಹೃದಯದಲ್ಲಿ ತುಂಬಿಕೊಂಡು ಪೋಷಿಸುತ್ತಾರೆ. ಪರಿಶುದ್ಧರೂ, ನಿರ್ಮಲರೂ ಆದ ದೇವದೂತರು ಅಂತವರ ನಡವಳಿಕೆಯನ್ನು ಅಸಹ್ಯದಿಂದ ನೋಡಿದರೆ, ಸೈತಾನನು ಹೆಮ್ಮೆ ಪಡುತ್ತೇನೆ. ದೇವರ ಆಜ್ಞೆಗಳನ್ನು ಮೀರಿ ನಡೆದಲ್ಲಿ ನಮಗಾಗುವ ಲಾಭವೇನೆಂದು ಜನರು ಪರಿಗಣಿಸಿದರೆ ಎಷ್ಟೇ ಒಳ್ಳೇದು! ಯಾವುದೇ ಸಂದರ್ಭ ಮತ್ತು ಸನ್ನಿವೇಶಗಳಲ್ಲಿಯೂ ದೇವರಾಜ್ಞೆಗಳನ್ನು ಉಲ್ಲಂಘಿಸುವುದು ಆತನಿಗೆಅಗೌರವ ತರುವುದು ಮತ್ತು ನಮಗೆ ಶಾಪವಾಗಿದೆ.KanCCh 109.1

    ನಿರ್ಮಲಚಿತ್ತರು ಅಂದರೆ ಪರಿಶುದ್ಧ ಹೃದಯವುಳ್ಳವನು ದೇವರನ್ನು ನೋಡುವರು (ಮತ್ತಾಯ 5:8), ನಾವು ಮಾಡುವ ಒಂದೊಂದು ಅಶುದ್ಧವಾದ ಆಲೋಚನೆಗಳು ಹೃದಯವನ್ನು ಮಲಿನಗೊಳಿಸಿ, ನೈತಿಕ ಪ್ರಜ್ಞೆಯನ್ನು ದುರ್ಬಲಗೊಳಿಸುತ್ತದೆ ಹಾಗೂ ಪವಿತ್ರಾತ್ಮನ ಪ್ರೇರಣೆಯನ್ನು ಗುರುತು ಉಳಿಯದಂತೆ ನಾಶಮಾಡುತ್ತದೆ. ಮನುಷ್ಯನು ಆತ್ಮೀಕವಾಗಿ ದೇವರನ್ನು ನೋಡಲಾಗದಂತೆ, ಆತ್ಮೀಕ ದೃಷ್ಟಿಯನ್ನು ಕುಂದಿಸುತ್ತದೆ. ಪಶ್ಚಾತ್ತಾಪ ಪಡುವ ಯಾವ ಪಾಪಿಯನ್ನಾದರೂ ಕರ್ತನು ಕ್ಷಮಿಸುತ್ತಾನೆ. ಆದರೆ ಕ್ಷಮಿಸಲ್ಪಟ್ಟರೂ ಅವರ ಪ್ರಕೃತಿದತ್ತ ಸ್ವಭಾವವು ನಾಶವಾಗುತ್ತದೆ. ಆತ್ಮೀಕ ಸತ್ಯಗಳನ್ನು ಸ್ಪಷ್ಟವಾಗಿ ವಿವೇಚಿಸುವರು ಮೊದಲು ಎಲ್ಲಾ ವಿಧವಾದ ಅಶುದ್ಧ ಮಾತುಗಳು ಅಥವಾ ಆಲೋಚನೆಗಳನ್ನು ತೆಗೆದುಹಾಕಬೇಕು. ಪಾಪದ ಜೀವಿತದಿಂದಾಗುವ ಕೆಟ್ಟ ಪರಿಣಾಮಗಳನ್ನು ಕೆಲವರು ತಿಳಿದುಕೊಳ್ಳುತ್ತಾರೆ, ಆದರೂ ತಮ್ಮ ಶೋಧನೆ ಮತ್ತು ಮನೋವಿಕಾರವನ್ನು ತಾವು ಗೆಲ್ಲಲು ಸಾಧ್ಯವಿಲ್ಲವೆಂಬ ನೆವ ಹೇಳುತ್ತಾರೆ. ಕರ್ತನ ನಾಮವನ್ನು ಹೇಳಿಕೊಳ್ಳುವ ಯಾವ ವ್ಯಕ್ತಿಗಾದರೂ ಇದೊಂದು ಭಯಂಕರವಾದ ತಪ್ಪೋಪ್ಪಿಗೆಯಾಗಿದೆ. “.... ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರೂ, ದುರ್ಮಾರ್ಗತನವನ್ನು ಬಿಡಬೇಕು” (2 ತಿಮೊಥೆ 2:19). ಯಾಕೆ ಈ ಬಲಹೀನತೆ? ಯಾಕೆಂದರೆ ಮನುಷ್ಯರಲ್ಲಿ ಅವರ ದುರಾಭ್ಯಾಸಗಳಿಂದ ಪ್ರಾಣಿಗಳಂತ ಪ್ರವೃತ್ತಿಯು ಬಲಗೊಂಡಿದೆ ಹಾಗೂ ಮನಸ್ಸಿನ ಸಾಮರ್ಥ್ಯದ ಮೇಲೆ ಪ್ರಬಲವಾದ ಹತೋಟಿ ಹೊಂದಿದೆ. ಸ್ತ್ರೀ ಪುರುಷರಲ್ಲಿ ಮಾರ್ಗದರ್ಶಕ ತತ್ವಗಳು ನಿಯಮಗಳ ಕೊರತೆಯಿದೆ. ಅವರು ತಮ್ಮ ಸಹಜವಾದ ಸುಖಭೋಗ ಲಾಲಸೆ ತೃಪ್ತಿ ಪಡಿಸಿ ಕೊಳ್ಳುವುದರಲ್ಲಿ ದೀರ್ಘಕಾಲದಿಂದ ತೊಡಗಿರುವುದರಿಂದ ಆತ್ಮೀಕವಾಗಿ ಸಾಯುತ್ತಿದ್ದಾರೆ. ಇದರಿಂದಾಗಿ ಅವರು ತಮ್ಮನ್ನು ನಿಯಂತ್ರಿಸಿಕೊಳ್ಳುವ ಶಕ್ತಿ ಕಳೆದುಕೊಂಡಿದ್ದಾರೆ ಮತ್ತು ತಮ್ಮ ನೀಚವಾದ ಕಾಮನೆಗಳ ದಾಸರಾಗಿದ್ದಾರೆ. ಅವರ ಮನಸ್ಸು ಸೈತಾನನಿಂದ ಬಂಧಿಸಲ್ಪಟ್ಟಿದೆ. ಲೌಕಿಕ ಆಶಾಪಾಶಗಳು ಪರಿಶುದ್ಧತೆ ಹೊಂದಿರಬೇಕೆಂಬ ಅವರ ಬಯಕೆಯನ್ನು ನಾಶಮಾಡಿದೆ ಮತ್ತು ಆತ್ಮೀಕ ಬೆಳವಣಿಗೆ ಕುಂದಿಹೋಗಿದೆ.KanCCh 109.2