ಮಾನವನ ಮೇಲೆ ದೇವರಿಗಿರುವ ಪ್ರೀತಿ
Search Results
- Results
- Related
- Featured
- Weighted Relevancy
- Content Sequence
- Relevancy
- Earliest First
- Latest First
- Exact Match First, Root Words Second
- Exact word match
- Root word match
- EGW Collections
- All collections
- Lifetime Works (1845-1917)
- Compilations (1918-present)
- Adventist Pioneer Library
- My Bible
- Dictionary
- Reference
- Short
- Long
- Paragraph
No results.
EGW Extras
Directory
ಮಾನವನ ಮೇಲೆ ದೇವರಿಗಿರುವ ಪ್ರೀತಿ
ಪ್ರಕೃತಿ ಮತ್ತು ದೈವಕಟ್ಟಳೆಗಳೆರಡೂ ಏಕಪ್ರಕಾರವಾಗಿ ದೈವಪ್ರೇಮಕ್ಕೆ ಸಾಕ್ಷಿಗಳಾಗಿವೆ. ಜ್ಞಾನಾನಂದಗಳಿಗೆ ಸ್ವರ್ಗೀಯ ತಂದೆಯು ಆದಿಮೂಲನಾಗಿರುತ್ತಾನೆ. ಆಶ್ಚರ್ಯ ಮತ್ತು ಸೌಂದರ್ಯಗಳಿಂದ ಕೂಡಿದ ಪ್ರಕೃತಿಯ ವಸ್ತುಗಳನ್ನು ಗಮನಿಸು. ಮಾನವನಿಗೆ ಮಾತ್ರವಲ್ಲದೆ ಸಮಸ್ತ ಸೃಷ್ಟಿಯ ಅಗತ್ಯ ಮತ್ತು ಸಂತೋÀಕ್ಕೂ ಸಂಬಂಧಗೊಂಡಿರುವ ಪ್ರಕೃತಿಯ ಆಶ್ಚರ್ಯಕರವಾದ ಅಂಶಗಳನ್ನು ಈಕ್ಷಿಸು. ಭೂಲೋಕವನ್ನು ಹರ್Àಗೊಳಿಸಿ ನೂತನವನ್ನಾಗಿ ಮಾಡುವ ಸೂರ್ಯನ ಪ್ರಭೆಯೂ, ಮಳೆ, ಸಮುದ್ರ, ಪರ್ವತಗಳೂ ಸಹ ದೇವರ ಪ್ರೀತಿಯನ್ನು ಸಾರುತ್ತಿರುವವು. ತನ್ನ ಸೃಷ್ಟಿಗೆ ಬೇಕಾದ ಸಮಸ್ತ ಅಗತ್ಯಗಳನ್ನು ದೇವರು ಪ್ರತಿದಿನವೂ ಕೊಡುತ್ತಿದ್ದಾನೆ. ಕೀರ್ತನೆಗಾರನು ಮನೋಹರವಾದ ತನ್ನ ಮಾತುಗಳಲ್ಲಿ ಹೀಗೆ ತಿಳಿಸುತ್ತಾನೆ.LI 5.1
“ಯೆಹೋವನೇ ಎಲ್ಲಾ ಜೀವಿಗಳ ಕಣ್ಣುಗಳು ನಿನ್ನನ್ನೇ ನೋಡುತ್ತವೆ.
ನೀನು ಅವುಗಳಿಗೆ ಹೊತ್ತು ಹೊತ್ತಿಗೆ ಆಹಾರ ಕೊಡುತ್ತೀ.
ನೀನು ಕೈದೆರೆಹು ಎಲ್ಲಾ ಜೀವಿಗಳ ಇÀ್ಟವನ್ನು ನೆರವೇರಿಸುತ್ತೀ.” LI 5.2
ಮಾನವನು ಸಂಪೂರ್ಣ ಶುದ್ಧನಾಗಿಯೂ, ಹರ್Àವುಳ್ಳವನಾಗಿಯೂ ಇರುವಂತೆ ದೇವರು ಇವನನ್ನುಂಟು ಮಾಡಿದನು. ಭೂಮಿಯು ಸೃಷ್ಟಿಯಾದಾಗ ಅದರ ಮೇಲೆ ಯಾವ ಶಾಪವೂ ನಾಶವೂ ಎಳ್ಳÁ್ಟದರೂ ಇರಲಿಲ್ಲ. ದೈವಕಟ್ಟಳೆಯನ್ನೂ, ಆತನ ಪ್ರೀತಿಯ ಆಜ್ಞೆಗಳನ್ನೂ ಮೀರಿದ್ದೇ ಶಾಪಕ್ಕೂ ಮರಣಕ್ಕೂ ಕಾರಣವಾಗಿದೆ. ಹೀಗಿದ್ದರೂ ಪಾಪದ ಫಲರೂಪವಾದ ಶ್ರಮೆಯ ಮೂಲಕವೂ ದೈವಪ್ರೀತಿಯು ಪ್ರಕಟವಾಗಿದೆ. ಮಾನವನ ನಿಮಿತ್ತ ಭೂಮಿಗೆ ಶಾಪ ಬಂತು. ಮುಳ್ಳು ಮತ್ತು ದತ್ತೂರಿ ಅಂದರೆ ಮನುÀ್ಯನ ಜೀವವನ್ನು ಶ್ರಮಕ್ಕೂ, ಚಿಂತೆಗೂ ಗುರಿಮಾಡುವ ತೊಂದರೆ, ಪರಿಶೋಧನೆಗಳು ಮನುÀ್ಯನಿಗೆ ಪ್ರಾಪ್ತವಾಗಿ ಪಾಪದ ಫಲದಿಂದ ಬಿದ್ದ ಆತನನ್ನು ಅಧೋಗತಿಯಿಂದ ಉನ್ನತಪದವಿಗೆ ಏರಿಸುವ ಸಾಧನಗಳಾಗಲೆಂಬುದು ದೇವರ ಸಂಕಲ್ಪವಾಯಿತು. ಪ್ರಪಂಚದವರೆಲ್ಲರೂ ಪಾಪಿÀ್ಟರಾಗಿದ್ದರೂ ಅದರಲ್ಲಿ ವ್ಯಸನ ಮತ್ತು ವಿಪತ್ತುಗಳೇ ತುಂಬಿರುವುದಿಲ್ಲ. ಮನುÀ್ಯನಿಗೆ ಪ್ರಕೃತಿಯಿಂದಲೂ ಆಧಾರ ಮತ್ತು ನಿರೀಕ್ಷೆಗಳಿವೆ. ಹೂವುಗಳ ಮೇಲೆ ಮುಳ್ಳುಗಳಿರುವುದು ನಿಜವಾದರೂ ಗುಲಾಬಿ ಹೂವುಗಳಂತೆ ಮನುÀ್ಯನಿಗೆ ಸಂತೋÀಕ್ಕೆ ದಾರಿಯುಂಟು. ವಿಕಸಿತವಾಗುವ ಪ್ರತಿಯೊಂದ ಹೂವೂ, ಪ್ರತಿಯೊಂದ ಹುಲ್ಲುಗರಿಯೂ ‘ ದೇವರ ಪ್ರೀತಿಯಾಗಿದ್ದಾನೆÉ’ ಎಂದು ಸಾರುತ್ತದೆ. ಮಧುರಗಾನವನ್ನು ಮಾಡುತ್ತಾ ಮನಸ್ಸಂತೋÀವನ್ನುಂಟು ಮಾಡುವ ಪಕ್ಷಿಗಳೂ, ಸುವಾಸನೆಯನ್ನು ಬೀರಿ ಮನೋಲ್ಲಾಸವನ್ನುಂಟು ಮಾಡುವ ಪುÀ್ಪಗಳೂ, ತಮ್ಮ ಹಸುರೆಲೆಗಳಿಂದ ರಮ್ಯವಾದ ನೋಟವನ್ನು ಬೀರುವ ಲಕ್ಷಾಂತರ ಸಸ್ಯ ಸಮೃದ್ದಿಯೂ ಸಹ ತಂದೆಯಾದ ದೇವರ ಪರಿಪಾಲನೆ ಮತ್ತು ಆತನ ಎಚ್ಚರಿಕೆಯ ವಿÀಯ ನಮಗೆ ಹರ್Àವನ್ನುಂಟು ಮಾಡಿ ಆತನನ್ನು ಸಾರುತ್ತಿರುವವು.LI 5.3
ದೇವರ ಗುಣವನ್ನು ಸತ್ಯವೇದವು ನಮಗೆ ಪ್ರಕಟಿಸುತ್ತದೆ. ಅಪಾರವಾದ ತನ್ನ ಪ್ರೀತಿಯನ್ನು ದೇವರು ನಮಗೆ ಪ್ರಕಟಿಸಿರುತ್ತಾನೆ. ‘ನಿನ್ನ ಮಹಿಮೆಯನ್ನು ದಯಮಾಡಿ ನನಗೆ ತೋರಿಸು’ ಎಂದು ವೋಶೆಯು ದೇವರನ್ನು ಕೇಳಿದಾಗ, “ನನ್ನ ಸರ್ವೋತ್ತಮತ್ವವನ್ನು ನಿನ್ನ ಎದುರಾಗಿ ದಾಟಿ ಹೋಗುವಂತೆ ಮಾಡುವೆನು” ಎಂದು ಹೇಳಿದನು. ಇದೇ ಆತನ ಮಹಿಮೆ. ದೇವರು ವೋಶೆಯ ಎದುರಾಗಿ ಹೋಗುತ್ತಾ ಪ್ರಕಟವಾಗಿ ಹೇಳಿದ್ದೇನೆಂದರೆ:- “ಯೆಹೋವನು ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳವರೆಗೂ ದಯೆ ತೋರಿಸುವವನು; ದೋÁಪರಾಧ ಪಾಪಗಳನ್ನು ಕ್ಷಮಿಸುವವನು” “ನೀನು ಕರುಣೆಯೂ ಕನಿಕರವೂ ದೀರ್ಘಶಾಂತನೂ ಬಹಳ ಕೃಪೆಯುಳ್ಳವನು” “ಯಾಕಂದರೆ ಕೃಪೆಯಲ್ಲಿ ಸಂತೋÀ ಪಡುತ್ತಾನೆ”LI 6.1
ಸ್ವರ್ಗ ಮತ್ತು ಭೂಮಿಯಲ್ಲಿರುವ ಅನೇಕ ವಿಚಾರಗಳ ಮೂಲಕ ದೇವರು ನಮ್ಮನ್ನು ತನಗೆ ಸಂಬಂಧಪಡಿಸಿಕೊಂಡಿದ್ದಾನೆ. ಪ್ರಕೃತಿಯ ಅಗಾಧವಾದ ವಿಚಾರಗಳ ಮೂಲಕವೂ ಮನುÀ್ಯರು ತಿಳಿಯಬಹುದಾದ ಭೂಸಂಬಂಧವಾದ ವಿಚಾರಗಳ ಮೂಲಕವೂ ತನ್ನನ್ನು ಮಾನವರಿಗೆ ಪ್ರಕಟಿಸಿಕೊಳ್ಳಲು ಇಚ್ಚಿಸುವವನಾಗಿರುತ್ತಾನೆ. ಇವುಗಳೂ ಸಹ ಆತನ ಪ್ರೀತಿಯನ್ನು ಸಂಪೂರ್ಣವಾಗಿ ಪ್ರಕಟಿಸಲು ಸಾಧ್ಯವಿಲ್ಲ; ಇವುಗಳೆಲ್ಲವೂ ಸಾಕ್ಷೀಭೂತವಾಗಿದ್ದರೂ ಸದ್ಗುಣಕ್ಕೆ ಶತ್ರುವಾದ ಸೈತಾನನು ಜನರ ಮನೋನೇತ್ರಗಳನ್ನು ಕುರುಡು ಮಾಡುವುದರಿಂದ ಜನರು ದೇವರಿಗೆ ಭಯಪಡುವವರಾದರು; ಮತ್ತು ದೇವರು ಕ್ರೂರಾತ್ಮನೆಂದೂ, ಕ್ಷಮಾರಹಿತ ನೆಂದೂ ಪರಿಗಣಿಸಿದರು. ಆತನು ಕಠಿಣಾತ್ಮನಾದ ನ್ಯಾಯಾಧೀಶನೆಂದೂ ಪೀಡಿಸುವ ಸಾಲಗಾರ ನಾಗಿರುವನೆಂದೂ, ಮನುÀ್ಯರ ಅಪರಾಧಗಳನ್ನು ಹುಡುಕಿ ಕಂಡು ಹಿಡಿದು ಅವರಿಗೆ ನ್ಯಾಯ ತೀರಿಸುವನೆಂದೂ, ಸೈತಾನನು ಜನರನ್ನು ಪ್ರೇರಿಸಿ ತನ್ನ ಕಡೆಗೆ ಸಳೆದನು. ಇಂಥಾ ತಪ್ಪು ತಿಳುವಳಿಕೆಯನ್ನು ಸರಿಪಡಿಸಿ ದೇವರ ಪ್ರೀತಿಯನ್ನು ತಿಳಿಯಪಡಿಸುವ ಸಲುವಾಗಿಯೇ ಯೇಸುಸ್ವಾಮಿಯು ಮಾನವನಾಗಿ ಬಂದನು. ದೇವರನ್ನು ಭೂಲೋಕಕ್ಕೆ ತೋರಿಸಿಕೊಡುವ ಸಲುವಾಗಿಯೇ ದೇವ ಕುಮಾರನು ಪ್ರತ್ಯಕ್ಷನಾದನು. “ದೇವರನ್ನು ಯಾರೂ ಎಂದೂ ಕಂಡಿಲ್ಲ ‘ಯಾವನು ಏಕಪುತ್ರನಾಗಿಯೂ, ಸ್ವತ: ದೇವರಾಗಿಯೂ ಇದ್ದು ತಂದೆಯ ಎದೆಯಲ್ಲಿದ್ದಾನೋ ಆತನೇ ತಿಳಿಯಪಡಿಸಿದನು” “ಮಗನೇ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ” ತಂದೆಯನ್ನು ನಮಗೆ ತೋರಿಸೆಂದು ಒಬ್ಬಾನೊಬ್ಬನು ಕೇಳಿದಾಗ ಆತನು ಹೀಗೆ ಉತ್ತರ ಕೊಟ್ಟನು. “ಫಿಲಿಪ್ಪನೇ ನಾನು ಇÀ್ಟು ದಿವಸ ನಿಮ್ಮ ಸಂಗಡ ಇದ್ದಾಗ್ಯೂ ನೀನು ಇನ್ನೂ ನನ್ನನ್ನು ಅರಿತು ಕೊಳ್ಳಲಿಲ್ಲವೇ? ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ. ನಮಗೆ ತಂದೆಯನ್ನು ತೋರಿಸೆಂದು ನೀನು ಹೇಳುವುದು ಹ್ಯಾಗೆ? ಕ್ರಿಸ್ತನು ತನ್ನ ಬೋಧಕೋದ್ಯೋಗವನ್ನು ಕುರಿತು ಹೀಗೆ ಹೇಳಿದನು “ಕರ್ತನ ಆತ್ಮವು ನನ್ನ ಮೇಲಿದೆ; ಆತನ ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವುದಕ್ಕೆ ಅಭಿÉೀಕಿಸಿದನು; ಸೆರೆಯವರಿಗೆ ಬಿಡುಗಡೆಯಾಗುವುದನ್ನೂ ಮತ್ತು ಕುರುಡರಿಗೆ ಕಣ್ಣು ಬರುವುದನ್ನು ಸಾರುವುದಕ್ಕೂ, ಕುಗ್ಗಿಸಲ್ಪಟ್ಟವರನ್ನು ಬಿಡಿಸಿ ಕಳುಹಿಸುವುದಕ್ಕೂ ಕರ್ತನು ನೇಮಿಸಿರುವ ಶುಭವರುÀವನ್ನು ಸಾರುವುದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ” ಇದು ಆತನ ಕೆಲಸ ವಾಗಿತ್ತು. ಆತನು ಸತ್ಕಾರ್ಯಗಳನ್ನು ಮಾಡುತ್ತಾ ಸಂಚರಿಸುತ್ತಿದ್ದನು; ಸೈತಾನನಿಂದ ತೊಂದರೆಗೊಳಗಾದವರನ್ನು ವಾಸಿಮಾಡುತ್ತಾ ಬಂದನು. ತಾನು ಪ್ರವೇಶಿಸಿದ ಹಳ್ಳಿಗಳಲ್ಲಿ ಒಂದಾದರೂ ಖಾಯಿಲೆಯ ಗೋಳಾಟದಿಂದ ತುಂಬಿರದೇ ಇರಲಿಲ್ಲ; ಆತನು ಆ ಗ್ರಾಮಗಳಲ್ಲಿ ಪ್ರವೇಶಿಸಿ ಅಲ್ಲಿನ ನಿವಾಸಿಗಳನ್ನು ಖಾಯಿಲೆಗಳಿಂದ ವಾಸಿ ಮಾಡಿದನು. ಆತನು ದೇವರಿಂದ ಪ್ರತಿಷ್ಠಿತನಾದುದಕ್ಕೆ ಆತನ ಕೆಲಸಗಳೇ ಸಾಕ್ಷಿಗಳಾಗಿದ್ದುವು. ಪ್ರೀತಿ ಕರುಣಿ, ದಯಾಗುಣಗಳು ಕ್ರಿಸ್ತನ ಸಮಸ್ತ ಕಾರ್ಯಗಳಲ್ಲೂ ಪ್ರಕಟವಾಗುತ್ತಲಿದ್ದವು; ಆತನು ಮನುÀ್ಟರ ಮೇಲೆ ಬಹು ದಯಯುಳ್ಳವನಾಗಿದ್ದನು. ಮನುÀ್ಯರ ಕÀ್ಟ ಸುಖಗಳಲ್ಲಿ ಭಾಗಿಯಾಗಲು ನರಾವತಾರಿಯಾಗಿ ಬಂದನು. ಕಡು ಬಡವನೂ, ದೀನಾವಸ್ಥೆ ಯಲ್ಲಿರುವವನೂ ಸಹ ಆತನ ಸಾಮಿಪ್ಯವನ್ನು ಸೇರ ಬಹುದಾಗಿತ್ತು. ಆತನು ಚಿಕ್ಕ ಮಕ್ಕಳನ್ನು ತನ್ನ ಬಳಿಗೆ ಸೆಳೆದನು. ಅವರು ಆತನನ್ನು ಪ್ರೀತಿಯ ಧ್ಯಾನದಿಂದ ಆತನ ಮುಖಾವಲೋಕನ ಮಾಡುತ್ತಿದ್ದರು. LI 6.2
ಸತ್ಯಾಂಶಗಳಲ್ಲಿ ಒಂದನ್ನಾದರೂ ಬಚ್ಚಿಡದೆ ಎಲ್ಲವನ್ನೂ ಪ್ರೀತಿಯ ವಚನಗಳಲ್ಲಿಯೇ ಆತನು ಅವರಿಗೆ ಹೇಳುತ್ತಿದ್ದನು. ತನ್ನ ಜನರ ಸಂಗಡ ಮಾತನಾಡುವಾಗ ಅಧಿಕವಾದ ವಿವೇಕದ ಯೋಚನೆಯನ್ನೂ ಗಮನವನ್ನೂ ಕೊಡುತ್ತಿದ್ದನು. ಆತನು ಎಂದಾದರೂ ಒರಟಾಗಿರಲಿಲ್ಲ; ನಿÁ್ಕರಣವಾಗಿ ಒಂದು ಕಠಿನೋಕ್ತಿಯನ್ನೂ ಆಡಲಿಲ್ಲ; ಆತನು ಮನುÀ್ಯನ ಬಲಹೀನತೆಯನ್ನು ಸತ್ಯಾಂಶಗಳಲ್ಲಿ ಒಂದನ್ನಾದರೂ ಬಚ್ಚಿಡದೆ ಎಲ್ಲವನ್ನೂ ಪ್ರೀತಿಯ ವಚನಗಳಲ್ಲಿಯೇ ಆತನು ಅವರಿಗೆ ಹೇಳುತ್ತಿದ್ದನು. ತನ್ನ ಜನರ ಸಂಗಡ ಮಾತನಾಡುವಾಗ ಅಧಿಕವಾದ ವಿವೇಕದ ಯೋಚನೆಯನ್ನೂ ಗಮನವನ್ನೂ ಕೊಡುತ್ತಿದ್ದನು. ಆತನು ಎಂದಾದರೂ ಒರಟಾಗಿರಲಿಲ್ಲ; ನಿÁ್ಕರಣವಾಗಿ ಒಂದು ಕಠಿನೋಕ್ತಿಯನ್ನೂ ಆಡಲಿಲ್ಲ; ಆತನು ಮನುÀ್ಯನ ಬಲಹೀನತೆಯನ್ನು ದೂರಲಿಲ್ಲ, ಯಾವಾಗಲೂ ಪ್ರೀತಿಪೂರ್ಣವಾಗಿ ಸತ್ಯವನ್ನೇ ನುಡಿಯುತ್ತಿದ್ದನು; ಆದರೆ ಕಠಿನವಾಗಿ ಖಂಡ್ರಿಸುವ ಸಂದರ್ಭಗಳಲ್ಲಿ ಆತನು ಭಾÀ್ಪ ಪೂರ್ಣವಾಗಿರುತ್ತಿದ್ದನು. ತಾನು ಪ್ರೀತಿಸಿದ ಆ ಯೆರೂಸಲೇಮಿನ ವಿಚಾರ ಕಣ್ಣೀರಿಟ್ಟನು. ಕಾರಣವೇನೆಂದರೆ ಮಾರ್ಗವೂ ಸತ್ಯವೂ ಜೀವೂ ಆದ ತನ್ನನ್ನು ಅದು ಧಿಕ್ಕಾರ ಮಾಡಿತು. ರಕ್ಷಕನಾದ ಆತನನ್ನು ಆ ಪಟ್ಟಣವು ಧಿಕ್ಕಾರ ಮಾಡಿತ್ತು. ಅದಕ್ಕಾಗಿ ಆತನು ಕಣ್ಣೀರಿಟ್ಟನು.LI 8.1
ಆತನ ಜೀವಮಾನವು ಸ್ವಾರ್ಥರಹಿತವಾದದ್ದು; ಅಲ್ಲದೆ ಅದು ಸದಾ ಇತರ ಜೀವಮಾನದ ವಿÀಯ ಪ್ರೀತಿಯಿಂದ ಕೂಡಿತ್ತು; ಆತನ ದೃಷಿಯಲ್ಲಿ ಪ್ರತಿಯೊಂದು ಆತ್ಮವೂ ಬೆಲೆಯುಳ್ಳದ್ದಾಗಿದ್ದಿತು. ಆತನು ದೇವರಾಗಿ ದೈವ ಮಹಿಮೆಗೆ ಯೋಗ್ಯನಾಗಿದ್ದರೂ, ದೈವಕುಟುಂಬಕ್ಕೆ ಸೇರಿದವರೆಲ್ಲರ ಮೇಲ ಅಧಿಕವಾದ ಪ್ರೀತಿಯನ್ನಿರಿಸಿದ್ದನು. ಮಾನವರೆಲ್ಲಾ ಪಾಪಾತ್ಮರೆಂದೂ ಇವರನ್ನು ರಕ್ಷಿಸುವುದೇ ತನ್ನ ಕಾರ್ಯವೆಂದು ಆತನು ತಿಳಿದುಕೊಂಡಿದ್ದನು. ಕ್ರಿಸ್ತನ ಜೀವಮಾನದಿಂದ ನಮಗೆ ಪ್ರಕಟವಾಗಿರುವ ಗುಣವು ಇಂಥಾದ್ದೇ ಆಗಿದೆ.ಈ ಗುಣವು ದೇವ ರರೊಬ್ಬನಲ್ಲಿ ಕಾಣಬರುವ ಗುಣವಾಗಿದೆ. ತಂದೆಯ ಎದೆಯಲ್ಲಿರುವ ಪ್ರೀತಿಯು ಕ್ರಿಸ್ತನ ಮೂಲಕ ನದಿಯಾಗಿ ಹರಿದು ಮನುÀ್ಯನಿಗೆ ಸಿಕ್ಕುತ್ತದೆ; ಮೃದುವಾದ ಮತ್ತು ಕರುಣೆಯ ಹೃದಯದಿಂದ ಕೂಡಿರುವ ಕ್ರಿಸ್ತನು ‘ಶರೀರಧಾರಿಯಾಗಿ ಪ್ರತ್ಯಕ್ಷನಾದ ದೇವರಾಗಿದ್ದನು’LI 8.2
ನಮ್ಮನ್ನು ರಕ್ಷಿಸಲು ಕ್ರಿಸ್ತನು ಈ ಲೋಕದಲ್ಲಿ ಜೀವಿಸಿ, ಬಾಧೆಪಟ್ಟು ಮರಣವನ್ನು ಹೊಂದಿದನು. ಎಂದೆಂದಿಗೂ ನಾವು ಮುಖವನ್ನು ಅನುಭವಿಸಲು ಆತನು “ವ್ಯಸನಗಳಿಂದ ಕೂಡಿದ” ಮನುÀ್ಯನಾದನು. ಕೃಪೆಯಿಂದಲೂ ಸತ್ಯದಿಂದಲೂ ಕೂಡಿದ ತನ್ನ ಮಗನನ್ನು ವಿವರಿಸಲಸದಳವಾದ ತನ್ನ ಮಹಿಮೆಯ ಲೋಕವನ್ನು ಬಿಟ್ಟು ಪಾಪದಿಂದಲೂ ಶಾಪದಿಂದಲೂ ಮತ್ತು ಮರಣದಿಂದಲೂ ಭರಿತವಾದ ಈ ಮತ್ರ್ಯಲೋಕಕ್ಕೆ ಬರುವಂತೆ ಮಾಡಿದನು. ಆತನಿಗೆ ತಂದೆಯ ಪ್ರೀತಿಯ ಎದೆಯೂ, ದೇವದೂತರ ಹೊಗಳಿಕೆಯೂ ತಪ್ಪಿ, ಶ್ರಮ, ನಾಚಿಕೆ, ದೀನತ್ವ, ಅಪಮಾನ, ತಿರಸ್ಕಾರ, ದ್ವೇÀ ಮತ್ತು ಮರಣ ಪ್ರಾಪ್ತವಾದವು. “ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಜಜ್ಜಲ್ಪಟ್ಟನು; ನಮಗೆ ಸುಕ್ಷೇಮವನ್ನುಂಟು ಮಾಡುವ ದಂಡನೆ ಯನ್ನು ಅವನು ಅನುಭವಿಸಿದನು” ಕ್ರಿಸ್ತನು ಅರಣ್ಯದಲ್ಲಿದ್ದುದನ್ನೂ, ಗೆತ್ಸೇಮನೆಯಲ್ಲಿ ಹೋರಾಟ ಮಾಡಿದ್ದನ್ನೂ ಮತ್ತು ಶಿಲುಬೆಯ ಮೇಲಿರುವುದನ್ನೂ ಗಮನಿಸಿ ನೋಡಿರಿ. ಪರಿಶುದ್ಧನಾದ ದೇವಕುಮಾರನು ಮನುÀ್ಯರ ಪಾಪಗಳನ್ನು ತನ್ನ ಮೇಲೆ ಹೊತ್ತುಕೊಂಡನು. ದೇವರೂ ತಾನು ಒಂದಾಗಿದ್ದ ದೈವಪುತ್ರನು ತನ್ನನ್ನೂ ತಂದೆಯನ್ನೂ ಪ್ರತ್ಯೇಕಿಸುವ ಪಾಪದ ಕರಾಳಸ್ವರೂಪವನ್ನು ಕಂಡನು. ಈ ಅಗಲುವಿಕೆಯೇ “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ” ಎಂದು ಕ್ರಿಸ್ತನು ಹೇಳುವಂತೆ ಮಾಡಿತು. ಪಾಪದ ಹೊರೆ, ಮತ್ತು ತನಗೂ ದೇವರಿಗೂ ಉಂಟಾದ ಅಗಲುವಿಕೆ ಇವೇ ಆತನ ಹೃದಯವು ಒಡೆದು ಹೋಗುವಂತೆ ಮಾಡಿದವು. ಮಾನವರ ಮೇಲೆ ದೇವರಿಗೆ ಪ್ರೀತಿ ಉಂಟಾಗಲೆಂದಾಗಲಿ, ದೇವರು ಮನುÀ್ಯರನ್ನು ರಕ್ಷಿಸಲು ಪ್ರಯತ್ನಿಸುವಂತೆ ಮಾಡುವುದಕ್ಕಾಗಲಿ ಕ್ರಿಸ್ತನು ತನ್ನನ್ನು ಬಲಿಯಾಗಿ ಸಮರ್ಪಿಸಿಕೊಳ್ಳಲಿಲ್ಲ. “ದೇವರು ಲೋಕದ ಮೇಲೆ ಎÉ್ಟೂೀ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು” ಕ್ರಿಸ್ತನ ಬಲಿಯ ಮೂಲಕ ದೇವರು ನಮ್ಮನ್ನು ಪ್ರೀತಿಸುವವನಲ್ಲ; ವೊದಲು ತಾನು ನಮ್ಮನ್ನು ಪ್ರೀತಿಸಿದುದರಿಂದಲೇ ಆ ಬಲಿಯನ್ನು ತಾನೇ ನಮಗಾಗಿ ಸಿದ್ಧ ಮಾಡಿದ್ದನು. ಪಾಪಭರಿತವಾದ ಪ್ರಪಂಚದ ಮೇಲೆ ಪ್ರೀತಿಯನ್ನು ತೋರಿಸಲು ಕ್ರಿಸ್ತನನ್ನು ತನ್ನ ಸಾಧನವನ್ನಾಗಿ ಮಾಡಿಕೊಂಡನು. “ಕ್ರಿಸ್ತನ ಮೂಲಕ ನಮ್ಮನ್ನು ತನಗೆ ಸಮಾಧಾನ ಪಡಿಸಿಕೊಂಡನು” ತನ್ನ ಕುಮಾರನಾದ ಕ್ರಿಸ್ತನೊಂದಿಗೆ ದೇವರು ಶ್ರಮವನ್ನು ಅನುಭವಿಸಿದನು. ಗೆತ್ಸೇಮನೆಯ ಪ್ರಾಣಸಂಕಟದ ಹೋರಾಟದ ಮೂಲಕವೂ, ಶಿಲುಬೆಯ ಮರಣದ ಮೂಲಕವೂ ನಮ್ಮ ಪಾಪಗಳ ಪರಿಹಾರಕ್ಕಾಗಿ ತಕ್ಕ ಬೆಲೆಯು ಕೊಡಲ್ಪಟ್ಟಿತು.LI 9.1
“ನಾನು ತಿರುಗಿ ಪಡೆದುಕೊಳ್ಳುತ್ತೇನೆಂದು ನನ್ನ ಪ್ರಾಣವನ್ನು ಕೊಡುತ್ತೇನೆ” ಎಂದು ಕ್ರಿಸ್ತನು ತಾನೇ ಹೇಳಿರುತ್ತಾನೆ. ಇದರ ಅರ್ಥವು ಹ್ಯಾಗಂದರೆ “ತಂದೆಯು ನಿಮ್ಮನ್ನು ಪ್ರೀತಿಸುತ್ತಾನೆ, ನಿಮ್ಮನ್ನು ರಕ್ಷಿಸಲು ನನ್ನನ್ನು ಬಲಿಯಾಗಿ ಅರ್ಪಿಸಿಕೊಳ್ಳುವುದರಿಂದ ನನ್ನನ್ನು ಇನ್ನೂ ಅಧಿಕವಾಗಿ ಪ್ರೀತಿಸುತ್ತಾನೆ. ನಿಮ್ಮ ಹೊಣೆಗಾರನಾಗಿ ನನ್ನ ಮೇಲೆ ನಿಮ್ಮ ಸರ್ವಾಪರಾಧಗಳನ್ನೂ ತೆಗೆದು ಕೊಳ್ಳುವುದರಿಂದ ನಾನು ನನ್ನ ತಂದೆಗೆ ಪ್ರೀತಿಪಾತ್ರನಾದೆನು; ಯಾಕಂದರೆ ದೇವರು ನ್ಯಾಯಪರನು ಮತ್ತು ಕ್ರಿಸ್ತನನ್ನು ನಂಬುವವರನ್ನು ನಿರಪರಾಧಿಗಳೆಂದು ತೀರ್ಮಾನಿಸುವವನು ಆಗಿದ್ದಾನೆ.”LI 10.1
ದೇವಕುಮಾರನಾದ ಕ್ರಿಸ್ತನ ಹೊರತು ಮತ್ಯಾರೂ ಈ ರಕ್ಷಣಾಕಾರ್ಯವನ್ನು ಮಾಡಲಾರಲು. ಯಾಕಂದರೆ ತಂದೆಯ ಎದೆಯಲ್ಲಿರುವಾತನೇ ನಮಗೆ ತಂದೆಯನ್ನೂ ಪ್ರಕಟಿಸಿದ್ದಾನೆ. ದೇವರ ಪ್ರೀತಿಯ ಉದ್ದ ಅಗಲ ಮತ್ತು ಆಳವನ್ನು ತಿಳಿದವನೇ ಅದನ್ನು ನಮಗೆ ತೋರಿಸಲು ಸಾಧ್ಯ. ಕ್ರಿಸ್ತನ ಬಲಿಯ ಹೊರತು ಮತ್ಯಾವನೂ ಪಾಪಾತ್ಮರ ಮೇಲೆ ದೇವರು ಇಟ್ಟಿರುವ ಅಗಾಧ ಪ್ರೀತಿಯನ್ನು ತೋರಿಸಿಕೊಡಲಾರನು.LI 10.2
“ದೇವರು ಲೋಕದ ಮೇಲೆ ಎÉ್ಟೂೀ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು.” ಆತನು ಮನುÀ್ಯರ ನಡುವೆ ವಾಸಿಸಲು ಅವರ ಪಾಪಗಳನ್ನು ಹೊರಲು ಮತ್ತು ಅವರಿಗಾಗಿ ಬಲಿಯನ್ನು ಸಮರ್ಪಿಸಲು ಮಾತ್ರ ಕೊಡಲಿಲ್ಲ; ಆತನನ್ನೇ ಪಾಪಾತ್ಮರಿಗಾಗಿ ಕೊಟ್ಟನು. ಆತನು ಅವರ ಸಂಗಣ ಇದ್ದು ಅವರ ಕÀ್ಟ ಸುಖಗಳಲ್ಲಿ ಭಾಗಿಯಾಗಬೇಕಾಗಿದ್ದುತು. ದೇವರೊಂದಿಗೆ ಒಂದಾಗಿ ದ್ದವನು ಮನುÀ್ಯ ಮಕ್ಕಳೊಂದಿಗೆ ಒಂದಾಗಿದ್ದಾನೆ; ಈ ಸಂಬಂಧವನ್ನು ಯಾರೂ ತಪ್ಪಿಸಲಾರರು ಮತ್ತು ಈ ಸಂಬಂಧವು ತಪ್ಪಿ ಹೋಗಲಾರದು. ಕ್ರಿಸ್ತನು ನಮ್ಮನ್ನು “ಸಹೋದರರೆನ್ನುವುದಕ್ಕೆ ನಾಚಿಕೆ ಪಡುವುದಿಲ್ಲ” ಆತನೇ ನಮ್ಮ ಬಲಿಯೂ, ನಮ್ಮ ವಕೀಲನೂ, ನಮ್ಮ ಸಹೋದರನೂ ಆಗಿ ನಮ್ಮ ಮನುÀ್ಯತ್ವ ರೂಪದಲ್ಲಿ ತಂದೆಯ ಸಮ್ಮುಖದ ಸಿಂಹಾಸನದ ಎದುರಿಗೆ ನಿಲ್ಲುವವನೂ, ಯುಗಯುಗಾಂತರಗಳಲ್ಲೂ ತಾನು ಮಾನವರೊಂದಿಗೆ ಒಂದಾಗಿರುವವನೂ ಆಗದ್ದು ಮನುÀ್ಯ ಕುಮಾರ ನಾಗಿರುತ್ತಾನೆ. ಪಾಪದ ಹೀನಾವಸ್ಥೆಯಿಂದ ನಾವು ಮೇಲಕ್ಕೆ ಎತ್ತಲ್ಪಟ್ಟು ನಾಶನದಿಂದ ಪಾರಾಗಲು ದೇವರ ಪ್ರೀತಿಯನ್ನು ಯೋಚಿಸಿ ಪರಿಶುದ್ಧತ್ವದ ಸಂತೋÀದಲ್ಲಿ ಭಾಗಿಗಳಾಗಲು ಸಹಾಯವಾಯಿತು.LI 10.3
ಕ್ರಿಸ್ತನು ನಮ್ಮನ್ನು ರಕ್ಷಿಸಲು ಕೊಟ್ಟ ಬೆಲೆ ಮತ್ತು ತಂದೆಯಾದ ದೇವರು ತನ್ನ ಮಗನಾದ ಕ್ರಿಸ್ತನನ್ನು ನಮಗೆ ಕೊಟ್ಟಿದ್ದರಲ್ಲಿ ತಾನು ತೋರಿಸಿರುವ ಬಲಿ, ಎಂಬಿವುಗಳು ನಾವು ಕ್ರಿಸ್ತನಿಂದ ಯಾವ ಸ್ಥಿತಿಗೆ ಬರಬಹುದೆಂಬ ವಿಚಾರದಲ್ಲಿ ಅತಿ ಗಂಬೀರವಾದ ಭಾವನೆಗೆ ನಮ್ಮನ್ನು ಏರಿಸುತ್ತವೆ. ದೈವಪ್ರೇರಣೆಯನ್ನು ಹೊಂದಿದ ಯೋಹಾನನು ತಂದೆಯಾದ ದೇವರು ಪಾಪಾತ್ಮರ ಮೇಲಿಟ್ಟಿರುವ ಪ್ರೀತಿಯ ಉದ್ದ, ಅಗಲ, ಆಳಗನ್ನು ತಿಳಿದು ಆಶ್ಚರ್ಯ ಮತ್ತು ಮರ್ಯಾದೆಗಳಿಂದ ಕೂಡಿ ಆ ಪ್ರೀತಿಯನ್ನು ಸರಿಯಾದ ಮಾತುಗಳಲ್ಲಿ ಹೇಳಲು ಸಾಧ್ಯವಾಗದೇ ಜನರಿಗೆ “ದೇವರ ಮಕ್ಕಳೆಂಬ ಹೆಸರನ್ನು ಕೊಡುವುದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನೆ ನೋಡಿರಿ” ಎಂದು ಹೇಳುತ್ತಾನೆ. ಇದರಿಂದ ಮನುÀ್ಯನ ಬೆಲೆಯು ಎÀ್ಟು ಹೆಚ್ಚಿದೆ! ಮನುÀ್ಯರು ಅಪರಾಧಗಳ ದೆಸೆಯಿಂದ ಸೈತಾನನ ಪ್ರಜೆಗಳಾದರು. ಕ್ರಿಸ್ತನ ಮರಣದಿಂದ ಅವರು ಮರಳಿ ದೇವರ ಮಕ್ಕಳಾಗಬಹುದು. ಕ್ರಿಸ್ತನು ಮನುÀ್ಯತ್ವವನ್ನು ಧರಿಸಿದ್ದರಿಂದ ಮನುÀ್ಯತ್ವವು ಉನ್ನತ ಮಟ್ಟಕ್ಕೇರಿತು. ಕ್ರಿಸ್ತನ ಮೂಲಕ ಪಾಪಾತ್ಮರು ನಿಜವಾಗಿಯೂ “ದೇವರ ಮಕ್ಕಳು” ಎಂಬ ಗೌರವಕ್ಕೆ ಏರಬಹುದು. ಈ ಪ್ರೀತಿಗೆ ಸರಿಹೋಗುವುದು ಯಾವುದೂ ಇಲ್ಲ. ಇದು ಅಸಮಾನವಾದುದು. ನಾವು ಸ್ವರ್ಗದ ರಾಜನ ಮಕ್ಕಳು! ಇದು ಎಂಥಾ ಬೆಲೆಯುಳ್ಳ ವಾಗ್ದಾನ! ಧ್ಯಾನಕ್ಕೆ ಅತ್ಯಂತ ಆಳವಾದ ಸಂಗತಿ! ತನ್ನನ್ನು ಪ್ರೀತಿಸಿದ ಪ್ರಪಂಚದ ಮೇಲೆ ದೇವರು ಇರಿಸಿರುವ ಅಪ್ರಮೇಯವಾದ ಪ್ರೀತಿ!LI 11.1
ಈ ಘನವಾದ ಯೋಚನೆಯು ಆತ್ಮವನ್ನು ತನ್ನ ಅಧೀನ ಮಾಡಿಕೊಂಡು ನಮ್ಮ ಮನಸ್ಸನ್ನು ದೇವರ ಚಿತ್ತಕ್ಕೆ ಅಧೀನ ಮಾಡುತ್ತದೆ. ದೈವಗುಣವನ್ನು ಶಿಲುಬೆಯ ಮೂಲಕ ಧ್ಯಾನಿಸುವಾಗಲೆಲ್ಲಾ ನಾವು ದೇವರ ಕರುಣೆ, ದಯೆ ಮತ್ತು ನ್ಯಾಯದಿಂದ ಕೂಡಿದ ಕ್ಷಮಾಪಣೆಗಳನ್ನು ಹೆಚ್ಚು ಹೆಚ್ಚಾಗಿ ನೋಡುತ್ತೇವೆ. ಒಬ್ಬ ತಾಯಿತು ತಪ್ಪಿ ಹೋದ ತನ್ನ ಮಗುವಿನ ಮೇಲೆ ಇರಿಸಿರುವ ಅಧಿಕವಾದ ಪ್ರೀತಿಗಿಂತಲೂ, ದೇವರು ನಮ್ಮನ್ನು ನಾನಾ ರೀತಿಗಳಲ್ಲಿ ಪ್ರೀತಿಸುತ್ತಾನೆಂಬುದಕ್ಕೆ ಲೆಕ್ಕವಿಲ್ಲದÀ್ಟು ನಿದರ್ಶನಗಳಿರುತ್ತವೆ.LI 12.1
ಮನುÀ್ಯರ ಪ್ರೀತಿಯು ನಾಶವಾಗಬಹುದು,
ಸ್ನೇಹಿತನು ಸ್ನೇಹಿತನಿಗೆ ಮಿತ್ರದ್ರೋಹಿಯಾಗಬಹುದು,
ಮಕ್ಕಳು ತಂದೆತಾಯಿಗಳನ್ನು ದ್ವೇಷಿಸಿ ದೂಡಬಹುದು,
ಆಕಾಶ ಭೂಮಿಗಳ ಅಳಿದು ಹೋಗಬಹುಚು,
ಆದರೆ ಯೆಹೋವನ ಪ್ರೀತಿಯಲ್ಲಿ ವ್ಯತ್ಯಾಸ ಎಂದೆಂದಿಗಾದರೂ ಆಗಲಾರದು.LI 12.2