Loading...
Larger font
Smaller font
Copy
Print
Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಪ್ರಾರ್ಥ ನೆಯ ಹಕ್ಕು

    ಪ್ರಕೃತಿ, ಪ್ರಕಟನೆ, ಪರಾಂಬರಿಕೆ, ಪವಿತ್ರಾತ್ಮನ ಪ್ರೇರಣೆ ಇವುಗಳ ಮೂಲಕ ದೇವರು ನಮ್ಮ ಸಂಗಡ ಮಾತನಾಡುತ್ತಾನೆ. ಆದರೆ ಇವು ಸಾಲವು, ನಮ್ಮ ಹೃದಯಗಳನ್ನು ಆತನೆದುರಿಗೆ ಒಯ್ಯಬೇಕು. ಆತ್ಮೀಯ ಜೀವಮಾನವೂ ಶಕ್ತಿಯೂ ನಮಗೆ ಬೇಕಾದರೆ ನಮ್ಮ ತಂದೆಯಾದ ದೇವರೊಡನೆ ನಿಕಟಸಂಪರ್ಕವನ್ನಿಟ್ಟು ಕೊಂಡಿರಬೇಕು. ಆತನ ಕಡೆಗೆ ನಮ್ಮ ಮನಸ್ಸು ಎಳೆಯಲ್ಪಡಬಹುದು. ಆತನ ಕೆಲಸಗಳನ್ನೂ ಕರುಣೆಯ ಆಶೀರ್ವಾದಗಳನ್ನೂ ನಾವು ಧ್ಯಾನಿಸಬಹುದು; ಆತನೊಡನೆ ಸಂಭಾÀಣೆ ಮಾಡಬಹುದು. ಸ್ನೇಹಿತನಲ್ಲಿ ನಮ್ಮ ಮನಸ್ಸಿನ ಅಂತರಂಗವನ್ನು ಬಿಚ್ಚಿ ಹೇಳುವ ಹಾಗೆ ಪ್ರಾರ್ಥನೆಯಲ್ಲಿ ತಂದೆಯಾದ ದೇವರೊಡನೆ ನಮ್ಮ ಅಂತರಂಗವನ್ನು ಬಿಚ್ಚಿ ಮಾತಾನಡುವುದಾಗಿದೆ. ನಾವು ಏನಾಗಿದ್ದೇವೆಂದು ಆತನಿಗೆ ತಿಳಿಸಬೇಕಾದ ಪ್ರಮೇಯವಿಲ್ಲ. ಯಾಕಂದರೆ ಆತನು ಅದನ್ನು ಆಗಲೇ ಗ್ರಹಿಸಿರುತ್ತಾನೆ. ನಾವು ಆತನನ್ನು ಸ್ವೀಕರಿಸಬೇಕೆಂಬ ಭಾಗವು ಪ್ರಧಾನವಾಗಿರಬೇಕು. ಪ್ರಾರ್ಥನೆಯು ದೇವರನ್ನು ನಮ್ಮ ಬಳಿಗೆ ತಂದಿರಿಸುವುದಿಲ್ಲ. ಆದರೆ ಇದು ನಮ್ಮನ್ನೇ ಆತನ ಬಳಿಗೆ ಕೊಂಡೊಯ್ಯುವುದಾಗಿದೆ. ಕ್ರಿಸ್ತನು ಭೂಲೋಕದಲ್ಲಿದ್ದಾಗ ತನ್ನ ಶಿÀ್ಯರಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಿದನು; ಹೀಗೆ ಪ್ರಾರ್ಥನೆಯನ್ನು ಕಲಿಸುವುದರಲ್ಲಿ ಅವರು ತಮ್ಮ ಅನುದಿನದ ಅವಶ್ಯಕತೆಗಳನ್ನು ಆತನಿಗೆ ತಿಳಿಸುತ್ತಾ, ತಮ್ಮ ಎಲ್ಲಾ ಚಿಂತೆಗಳನ್ನೂ ಆತನ ಮೇಲೆ ಹಾಕಬೇಕೆಂದೂ ಅವರಿಗೆ ಬೋಧಿಸಿದನು. ಪ್ರಾರ್ಥನೆಗಳು ದೇವರಿಂದ ಕೇಳಲ್ಪಡುತ್ತವೆಂಬ ಭರವಸೆಯನ್ನು ಕ್ರಿಸ್ತನು ಅವರಿಗೆ ಕೊಟ್ಟದ್ದರಿಂದ, ನಮ್ಮ ಪ್ರಾರ್ಥನೆಗಳೂ ದೇವರಿಂದ ಕೇಳಲ್ಪಡುತ್ತವೆಂದು ನಮಗೂ ಭರವಸೆಯನ್ನು ಕೊಟ್ಟಂತಾಯಿತು.LI 83.1

    ನಮ್ಮ ರಕ್ಷಕನು ಭೂಲೋಕದಲ್ಲಿದ್ದಾಗ ಪದೇ ಪದೇ ಪ್ರಾರ್ಥನೆ ಮಾಡುತ್ತಿದ್ದನು. ಆತನು ನಮ್ಮ ಅಸತ್ಯಗಳನ್ನೂ ಬಲಹೀನತೆಗಳನ್ನೂ ಬಲ್ಲವನಾಗಿದ್ದು ನವ್ಮೊಡನೆ ಬೆರೆತು ಈ ಜೀವಮಾನದ ಶೋಧನೆ ಮತ್ತು ನಮ್ಮ ರಕ್ಷಕನು ಭೂಲೋಕದಲ್ಲಿದ್ದಾಗ ಪದೇ ಪದೇ ಪ್ರಾರ್ಥನೆ ಮಾಡುತ್ತಿದ್ದನು. ಆತನು ನಮ್ಮ ಅಸತ್ಯಗಳನ್ನೂ ಬಲಹೀನತೆಗಳನ್ನೂ ಬಲ್ಲವನಾಗಿದ್ದು ನವ್ಮೊಡನೆ ಬೆರೆತು ಈ ಜೀವಮಾನದ ಶೋಧನೆ ಮತ್ತು ಸಂಕÀ್ಟಗಳನ್ನು ಎದುರಾಯಿಸಲೂ ತನಗೆ ಬೇಕಾದ ಹೊಸ ಬಲವನ್ನು ಹೊಂದಿಕೊಳ್ಳಲೂ ತಂದೆಯನ್ನು ಬೇಡಿಕೊಳ್ಳುತ್ತಿದ್ದನು. ಎಲ್ಲಾ ವಿಚಾರಗಳಲ್ಲೂ ಆತನು ನಮಗೆ ಮಾದರಿಯಾಗಿದ್ದಾನೆ. ನಮ್ಮ ಬಲಹೀನತೆಗಳಲ್ಲಿ ಆತನು ನಮಗೆ ನೆರವಾಗಿದ್ದಾನೆ. ಆತನು “ಎಲ್ಲಾ ವಿÀಯಗಳಲ್ಲೂ ನಮ್ಮ ಹಾಗೆ ಶೋಧನೆಗೆ ಗುರಿಯಾದನು” ಆದರೆ ಪಾಪರಹಿತನಾದ ಆತನು ಪ್ರತಿಪಾಪಕ್ಕೂ ವಿರೋಧಿಯಾಗಿದ್ದನು. ಪಾಪಭರಿತವಾದ ಈ ಲೋಕದಲ್ಲಿ ತೊಂದರೆಗಳನ್ನೂ ಹಿಂಸೆಗಳನ್ನೂ ಅನುಭವಿಸಿದನು. ಆತನ ಮನುÀ್ಯತ್ವವು ಪ್ರಾರ್ಥನೆಯನ್ನು ಒಂದು ಅವಶ್ಯಕವಾದ ಸಂಗತಿಯನ್ನಾಗಿಯೂ ಹಕ್ಕನ್ನಾಗಿಯೂ ಮಾಡಿತು. ತಂದೆಯಾದ ದೇವರೊಡನೆ ಸಂಭಾಷಿಸುವುದರಲ್ಲಿ ಆತನಿಗೆ ಸೌಖ್ಯವೂ ಸಂತೋÀವೂ ಉಂಟಾಗುತ್ತಿದ್ದವು. ಮನುÀ್ಯರ ರಕ್ಷಕನೂ ದೇವಕುಮಾರನೂ ಆಗಿದ್ದ ಕ್ರಿಸ್ತನಿಗೆ ಪ್ರಾರ್ಥನೆಯು ಅÀ್ಟು ಅವಶ್ಯಕವಾಗಿದ್ದರೆ ಪಾಪಾತ್ಮರೂ ಮರಣಾಧೀನರೂ ಆದ ಮಾನವರಿಗೆ ಇದರ ಅವಶ್ಯಕತೆಯು ಎಷ್ಟಿದೆಯೆಂದು ಭಾವಿಸಬೇಕಲ್ಲವೇ?LI 83.2

    ಸ್ವರ್ಗಪಿತನು ನಮಗೆ ತನ್ನ ಪೂರ್ಣಶೀರ್ವಾದಗಳನ್ನು ಅನುಗ್ರಹಿಸಲು ಕಾದಿರುತ್ತಾನೆ. ಅಗಾಧವಾದ ಜೀವಬುಗ್ಗೆಯ ಬಳಿ ನೀರಡಿಕೆಯನ್ನು ತೀರಿಸಿಕೊಳ್ಳುವುದು ನಮ್ಮ ಹಕ್ಕಾಗಿದೆ. ಬಹಳ ಕೊಂಚವಾಗಿ ಪ್ರಾರ್ಥಿಸುವುದು ಎಂಥಾ ವಿಚಿತ್ರವಾದ ಸಂಗತಿಯಾಗಿದೆ. ಅತ್ಯಂತ ದೈನ್ಯತೆಯ ಮಕ್ಕಳ ಪ್ರಾರ್ಥನೆಯನ್ನು ಕೇಳುವುದರಲ್ಲಿ ಸಿದ್ಧನಾಗಿಯೂ ಸಂತೋÀವುಳ್ಳವನಾಗಿಯೂ ಇರುವ ಪರಲೋಕದ ನಮ್ಮ ತಂದೆಯು ನಮ್ಮ ಬೇಡಿಕೆಗಳನ್ನು ಲಾಲಿಸುತ್ತಾನಾದರೂ, ನಮ್ಮ ಹಕ್ಕಾಗಿರುವ ಪ್ರಾರ್ಥನೆಯನ್ನು ಮಾಡಲು ನಾವು ಹಿಂಜರಿಯುತ್ತಿರುತ್ತೇವೆ. ಇದೂ ಅಲ್ಲದೆ ಇದನ್ನು ಸ್ಪÀ್ಟವಾಗಿ ತೋರಿಸುತ್ತಲೂ ಇರುತ್ತೇವೆ. ದೇವರು ಅಗಾಧವಾದ ಪ್ರೀತಿಯಿಂದ ಮಾನವರ ವಿÀಯ ಮರುಗುತ್ತಿರುವಾಗ ಇವರು ಕೇಳುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಹೆಚ್ಚಾಗಿ ಕೊಡಲು ಸಿದ್ಧನಾಗಿರುವಾಗ ಶೋಧನೆಗಳಿಗೆ ತುತ್ತಾಗುವ ನಿಭಾಗ್ಯ ಮಾನವರು ಸಹಾಯಶೂನ್ಯರಾಗಿ ಪ್ರಾರ್ಥಿಸದೇ, ಆತನಲ್ಲಿ ನಂಬಿಕೆಯನ್ನಿಡದೆ ಇರುವುದನ್ನು ದೇವದೂತರು ಕಂಡು ಏನೆಂದು ಯೋಚಿಸಬಹುದು? ದೇವದೂತರು ದೇವರಿಗೆ ನಮಸ್ಕರಿಸಲೂ, ಆತನ ಹತ್ತಿರದಲ್ಲಿರಲೂ ಇÀ್ಟಪಡುತ್ತಾರೆ. ದೇವರ ಸಂಗಡ ಸಂಭಾಷಿಸುವುದು ಅತ್ಯಂತ ಹೆಚ್ಚಿನ ಸಂತೋÀವೆಂದು ಅವರು ಭಾವಿಸುತ್ತಾರೆ. ದೇವರೊಬ್ಬನಿಂದಲೇ ದೊರಕುವ ಸಹಾಯಕ್ಕೆ ಕಾದುಕೊಂಡಿರಬೇಕಾದ ಮನುÀ್ಯ ಮಕ್ಕಳು ಮಾತ್ರ ದೇವರಾತ್ಮನ ಬೆಳಕಿಲ್ಲದೆ ಆತನ ಸಹಾಯವಿಲ್ಲದೆ ಜೀವಿಸಬಹುದೆಂದು ಭಾವಿಸುತ್ತಾರೆ.LI 84.1

    ಪ್ರಾರ್ಥನೆಯನ್ನು ನಿರ್ಲಕ್ಷ್ಯ ಮಾಡುವವರ ಸುತ್ತಲೂ ಕೆಟ್ಟತನದ ಕತ್ತಲೆಯು ಆವರಿಸಿಕೊಂಡಿರುತ್ತಾರೆ. ಶೋಧಕನು ಪಿಸುಮಾತಿನಲ್ಲಿ ಅವರ ಕಿವಿಗಳಲ್ಲಿ ಮಾಡುವ ಶೋಧನೆಗಳು ಅವರನ್ನು ಪಾಪಕ್ಕೆ ಮರಳು ಮಾಡುತ್ತದೆ. ದೇವರಿಂದ ಕೊಡಲ್ಪಟ್ಟ ಪ್ರಾರ್ಥನಾಹಕ್ಕನ್ನು ಉಪಯೋಗಿಸಿಕೊಳ್ಳದಿರುವುದೇ ಇದಕ್ಕೆ ಕಾರಣವಾಗಿದೆ. ಸ್ವರ್ಗದ ಭಂಡಾರದ ಮನೆಗೆ ನಂಬಿಕೆಯು ಬೀಗದ ಕೈ ಯೋಪಾದಿಯಲ್ಲಿರುತ್ತದೆ.LI 85.1

    ಇಂತಹ ಶ್ರೇÀ್ಠವಾದ ಪ್ರಾರ್ಥನೆಯನ್ನು ಮಾನವರು ಮಾಡದೆ ಏತಕ್ಕೆ ನಿರ್ಲಕ್ಷ್ಯದಿಂದಿರಬೇಕು? ಪ್ರಾರ್ಥನೆಯಲ್ಲಿ ಅಪರಿಮಿತವಾದ ದೈವಶಕ್ತಿಯ ನಿಧಿಯಿದೆ. ಸತ್ಯವಾಗಿ ಪ್ರಾಥಿಸುವುದನ್ನೂ ಎಚ್ಚರದಿಂದಿದ್ದು ಕಾಯುವುದನ್ನೂ ಬಿಡುವುದರಿಂದ ನಿರ್ಲಕ್ಷಭಾವದಲ್ಲಿ ಬೆಳದು ತಪ್ಪು ಹಾದಿಗೆ ಹೋಗುವವರಾಗಿದ್ದೇವೆ. ನಾವು ದೇವರ ಕೃಪಾಸನದ ಬಳಿಗೆ ಬಾರದ ಹಾಗೆ ಮಾಡಲು ಸೈತಾನನು ನಮ್ಮ ಹಾದಿಗೆ ನಾನಾ ವಿಧವಾದ ಆತಂಕಗಳನ್ನು ತಂದುಹಾಕುತ್ತಾನೆ. ಆಸಕ್ತಿಯ ಪ್ರಾರ್ಥನೆಯಿಂದಲೂ ನಂಬಿಕೆಯ ಹಾದಿಯಿಂದಲೂ ದೂರ ಸರಿಯಬೇಕೆಂದೇ ಶೋಧಕನು ಈ ರೀತಿ ಎಡೆತಡೆಗಳನ್ನು ತಂದುಹಾಕಲು ಕಾರಣವಾಗಿದೆ. ನಮ್ಮ ಪ್ರಾರ್ಥನೆಗಳನ್ನು ಕೇಳಿ ಸದುತ್ತರವನ್ನು ಕೊಡುವ ದೇವರು ನಮಗೆ ಕೆಲವು ಆಜ್ಞೆಗಳನ್ನಿರಿಸಿರುತ್ತಾನೆಂದು ತಿಳಿದುಕೊಳ್ಳಬೇಕು. ದೇವರ ಸಹಾಯದ ಅವಶ್ಯಕತೆಯು ನಮಗಿದೆ ಎಂಬುದೇ ಇವುಗಳಲ್ಲಿ ವೊದಲನೆಯದಾಗಿದೆ. ಆತನು ಈ ರೀತಿಯಾಗಿ ವಾಗ್ದಾನ ಮಾಡಿದ್ದಾನೆ - “ಬತ್ತಿದ ಭೂಮಿಯಲ್ಲಿ ನೀರನ್ನು ಸುರಿಸಿ ಒಣನೆಲದಲ್ಲಿ ಕಾಲುವೆ ಹರಿಸುವೆನು.” ಯಾರು ನೀತಿಗೆ ಹಸಿದು ಬಾಯಾರಿರುತ್ತಾರೋ, ದೇವರನ್ನು ಯಾರು ಆಶಿಸುತ್ತಾರೆಯೋ ಅಂಥವರು ತಮಗೆ ತೃಪ್ತಿಯಾಗುವುದೆಂದು ಭರವಸೆಯುಳ್ಳ ವರಾಗಿರಬಹುದು; ಹೃದಯವು ಪವಿತ್ರಾತ್ಮನಿಗೆ ತೆರೆದಿರಬೇಕು; ಇಲ್ಲದಿದ್ದರೆ ದೇವರ ಆಶೀರ್ವಾದವು ದೊರೆಯಲಾರದು.LI 85.2

    ನಮ್ಮ ಅವಶ್ಯಕತೆಯೇ ಒಂದು ಪ್ರಬಲ ಕಾರಣ; ಇದು ನಮಗಾಗಿ ವಾಕ್ಚಾತುರ್ಯದಿಂದ ವಾದಿಸುವುದು. ಇವುಗಳನ್ನು ನಮಗೆ ಅನುಗ್ರಹಿಸಿಕೊಡಬೇಕೆಂದು ನಾವು ದೇವರನ್ನು ಬೇಡಿಕೊಳ್ಳಬೇಕು. ಆತನು ಹೀಗೆ ಹೇಳುತ್ತಾನೆ - “ಬೇಡಿಕೊಳ್ಳಿರಿ ಆಗ ನಿಮಗೆ ಅದು ದೊರೆಯುವುದು.” ಮತ್ತು “ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ. ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದಿರುವನೇ”LI 85.3

    ನಾವು ಕೆಟ್ಟತನವನ್ನು ಪ್ರೀತಿಸಿ, ಯಾವುದಾದರೊಂದು ಪಾಪಕ್ಕೆ ಬಿಡದೆಯೇ ಅಂಟಿಕೊಂಡಿರುವುದಾದರೆ ಕರ್ತನು ನಮ್ಮ ಪ್ರಾರ್ಥನೆಯನ್ನು ಕೇಳುವುದಿಲ್ಲ; ಆದರೆ ಪಶ್ಚಾತ್ತಾಪದ ಮನದಿಂದಲೂ, ಜಜ್ಜಿದ ಹೃದಯದಿಂದಲೂ ಆತನನ್ನು ಬೇಡಿಕೊಳ್ಳುವುದಾದರೆ ಆತನು ನಮ್ಮ ಪ್ರಾರ್ಥನೆಗಳನ್ನು ಕೇಳಿಯೇ ಕೇಳುತ್ತಾನೆ. ನಾವು ನಮ್ಮ ಅಕ್ರಮಗಳನ್ನು ಸರಿಪಡಿಸಿಕೊಂಡನಂತರ ದೇವರು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನೆಂದು ನಂಬಬೇಕು. ನಮ್ಮ ಸ್ವಪುಣ್ಯಗಳು ದೇವರಿಂದ ಕರುಣೆ ತೋರಿಸುತ್ತವೆಂದು ನಾವು ಹೇಳಬಾರದು. ಕ್ರಿಸ್ತನ ಯೋಗ್ಯತೆಯು ನಮ್ಮನ್ನು ರಕ್ಷಿಸುತ್ತದೆ. ಆತನ ರಕ್ತವು ನಮ್ಮನ್ನು ಶುದ್ಧ ಮಾಡುತ್ತದೆ. ಹೀಗಿದ್ದರೂ ಸ್ವೀಕಾರದ ಆಜ್ಞೆಗಳನ್ನು ನಾವು ಪಾಲಿಸಬೇಕು.LI 86.1

    ನಂಬಿಕೆಯು ಪ್ರಾರ್ಥನೆಯಲ್ಲಿ ಪ್ರಾಮುಖ್ಯವಾದ ಅಂಶವಾಗಿದೆ. “ದೇವರ ಬಳಿಗೆ ಬರುವವನು ದೇವರು ಇದ್ದಾನೆ ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವುದು ಅವಶ್ಯ.” ಸ್ವಾಮಿಯು ಹೀಗೆ ಹೇಳಿದ್ದಾನೆ - “ಆದಕಾರಣ ನೀವು ಪ್ರಾರ್ಥನೆಯಲ್ಲಿ ಏನೇನು ದೇವರಿಂದ ಕೇಳಿಕೊಳ್ಳುವಿರೋ ಅದನ್ನು ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವುದೆಂದ ನಿಮಗೆ ಹೇಳುತ್ತೇನೆ.”. ಆತನು ಹೇಳಿದಂತೆ ನಾವು ನಂಬುತ್ತೇವೋ? ನಮಗೆ ಅನುಗ್ರಹಿಸಲ್ಪಟ್ಟಿರುವ ಭರವಸೆಯು ವಿಶಾಲವಾದದ್ದಾಗಿಯೂ ಪರಿಮಿತಿಯಿಲ್ಲದ್ದಾಗಿಯೂ ಇರುತ್ತದೆ; ಮತ್ತು ವಾಗ್ದಾನ ಮಾಡಿದಾತನು ನಂಬಿಗಸ್ತನು; ನಾವು ಬೇಡಿಕೊಂಡ ಆಶೀರ್ವಾದಗಳು ನಮಗೆ ದೊರಕದಿದ್ದರೂ ದೇವರು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನೆಂದು ಮತ್ತು ನಮಗೆ ಉತ್ತರ ಕೊಡುತ್ತಾನೆಂದೂ ನಂಬಬೇಕು. ನಾವು ತಪ್ಪು ಮಾಡುವವರೂ, ದೂರದೃಷ್ಟಿಯಲ್ಲದವರೂ ಆಗಿರುವುದರಿಂದ ನಮಗೆ ಆಶೀರ್ವಾದ ಪರಿಣಮಿಸಿದ ವರಗಳನ್ನು ಕೇಳಿಕೊಳ್ಳುವುದುಂಟು. ಪ್ರೀತಿಸ್ವರೂಪನಾದ ದೇವರು ಅತ್ಯುತ್ತಮವಾದ ವರಗಳನ್ನು ನಮಗೆ ಕೊಡುವುದರ ಮೂಲಕ ನಮ್ಮ ಪ್ರಾರ್ಥನೆಗೆ ಉತ್ತರವನ್ನು ಕೊಡುತ್ತಾನೆ. ನಮ್ಮ ಹೃದಯಕ್ಕೆ ದೈವಬೆಳಕು ದೊರೆತು ಸಂಗತಿಗಳನ್ನು ಅವುಗಳ ನಿಜಸ್ವರೂಪದಲ್ಲಿ ಗ್ರಹಿಸುವವರಾ ಗಿದ್ದರೆ ಉತ್ತಮವಾದವುಗಳನ್ನೇ ಕೇಳಿಕೊಳ್ಳುತ್ತಿದ್ದೇವು. ನಮ್ಮ ಪ್ರಾರ್ಥನೆಗೆ ಉತ್ತರವು ಕೊರಕದಿರುವಂತೆ ಕಂಡುಬಂದರೂ, ನಾವು ಆತನ ವಾಗ್ದಾನದ ಮೇಲೆ ಆತುಕೊಂಡಿರಬೇಕು. ಯಾಕಂದರೆ ನಮಗೆ ಅವಶ್ಯಕವಾದ ಆಶೀರ್ವಾದವು ಸಿಕ್ಕಿಯೇ ಸಿಕ್ಕುತ್ತದೆ. ಆದರೆ ನಾವು ಕೇಳುವ ರೀತಿಯಲ್ಲೇ ದೇವರು ನಮ್ಮ ಪ್ರಾರ್ಥನೆಯನ್ನು ಕೇಳುವನೆಂದೂ, ನಾವು ಕೇಳಿದ ವಸ್ತುಗಳನ್ನೇ ಕೊಡುತ್ತಾನೆಂದೂ ಭಾವಿಸುವುದಾದರೆ ಅದು ಅಹಂಕಾರವಾಗಿ ಪರಿಣಮಿಸುವುದು. ದೇವರು ಅಪರಾಧವನ್ನು ಮಾಡದಾತನು ಜ್ಞಾನಿಯೂ ನೀತಿಪರನೂ ಆಗಿರುವುದರಿಂದ ಆಶೀರ್ವಾದವನ್ನು ಕೊಡಲು ಹಿಂಜರಿಯುವವನಲ್ಲ; ಆದುದರಿಂದ ನಮಗೆ ಉತ್ತರ ಬಾರದಿದ್ದರೂ ನಮ್ಮ ನಂಬಿಕೆಯನ್ನು ಕಳೆದುಕೊಳ್ಳಬಾರದು. “ಬೇಡಿಕೊಳ್ಳಿರಿ ನಿಮಗೆ ದೊರಕುವುದು” ಎಂಬ ಆತನ ವಾಗ್ದಾನವನ್ನು ನಂಬಬೇಕು.LI 86.2

    ನಂಬಿಕೆಯು ನಮಗಿಲ್ಲದಿರುವಾಗ ಸಂಶಯ ಮತ್ತು ಭಯಗಳೊಡನೆ ನಾವು ಅಲೋಚನೆ ಮಾಡಿದರೆ ಅಥವಾ ಸ್ಪÀ್ಟವಾಗಿ ಕಾಣದಿರುವ ಸಂಗತಿಗಳನ್ನು ಬಿಚ್ಚಿ ಹೇಳಲು ಪ್ರಯತ್ತಿಸಿದರೆ, ನಮ್ಮ ಕಳವಳಗಳು ಇನ್ನೂ ಅಧಿಕವಾಗಿ ದೊಡ್ಡವುಗಳಾಗುತ್ತವೆ; ಆದರೆ ನಾವು ಸಹಾಯಶೂನ್ಯರೆಂದೂ, ಆಶ್ರಿತರೆಂದೂ ಹೇಳಿ ದೇವರ ಬಳಿಗೆ ಬಂದು ನಮ್ಮ ನಿಜಸ್ಥಿತಿಯನ್ನು ಆತನಿಗೆ ತಿಳಿಸಿದರೆ, ಜ್ಞಾನನಿಧಿಯೂ, ಸರ್ವವನ್ನೂ ನೋಡುವವನೂ, ಸರ್ವಜಗತ್ತನ್ನೂ ತನ್ನ ಮಾತಿನಿಂದಲೇ ಆಳುವವನಾದ ದೇವರು ನಮ್ಮ ವೊರೆಯನ್ನು ಕೇಳಿ ತನ್ನ ಬೆಳಕನ್ನು ನಮ್ಮಲ್ಲಿ ಪ್ರಕಾಶಿಸುವಂತೆ ಮಾಡಿ ನಮ್ಮ ಮೂಲಕ ತನ್ನ ಬೆಳಕನ್ನು ಬೀರುವವನಾಗಿರುತ್ತಾನೆ. ನಿಜವಾದ ಪ್ರಾರ್ಥನೆಯ ಮೂಲಕ ಆತನೊಡನೆ ಸಂಬಂಧವನ್ನು ಇಟ್ಟುಕೊಳ್ಳಬಹುದು. ರಕ್ಷಕನು ನಮ್ಮ ಮೇಲೆ ಸಾಕಾದÀ್ಟು ಕರುಣೆ, ಪ್ರೀತಿ, ದಯೆಯನ್ನು ತೋರಿಸುತ್ತಾನೆಂಬುದಕ್ಕೆ ನಮಗೆ ಸಾಕಾದÀ್ಟು ನಿದರ್ಶನಗಳು ದೊರೆಯದಿದ್ದರೂ ಆತನು ಖಂಡಿತವಾಗಿಯೂ ನಮಗೆ ತನ್ನ ಪ್ರೀತಿಯನ್ನು ತೋರಿಸುತ್ತಾನೆಂಬುದನ್ನು ನಂಬುವವರಾಗೋಣ. ನಾವು ಆತನನ್ನು ಸ್ಪರ್Éೀಂದ್ರಿಯದಿಂದ ತಿಳಿದುಕೊಳ್ಳಲಾಗದಿದ್ದರೂ, ಪ್ರೀತಿ ಮತ್ತು ಕರುಣೆಯ ಆತನ ಹಸ್ತವು ನಮ್ಮ ಮೇಲೆ ಇದ್ದೇ ಇರುವುದು. ದೇವರ ಕರುಣೆ ಮತ್ತು ಆಶೀರ್ವಾದಗಳಿಗಾಗಿ ನಾವು ಆತನಿಗೆ ಪ್ರಾರ್ಥಿಸುವಾಗ ನಮ್ಮ ಹೃದಯಗಳಲ್ಲಿ ಆತನ ಗುಣಗಳನ್ನಿಟ್ಟುಕೊಂಡಿರಬೇಕು. “ನಾವು ತಪ್ಪು ಮಾಡಿದರನ್ನು ಕ್ಷಮಿಸುವಂತೆ ನಮ್ಮ ತಪ್ಪುಗಳನ್ನು ಕ್ಷಮಿಸು” ಎಂಬ ಕ್ಷಮಾಗುಣವು ನಮ್ಮ ಹೃದಯಗಳಲ್ಲಿಲ್ಲದೆ, ನಾವು ಪ್ರಾರ್ಥಿಸಬಹುದೇ?LI 87.1

    ನಮ್ಮ ಪ್ರಾರ್ಥನೆಯನ್ನು ದೇವರು ಕೇಳಬೇಕಾದರೆ ನಾವು ಎÀ್ಟರಮಟ್ಟಿಗೆ ಹೊಂದಿರುತ್ತೇವೋ ಅÀ್ಟರಮಟ್ಟಿಗೆ ನಾವೂ ಇತರರ ತಪ್ಪುಗಳನ್ನು ಕ್ಷಮಿಸುವವರಾಗಿರಬೇಕು. ಮತ್ತು ಬಿಡದೆ ಸ್ಥಿರಮನಸ್ಸಿನಿಂದ ದೇವರನ್ನು ಪ್ರಾರ್ಥಿಸುವುದು ಪ್ರಾರ್ಥನೆಯ ಮತ್ತೊಂದು ವಿಶೇÀ ಲಕ್ಷಣವಾಗಿದೆಯೆಂದು ನಾವು ಅರಿತು ಕೊಳ್ಳಬೇಕು. ಅಲ್ಲದೆ ನಾವು ನಂಬಿಕೆಯಲ್ಲೂ ಅನುಭವದಲ್ಲೂ ಬೆಳೆಯಬೇಕಾಗಿದೆ. ನಾವು ಬೇಸರಿಕೆ ಪಟ್ಟುಕೊಳ್ಳದೆ ಪ್ರಾರ್ಥನೆಯನ್ನು ಮಾಡಬೇಕು. “ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿರಬೇಕು.” ನಂಬಿಗಸ್ತರಿಗೆ ಪೇತ್ರನು ಹೀಗೆ ಬೋಧಿಸುತ್ತಾನೆ. “ಯಾವ ಸಂಬಂಧವಾಗಿಯೂ ಪ್ರಾರ್ಥನೆಗೆ ಸಿದ್ಧವಾಗಿರ್ರಿ.” ಪೌಲನು ಹೀಗೆ ಹೇಳುತ್ತಾನೆ. “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿÀಯದಲ್ಲಿ ದೇವರ ಮುಂದೆ ಕೃತಜ್ಞತಾ ಸುತ್ತಿಗಳನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ.” ಯೂದನು ಹೀಗೆ ಹೇಳುತ್ತಾನೆ. “ಪವಿತ್ರಾತ್ಮ ಪ್ರೇರಿತರಾಗಿ ಪ್ರಾರ್ಥನೆ ಮಾಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.” ಸದಾ ಪ್ರಾರ್ಥನೆ ಮಾಡುವುದರಿಂದ ನಾವೂ ಸದಾ ದೇವರೊಂದಿಗೆ ಅನ್ಯೋನ್ಯತೆಯಿಂದಿರಬಹುದು. ಹೀಗಿದ್ದರೆ ದೇವರ ಜೀವವು ನಮ್ಮಲ್ಲಿ ಹರಿಯುತ್ತದೆ. ಮತ್ತು ನಮ್ಮಿಂದ ನೀತಿ, ಪರಿಶುದ್ಧತೆಗಳು ದೇವರ ಬಳಿಗೆ ಹರಿಯುವವು. ನಾವು ಪ್ರಾರ್ಥನೆ ಮಾಡುವುದರಲ್ಲಿ ಚುರುಕಾಗಿರಬೇಕು. ಪ್ರಾರ್ಥನೆಗೆ ಯಾವುದೂ ಅಡ್ಡಿಯಾಗಿರಬಾರದು. ಯೇಸುಕ್ರಿಸ್ತನಿಗೂ ನಿನ್ನಾತ್ಮನಿಗೂ ನಿಕಟಬಾಂಧವ್ಯವೂ, ಐಕ್ಯತೆಯೂ ಇರುವಂತೆ ಸರ್ವಪ್ರಯತ್ನಗಳನ್ನೂ ಮಾಡು. ಪ್ರಾರ್ಥನೆ ನಡೆಯುವ ಸ್ಥಳಗಳಿಗೆಲ್ಲಾ ಹೋಗು; ದೇವರ ಸಂಗಡ ಸಂಭಾÀಣೆ ಮಾಡಬೇಕೆಂದಿರುವವರು ಪ್ರಾರ್ಥನಾಸ್ಥಳಗಳಿಗೆ ತಪ್ಪದೇ ಹೋಗಿ ತಮ್ಮ ಕರ್ತವ್ಯವನ್ನು ಮಾಡಿ ತಮಗೆ ದೊರಕುವ ಎಲ್ಲಾ ಆಶೀರ್ವಾದಗಳನ್ನೂ ಪಡೆಯಲು ಕಾತುರರಾಗಿರುವರು. ತಾವು ಸ್ವರ್ಗದಿಂದ ಬೆಳಕನ್ನು ಪಡೆಯಬಹುದಾದ ಪ್ರತಿಯೊಂದು ಸಮಯವನ್ನೂ ನಿರರ್ಥಕ ಮಾಡಿಕೊಳ್ಳದೆ ಅದನ್ನು ಊರ್ಜಿತ ಮಾಡಿಕೊಳ್ಳುವದು ಅತ್ಯವಶ್ಯಕವಾದುದಾಗಿದೆ.LI 88.1

    ನಾವು ಕುಟುಂಬ ಪ್ರಾರ್ಥನೆಯನ್ನು ಮಾಡಬೇಕು. ಪ್ರಾಮುಖ್ಯವಾಗಿ ಅಂತರಂಗ ಪ್ರಾರ್ಥನೆಯಲ್ಲಿ ನಿರತರಾಗಿರಬೇಕು; ಯಾಕಂದರೆ ಪ್ರಾರ್ಥನೆಯೇ ಆತ್ಮೀಯ ಜೀವನವಾಗಿದೆ. ಪ್ರಾರ್ಥನೆಯನ್ನು ಅಲಕ್ಷ್ಯ ಮಾಡುವುದೆಂದರೆ ಆತ್ಮನನ್ನೇ ಅಲಕ್ಷ್ಯ ಮಾಡಿದಂತಾಗುವುದು. ಕುಟುಂಬ ಪ್ರಾರ್ಥನೆ ಅಥವಾ ಸಾಮೂಹಿಕ ಪ್ರಾರ್ಥನೆ ಮಾಡುವುದು ಮಾತ್ರ ಸಾಲದು. ಆತ್ಮನು ಏಕಾಂತದಲ್ಲಿ ಪರಿಶೋಧಿಸುವ ದೇವರ ಎದುರಿಗೆ ಎದ್ದುನಿಲ್ಲಬೇಕು. ಅಂತರಂಗ ಪ್ರಾರ್ಥನೆಯು ದೇವರೊಬ್ಬನಿಗೇ ಕೇಳಿಬರಬೇಕು. ಬೇರೆಯವರಾರೂ ಅದನ್ನು ಕೇಳಬಾರದು. ಸುತ್ತಮುತ್ತಣ ಸನ್ನಿವೇಶಗಳಿಂದಲೂ ಉದ್ವೇಗಗಳಿಂದಲೂ ಆತ್ಮನು ಗುಪ್ತಪ್ರಾರ್ಥನೆಯಲ್ಲಿ ನಿರತವಾಗಿರುತ್ತದೆ. ಶಾಂತಿಯಿಂದಲೂ ಆಸಕ್ತಿಯಿಂದಲೂ ಆತ್ಮವು ದೇವರನ್ನು ಬೇಡುತ್ತದೆ. ಅಂತರಂಗವನ್ನು ನೋಡುವವನೂ, ಹೃದಯದಿಂದ ಹೊರಡುವ ಪ್ರಾರ್ಥನೆಯನ್ನು ಕೇಳುವವನೂ ಆದ ದೇವರಿಂದ ದೊರಕುವ ಸಹವಾಸವು ಮನೋಹರವಾಗಿಯೂ ಸರ್ವದಾ ಇರುವುದಾಗಿಯೂ ಇರುತ್ತದೆ. ಆತ್ಮನು ಶಾಂತತೆಯಿಂದಲೂ ನಂಬಿಕೆಯಿಂದಲೂ ದೇವರ ಸಂಗಡ ಸಂಭಾಷಿಸಿ ಸೈತಾನನೊಡನೆ ಹೋರಾಟ ನಡಿಸಲು ಬಲಶಾಲೆಯಾಗುವಂತೆ ದೈವಬೆಳಕಿನ ಕಿರಣವನ್ನು ಸೇರಿಸಿಕೊಳ್ಳುತ್ತಾ ಇರುತ್ತದೆ. ದೇವರು ನಮ್ಮ ಶಕ್ತಿಯ ಕೋಟೆಯಾಗಿದ್ದಾನೆ.LI 89.1

    ನಿನ್ನ ಅಂತರಂಗದ ಕೊಠಡಿಯಲ್ಲೂ ಅನುದಿನ ಕಾರ್ಯಗಳಿಗೆ ಹೋಗುವಾಗಲೂ ದೇವರಿಗೆ ಪ್ರಾರ್ಥಿಸು. ಹನೋಕನು ಈ ರೀತಿಯಲಿದೇವರ ಸಹವಾಸದಲ್ಲಿದ್ದನು. ಈ ರೀತಿಯಾದ ಅಂತರಂಗ ಪ್ರಾರ್ಥನೆಗಳು ಸುವಾಸನೆಯಾದ ಧೂಪದಂತೆ ದೇವರ ಕೃಪಾಸನದ ಬಳಿಗೆ ಏರುತ್ತವೆ. ಯಾವಾತನ ಮನಸ್ಸು ದೇವರಲ್ಲಿರುತ್ತದೋ ಆತನನ್ನು ಸೈತಾನನು ಜಯಿಸಲಾರನು. ದೇವರಿಗೆ ಯಾವ ಕಾಲದಲ್ಲಾಗಲಿ ಯಾವ ಸ್ಥಳದಲ್ಲಾಗಲಿ ಪ್ರಾರ್ಥನೆಯನ್ನು ಮಾಡಬಹುದು. ಆಸಕ್ತಿಯಿಂದ ಪ್ರಾರ್ಥನೆ ಮಾಡಲು ಯಾವುದು ಅಡ್ಡಿಯಾಗಿಲ್ಲ. ಬೀದಿಯ ಜನರ ಗುಂಪಿನಲ್ಲಾಗಲಿ ಕೆಲಸಕಾರ್ಯಗಳ ನಡುವೆಯಾಗಲಿ ನೆಹೆಮೀಯನು ಅಹÉ್ವರೋÀ ಅರಸನಿಗೆ ಪ್ರಾರ್ಥನೆ ಮಾಡಿದಂತೆ ದೇವರಿಗೆ ಪ್ರಾರ್ಥನೆ ಮಾಡ ಆತನ ನಡೆಯಿಸುವಿಕೆಗಾಗಿ ಕೇಳಿಕೊಳ್ಳಬಹುದು. ನಾವು ಎಲ್ಲದ್ದರೂ ದೇವರ ಸಂಗಡ ಸಂಭಾಷಿಸಬಹುದು. ನಾವು ಹೃದಯಗಳನ್ನು ಸದಾ ತೆರೆದಿರಬೇಕು. ನಮ್ಮ ಆತ್ಮಗಳಲ್ಲಿ ಕ್ರಿಸ್ತನು ಬಂದು ಸ್ವರ್ಗಾಧಿಪತಿಯಂತೆ ನೆಲೆಸಲು ಅಹ್ವಾನಿಸಬೇಕು. ಅಶುದ್ಧವಾದ ಊಹೆಗಳಿಗೂ ಯೋಚನೆಗಳಿಗೂ ನಮ್ಮ ಮನೋದ್ವಾರವನ್ನು ಮುಚ್ಚಿ, ಸಹಜವಾದ ಪ್ರಾರ್ಥನೆಯ ಮೂಲಕ ಆತ್ಮವನ್ನು ದೈವಸಮ್ಮುಖಕ್ಕೆ ಎತ್ತಬಹುದು. ಯಾರ ಹೃದಯಗಳು ಭೂಲೋಕದ ಹವಕ್ಕಿಂತಲೂ ಉತ್ತಮವಾದ ಸ್ವರ್ಗೀಯ ಹವಾದಲ್ಲಿ ನಡೆಯುವರು; ಮತ್ತು ಇವರು ಸದಾ ದೇವರ ಐಕ್ಯತೆಯಲ್ಲೂ ಸಹವಾಸದಲ್ಲೂ ಇರುವರು.LI 89.2

    ಯೇಸುಸ್ವಾಮಿಯ ವಿಚಾರದಲ್ಲಿ ನಾವು ಸ್ಪÀ್ಟವಾದ ಅಭಿಪ್ರಾಯಗಳನ್ನು ಹೊಂದಿ ನಿರಂತರ ವಾಗಿರುವ ಸತ್ಯಾಂಶಗಳ ವಿಚಾರ ಹೆಚ್ಚಾದ ತಿಳುವಳಿಕೆಯನ್ನು ಹೊಂದಿಕೊಳ್ಳಬೇಕು. ಪರಿಶುದ್ಧವಾದ ಸೌಂದರ್ಯವು ದೇವರ ಮಕ್ಕಳ ಹೃದಯಗಳನ್ನು ತುಂಬಿಕೊಳ್ಳಬೇಕು. ಇದನ್ನು ಸಾಧಿಸಲೂಬಹುದು, ದೈವಿಕ ವಿಚಾರಗಳನ್ನು ನಮಗೆ ಪ್ರಕಟಿಸುವಂತೆ ದೇವರನ್ನು ಪ್ರಾರ್ಥಿಸಬೇಕು. ಸ್ವರ್ಗದ ಹವವನ್ನು ನಾವು ಉಸಿರಾಡಲು ದೇವರು ನಮಗೆ ಅನುಗ್ರಹಿಸಲೆಂದು ನಮ್ಮ ಆತ್ಮಗಳನ್ನು ಭೂಲೋಕದ ಕಡೆಯಿಂದ ಮೇಲ್ಲೋಕದ ಕಡೆಗೆ ಎಳೆಯುವಂತಾಗಬೇಕು. ಪುÀ್ಪವು ಸೂರ್ಯನ ಕಡೆಗೆ ತಿರುಗಿಕೊಳ್ಳುವಂತೆ ಆಕಸ್ಮಿಕವಾಗಿ ಸಂಭವಿಸುವ ಶೋಧನೆ, ತೊಂದರೆಗಳಿಂದ ನಾವು ಸಹಾಯಕ್ಕಾಗಿ ದೇವರ ಕಡೆಗೆ ತಿರುಗಿಕೊಳ್ಳಬೇಕು. ನಿನಗೆ ಸಂಭವಿಸುವ ಕೊರತೆ, ಸಂತೋÀ, ವ್ಯಸನ, ಚಿಂತೆ ಮತ್ತು ಭಯಗಳೆಲ್ಲವನ್ನೂ ದೇವರ ಎದುರಿಗಿಡು. ನಿನ್ನಿಂದ ಆತನಿಗೆ ಹೊರೆಯಾಗಲಾರದು. ನೀನು ಆತನನ್ನು ದಣಿಸಲಾರೆ. ನಮ್ಮ ತಲೇಕೂದಲುಗಳನ್ನು ಲೆಕ್ಕಿಸಬಲ್ಲಾತನು ತನ್ನ ಮಕ್ಕಳ ಕೊರತೆಗಳ ವಿಚಾರ ಉದಾಸೀನನಾಗಿರಲಾರನÉ್ಟ? “ದೇವರು ಕರುಣಾಸಾಗರನೂ ದಯಾಳುವೂ ಆಗಿದ್ದಾನೆ.” ನಮ್ಮ ಚಿಂತೆ ವ್ಯಸನಗಳನ್ನು ನೋಡುವುದರ ಮೂಲಕವೂ, ಕೇಳುವುದರ ಮೂಲಕವೂ ದೇವರು ಮರಗುತ್ತಾನೆ. ನಿನ್ನ ಗಲಿಬಿಲಿಗಳನ್ನು ಆತನೆದುರಿಗಿಡು. ಆತನು ಹೊರಲಾರದÀ್ಟು ದೊಡ್ಡದು ಯಾವುದೂ ಇಲ್ಲ; ಯಾಕಂದರೆ ಆತನು ಸರ್ವಲೋಕಗಳಿಗೆ ಆಧಾರನಾಗಿ ಅವುಗಳನ್ನು ಆಳುತ್ತಾನೆ. ನಮ್ಮ ಶಾಂತಿಗೆ ಸಂಬಂಧಪಟ್ಟ ಸರ್ವ ಯೋಚನೆಗಳಿಗೆ ಅವು ಎÀ್ಟು ಕÀ್ಟವಾಗಿದ್ದರೂ ಅವನ್ನು ಗಮನಿಸುತ್ತಾನೆ. ಆತನಿಗೆ ನಮ್ಮ ಅನುಭವಗಳೆಲ್ಲವೂ ಚೆನ್ನಾಗಿ ಗೊತ್ತಾಗಿರುತ್ತವೆ. ನಮ್ಮ ಗಲಿಬಿಲಿಗಳನ್ನೆಲ್ಲಾ ಆತನು ಬಲ್ಲವನಾಗಿ ಇವುಗಳನ್ನು ಪರಿಹರಿಸುತ್ತಾನೆ. ಆತನ ಮಕ್ಕಳಲ್ಲಿ ಕೇವಲ ಅಲ್ಪರಾದವರಿಗೂ ಅವತ್ತು ಬರಲಾರದು. ಯಾವ ಚಿಂತೆಯಾದರೂ ಅವರ ಆತ್ಮಗಳನ್ನು ತೊಂದರೆ ಪಡಿಸದು. ಆತನು ಅವರ ಸಂತೋÀ, ಪ್ರಾರ್ಥನೆಗಳನ್ನು ಗಮನಿಸದೇ ಇರಲಾರನು. “ಮುರಿದ ಮನಸ್ಸುಳ್ಳವರನ್ನು ವಾಸಿ ಮಾಡುತ್ತಾನೆ, ಅವರ ಗಾಯಗಳನ್ನು ಕಟ್ಟುತ್ತಾನೆ.” ದೇವರಿಗೂ ಪ್ರತಿ ಆತ್ಮನಿಗೂ ಇರುವ ಸಂಬಂಧವು ಅವರು ಭಿನ್ನಭಿನ್ನರಾಗಿರದೆ ಒಂದೇ ಆಗಿದ್ದಾರೆನ್ನುವÀ್ಟರ ಮಟ್ಟಿಗೆ ಸ್ಪÀ್ಟವಾಗಿದೆ; ಆ ಆತ್ಮಗಳನ್ನು ರಕ್ಷಿಸಲು ದೇವರು ತನ್ನ ಪ್ರಿಯ ಕುಮಾರನನ್ನು ಕೊಟ್ಟನು.LI 90.1

    ಕ್ರಿಸ್ತನು ಹೀಗೆ ತಿಳಿಸುತ್ತಾನೆ - “ಆ ದಿನದಲ್ಲಿ ನನ್ನ ಹೆಸರಿನ ಮೇಲೆ ಬೇಡಿಕೊಳ್ಳುವಿರಿ. ನಾನು ತಂದೆಯನ್ನು ನಿಮಗೋಸ್ಕರ ಕೇಳಿಕೊಳ್ಳುವೆನೆಂತ ನಿಮಗೆ ಹೇಳುವುದಿಲ್ಲ. ........................ ತಂದೆಯು ತಾನೇ ನಿಮ್ಮ ಮೇಲೆ ಮಮತೆ ಇಡುತ್ತಾನಲ್ಲವೇ?” ಮತ್ತು “ನೀವು ನನ್ನನ್ನು ಆರಿಸಿ ತೆಗೆದುಕೊಂಡಿಲ್ಲ, ನಾನು ನಿಮ್ಮನ್ನು ಆರಿಸಿ ತೆಗೆದುಕೊಂಡಿದ್ದೇನೆ ..........................ಹೀಗಿರಲಾಗಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ ಅದನ್ನು ಆತನು ನಿಮಗೆ ಕೊಡುವನು.” ಆದರೆ ಕ್ರಿಸ್ತನ ಹೆಸರಿನಲ್ಲಿ ಪ್ರಾರ್ಥಿಸುವುದೆಂದರೆ ಆತನ ಹೆಸರನ್ನು ಪ್ರಾರ್ಥನೆಯ ಆದಿಯಲ್ಲೂ ಅಂತ್ಯದಲ್ಲೂ ಹೇಳಿಬಿಡುವುದೆಂದು ಅರ್ಥವಲ್ಲ. ಕ್ರಿಸ್ತನಲ್ಲಿದ್ದ ಮನಸ್ಸು ಮತ್ತು ಆತ್ಮ ಇದರಿಂದಲೇ ಪ್ರಾರ್ಥಿಸುವದೆಂದು ಅರ್ಥ. ಆತನ ವಾಗ್ದಾನವನ್ನು ನಂಬುವವರಾದ ನಾವು ಆತನ ಕೃಪೆಯಲ್ಲೂ ಕಾರ್ಯದಲ್ಲೂ ನಂಬಿಕೆಯನ್ನಿಡಬೇಕು.LI 91.1

    ಆತನನ್ನು ಪ್ರಾರ್ಥಿಸಲು ಸರ್ವಪರಿತ್ಯಾಗ ಮಾಡಿ ಕಾಡಿಗೆ ಹೋಗಿ ಸನ್ಯಾಸಿಗಳಂತಿರಬೇಕೆಂಬುದು ದೇವರ ಇÀ್ಟವಾಗಿಲ್ಲ; ಆತನ ಜನರ ನಡುವೆ ಇದ್ದುಕೊಂಡು ಕ್ರಿಸ್ತನು ತೋರಿಸಿಕೊಟ್ಟ ಆ ಬಾಳಿನಲ್ಲಿ ನಾವಿರಬೇಕೆಂಬುದು ದೇವರ ಉದ್ದೇಶವಾಗಿದೆ. ಯೇಸುಸ್ವಾಮಿಯ ಜೀವನದಂತೆ ನಮ್ಮ ಜೀವನವಿರಬೇಕು. ಕ್ರಿಯೆಗಳನ್ನು ಮಾಡದೆ ನಾವು ಮಾಡುವ ಪ್ರಾರ್ಥನೆಯು ಸತ್ತದ್ದಾಗಿರಿವುದು. ಸಂಘದ ಆಶ್ರಯದಲ್ಲಿ ಮನುÀ್ಯರು ಕೆಲಸ ಮಾಡುವುದನ್ನು ಬಿಟ್ಟರೆ, ಕ್ರೈಸ್ತರ ಕರ್ತವ್ಯವನ್ನು ಮಾಡದೆ ಹೋದರೆ, ನಮಗೋಸ್ಕರ ಆಸಕ್ತಿಯಿಂದ ದುಡಿದ ಕ್ರಿಸ್ತನ ಶಿಲುಬೆಯನ್ನು ಹೊರುವುದನ್ನು ನಿರಾಕರಿಸಿದರೆ ಆಗ ಮನುÀ್ಯನು ಏನು ಪ್ರಾರ್ಥನೆ ಮಾಡಬೇಕೆಂಬುದನ್ನೇ ಮರೆತು ಭಕ್ತಿಗೆ ಬೇಕಾದ ಪ್ರೇರಣೆಯನ್ನು ಕಳೆದುಕೊಳ್ಳುತ್ತಾನೆ. ಆಗ ಆ ಪ್ರಾರ್ಥನೆಗಳು ಅವರವರ ಸ್ವಂತ ವಿಚಾರಕ್ಕೆ ಸೇರಿದವುಗಳಾಗಿಯೂ ಸ್ವಾರ್ಥತೆಯಿಂದ ಕೂಡಿದವುಗಳಾಗಿಯೂ ಆಗುತ್ತವೆ. ಅವರು ಮಾನವ ವರ್ಗಕ್ಕೆ ಬೇಕಾದ ಅನುಕೂಲಗಳಿಗಾಗಿಯೂ ಕ್ರಿಸ್ತನ ರಾಜ್ಯದ ಹರಡುವಿಕೆಗಾಗಿಯೂ ಬೇಡಲಾರದವರಾಗುವರು ಮತ್ತು ಕ್ರೈಸ್ತಧರ್ಮದ ಕೆಲಸಕ್ಕಾಗಿ ಶಕ್ತಿ ಬೇಕೆಂದು ಇವರು ದೇವರ ಸಂಗಡ ಹೋರಾಡಲಾರರು. ದೇವರ ಸೇವೆಯ ಕಾರ್ಯದಲ್ಲಿ ಒಬ್ಬರಿಗೊಬ್ಬರು ಸಹಾಯಕರಾಗಿದ್ದು ಪ್ರಾರ್ಥನೆಯಲ್ಲಿ ತಮ್ಮ ಸಮಯವನ್ನು ಕಳೆಯಲು ಅಲಕ್ಷ ಮಾಡುವುದರಿಂದ ಒಂದು ದೊಡ್ಡ ನÀ್ಟವನ್ನೇ ಹೊಂದುತ್ತಾರೆ. ಇದರಿಂದ ದೈವವಾಕ್ಯದ ಸತ್ಯಾಂಶದ ಜಾಗೃತಿ ಮತ್ತು ಪ್ರಾಮುಖ್ಯತೆಗಳು ನಮ್ಮ ಮನಸ್ಸಿನಿಂದ ಕಾಣದೆ ಹೋಗುತ್ತವೆ. ನಮ್ಮ ಹೃದಯಗಳು ಬೆಳಕನ್ನೂ ಪವಿತ್ರಾತ್ಮನ ಶಕ್ತಿಯನ್ನೂ ಕಳಕೊಂಡು ಆತ್ಮೀಯ ಜೀವನವು ಕ್ಷಯಿಸುತ್ತದೆ. ಕ್ರೈಸ್ತ ಸಹವಾಸದಲ್ಲಿ ನಾವು ಇತರರಿಗೆ ತೋರಿಸಬೇಕಾದ ದಯೆಯು ಕಮ್ಮಿಯಾಗುತ್ತದೆ. ಯಾವನು ತನಗೆ ಮಾತ್ರ ಜೀವಿಸುತ್ತಾನೋ ಅಂಥವನು ದೇವರಿಂದ ನೇಮಕವಾದ ಸ್ಥಾನದಲ್ಲಿರಲು ಯೋಗ್ಯನಾಗುವುದಿಲ್ಲ. ನಾವು ಸಂಘದಲ್ಲಿ ಮಾಡಬೇಕಾದ ಕಾರ್ಯಗಳನ್ನು ಸ್ವಾಭಾವಿಕವಾಗಿ ಅಭ್ಯಾಸಿಸುವ ಲಕ್ಷಣವು ಇತರರ ವಿಚಾರ ನಾವು ದಯಾಪರರಾಗಿ ವರ್ತಿಸುವಂತೆ ಮಾಡುತ್ತದೆ. ಮತ್ತು ನಮಗೆ ದೇವರ ಸೇವೆಯಲ್ಲಿ ಬಲವೂ ಅಭಿವೃದ್ಧಿಯೂ ವೃದ್ಧಿಯಾಗಿ ಅದು ನಮಗೆ ಒಂದು ಸಾಧನವಾಗುವುದು.LI 91.2

    ಕ್ರೈಸ್ತರು ಒಬ್ಬರ ಸಂಘದಲ್ಲೊಬ್ಬರು ಬೆರೆತು ದೈವಪ್ರೀತಿಯ ವಿಚಾರವೂ ರಕ್ಷಣೆಯ ಅಮೂಲ್ಯವಾದ ಸತ್ಯಾಂಶಗಳ ವಿಚಾರವೂ ಸಂವಾದ ಮಾಡುತ್ತಾ ಬಂದರೆ ಇವರ ಹೃದಯಗಳು ಚೇತನಗೊಳ್ಳುವುವಲ್ಲದೆ ಇದರಿಂದ ಇತರರ ಹೃದಯಗಳೂ ಚೇತನಗೊಳ್ಳುವವು. ಅನುದಿನವೂ ನಾವು ಸ್ವರ್ಗಪಿತನ ವಿಚಾರ ಹೆಚ್ಚಾಗಿ ತಿಳಿದುಕೊಂಡು, ಆತನ ಕೃಪೆಯ ವಿಚಾರ ಹೊಸ ಅನುಭವಗಳನ್ನೂ ಹೊಂದುವೆವು. ಆಗ ನಾವು ದೇವರ ಪ್ರೀತಿಯ ವಿಚಾರ ಮಾತಾಡಲು ಇÀ್ಟಪಡುವೆವು. ನಾವು ಹೀಗೆ ಮಾಡುತ್ತಾ ಹೋದರೆ ನಮ್ಮ ಹೃದಯಗಳೂ ಪ್ರೀತಿಯಿಂದ ತುಂಬಿ ಧೈರ್ಯಗೊಳ್ಳುವವು. ನಾವು ನಮ್ಮ ವಿಚಾರ ಹೆಚ್ಚಾಗಿ ಮಾತಾ ಡುವುದನ್ನು ಕಡಿಮೆ ಮಾಡಿ, ಕ್ರಿಸ್ತನ ವಿಚಾರ ಹೆಚ್ಚಾಗಿ ಮಾತನಾಡುತ್ತಾ ಬಂದರೆ ಆತನ ಪ್ರಸನ್ನತೆಯೂ ನಮಗೆ ಹೆಚ್ಚೆಚ್ಚಾಗಿಯೇ ದೊರಕುವುದು.LI 92.1

    ದೇವರ ಎಚ್ಚರಿಕೆಯ ವಿಚಾರ ನಿದರ್ಶನಗಳು ದೊರಕಿದಂತೆಲ್ಲಾ ಅವುಗಳನ್ನು ನಾವು ಯೋಚಿಸುತ್ತಾ ಬಂದರೆ ಆತನನ್ನು ಸದಾ ನಮ್ಮ ಅಲೋಚನೆಯಲ್ಲಿರಿಸಿಕೊಳ್ಳುವೆವು; ಮತ್ತು ಆತನನ್ನು ಸ್ತುತಿಸಿ ಆತನ ವಿಚಾರ ಮಾತಾಡಲು ಕಾತುರರಾಗಿರುವೆವು. ಲೌಕಿಕ ವಿಚಾರಗಳಲ್ಲಿ ನಾವು ಆಸಕ್ತರಾಗಿರುವುದರಿಂದ ಅವುಗಳ ವಿಚಾರ ಮಾತಾಡುತ್ತೇವೆ. ಮತ್ತು ನಮ್ಮ ಸುಖದು:ಖಗಳು ಅವರನ್ನೂ ಆವರಿಸಿಕೊಂಡಿರುತ್ತವೆ. ಲೋಕದ ಸ್ನೇಹಿತರನ್ನು ಪ್ರೀತಿಸುವುದಕ್ಕಿಂತಲೂ ದೇವರನ್ನು ಹೆಚ್ಚಾಗಿ ಪ್ರೀತಿಸಲು ಹೆಚ್ಚು ಕಾರಣಗಳುಂಟು. ನಮ್ಮ ಯೋಚನೆಗಳಲ್ಲಿ ವೊದಲು ಆತನನ್ನು ಇರಿಸಿ ಆತನ ಒಳ್ಳೇತನ ಮತ್ತು ಶಕ್ತಿಗಳ ವಿಚಾರ ಮಾತಾಡುವುದು ನಮ್ಮ ಸಹಜ ಸ್ವಭಾವದ ಕಾರ್ಯವಾಗಿರಬೇಕು. ದೇವರಿಂದ ನಮಗೆ ಕೊಡಲ್ಪಟ್ಟಿರುವ ವರಗಳು ನಮ್ಮ ಯೋಚನೆ ಮತ್ತು ಪ್ರೀತಿಗಳನ್ನು ಆತನ ಕಡೆಗೆ ತಿರುಗಿಸಲು ಜ್ಞಾಪಕವನ್ನುಂಟು ಮಾಡುತ್ತಿರುತ್ತವೆ. ನಾವು ಆತನನ್ನು ಪ್ರೀತಿಸಿ ಸದಾ ಕೃತಜ್ಞರಾಗಿರುವ ಹಾಗೆ ಇವು ನಮಗೆ ಕೊಡಲ್ಪಟ್ಟಿವೆ. ನಮ್ಮ ಕಣ್ಣುಗಳನ್ನು ತೆರೆದು ಸ್ವರ್ಗದ ಪವಿತ್ರ ಸ್ಥಾನದ ಕಡೆಗೆ ನೋಡುವುದಾದರೆ ಅಲ್ಲಿ ಕ್ರಿಸ್ತನ ಮುಖದಲ್ಲಿ ದೈವಮಹಿಮೆಯು ಪ್ರಕಾಶಿಸುತ್ತದೆ. ಮತ್ತು “ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವುದಕ್ಕೆ ಸಮರ್ಥನಾಗಿದ್ದಾನೆ.”LI 93.1

    ಆತನ ಕೃಪೆಗೋಸ್ಕರವೂ ಆತನು ಮಾನವರಿಗೆ ನಡೆಯಿಸಿದ ಅದ್ಬುತಗಳಿಗೋಸ್ಕರವು ನಾವು ದೇವರನ್ನು ಹೆಚ್ಚಾಗಿ ಸ್ತುತಿಸಬೇಕು.2 ಬೇಡುವುದಕ್ಕೋಸ್ಕರವೂ, ತೆಗೆದುಕೊಳ್ಳುವುದಕ್ಕೋಸ್ಕರವೂ ಮಾತ್ರ ನಮ್ಮ ಪ್ರಾರ್ಥನೆಗಳಿರಬಾರದು. ನಮ್ಮ ಕೊರತೆಗಳನ್ನು ಹೇಳಿಕೊಳ್ಳುವುದಕ್ಕೆ ಮಾತ್ರ ಪ್ರಾರ್ಥಿಸಿದರೆ ಸಾಲದು. ನಮ್ಮ ಪ್ರಾರ್ಥನೆಗಳಲ್ಲಿ ದೇವರಿಂದ ನಮಗೆ ದೊರಕಿರುವ ಆಶೀರ್ವಾದಗಳನ್ನೂ ನೆನಸಿಕೊಂಡು ಪ್ರಾರ್ಥನೆ ಮಾಡಬೇಕು. ಪ್ರಾರ್ಥನೆಯಲ್ಲಿ ಬೇಡಿಕೊಳ್ಳುವುದೇ ಅಧಿಕ. ಸ್ತೋತ್ರ ಸಲ್ಲಿಸುವುದು ಕಡಿಮೆ. ನಾವು ದೇವರಿಂದ ಸದಾ ವರಗಳನ್ನು ಪಡೆದುಕೊಳ್ಳುತ್ತಿದ್ದರೂ ಆತನಿಗೆ ಸಲ್ಲಿಸುವ ಕೃತಜ್ಞತೆಯು ಬಹಳ ಕಡಿಮೆಯಾಗಿಯೇ ಇರುತ್ತದೆ.LI 93.2

    ಪುರಾತನ ಕಾಲದಲ್ಲಿ ಇಸ್ರಾಯೇಲ್ಯರು ಪ್ರಾರ್ಥನೆ ಮಾಡಲು ಸೇರುತ್ತಿದ್ದಾಗ ಅವರಿಗೆ ದೇವರು ಹೀಗೆ ಆಜ್ಞೆ ಮಾಡಿದನು - “ಆತನ ಸನ್ನಿಧಿಯಲ್ಲಿ ಊಟಮಾಡಿ ನಿಮ್ಮ ದೇವರಾದ ಯೆಹೋವನು ನಿಮ್ಮ ಪ್ರಯತ್ನಗಳನ್ನು ಕೈಗೂಡುವಂತೆ ಮಾಡಿದ್ದಕ್ಕಾಗಿ ನೀವೂ ನಿಮ್ಮ ಮನೆಗಳವರೂ ಸಂತೋÀದಿಂದಿರಬೇಕು.” ನಾವು ದೇವರ ಮಹಿಮೆಗೋಸ್ಕರ ಮಾಡುವ ಕಾರ್ಯಗಳನ್ನು ಸದಾ ಸಂತೋÀದಿಂದಲೂ ಸ್ತೋತ್ರಗೀತಗಳಿಂದಲೂ ಕೃತಜ್ಞತಾ ಸ್ತುತಿಯಿಂದಲೂ ಮಾಡಬೇಕೇ ಹೊರತು ವ್ಯಸನದಿಂದಲೂ ಕುಗ್ಗಿದ ಮನಸ್ಸಿನಿಂದಲೂ ಮಾಡಬಾರದು.LI 94.1

    ಪರಲೋಕದ ನಮ್ಮ ತಂದೆಯ ಕರುಣಾಸಾಗರನೂ ಕೃಪಾನಿಧಿಯೂ ಆಗಿ ಪ್ರೇಮ ಹೃದಯನಾಗಿರುತ್ತಾನೆ. ನಾವು ಕೇವಲ ದು:ಖದಿಂದ ಪ್ರಾರ್ಥನೆ ಮಾಡಬಾರದು. ದೇವರನ್ನು ಸ್ತುತಿಸುವಾಗಲೂ ಕೃತಜ್ಞತೆಯನ್ನು ಸಲ್ಲಿಸುವಾಗಲೂ ಸಂತೋÀದಿಂದ ಆರಾಧಿಸುವುದು ಆತನಿಗೆ ಇÀ್ಟವಾಗಿದೆ. ರಕ್ಷಣೆಯನ್ನು ಪಡೆದ ತನ್ನ ಮಕ್ಕಳು ದೇವರನ್ನು ಪ್ರೀತಿಯಿಂದಲೂ ಸಂತೋÀದಿಂದಲೂ ಪ್ರಾರ್ಥಿಸಬೇಕು. ಆತನು ತನ್ನ ಜನರ ಮಧ್ಯೆ ಸ್ನೇಹಿತನಂತೆ ಇರುವನು. ತನ್ನ ಭಕ್ತರ ಆರಾಧನೆಗಳನ್ನು ಕೇಳಿ ಸಂತೋÀಪಡುತ್ತಾ ಅವರನ್ನು ಆಶೀರ್ವಾದಿಸುತ್ತಾ ಅವರ ಹೃದಯಗಳಲ್ಲಿ ಸಂತೋÀವನ್ನೂ ಪ್ರೀತಿಯನ್ನೂ ಹುಟ್ಟಿಸುತ್ತಾನೆ.LI 94.2

    ನಾವು ಶಿಲುಬೆಯ ಬಳಿ ಒಟ್ಟುಗೂಡಬೇಕು. ಕ್ರಿಸ್ತನೂ ಆತನ ಶಿಲುಬೆಯೂ ನಮ್ಮ ಧ್ಯಾನದ ಸಂಗತಿಗಳಾಗಿರಬೇಕು. ದೇವರಿಂದ ನಮಗೆ ದೊರಕಿರುವ ಒಂದೊಂದು ಆಶೀರ್ವಾದವನ್ನೂ ಜ್ಞಾಪಕ ಮಾಡಿಕೊಳ್ಳಬೇಕು. ಮತ್ತು ಆತನ ಮಹಾ ಪ್ರೀತಿಯನ್ನು ನಾವು ತಿಳಿದುಕೊಂಡಾಗ, ಶಿಲುಬೆಯನಏರಿದಾತನನ್ನು ಜ್ಞಾಪಕ ಮಾಡಿಕೊಳ್ಳಬೇಕು. ಸ್ತೋತ್ರದ ರೆಕ್ಕೆಗಳಿಂದ ಆತ್ಮನು ಸ್ವರ್ಗದ ಬಳಿಗೆ ಏರಬಹುದು. ದೇವರು ಆ ಲೋಕದಲ್ಲಿ ಸಂಗೀತ, ಗಾನಗಳಿಂದ ಸ್ತೋತ್ರ ಮಾಡಲ್ಪಡುತ್ತಾನೆ. ನಾವು ನಮ್ಮ ಕೃತಜ್ಞತೆಯನ್ನು ಸಲ್ಲಿಸುವಾಗ ಸ್ವರ್ಗೀಯ ಸೈನಿಕರ ಪ್ರಾರ್ಥನಾ ರೀತಿಯನ್ನು ಅನುಸರಿಸುತ್ತೇವೆ. “ಸ್ತೋತ್ರದ ಯಜ್ಞವನ್ನು ಸಮರ್ಪಿಸುವವರು ದೇವರನ್ನು ಮಹಿಮೆಪಡಿಸುವವರು.” “ಮರ್ಯಾದಾಪೂರ್ವಕದಿಂದ ಕೂಡಿದ ಸಂತೋÀದ ಸ್ತೋತ್ರಧ್ವನಿಯಿಂದ ನಾವು ನಮ್ಮ ಸೃಷ್ಟಿಕರ್ತನನ್ನು ಸಮೀಪಿಸೋಣ.”LI 94.3

    Larger font
    Smaller font
    Copy
    Print
    Contents