Loading...
Larger font
Smaller font
Copy
Print
Contents
ಪರ್ವತ ಪ್ರಸಂಗ - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  “ನಿರ್ಮಲಚಿತ್ತರು ಧನ್ಯರು; ಅವರು ದೇವರನ್ನು ನೋಡುವರು.”

  ಯೆಹೂದ್ಯರು ತಮ್ಮ ಬಾಹ್ಯ ಪರಿಶುದ್ಧತೆಗೆ ಹೆಚ್ಚಿನ ನಿರ್ಬಂಧವನ್ನಿಟ್ಟು ತಮ್ಮ ವಿಧಿನಿಯಮಗಳನ್ನು ಅತ್ಯಂತ ವಿಷಮವಾದ ಹೊರೆಯನ್ನಾಗಿ ಮಾಡಿದರು. ಅವರ ಮನಸ್ಸೆಲ್ಲಾ ನಿಬಂಧನೆ ಕಟ್ಟುಪಾಡುಗಳಲ್ಲೂ ಮತ್ತು ಬಾಹ್ಯ ಕಳಂಕದ ಭಯದಲ್ಲೇ ಮಗ್ನವಾಗಿದ್ದುವೇ ಹೊರತು ಸ್ವಾರ್ಥತೆ ಮತ್ಸರಗಳಿಂದ ಆತ್ಮಕ್ಕುಂಟಾಗುವ ಮಲಿನತ್ವವನ್ನು ಗ್ರಹಿಸಲಿಲ್ಲ.MBK 29.2

  ಈ ಬಾಹ್ಯ ಪರಿಶುದ್ಧತೆಯು ತನ್ನ ರಾಜ್ಯಕ್ಕೆ ಪ್ರವೇಶಿಸಲು ನಿಬಂಧನೆಯೆಂದು ಕ್ರಿಸ್ತನು ಹೇಲುವುದಿಲ್ಲ, ಆದರೆ ಹೃದಯವು ಶುದ್ಧವಾಗಿರಬೇಕೆಂದು ಮಾತ್ರ ಶ್ರುತ ಪಡಿಸುತ್ತಾನೆ. “ಮೇಲಿನಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು.” ಯಾಕೋಬ 3:17. ಹೊಲೆಗೆಡಿಸುವ ಯಾವುದೂ ದೇವರ ಪಟ್ಟಣದೊಳಕ್ಕೆ ಪ್ರವೇಶಿಸಲಾರದು. ಅಲ್ಲಿ ವಾಸಿಸಲಿಚ್ಛೆಯುಳ್ಳವರು, ಇಲ್ಲ ನಿರ್ಮಲಚಿತ್ತರಾಗಿರು ವರು. ಕ್ರಿಸ್ತನಲ್ಲಿ ಕಲಿಯುತ್ತಿರುವವರಲ್ಲಿ ಎಲ್ಲಾ ವಿಢವದ ನಿರ್ಲಕ್ಷ್ಯ ವರ್ತನೆ, ಅಸಭ್ಯ ಭಾಷೆ ಮತ್ತು ಅಶ್ಲೀಲ ಯೋಚನೆಗಳಿಗೆಲ್ಲಾ ಜಿಗುಪ್ಸೆಯುಂಟಾಗುವುದು ವ್ಯಕ್ತವಾಗುತ್ತದೆ. ಕ್ರಿಸ್ತನ ಹೃದಯದಲ್ಲಿ ನೆಲೆಸಿರುವಾಗ ಆಲೋಚನೆಗಳೂ ಮತ್ತು ವರ್ತನೆಗಳೂ ಶದ್ಧವೂ ದೋಷರಹಿತವೂ ಆಗಿರುವುವು.MBK 29.3

  ಆದರೆ ಕ್ರಿಸ್ತನು ಹೇಳಿದ “ನಿರ್ಮಲಚಿತ್ತರು ಧನ್ಯರು” ಎಂಬ ವಾಕ್ಯಗಳು ಅರ್ಥಗರ್ಭಿತವಾದುವು,- ಲೋಕವು ಸಾಧಾರಣವಾಗಿ ತಿಳಿದಿರುವ ನೈರ್ಮಲ್ಯವಲ್ಲ, ವಿಷಯಲೋಲುಪತೆಯಿಂದ ವಿಮುಕ್ತರಾಗಿರುವುದೂ, ಕಾಮತೃಷೆಯಲ್ಲಿ ನೈರ್ಮಲ್ಯವೂ ಅಲ್ಲ. ಆದರೆ ಆತ್ಮದ ಗುಪ್ತ ಉದ್ದೇಶಗಳಾಲ್ಲಿಯೂ ಮತ್ತು ಸಂಕಲ್ಪಗಳಲ್ಲಿಯೂ ಯಥಾರ್ಥತೆ, ದುರಭಿಮಾನ ಮತ್ತು ಸ್ವಾರ್ಥನ್ವೇಷಣೆಯಿಂದ ವಿಮುಕ್ತತೆ, ನಮ್ರತೆ, ಅಸ್ವಾರ್ಥಪರತೆ, ಶಿಶುಭಾವ ಅಂದರೆ ನಿಷ್ಕಪಟತೆಯು ಇರಬೇಕು.MBK 30.1

  ರುಚಿಯು ಮಾತ್ರವೇ ರುಚಿಯನ್ನು ಪ್ರಶಂಸಿಸಬಲ್ಲುದು. ಆತನ ಶೀಲದ ಮೂಲತತ್ವವಾದ ಆತ್ಮಾರ್ಪಣ ಪ್ರೀತಿಯ ತತ್ವವನ್ನು ನಿನ್ನ ಜೀವನದಲ್ಲಿ ಅಭ್ಯಾಸಿಸದಿದ್ದರೆ ನೀನು ದೇವರನ್ನು ಅರಿತುಕೊಳ್ಳಲಾರಿ, ಸೈತಾನನ ಕೃತ್ರಿಮಕ್ಕೊಳಗಾದ ಹೃದಯವು ದೇವರನ್ನು ಕ್ರೂರಕರ್ಮಿಯೆಂದೂ ನಿರ್ದಯನೆಂದೂ ನೆನಸುತ್ತದೆ; ಮಾನವನ ಮತ್ತು ಸೈತಾನನ ಸ್ವಾರ್ಥಪರ ಗುಣಗಳು ಪ್ರೀತಿಸ್ವರೂಪನಾದ ಸೃಷ್ಟಿಕರ್ತನಿಗೆ ಆರೋಪಿಸಲ್ಪಟ್ಟಿವೆ. “ನೀವು..... ನಾನು ಸುಮ್ಮನೆ ಇದ್ದದರಿಂದ ದೇವರೂ ನಮ್ಮಂಥವನೇ ಎಂದು ನೆನಸಿಕೊಂಡರಿ” ಕೀರ್ತನೆ 50:21, ಎಂದು ಹೇಳುತ್ತಾನೆ. ಆತನ ಅನುಗ್ರಹವು ಬರೇ ಅವಿಚಾರದ ಮತ್ತು ಛಲಸಾಧನೆಯ ಸ್ವಭಾವವೆಂದು ದುರಭಿಪ್ರಾಯವುಂಟಾಗಿದೆ. ಹಾಗೆಯೇ ಆತನ ಕೃಪಾ ಭಂಡಾರವಾದ ಸತ್ಯವೇದದ ವಿಚಾರದಲ್ಲೂ ದುರಭಿಪ್ರಾಯವು ವ್ಯಾಪಿಸಿದೆ. ಆಕಾಶದಷ್ಟು ಉನ್ನತವಾದ ನಿತ್ಯತೆಯನ್ನು ಆವರಿಸಿರುವ ಅದರ ಸತ್ಯಗಳ ಮಹಿಮೆಯು ಅವರ ಗ್ರಹಿಕೆಗೆ ಬಾರಲಿಲ್ಲ. ಮಾನವರ ಮಹಾ ಸಮೂಹಕ್ಕೆ ಕ್ರಿಸ್ತನು “ಒಣನೆಲದೊಳಗೆ ಬೇರಿನಿಂದ ಹೊರಡುವ ಅಂಕುರದಂತೆ” ಇದ್ದಾನೆ, ಮತ್ತು “ಅವನಲ್ಲಿ ಯಾವ ಅಂದಚಂದಗಳೂ ಇಅರಲಿಲ್ಲ, ಮತ್ತು ನೋಡತಕ್ಕ ಯಾವ ಲಕ್ಷಣವೂ ಕಾಣಲಿಲ್ಲ” ಯೆಶಾಯ 53:2. ಮಾನವತ್ವದಲ್ಲಿ ಪ್ರಕಟವಾದ ದೈವತ್ವವಾದ ಕ್ರಿಸ್ತನು ಮನುಷ್ಯರ ಮಧ್ಯದಲ್ಲಿ ವಾಸಿಸಿದಾಗ ಶಾಸ್ತ್ರಿಗಳು ಮತ್ತು ಪರಿಸಾಯರು “ನೀನು ಸಮಾರ್ಯನ ದೆವ್ವ ಹಿಡಿದವನೂ ಆಗಿದ್ದೀ” ಯೋಹಾನ 8:48, ಎಂದು ಹೇಳಿದರು. ಆತನ ಶಿಷ್ಯರೂ ಸಹ ತಮ್ಮ ಸ್ವಾರ್ಥಪರ ಹೃದಯಗಳ ಅಂಧತೆಯಿಂದ ತಂದೆಯ ಪ್ರೀತಿಯನ್ನು ಪ್ರಕಟಿಸಲು ಬ್ದ ಆತನನ್ನು ಅರಿಯಲು ಮಂದಹೃದಯರಾಗಿದ್ದರು. ಇದರಿಂದಲೇ ಯೇಸುವು ಮನುಷ್ಯರ ಮಧ್ಯದಲ್ಲಿ ಏಕಾಂಗಿಯಾಗಿ ಸಂಚರಿಸಿದನು. ಪರಲೋಕದಲ್ಲಿ ಮಾತ್ರವೇ ಆತನು ಸಂಪೂರ್ಣವಾಗಿ ಗ್ರಹಿಸಲ್ಪಟ್ಟಿದ್ದನು. MBK 30.2

  ಕ್ರಿಸ್ತನು ತನ್ನ ಮಹಿಮೆಯೊಡನೆ ಬರುವಾಗ ದುಷ್ಟರು ಆತನ ಪ್ರತ್ಯಕ್ಷತೆಯನ್ನು ಸಹಿಸಲಾರರು. ಆತನ ಪ್ರತ್ಯಕ್ಷತೆಯ ಪ್ರಸನ್ನತೆಯು ಆತನನ್ನು ಪ್ರೀತಿಸುವವರಿಗೆ ಜೀವದಾಯಕವಾಗಿಯೂ ದೈವಭಕ್ತಿಹೀನರಿಗೆ ಮರಣಕರವಾಗಿಯೂ ಪರಿಣಮಿಸುವುದು. ಅವರಿಗೆ ಆತನ ಬರುವಿಕೆಯ ನಿರೀಕ್ಷಣೆಯು “ಅತ್ಯಂತ ಭಯದಿಂದ ಎದುರು ನೋಡತಕ್ಕ ನ್ಯಾಯತೀರ್ಪೂ ಮತ್ತು….. ದಹಿಸುವ ತೀಕ್ಷ್ಣವಾದ ಅಗ್ನಿಯೂ” ಇಬ್ರಿಯ 10:27, ಆಗಿದೆ. ಆತನು ಪ್ರತ್ಯಕ್ಷನಾಗುವಾಗ ತಮ್ಮನ್ನು ರಕ್ಷಿಸಲು ಪ್ರಾಣ ಕೊಟ್ಟಾತನ ಮುಖದಿಂದ ತಮ್ಮನ್ನು ಮರೆಮಾಡಿಕೊಳ್ಳುವಂತೆ ಪ್ರಾರ್ಥಿಸುವರು.MBK 31.1

  ಆದರೆ ಪರಿಶುದ್ಧಾತ್ಮನ ನಿವಾಸದಿಂದ ಶುದ್ಧೀಕರಿಸಲ್ಪಟ್ಟ ಹೃದಯಗಾಳಿಗಾದರೋ ಎಲ್ಲವೂ ಮಾರ್ಪಟ್ಟಿರುವುವು. ಇವರು ದೇವರನ್ನು ಅರಿತುಕೊಳ್ಳಬಲ್ಲರು. ದೇವರ ಮಹಿಮೆಯು ಮೋಶೆಗೆ ಪ್ರಕಟವಾದಾಗ ಅವನು ಒಂದು ಬಂಡೆಯ ಹಿಂಬದಿಯಲ್ಲಿ ಮರೆಯಾಗಿದ್ದನು; ಹಾಗೆ ನಾವೂ ಕ್ರಿಸ್ತನಲ್ಲಿ ಮರೆಯಾದರೆ ದೇವರ ಪ್ರೀತಿಯನ್ನು ಕಾಣಬಹುದು.MBK 31.2

  “ಹೃದಯ ಶುದ್ಧಿಯನ್ನಪೇಕ್ಷಿಸುವ ಸವಿಮಾತನಾಡುವ ಮನುಷ್ಯನಿಗೆ ರಾಜ ಸ್ನೇಹವು ದೊರೆಯುವುದು” ಜ್ಞಾನೋಕ್ತಿ 22:11. ನಂಬಿಕೆಯ ಮೂಲಕವಾಗಿ ಆತನನ್ನು ಈಗಲೇ ಇಲ್ಲಿಯೇ ಕಾಣುತ್ತೇವೆ. ನಾವು ನಮ್ಮ ಅನುದಿನದ ಅನುಭವದಲ್ಲಿ ಆತನ ದಯೆಯನ್ನೂ ಮತ್ತು ಕರುಣೆಯನ್ನೂ ಆತನ ಅನುಗ್ರಹದ ಪ್ರಕಟನೆಯ ಮೂಲಕ ಗ್ರಹಿಸುತ್ತೇವೆ. ಪರಿಶುದ್ಧಾತ್ಮನು ದೇವರ ಮತ್ತು ಆತನು ಕಳುಹಿಸಿಕೊಟ್ಟಾತನ ವಿಷಯವಾದ ಸತ್ಯಗಳನ್ನು ನಮ್ಮ ತಿಳಿವಳಿಕೆಗೂ ಹೃದಯಕ್ಕೂ ಗೋಚರಪಡಿಸುತ್ತಾನೆ. ನಿರ್ಮಲಚಿತ್ತರು ದೇವರನ್ನು ಒಂದು ನೂತನ ಮತ್ತು ಪ್ರೀತಿಪಾತ್ರ ಸಂಬಂಧದಲ್ಲಿ ತಮ್ಮ ರಕ್ಷಕನಂತೆ ನೋಡುವರು; ಆತನ ಲಕ್ಷಣದ ನೈರ್ಮಲ್ಯವನ್ನೂ ಮತ್ತು ಚೆಲುವನ್ನೂ ಅವರು ಗ್ರಹಿಸಿ, ಆತನ ಸ್ವಾರೂಪ್ಯವನ್ನು ಪ್ರತಿಬಿಂಬಿಸಲು ತವಕಿಸುವರು. ಪ್ಶ್ಚಾತ್ತಾಪ ಪಟ್ಟ ಮಗನನ್ನು ಅಪ್ಪಿಕೊಳ್ಳಲು ಕಾತುರನಾದ ತಂದೆಯೆಂದು ಭಾವಿಸುವರು, ಮತ್ತು ಅವರ ಹೃದಯಗಳು ಆಳವಲ್ಲದ ಉಲ್ಲಾಸ ಮತ್ತು ಮಹಾ ಮಹಿಮಭರಿತವಾಗುವುವು.MBK 31.3

  ನಿರ್ಮಲಚಿತ್ತರು ಸೃಷ್ಟಿಕರ್ತನನ್ನು ಆತನ ಕೈಗಳ ಪ್ರಭಾವಯುತ ಕ್ರಿಯೆಗಳಲ್ಲಿಯೂ ಮತ್ತು ಪ್ರಪಂಚದಲ್ಲಿ ಅಡಕವಾಗಿರುವ ರಮಣೀಯ ವಸ್ತುಗಳಲ್ಲೂ ಕಾಣುವರು. ಆತನ ವಾಕ್ಯದಲ್ಲಿ ಅತಿ ಸ್ಪಷ್ಟವಾಗಿ ಆತನ ಸೌಜನ್ಯ, ಕೃಪೆ ಮತ್ತು ಕಟಾಕ್ಷಗಳನ್ನು ಕುರಿತು ಓದುತ್ತೇವೆ. ಜ್ಞಾನಿಗಳೂ ವಿವೇಕಿಗಳೂ ಮರೆಯಾದ ಕಾರ್ಯಗಳು ಎಳೆಮಕ್ಕಳಿಗೆ ವ್ಯಕ್ತವಾಗಿವೆ. ಪ್ರಾಪಂಚಿಕ ಜ್ಞಾನಿಗಳು ಗ್ರಹಿಸಲಾರದ ಸತ್ಯಗಳ ಚಲ್ವಿಕೆಯೂ ಮತ್ತು ಅಮೂಲ್ಯತೆಯೂ ದೇವರ ಚಿತ್ತವನ್ನು ಅರಿತು ಅದರಂತೆ ನಡೆಯಲು ಶಿಶುಭಾವವ ಮತ್ತು ಭರವಸ ಪೂರಿತ ಅಭಿಲಾಷೆಯುಳ್ಳವರಿಗೆ ಎಡೆಬಿಡದೆ ಪ್ರಕಟವಾಗುತ್ತದೆ. ದೈವಸ್ವಭಾವದಲ್ಲಿ ನಾವು ಭಾಗಿಗಳಾಗುವುದರಿಂದ ಈ ಸತ್ಯಗಳನ್ನು ಗ್ರಹಿಸಿಕೊಳ್ಳುತ್ತೇವೆ.MBK 32.1

  ನಿರ್ಮಲಚಿತ್ತರಾದವರು, ದೇವರು ಅವರನ್ನು ಲೋಕದಲ್ಲಿ ಹಂಚುವಾಗ ಆತನ ಪ್ರಸನ್ನತೆಯ ಪ್ರತ್ಯಕ್ಷತೆಯಲ್ಲಿಯೋ ಎಂಬಂತೆ ಜೀವಿಸುವರು. ಮುಂದೆ ಬರುವ ಕಾಲಗಳಲ್ಲಿ ಅಮರತ್ವ ಸ್ಥಿತಿಯಲ್ಲಿ, ಆದಾಮನು ಏರ್ಡೆ ತೋಟದಲ್ಲಿ ದೇವರೊಡನೆ ಸಂಭಾಷಿಸುತ್ತಾ ವಿಹರಿಸಿದಂತೆ, ಇವರೂ ಆತನನ್ನು ಮುಖಾಮುಖಿಯಾಗಿ ನೋಡುವರು. “ಈಗ ಕಂಚಿನ ದರ್ಪಣದಲ್ಲಿ ಕಾಣಿಸುವಂತೆ [ದೇವರ ಮುಖವು] ನಮಗೆ ಮೊಬ್ಬಾಗಿ ಕಾಣಿಸುತ್ತದೆ; ಆಗ ಮುಖಾಮುಖಿಯಾಗಿ ಆತನನ್ನು ನೋಡುವೆವು.” 1 ಕೊರಿಂಥ 13:12, MBK 32.2

  “ಸಮಾಧಾನ ಪಡಿಸುವವರು ಧನ್ಯರು; ಅವರು ದೇವರ ಮಕ್ಕಳು ಅನ್ನಿಸಿಕೊಳ್ಳುವರು.” MBK 32.3

  ಕ್ರಿಸ್ತನೇ “ಸಮಾಧಾನದ ಪ್ರಭು” ವಾಗಿದ್ದಾನೆ. (ಯೆಶಾಯ 9:6) ಮತ್ತು ಪಾಪದಿಂದ ಶಿಥಿಲವಾಗಿದ್ದ ಸಮಾಧಾನವನ್ನು ಭೂಪರಲೋಕಗಳಲ್ಲಿ ಸ್ಥಾಪಿಸುವುದು ಆತನ ಕರ್ತವ್ಯವಾಗಿತ್ತು. “ನಾವು ನಂಬಿಕೆಯಿಂದ ನೀತಿವಂತರಾದಕಾರಣ ನಮ್ಮ ಕರ್ತನಾದ ಏಸು ಕ್ರಿಸ್ತನ ಮೂಲಕ ದೇವರೊಂದಿಗೆ ಉಂಟಾದ ಸಮಾಧಾನದಲ್ಲಿ ಇರೋಣ” ರೋಮಾಯ 5:1 ಯಾರಾರು ಪಾಪವನ್ನು ತ್ಯಜಿಸಲೊಪ್ಪಿ, ಕ್ರಿಸ್ತನ ಪ್ರೀತಿಗೆ ತಮ್ಮ ಹೃದಯಗಳನ್ನು ತೆರೆಯುತ್ತಾರೋ, ಅವರು ಈ ಪರಲೋಕ ಸಮಾಧಾನದಲ್ಲಿ ಭಾಗಿಗಳಾಗುವರು.MBK 32.4

  ಇದಕ್ಕಿಂತಲೂ ಸುವ್ಯವಸ್ಥಿತವಾದ ಸಮಾಧಾನ್ ಬೇರೊಂದಿಲ್ಲ. ಹೃದಯದಲ್ಲಿ ಅವಕಾಶ ಹೊಂದಿದ ಕ್ರಿಸ್ತನ ಕೃಪೆಯು ದ್ವೇಷವನ್ನು ನಿಗ್ರಹಿಸುತ್ತದೆ; ಕಚ್ಚಾಟವನ್ನು ಉಪಶಮನ ಮಾಡಿ, ಆತ್ಮವನ್ನು ಪ್ರೀತಿಯಿಂದ ತುಂಬಿಸುತ್ತದೆ. ದೇವರೊಡನೆಯೂ ಮತ್ತು ತನ್ನ ನೆರೆಯವರೊಡನೆಯೂ ಸಮಾಧಾನದಿಂದಿರುವ ವನು ಎಂದೂ ಸಂಕಟಕ್ಕೊಳಗಾಗನು. ಅವನ ಹೃದಯದಲ್ಲಿ ದ್ವೇಷವಿರುವುದಿಲ್ಲ; ಕೆಡುಕಿನ ಶಂಕೆಯು ಅಲ್ಲಿ ನೆಲಸದು; ಅಸೂಯೆಯು ಅಲ್ಲಿರದು. ದೇವರೊಡನೆ ಪರಸ್ಪರ ಮೈತ್ರಿಯುಳ್ಳ ಹೃದಯವು ಪರಲೋಕದ ಸಮಾಧಾನದಲ್ಲಿ ಭಾಗಿಯಾಗಿ ತನ್ನ ಪೂಜ್ಯ ಪ್ರಭಾವವನ್ನು ಸುತ್ತಮುತ್ತಲೂ ಪ್ರಸರಿಸುತ್ತದೆ. ಪ್ರಾಪಂಚಿಕ ಹೋರಾಟಗಳಿಂದ ಬಳಲಿ ಕ್ಲೇಶಗೊಂಡ ಹೃದಯಗಳ ಮೇಲೆ ಸಮಾಧಾನದ ಆತ್ಮವು ಇಬ್ಬನಿಯ ಹನಿಗಳಂತೆ ನೆಲೆಸಿರುವುದು.MBK 32.5

  ಕ್ರಿಸ್ತನ ಹಿಂಬಾಲಕರು ಸಮಾಧಾನದ ಸುವಿಶೇಷದೊಡನೆ ಲೋಕಕ್ಕೆ ಕಳುಹಿಸಲ್ಪಟ್ಟಿದ್ದಾರೆ. ಯಾರಾರು ಪರಿಶುದ್ಧ ಜೀವ್ಯದ ಪ್ರಶಾಂತ ಮತ್ತು ಅಜಾಗೃತ ಪರಿಣಾಮದಿಂದ ಕ್ರಿಸ್ತನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೋ, ಮತ್ತು ಯಾರಾರು ತಮ್ಮ ನಡೆನುಡಿಗಳಿಂದ ಮತ್ತೊಬ್ಬರನ್ನು ಅವರ ಪಾಪಗಳನ್ನು ವರ್ಜಿಸಿ ದೇವರಿಗೆ ತಮ್ಮ ಹೃದಯಗಳನ್ನೊಪ್ಪಿಸುವಂತೆ ಪ್ರೇರಿಸುತ್ತಾರೋ ಅವರೆಲ್ಲಾ ಸಮಾಧಾನ ಪಡಿಸುವವರು.MBK 33.1

  “ಸಮಾಧಾನ ಪಡಿಸುವವರು ಧನ್ಯರು; ಅವರು ದೇವರ ಮಕ್ಕಳು ಅನ್ನಿಸಿಕೊಳ್ಳುವರು”. ಆತ್ಮದ ಸಮಾಧಾನವು ಪರಲೋಕದೊಡನೆ ಅವರಿಗಿರುವ ಅನ್ಯೋನ್ಯತೆಯ ಗುರುತಾಗಿದೆ. ಕ್ರಿಸ್ತನ ಮಧುರ ಲಕ್ಷಣವು ಅವರನ್ನು ಆವರಿಸುತ್ತದೆ. ಅವರ ಜೀವನದ ಮಾಧುರ್ಯವೂ, ಗುಣಗಳ ಮನೋಹರತೆಯೂ ಅವರು ದೇವರ ಮಕ್ಕಳೆಂದು ಪ್ರಪಂಚಕ್ಕೆ ವ್ಯಕ್ತಪಡಿಸುತ್ತವೆ. ಅವರು ಯೇಸುವಿನೊಡನೆ ಇದ್ದವರೆಂದು ಜನರು ಅರಿತುಕೊಳ್ಳುವರು. “ಪ್ರೀತಿಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನಾಗಿದ್ದಾನೆ” “ಯಾವನಿಗಾದರೂ ಕ್ರಿಸ್ತನ ಆತ್ಮನು ಇಲ್ಲದಿದ್ದರೆ ಅವನು ಕ್ರಿಸ್ತನವನಲ್ಲ.” ಆದರೆ “ಯಾರಾರು ದೇವರ ಆತ್ಮನಿಂದ ನಡೆಸಿಕೊಳ್ಳುತ್ತಾರೋ ಅವರು ದೇವರ ಮಕ್ಕಳು” 1 ಯೋಹಾನ 4:7; ರೋಮಾಯ 8:9,14.MBK 33.2

  “ಯೆಹೋವನ ವರವಾದ ಇಬ್ಬನಿಯೂ ಹುಲ್ಲನ್ನು ಬೆಳೆಸುವ ಹದಮಳೆಗಳೂ ಹೇಗೆ ಮನುಷ್ಯರನ್ನು ಎದುರು ನೋಡದೆ ಮಾನವರನ್ನು ನಿರೀಕ್ಷಿಸದೆ ಹಿತಕರವಾಗಿರುವುವೋ ಹಾಗೆಯೇ ಜನಶೇಷವು ಬಹು ಜನಾಂಗಗಳ ಮಧ್ಯದಲ್ಲಿ ಹಿತಕರವಾಗಿರುವುದು.” ಮೀಕ 5:7.MBK 33.3

  “ನೀತಿಯ ನಿಮಿತ್ತವಾಗಿ ಹಿಂಸೆಯನ್ನು ತಾಳಿಕೊಳ್ಳುವವರು ಧನ್ಯರು; ಪರಲೋಕರಾಜ್ಯವು ಅವರದು.” MBK 33.4

  ಯೇಸುವು ತನ್ನ ಹಿಂಬಾಲಕರಿಗೆ ಪ್ರಾಪಂಚಿಕ ಮಹಿಮೆ ಮತ್ತು ಸಂಪತ್ತನ್ನು ಹೊಂದುವ ನಿರೀಕ್ಷೆಯನ್ನು ಮತ್ತು ಹೆಂಸಾರಹಿತ ಜೀವ್ಯವನ್ನು ತೋರದೆ, ಲೋಕವು ಅವರನ್ನು ಅರಿಯದಿರುವುದರಿಂದ ಅವರು ತಮ್ಮ ಗುರುವಿನೊಡನೆ ಸ್ವಾರ್ಥತ್ಯಾಗದ ಮತ್ತು ನಿಂದನೆಯ ಮಾರ್ಗದಲ್ಲಿ ನಡೆಯುವ ಸುಯೋಗವನ್ನು ಕಲ್ಪಿಸಿಕೊಡುತ್ತಾನೆ.MBK 34.1

  ಕಳೆದುಹೋದ ಈ ಲೋಕವನ್ನು ಉದ್ಧರಿಸಲೋಸುಗ ಬ್ದಾತನನ್ನು ದೇವರ ಮತ್ತು ಮಾನವನ ಪ್ರತಿಕಕ್ಷಿಗಳ ಸಂಯುಕ್ತ ಸೇನೆಯು ಪ್ರತಿಭಟಿಸಿತು. ದುಷ್ಟರಾದ ಮಾನವರೂ ಮತ್ತು ದೂತರೂ, ನಿಷ್ಕಾರುಣ್ಯ ಸಂಯೋಜನೆಯಿಂದ ಸಮಾಧಾನದ ಪ್ರಭುವಿಗೆ ವಿರುದ್ಧವಾಗಿ ವ್ಯೂಹರಚನೆ ಮಾಡಿದರು. ದೈವಕೃಪೆಯಿಂದ ಉಸುರಿದ ಆತನ ವಾಕ್ಯಗಳೂ ಮತ್ತು ಕ್ರಿಯೆಗಳೂ, ಆತನ ಅಲೌಕಿಕತ್ವವೂ ವಿರೋಧಿಗಳ ಕಟ್ಟುದ್ವೇಷವನ್ನು ಉದ್ರೇಕಿಸಿತು. ಯಾಕಂದರೆ ನಮ್ಮ ಸ್ವಭಾವದ ದುಷ್ಟಭಾವೋದ್ರೇಕಗಳ ಪ್ರಯೋಗಕ್ಕೆ ಆತನು ಸ್ವಾತಂತ್ರವನ್ನೀಯದುದೇ ಕಾರಣ್. ಆತನು ವಿರೋಧಿಗಳ ಅತ್ಯುಗ್ರ ಪ್ರತಿಭಟನೆಯನ್ನೂ ವೈರವನ್ನೂ ಕೆರಳಿಸಿದನು. ಕ್ರಿಸ್ತಯೇಸುವಿನಲ್ಲಿ ದೈವಭಕ್ತರಾಗಿ ಜೀವಿಸುವವರ ವಿಷಯದಲ್ಲಿಯೂ ಹೀಗೆಯೇ. ನೀತಿಗೂ ಅಧರ್ಮಕ್ಕೂ, ಪ್ರೀತಿಗೂ ದ್ವೇಷಕ್ಕೂ, ಮತ್ತು ಸತ್ಯಕ್ಕೂ ಅಸತ್ಯಕ್ಕೂ, ಅಣಗಿಸಕೂಡದ ಹೋರಾಟವಿದೆ. ಒಬ್ಬನು ಯೇಸುವಿನ ಪ್ರೀತಿಯನ್ನೂ ಮತ್ತು ಪರಿಶುದ್ಧತೆಯ ಚಲ್ವಿಕೆಯನ್ನೂ ಬೀರಿ, ಸೈತಾನನ ರಾಜ್ಯದ ಪ್ರಜೆಗಳನ್ನು ಅವನ ಬಂಧನದಿಂದ ಎಳೆಯುವಾಗ, ಕೇಡಿಗರ ಅರಸನು ಇವರ ಎದುರಿಸಲು ಹುರಿದುಂಬಿಸಲ್ಪಡುವನು. ಕಾಲಕ್ಕನುಗುಣವಾಗಿ ಹಿಂಸೆಯ ರೀತಿಯೂ ಬದಲಾಗುತ್ತದೆ; ಆದರೆ ಅದರ ಮೂಲತತ್ವವು-ಮನಸ್ಸಿನೊಳಗಿರುವುದು-ಹೇಬೆಲನ ಕಾಲ ಮೊದಲುಗೊಂಡು ದೇವರಾದುಕೊಂಡವರ ಕೊಲೆಗೈದುದು ಒಂದೇ ರೀತಿಯಾಗಿದೆ.MBK 34.2

  ಮಾನವರು ದೇವರ ಅನ್ಯೋನ್ಯತೆಯನ್ನು ಬಯಸುವಾಗ್ಗೆ, ಕ್ರೂಜೆಯ ಎಡರುಗಳು ಇನ್ನೂ ಕೊನೆಗಂಡಿಲ್ಲವೆಂದು ಅರಿತಿದ್ದಾರೆ. ಪರಲೋಕದ ಆಜ್ಞೆಗಳಿಗೆ ವಿಧೇಯರಾಗಿರುವವರಿಗೆ ವಿರುದ್ಧವಾಗಿ ಪ್ರಭುತ್ವಗಳೂ ಅಧಿಕಾರಗಳೂ ಮತ್ತು ದುಷ್ಟಾತ್ಮರೂ ಕೂಡಿದ್ದಾರೆ. ಆದುದರಿಂದ, ದುಃಖವನ್ನೆಸಗಲು ಬದಲು, ಹಿಂಸೆಯು ಕ್ರಿಸ್ತನ ಶಿಷ್ಯರಿಗೆ ಉಲ್ಲಾಸವನ್ನೇ ತರಬೇಕು; ಅವರು ತಮ್ಮ ಗುರುವಿನ ಹೆಜ್ಜೆಯ ಜಾಡಿನಲ್ಲಿ ನಡೆಯುತ್ತಿದ್ದಾರೆಂಬುದಕ್ಕೆ ಇದೇ ಸಾದೃಶ್ಯವಾಗಿದೆ.MBK 34.3

  ಕರ್ತನು ತನ್ನ ಜನರಿಗೆ ಶೋಧನೆಗಳಿಂದ ವಿನಾಯಿತಿ ನೀಡುವ ವಾಗ್ದಾನವನ್ನು ಮಾಡಿಲ್ಲ, ಅದಕ್ಕಿಂತಲೂ ಅತ್ಯುತ್ತಮವಾದುದನ್ನು ವಾಗ್ದಾನಮಾಡಿದ್ದಾನೆ. ಆತನು ಹೇಳುವುದೇನಂದರೆ, “ನೀವು ಇರುವ ವರೆಗೂ ನಿಮಗೆ ಬಲವು ಇರುವುದು.” ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣ ಸಾಧಕವಾಗುತ್ತದೆ.” ಧರ್ಮೋಪದೇಶಕಾಂಡ 33:25; 2 ಕೊರಿಂಥ 12:9. ಆತನ ನಿಮಿತ್ತ ನೀವು ಅಗ್ನಿಕುಂಡದೊಳಗೆ ಪ್ರವೇಶಿಸಬೇಕಾದರೂ, ಬಾಬಿಲೋನಿನಲ್ಲಿ ಮೂವರು ಭಕ್ತರೊಡನೆ ಇದ್ದಂತೆ, ನಿಮ್ಮ ಪಾರ್ಶ್ವದಲ್ಲಿ ಇರುತ್ತಾನೆ. ತಮ್ಮ ರಕ್ಷಕನನ್ನು ಪ್ರೀತಿಸುವವರು ಆತನೊಡನೆ ಪ್ರತಿಯೊಂದು ನಿಂದೆ ಅಪಮಾನಗಳಲ್ಲೂ ಭಾಗಿಗಳಾಗಿರಲು ಸಂತೋಷ ಪಡುವರು. ಕರ್ತನಿಗಾಗಿ ಅವರಲ್ಲಿರುವ ಪ್ರೀತಿಯಿಂದ ಅವರ ಸಂಕಟಗಳನ್ನೆಲ್ಲಾ ತನ್ನ ನಿಮಿತ್ತವಾಗಿ ಸುಖಕರವಾಗಿಸುವನು.MBK 35.1

  ಎಲ್ಲಾ ಯುಗಗಳಲ್ಲೂ ಸೈತಾನನು ದೇವಜನರನ್ನು ಕಿರುಕುಳಕ್ಕೊಳಪಡಿಸಿದ್ದಾನೆ. ಕ್ರೂರಯಾತನೆ ಕೊಟ್ಟು ಅವರನ್ನು ಮರಣಕ್ಕೆ ತುತ್ತಾಗಿಸಿದ್ದಾನೆ; ಆದರೆ ಸಾವಿನ ಮೂಲಕ ಅವರು ಜಯಶಾಲಿಗಳಾಗಿದ್ದಾರೆ. ತಮ್ಮ ನಿಶ್ಚಲ ನಂಬಿಕೆಯಿಂದ ಸೈತಾನನಿಗಿಂತಲೂ ಅಧಿಕ ಪರಾಕ್ರಮಶಾಲಿಯಾದಾತನನ್ನು ಪ್ರಕಟಿಸಿದರು. ಸೈತಾನನು ಅವರನ್ನು ಹಿಂಸಿಸಿ ದೇಹವನ್ನು ಕೊಲ್ಲಬಲ್ಲನೇ ಹೊರತು ಕ್ರಿಸ್ತನೊಡನೆ ದೇವರಲ್ಲಿ ಭದ್ರಪಡಿಸಲ್ಪಟ್ಟಿರುವ ಜೀವವನ್ನು ಮುಟ್ಟಲಾರದಾದನು. ಕಾರಾಗೃಹದ ಗೋಡೆಗಳ ಹಿಂದೆ ಬಂಧನದಲ್ಲಿಡಬಲ್ಲನು, ಆದರೆ ಆತ್ಮವನ್ನು ಬಂಧಿಸಲಾಗಲಿಲ್ಲ. ಅಂಧಕಾರದಾಚೆ ಮಹಿಮೆಯನ್ನು ಕಂಡವರಾಗಿ ಹೀಗೆ ಹೇಳುವರು: “ನಮಗೋಶ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮೆಯ ಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ.” “ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕವಾದ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಗೌರವವಾದ ಪ್ರಭಾವವನ್ನು ದೊರಕಿಸುತ್ತದೆ.” ರೋಮಾಯ 8:18; 2 ಕೊರಿಂಥ 4:17. MBK 35.2

  ಶೋಧನೆ ಮತ್ತು ಉಪದ್ರವಗಳ ಮೂಲಕ ದೇವರ ಮಹಿಮೆ-ಸೌಜನ್ಯವು ಆತನಾದುಕೊಂಡವರಲ್ಲಿ ವ್ಯಕ್ತವಾಗುತ್ತದೆ. ಲೋಕದವರಿಂದ ದ್ವೇಷಿಸಿ ಹಿಂಸಿಸಲ್ಪಟ್ಟ ದೇವರ ಸಭೆಯು, ಕ್ರಿಸ್ತನ ವಿದ್ಯಾಲಯದಲ್ಲಿ ತರಪೇತು ಹೊಂದಿ ಶಿಸ್ತಿನಲ್ಲಿಡಲ್ಪಟ್ಟಿದ್ದಾರೆ. ಭೂಮಿಯ ಮೇಲೆ ಇಕ್ಕಟ್ಟಾದ ಮಾರ್ಗದಲ್ಲಿ ನಡೆಯುವರು; ಸಂಕಟವೆಂಬ ಅಗ್ನಿಕುಂಡದಲ್ಲಿ ಶುದ್ಧೀಕರಿಸಲ್ಪಟ್ಟಿದ್ದಾರೆ. ದಾರುಣವಾದ ಹೋರಾಟ ಗಳ ಮಧ್ಯದಲ್ಲಿ ಕ್ರಿಸ್ತನನ್ನು ಹಿಂಬಾಲಿಸುತ್ತಾರೆ; ಆತ್ಮಾರ್ಪಣೆಯನ್ನು ಸಹಿಸುತ್ತಾರೆ, ಮತ್ತು ಉಗ್ರ ಆಶಾಭಂಗವನ್ನು ಅನುಭವಿಸುತ್ತಾರೆ. ಆದರೆ ಅವರ ಯಾತನೆಯ ಅನುಭವಗಳು ಪಾಪದ ಕಳಂಕವನ್ನೂ ಮತ್ತು ಕೇಡನ್ನೂ ಬೋಧಿಸುವುದು ಮಾತ್ರವಲ್ಲದೆ ಅವುಗಳನ್ನು ಹೇಯವಾಗಣಿಸುತ್ತವೆ. ಕ್ರಿಸ್ತನ ಬಾದೆಗಳಲ್ಲಿ ಭಾಗಿಗಳಾಗಿರುವವರು ಆತನ ಮಹಿಮಯಲ್ಲಿ ಭಾಗಿಗಳಾಗಲು ಗೊತ್ತುಮಾಡಲ್ಪಟ್ಟಿದ್ದಾರೆ. ಪ್ರವಾದಿಯು ತನ್ನ ದಿವ್ಯ ದರ್ಶನದಲ್ಲಿ ದೇವಜನರ ವಿಜಯೋತ್ಸವವನ್ನು ಕಂಡನು: ಬೆಂಕಿ ಬೆರೆದ ಗಾಜಿನ ಸಮುದ್ರವೋ ಎಂಬಂತೆ ಏನೋ ಒಂದು ನನಗೆ ಕಾಣಿಸಿತು...............ಜಯ ಹೊಂದಿದವರು..............ವೀಣೆಗಳನ್ನು ಕೈಲಿ ಹಿಡುಕೊಂಡು ಗಾಜಿನ ಸಮುದ್ರದ ಬಳಿಯಲ್ಲಿ ನಿಂತು ದೇವರ ದಾಸನಾದ ಮೋಶೆಯ ಹಾಡನ್ನೂ ಯಜ್ಞದ ಕುರಿಯಾದಾತನ ಹಾಡನ್ನೂ ಹಾಡುತ್ತಾ-ದೇವರಾದ ಕರ್ತನೇ, ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದುವುಗಲೂ ಆಶ್ಚರ್ಯಕರವಾದುವುಗಳೂ ಆಗಿವೆ;” “ಇವರು ಮಹಾ ಹಿಂಸೆಯನ್ನು ಅನುಭವಿಸಿ ಬಂದವರು; ಯಜ್ ಜದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಮುವಂಗಿಗಳನ್ನು ತೊಳೆದು ಶುಭ್ರ ಮಾಡಿದ್ದಾರೆ. ಈ ಕಾರಣದಿಂದ ಅವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳು ಆತನ ಸೇವೆ ಮಾಡುತ್ತಾ ಇದ್ದಾರೆ; ಸಿಂಹಾಸನದಲ್ಲಿ ಕೂತಿರುವಾತನು ಗುಡಾರದಂತೆ ಅವರನ್ನು ಆವರಿಸುವನು”. ಪ್ರಕಟನೆ 15:2, 3; 7:14,15.MBK 35.3

  “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು.” MBK 36.1

  ಸೈತಾನನು ತಾನು ದೊಬ್ಬಲ್ಪಟ್ಟಂದಿನಿಂದಲೂ, ಕಪಟದಿಂದ ಕಾರ್ಯ ಸಾಧಿಸುತ್ತಿದ್ದಾನೆ. ಅವನು ದೇವರನ್ನು ತಪ್ಪಾಗಿ ನಿರೋಪಿಸಿದಂತೆ, ತನ್ನ ಸಿಬ್ಬಂದಿಗಳಿಂದ ದೇವಮಕ್ಕಳನ್ನೂ ತಪ್ಪಾಗಿ ನಿರೂಪಿಸುತ್ತಾನೆ. ನಮ್ಮ ರಕ್ಷಕನು ನುಡಿದದ್ದು: “ನಿನ್ನನ್ನು ದೂಷಿಸುವವರ ದೂಷಣೆಗಳು ನನ್ನ ಮೇಲೆ ಬ್ದಿವೆ.” ಕೀರ್ತನೆ 69:9. ಇದೇ ರೀತಿಯಲ್ಲಿ ಅವು ಆತನ ಶಿಷ್ಯರ ಮೇಲೆ ಬೀಳುತ್ತವೆ. ಮಾನವರ ಮಧ್ಯದಲ್ಲಿ ವಾಸಿಸಿದವರಲ್ಲಿ ಮನುಷ್ಯಕುಮಾರನಿಗಿಂತಲೂ ನಿರ್ದಯವಾಗಿ ಮಿಥ್ಯಾಪವಾದಕ್ಕೆ ಗುರಿಯಾದವನು ಮತ್ತೊಬ್ಬನಿಲ್ಲ. ಆತನು ದೇವರ ಪರಿಶುದ್ಧ ಆಜ್ಞೆಗಳ ಮೂಲತತ್ವಕ್ಕೆ ಚ್ಯುತಿ ಬಾರದ ವಿಧೇಯತ್ವದ ಸಲುವಾಗಿ ಅಪಹಾಸ್ಯಕ್ಕೆ ಗುರಿಯಾಗಿ ಧಿಕ್ಕರಿಸಲ್ಪಟ್ಟನು; ಕಾರಣವಿಲ್ಲದೆ ಆತನನ್ನು ದ್ವೇಷಿಸಿದರು. ಹೀಗಿದ್ದರೂ ಆತನು ತನ್ನ ವಿರೋಢಿಗಳ ನಡುವೆ ಪ್ರಶಾಂತನಾಗಿ ನಿಂತು, ನಿಂದೆಯು ಕ್ರೈಸ್ತರ ಆಸ್ತಿಯ ಒಂದು ಭಾಗವೆಂದು ವ್ಯಕ್ತಪಡಿಸಿ, ತನ್ನ ಹಿಂಬಾಲಕರಿಗೆ, ಮತ್ಸರವೆಂಬ ಬಾಣಗಳನ್ನು ಹೇಗೆ ಎದುರಿಸುವುದೆಂದು ಬೋಧಿಸಿ, ಹಿಂಸೆಯು ಬರುವಾಗ ಸೋತು ಹೋಗದಂತೆ ಎಚ್ಚರಿಸಿದನು.MBK 36.2

  ಮಿಥ್ಯಾಪವಾದಗಳು ಸತ್ಕೀರ್ತಿಗೆ ಕಳಂಕವನ್ನುಂಟುಮಾಡುವುದಾದರೂ, ಅವು ಸೌಜನ್ಯವನ್ನು ಮಲಿನ ಮಾಡುವು. ಅವು ದೇವರ ಆಶ್ರಯದಲ್ಲಿವೆ. ನಾವು ಪಾಪಕ್ಕೊಡಂಬಡದಷ್ಟು ಕಾಲವೂ, ಯಾವ ಶಕ್ತಿಯೂ, ಮಾನವನ ಅಥವಾ ಸೈತಾನನ ಶಕ್ತಿಯಾಗಲೀ, ನಮ್ಮ ಆತ್ಮಗಳನ್ನು ಮಲಿನ ಮಾಡಲಾರವು. ದೇವರ ಮೇಲಾತುಕೊಂಡಿರುವ ಹೃದಯವುಳ್ಳ ಮನುಷ್ಯನು ಅತ್ಯಧಿಕ ಕ್ಲೇಶಭರಿತ ಶೋಧನೆಗಳ ವೇಳೆಯಲ್ಲೂ ಮತ್ತು ಅಧಿಕ ಆಶಾಭಂಗ ಸನ್ನಿವೇಶಗಳಲ್ಲೂ ತಾನು ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಹಾಗೆಯೇ ಇರುವನು. ಅವನ ನುಡಿ, ಉದ್ದೇಶ, ನಡೆಗಳು ಸುಳ್ಳಾಗಿ ನಿರೂಪಿಸಲ್ಪಡಬಹುದು, ಆದರೂ ಅದರ ವಿಷಯದಲ್ಲಿ ಚಿಂತಿಸನು, ಯಾಕಂದರೆ ಅವನಿಗೆ ಸುಡುಸಾವಿನಲ್ಲಿ ಹೆಚ್ಚಿನ ಆಸಕ್ತಿ ಇದೆ. ಮೋಶೆ ಯಂತೆ “ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ” ದೃಢಚಿತ್ತನಾಗಿರುವನು. ಇಬ್ರಿಯ 11:27; “ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು ಲಕ್ಷಿಸುವವ” ನಾಗಿದ್ದಾನೆ (2 ಕೊರಿಂಥ 4:18).MBK 37.1

  ಮನುಷ್ಯರಿಂದ ಅಪಾರ್ಥ ಮಾಡಿಕೊಂಡ ಮತ್ತು ತಪ್ಪಾಗಿ ನಿರೂಪಿಸಲ್ಪಟ್ಟ ಕಾರ್ಯಗಳನೆಲ್ಲಾ ಕ್ರಿಸ್ತನು ಅರಿತಿದ್ದಾನೆ. ಆತನ ಮಕ್ಕಳು ತಾವು ಏಷ್ಟು ಹಾನಿಗೊಳಗಾದರೂ ಮತ್ತು ಜರೆಯಲ್ಪಟ್ಟರೂ ಶಾಂತಿಯಿಂದಲೂ ಭರವಸೆಯಿಂದಲೂ ಕಾದಿರಬಲ್ಲರು; ಹೊರಪಡದ ರಹಸ್ಯವಾವುದೂ ಇಲ್ಲ, ದೇವರನ್ನು ಸನ್ಮಾನಿಸುವವರು ಮನುಷ್ಯರ ಮತ್ತು ದೇವದೂತರ ಸಮುಖದಲ್ಲಿ ಆತನಿಂದ ಸನ್ಮಾನಿಸಲ್ಪಡುವರು. MBK 38.1

  “ಜನರು ನಿಮ್ಮನ್ನು ನಿಂದಿಸಿ ಹಿಂಸೆ ಪಡಿಸಿದರೆ ಸಂತೋಷಪಡಿರಿ, ಉಲ್ಲಾಸ ಪಡಿ” ರೆಂದು ಯೇಸುವು ಹೇಳಿದನು, ಮತ್ತು ತನ್ನ ಉಪದೇಶವನ್ನು ಕೇಳುತ್ತಿದ್ದವರಿಗೆ ಕರ್ತನ ಹೆಸರಿನಲ್ಲ್ ಪ್ರವಾದಿಸಿದ ಪ್ರವಾದಿಗಳನ್ನು ತೋರಿಸಿ, “ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಕರ್ತನ ಹೆಸರಿನಿಂದ ಮಾತಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ” (ಯಾಕೋಬ 5:1೦), ಎಂದು ಹೇಳಿದನು. ಆದಾಮನ ಮಕ್ಕಳಲ್ಲಿ ಪ್ರಥಮ ಕ್ರೈಸ್ತನಾದ ಹೇಬೆಲನು ರಕ್ತಸಾಕ್ಷಿಯಾಗಿ ಸತ್ತನು. ಹನೋಕನು ದೇವರೊಡನೆ ಸಂಚರಿಸಿದನು, ಮತ್ತು ಲೋಕವು ಅವನನ್ನು ಕಾಣಲಿಲ್ಲ. ನೋಹನು ಉನ್ಮತನೆಂದೂ ಭೀತಿಕಾರಕನೆಂದೂ ಅಪಹಾಸ್ಯ ಮಾಡಲ್ಪಟ್ಟನು. “ಬೇರೆ ಕೆಲವರು ಅಪಹಾಸ್ಯ ಕೊರಡೆಯ ಪೆಟ್ಟು ಬೇಡಿ ಸೆರೆಮನೆ ಇವುಗಳನ್ನು ಅನುಭವಿಸಿದರು.” “ಕೆಲವರು ತಾವು ಯಾತನೆಯ ಯಂತ್ರಕ್ಕೆ ಕಟ್ಟಲ್ಪಟ್ಟಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವುದಕ್ಕೋಸ್ಕರ ಬಿಡುಗಡೆ ಬೇಭವೆಂದು.......ಸತ್ತರು.” ಇಬ್ರಿಯ 11:36, 35.MBK 38.2

  ಎಲ್ಲಾ ಕಾಲಗಳಲ್ಲೂ ದೇವರಾದುಕೊಂಡ ನಿಯೋಗಿಗಳು ನಿಂದಿಸಲ್ಪಟ್ಟೂ ಹಿಂಸಿಸಲ್ಪಟ್ಟಿದ್ದಾರೆ. ಹೀಗಿದ್ದರೂ ಅವರ ಸಂಕಟಗಳ ಮೂಲಕವಾಗಿಯೇ, ದೇವರ ವಿಷಯವಾದ ಪರಿಜ್ಞಾನವು ಅಷ್ಟದಿಕ್ಕುಗಳಿಗೂ ಪ್ರಸರಿಸಿದೆ. ಕ್ರಿಸ್ತನ ಪ್ರತಿಯೊಬ್ಬ ಶಿಷ್ಯನೂ ವ್ಯೂಹದಲ್ಲಿ ಸೇರಿ, ಸತ್ಯಕ್ಕೆ ವಿರೋಧವಾಗಿ ಅದರ ದ್ವೇಷಿಗಳೂ ಏನ ಮಾಡಲಾರರೆಂದೂ ಅದಕ್ಕೆ ಬದಲಾಗಿ ಸತ್ಯದ ಪರವಾಗಿರುವರೆಂದು ಅರಿತು, ಇದೇ ಸೇವೆಯನ್ನು ಸಾಧಿಸಬೇಕು. ಸತ್ಯವು ಮುಂದಕ್ಕೆ ತರಲ್ಪಟ್ಟು ಅದರ ಮೇಲೆ ಇಡಲ್ಪಟ್ಟಿರುವ ಎಲ್ಲಾ ತಾತ್ಸಾರಗಳ ಮೂಲಕವೂ, ಪರಿಶೋಧನೆಯ ಮತ್ತು ವಾದವಿವಾದಗಳ ಪ್ರಸಂಗವಾಗುವುದು ಎಂಬುದೇ ದೇವರ ಅರ್ಥವಾಗಿದೆ. ಮನುಷ್ಯರ ಮನಸ್ಸುಗಳು ಉದ್ರಿಕ್ತಗೊಳ್ಳಬೇಕು; ಪ್ರತಿಯೊಂದು ವಾಗ್ಯುದ್ಧವೂ, ಪ್ರತಿಯೊಂದು ಆಕ್ಷೇಪಣೆಯೂ, ಮನಸಾಕ್ಷಿಯ ಸ್ವಾತಂತ್ರವನ್ನು ನಿರ್ಬಂಧಿಸುವ ಪ್ರತಿಯೊಂದು ಪ್ರಯತ್ನವೂ, ಮನಸ್ಸುಗಳು ನಿದ್ರೆಹೋಗದಂತೆ ಎಬ್ಬಿಸುವ ದೇವರ ಸಾಧನವಾಗಿದೆ.MBK 38.3

  ದೇವರ ನಿಯೋಗಿಗಳ ಇತಿಹಾಸದಲ್ಲಿ ಎಷ್ಟು ಸಾರಿ ಪದೇ ಪದೇ ಈ ಫಲಿತಾಂಶಗಳು ಕಂಡುಬಂದಿವೆ! ಕುಲೀನನೂ ಮತ್ತು ವಾಗ್ವಿಶಾರದನೂ ಆದ ಸ್ತೆಫನನು ಸನ್ಹೆದ್ರಿಮ್ ಸಂಘದ ದುರ್ಬೋಧನೆಯಿಂದ ಕಲ್ಲೆಸೆದು ಕೊಲ್ಲಲ್ಪಟ್ಟಾಗ, ಸೌವಾರ್ತ ಪ್ರಚಾರಣ ಕಾರ್ಯಕ್ಕೇನೂ ನಷ್ಟವೇರ್ಪಡಲಿಲ್ಲ. ಆತನ ವದನವನ್ನು ಶೋಭಾಯಮಾನಗೊಳಿಸಿದ ಪರಲೋಕ ಜ್ಯೋತಿಯು, ಅವನು ಸಾಯುತ್ತಿರುವಾಗ ಮಾಡಿದ ದೈವಕರುಣೇಯನ್ನು ಸುರಿದ ಪ್ರಾರ್ಥನೆಯು ಆತನ ಬಳಿಯಲ್ಲಿ ನಿಂತಿದ್ದ ಮತಾಂಧತೆಯುಳ್ಳ ಸನ್ಹೆದ್ರಿಮ್ ಸಂಘದವರಿಗೆ ಅಪರಾಧ ನಿರ್ಣಯವೆಂಬ ಹರಿತವಾದ ಕಣೆಯಂತಿದ್ದವು, ಮತ್ತು ಹಿಂಸಕ ಪರಿಸಾಯನಾದ ಪೌಲನು ಅನ್ಯಜನರಿಗೂ, ಅರಸುಗಳಿಗೂ ಮತ್ತು ಇಸ್ರಾಯೇಲ್ಯರಿಗೂ ಕ್ರಿಸ್ತನ ಹೆಸರನ್ನು ಪ್ರಕಟಿಸಲು ಆರಿಸಲ್ಪಟ್ಟ ಸಾಧನವಾದನು. ಬಹು ದಿನಗಳ ತರುವಾಯ ವಯೋವೃದ್ಧನಾದ ಪೌಲನು ರೋಮ್ ಪಟ್ಟಣದ ಕಾರಾಗೃಹದಿಂದ ಬರೆದದ್ದೇನೆಂದರೆ: “ಕೆಲವರು ಹೊಟ್ಟೆಕಿಚ್ಚು ಪಟ್ಟು ಭೇದ ಹುಟ್ಟಿಸಬೇಕೆಂಬ ಭಾವನೆಯಿಂದ ಬೇರೆ ಕೆಲವರು ಒಳ್ಳೇ ಭಾವದಿಂದ ಕ್ರಿಸ್ತನನ್ನು ಪ್ರಚುರ ಪಡಿಸುತ್ತಾರೆ....ಆ ಬೇರೆ ತರದವರಾದರೋ ನಾನು ಬೇಡಿ ಬಿದ್ದಿರುವಾಗಲೂ ನನಗೆ ಸಂಕಟವನ್ನೆಬ್ಬಿಸಬೇಕೆಂದು ಯೋಚಿಸಿ ಕ್ರಿಸ್ತನನ್ನು ಯಥಾರ್ಥವಾಗಿ ಪ್ರಸಿದ್ಧಿಪಡಿಸದೆ ಕಕ್ಷಿಭಾವದಿಂದ ಪ್ರಸಿದ್ಧಿಪಡಿಸುತ್ತಾರೆ. ಯಾವ ರೀತಿಯಿಂದಾದರೂ ಕಪಟದಿಂದಾಗಲೀ ಸತ್ಯದಿಂದಾಗಲೀ ಕ್ರಿಸ್ತನನ್ನು ಪ್ರಸಿದ್ಧಿಪಡಿಸುವುದುಂಟು.” ಫಿಲಿಪ್ಪಿ 1:15, 16-18. ಪೌಲನ ಬಂಧನದಿಂದ ಸುವಾರ್ತೆಯು ನಾನಾ ದಿಕ್ಕುಗಳಿಗೂ ಹರಡಿತು, ಮಾತ್ರವಲ್ಲದೆ ಕೈಸರನ ಅರಮನೆಯಲ್ಲೇ ಅನೇಕ ಆತ್ಮಗಳು ಕ್ರಿಸ್ತನಿಗೋಸ್ಕರವಾಗಿ ರಕ್ಷಿಸಲ್ಪಟ್ಟವು. ಇದನ್ನು ಕೆಡಿಸಲು ಸೈತಾನನು ಪಟ್ಟ ಪ್ರಯಾಸಗಳಿಂದ “ದೇವರ ಸದಾ ಜೀವವುಳ್ಳ ವಾಕ್ಯ” ವೆಂಬ “ನಾಶವಾಗದ ಬೀಜವು” (1 ಪ್ರೇತ 1:23), ಮನುಷ್ಯರ ಹೃದಯದಲ್ಲಿ ಬಿತ್ತಲ್ಪಡುತ್ತಿದೆ; ಆತನ ಮಕ್ಕಳನ್ನು ಹಿಂಸಿಸಿ ಅಪಮಾನ ಪಡಿಸುವುದರ ಮೂಲಕವೇ, ಕ್ರಿಸ್ತನ ಹೆಸರು ಘನಪಡಿಸಲ್ಪಟ್ಟು, ಆತ್ಮಗಳು ರಕ್ಷಿಸಲ್ಪಡುತ್ತವೆ.MBK 39.1

  ಉಪದ್ರ ನಿಂದಾಪಮಾನಗಳಲ್ಲೂ ಕ್ರಿಸ್ತನಿಗಾಗಿ ಸಾಕ್ಷಿಗಳಾಗಿರುವವರ ಬಹುಮಾನವು ಪರಲೋಕದಲ್ಲಿ ಅತ್ಯುತ್ತಮವಾದುದು. ಜನರು ಪ್ರಾಪಂಚಿಕ ಹಿತವನ್ನು ಬಯಸುವವರಾಗಿರಲು, ಕ್ರಿಸ್ತನು ಅವರಿಗೆ ಪರಲೋಕದ ಬಹುಮತಿಯನ್ನು ತೋರಿಸುತ್ತಾನೆ. ಆದರೆ ಆತನು ಅದೆಲ್ಲವನ್ನೂ ಮುಂದಿನ ಜೀವನಕ್ಕೆಂದು ಇಟ್ಟಿಲ್ಲ; ಅದು ಅಲ್ಲಿಯೇ ಆರಂಭವಾಗುತ್ತದೆ. ಹಿಂದಿನ ಕಾಲದಲ್ಲಿ ದೇವರು ಅಬ್ರಹಾಮನಿಗೆ ಕಾಣಿಸಿಕೊಂಡು ಹೇಳಿದ್ದೇನಂದರೆ, “ನಾನು ನಿನಗೆ ಗುರಾಣಿಯಾಗಿದ್ದೇನೆ; ನಿನಗೋಸ್ಕರ ಅತ್ಯಧಿಕ ಬಹುಮಾನವು ಇಟ್ಟಿದೆ ಎಂಬುದೇ” ಆದಿಕಾಂಡ 15:11. ಕ್ರಿಸ್ತನನ್ನು ಹಿಂಬಾಲಿಸುವವರೆಲ್ಲರ ಬಹುಮಾನವು ಇದೇ. ಯೆಹೋವ ಇಮ್ಮಾನುವೇಲನು-“ತನ್ನಲ್ಲೇ ಜ್ಞಾನವಿದ್ಯಾ ಸಂಬಂಧವಾದ ನಿಕ್ಷೇಪಗಳನ್ನೆಲ್ಲಾ ಅಡಗಿಸಿಕೊಂಡಿರುವ ಕ್ರಿಸ್ತನು” ಯಾರಲ್ಲಿ “ದೇವರ ಸರ್ವಸಂಪೂರ್ಣತೆಯು ಅವತರಿಸಿ ವಾಸಮಾಡುತ್ತದೋ” ಆತನನ್ನು (ಕೊಲೊಸ್ಸೆ 2:3,9) ಆತನ ಗುಣಲಕ್ಷಣಗಳನ್ನು ಸ್ವೀಕರಿಸಲು ಹೃದಯವು ತೆರೆಯಲ್ಪಟ್ಟಾಗ ಸಹಾನುಭೂತಿಯಿಂದ ಆತನನ್ನು ಅರಿತುಕೊಳ್ಳುವಂತೆಯೂ, ಆತನನ್ನು ಹೊಂದಿಕೊಳ್ಳುವಂತೆಯೂ ಕರೆದು ತರಬೇಕು; ಆತನ ಪ್ರೀತಿಯನ್ನೂ ಪ್ರತಾಪವನ್ನೂ ಅರಿತುಕೊಳ್ಳುವಂತೆಯೂ, ಹುಡುಕಲಾಗದ ಕ್ರಿಸ್ತನ ಐಶ್ವರ್ಯವನ್ನು ಹೊಂದುವಂತೆಯೂ, “ದೇವರ ಪ್ರೀತಿಯ....ಅಗಲ ಉದ್ದ ಎತ್ತರ ಆಳ ಎಷ್ಟೆಂಬುದನ್ನು ದೇವಜನರೆಲ್ಲರೊಂದಿಗೆ ಗ್ರಹಿಸಿ ಜ್ಞಾನಕ್ಕೆ ಮೀರುವ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳಲು ಪೂರ್ಣ ಶಕ್ತರಾಗಿದ್ದು ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆಯೂ” (ಎಫೆಸ 3:18, 19) — “ಯೆಹೋವನ ಸೇವಕರ ಸ್ವಾಸ್ತ್ಯವೂ ನಾನು ದಯಪಾಲಿಸವ ಸದ್ಧರ್ಮಫಲವೂ ಆಗಿದೆ ಎಂದು ಯೆಹೋವನು ಅನ್ನುತ್ತಾನೆ” ಯೆಶಾಯ 54: 17.MBK 39.2

  ಫಿಲಿಪ್ಪಿಯದ ಕಾರಾಗೃಹದಲ್ಲಿ ಅರ್ಧರಾತ್ರಿಯಲ್ಲಿ ಪ್ರಾಥಿಸುತ್ತಾ ಹಾಡುತ್ತಾ ದೇವರನ್ನು ಕೊಂಡಾಡುತ್ತಿದ್ದ ಪೌಲ ಸೀಲರ ದಯಗಳಲ್ಲಿ ನೆಲೆಸಿದ್ದ ಉಲ್ಲಾಸವು ಇದೇ. ಕ್ರಿಸ್ತನೇ ಅಲ್ಲಿ ಅವರ ಬಳಿಯಲ್ಲಿ ನಿಂತುಕೊಂಡಿದ್ದನು, ಮತ್ತು ಮೇಲ್ಲೋಕದ ಮಹಿಮೆಯೂ, ಆತನ ಪ್ರಸನ್ನತೆಯ ಬೆಳಕೂ ಅವರ ವಿಷಣ್ಣತೆಯನ್ನು ಬೆಳಗಿದುವು. ಪೌಲನು ತಾನು ಕಾರಾಗೃಹದಲ್ಲಿರುವುದರ ಚಿಂತೆಯೂ ಇಲ್ಲದೆ, ಸುವಾರ್ತೆಯು ಹರಡುತ್ತಿರುವುದನ್ನು ನೋಡಿ ರೋಮ್ ನಗರದಿಂದ ಬರೆದದ್ದೇನಂದರೆ, “ಇದಕ್ಕೆ ಸಂತೋಷಿಸುತ್ತೇನೆ, ಮುಂದೆಯೂ ಸಂತೋಷಿಸುವೆನು,” ಫಿಲಿಪ್ಪಿ 1:18. ಮತ್ತು ಉಪದ್ರವಗಳಲ್ಲಿ ಸಿಲುಕಿದ್ದ ಫಿಲಿಪ್ಪಿಯ ಸಭೆಯವರಿಗೆ ಪೌಲನು ಕಳುಹಿಸಿದ ಸುವಿಶೇಷದಲ್ಲಿ ಕ್ರಿಸ್ತನು ಪರ್ವತದ ಮೇಲೆ ನುಡಿದ ಸಾಕ್ಷಾತ್ ವಾಕ್ಯಗಳೇ ಪ್ರತಿಧ್ವನಿಸಿವೆ, “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರುಗಿ ಹೇಳುತ್ತೇನೆ.” ಫಿಲಿಪ್ಪಿಯ 4: 4.MBK 40.1