Loading...
Larger font
Smaller font
Copy
Print
Contents
ಪರ್ವತ ಪ್ರಸಂಗ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    “ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ.”

    ಸುಳ್ಳಾಡುವುದನ್ನು ಬೋಧಿಸುವವರು ಬಂದು ನಿಮ್ಮನ್ನು ಬಿಕ್ಕಟ್ಟಿನ ದಾರಿಯಿಂದಲೂ ಇಕ್ಕಟ್ಟಾದ ಬಾಗಲಿನಿಂದಲೂ ಬೇರೆ ಮಾರ್ಗಕ್ಕೆಳೆಯಲು ಪ್ರಯತ್ನಿಸುವರು. ಅವರ ವಿಷಯದಲ್ಲಿ ಎಚ್ಚರವಾಗಿರ್ರಿ; ಮೇಲಿನ ತೋರ್ಕೆಗೆ ಕುರಿವೇಷಧಾರಿಗಳಾಗಿದ್ದರೂ, ಒಳಗೆ ಹಿಡುಕೊಂಡುಹೋಗುವ ತೋಳಗಳಾಗಿದ್ದಾರೆ. ಸುಳ್ಳು ಪ್ರವಾದಿಗಳನ್ನು ಸತ್ಯಪ್ರವಾದಿಗಳಿಂದ ಗುರುತಿಸಲು ಯೇಸುವು ಒಂದು ಪರೀಕ್ಷೆಯನ್ನು ಕೊಟ್ಟಿದ್ದಾನೆ. “ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ.” ಮತ್ತೂ ಆತನು ಹೇಳಿದ್ದೇನಂದರೆ ಮನುಷ್ಯರು ಮುಳ್ಳುಗಿಡದಲ್ಲಿ ದ್ರಾಕ್ಷೇಹಣ್ಣುಗಳನ್ನೂ, ಮದ್ದುಗುಣಿಕೇ ಗಿಡಗಳಲ್ಲಿ ಅಂಜೂರಗಳನ್ನೂ ಕೊಯ್ಯುವುದುಂಟೇ?” MBK 145.1

    ನಾವು ಅವರನ್ನು ಅವರ ನಯನುಡಿಗಳಿಂದಲೂ ಮತ್ತು ಗಂಭೀರವಾದ ಉದ್ಯೋಗದಿಂದಲೂ ಸಿದ್ಧಾಂತಮಾಡಬೇಕೆಂದು ಆಜ್ಞಾಪಿಸಲ್ಪಟ್ಟಿಲ್ಲ. ದೇವರ ವಾಕ್ಯಕ್ಕನುಗುಣವಾಗಿ ಅವರು ತೀರ್ಪಿಸಲ್ಪಡಬೇಕು. “ದೇವರ ಉಪದೇಶವನ್ನೂ ದೇವರ ಬೋಧನೆಯನ್ನೂ ವಿಚಾರಿಸುವ ಎಂದು ಅವರು ಹೇಳದಿದ್ದರೆ ಅವರಿಗೆ ಎಂದಿಗೂ ಬೆಳಕಾಗುವುದಿಲ್ಲ.” ಯೆಶಾಯ 8: 2೦, “ಮಗನೇ, ಬುದ್ಧಿವಾದಗಳನ್ನು ಅನುಸರಿಸಲಿಕ್ಕೆ ಮನಸ್ಸಿಲ್ಲದಿದ್ದರೆ ಉಪದೇಶವನ್ನು ಕೇಳುವುದನ್ನೇ ಬಿಟ್ಟುಬಿಡು.” ಜ್ಞಾನೋಕ್ತಿ 19: 27. ಈ ಸುಳ್ಳು ಬೋಧಕರು ಯಾವ ಸುವಿಶೇಷವನ್ನು ಬೋಧಿಸುತ್ತಾರೆ? ಅವರ ಬೋಧನೆಯು ದೇವರಿಗೆ ಭಯಪಟ್ಟು ಆತನನ್ನು ಘನಪಡಿಸುವಂತೆ ನಡಿಸುತ್ತವೋ? ನಿನ್ನ ದೈವಭಕ್ತಿಯಿಂದ ಆತನ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಮೇಲೆ ನಿನಗಿರುವ ಪ್ರೀತಿಯನ್ನು ಪ್ರಕಟಿಸುತ್ತದೋ? ಮಾನವರು ನೀತಿ ತತ್ವಗಳ ಅಮೂಲ್ಯತೆಯನ್ನು ಗ್ರಹಿಸದಿದ್ದರೆ; ದೈವನಿಯಮಗಳನ್ನು ತೃಣೀಕರಿಸಿದರೆ; ಆಜ್ಞೆಗಳನ್ನೆಲ್ಲಾ ಕೈಕೊಂಡು ನಡೆದು ಒಂದೇ ಒಂದನ್ನು ಮೀರಿ ಅದರಂತೆ ನಡೆಯಲು ಮನುಷ್ಯರಿಗೆ ಕಲಿಸುವವರು ಪರಲೋಕದ ದೃಷ್ಟಿಯಲ್ಲಿ ಮಾನ್ಯರಾಗ ಲಾರರು. ಅವರ ಸಾಧನೆಗಳೆಲ್ಲಾ ನಿರಾಧಾರವಾದುವುಗಳೆಂದು ನಾವು ತಿಳುಕೊಳ್ಳಬಹುದು. ದೇವರ ವಿರೋಧಿಯಾದ, ಅಂಧಕಾರದ ಅರಸನಿಂದ ಉತ್ಪತ್ತಿಯಾದ ಕಾರ್ಯವನ್ನೇ ಅವರು ಮಾಡುತ್ತಿದ್ದಾರೆ.MBK 145.2

    ಕ್ರಿಸ್ತನ ಹೆಸರನ್ನು ಧರಿಸಿ ಆತನ ಮುದ್ರೆಯನ್ನು ಹೊಂದಿರುವವರೆಲ್ಲರೂ ಕ್ರೈಸ್ತರಲ್ಲ, ನನ್ನ ಹೆಸರಿನಲ್ಲಿ ಬೋಧಿಸಿದ ಅನೇಕರು ಆ ದಿನದಲ್ಲಿ ಕೊರತೆಯುಳ್ಳವರಾಗಿ ಕಂಡುಬರುವರೆಂದು ಕ್ರಿಸ್ತನು ಹೇಳಿದನು. “ಸ್ವಾಮೀ, ಸ್ವಾಮೀ, ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ- ನಾನೆಂದೂ ನಿಮ್ಮ ಗುರುತುಕಾಣೆನು; ಧರ್ಮವನ್ನು ಮೀರಿ ನಡೆಯುವವರೇ, ನನ್ನಿಂದ ತೊಲಗಿ ಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.” MBK 146.1

    ನಾವು ತಪ್ಪಿನಲ್ಲಿದ್ದರೂ ಕೂಡ, ಅದೇ ಸರಿಯಾದದ್ದೆಂದು ಹೇಳುವ ಅನೇಕರಿದ್ದಾರೆ. ಕ್ರಿಸ್ತನನ್ನು ತಮ್ಮ ಸ್ವಾಮಿಯೆಂದು ಹೇಳಿಕೊಂಡು, ಆತನ ಹೆಸರಿನಲ್ಲಿ ಮಹತ್ಕಾರ್ಯಗಳನ್ನು ಮಾಡುವವರಾದರೂ, ಅವರೆಲ್ಲರೂ ಅಧರ್ಮ ಪ್ರವರ್ತಕರು, “ಬಾಯಿಂದ ಬಹು ಪ್ರೀತಿಯನ್ನು ತೋರಿಸುತ್ತಾರೆ. ಅವರ ಮನಸ್ಸೇನೋ ತಾವು ದೋಚಿಕೊಂದವರ ಮೇಲೆ ಹೋಗುತ್ತದೆ.” ದೇವರ ವಾಕ್ಯವನ್ನು ಅವರಿಗೆ ಬೋಧಿಸುವವನು “ಒಬ್ಬ ಸಂಗೀತಗಾರನು ವಾದ್ಯವನ್ನು ಜಾಣತನದಿಂದ ಬಾರಿಸಿ ಮಧುರಸ್ವರದಿಂದ ಹಾಡುವ ಪ್ರೇಮಗೀತಕ್ಕೆ ಸಮವಾಗಿದೆ; ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಕೈಕೊಳ್ಳುವುದಿಲ್ಲ.” ಯೆಹೆಜ್ಕೇಲ 33: 31, 32.MBK 146.2

    ಶಿಷ್ಯರೆಂದು ಹೇಳಿಕೊಂಡ ಮಾತ್ರಕ್ಕೆ ಪ್ರಯೋಜನವಿಲ್ಲ. ಆತ್ಮಗಳ ರಕ್ಷಣಾರ್ಥವಾದ ಯೇಸುವಿನ ಮೇಲಣ ನಂಬಿಕೆಯು ಅನೇಕರಿಂದ ಈಗ ನಿರೂಪಿಸಲ್ಪಡುತ್ತಿರುವುದಲ್ಲ, ನಂಬಿರಿ, ನಂಬಿರಿ, ಆಜ್ಞೆಗಳನ್ನು ಕೈಕೊಳ್ಳಬೇಕಾದ ಅವಶ್ಯವಿಲ್ಲವೆಂದು ಬೋಧಿಸುತ್ತಾರೆ. ಆದರೆ ವಿಧೇಯತೆಯಿಲ್ಲದ ನಂಬಿಕೆಯು ಬರೇ ಆತ್ಮವಿಶ್ವಾಸದ ಭಾವನೆಯಷ್ಟೆ. ಅಪೋಸ್ತಲನಾದ ಯೋಹಾನನು ಹೇಳುವುದೇನಂದರೆ: “ಆತನನ್ನು ಬಲ್ಲೆನೆಂದು ಹೇಳಿ ಆತನ ಆಜ್ಞೆಗಳನ್ನು ಕೈಕೊಳ್ಳದೆ ನಡೆಯುವವನು ಸುಳ್ಳುಗಾರನಾಗಿದ್ದಾನೆ; ಸತ್ಯವೆಂಬುದು ಅವನಲ್ಲಿ ಇಲ್ಲ.” 1 ಯೋಹಾನ 2: 4, ತಾವು ಮಾಡುವ ನಿಷ್ಕಪಟವಾದ ಸೇವೆಗೆ ಅಥವಾ ತಾವು ಸಮರ್ಥಿಸುವ ಮನೋಗತಕ್ಕೆ ವಿಶೇಷವಾದ ದೈವಾನುಗ್ರಹವೂ ಮತ್ತು ಸಾರ್ವಜನಿಕ ಘೋಷಣೆಯೂ ಸಾಕ್ಷಿಗಳಾಗಿವೆ ಎಂಬ ಮನೋಭಾವನೆಯುಳ್ಳವರಾಗಿರಬೇಕು. ಜನರು ದೇವರ ವಾಕ್ಯದ ವಿಷಯ ದಲ್ಲಿ ಲಘುವಾಗಿ ಮಾತನಾಡಿ, ದೈವಪ್ರಮಾಣಕ್ಕಿಂತಲೂ ತಮ್ಮ ಅಭಿಪ್ರಾಯವನ್ನೂ, ಮತ್ತು ಮನೋಭಾವವನ್ನೂ ಅಧಿಕವಾಗಿ ಅನುಷ್ಠಾನ ಪಡಿಸುವುದಾದರೆ, ಅವರಲ್ಲಿ ಸತ್ಯವೆಂಬುದು ಇಲ್ಲವೆಂದು ನಾವು ತಿಳಿದುಕೊಳ್ಳತಕ್ಕದ್ದು.MBK 146.3

    ವಿಧೇಯತೆಯೇ ಶಿಷ್ಯವೃತ್ತಿಯ ಪರೀಕ್ಷೆಯಾಗಿದೆ. ಆಜ್ಞೆಗಳನ್ನು ಕೈಕೊಳ್ಳುವುದೇ ನಾವು ಹೊಗಳಿಕೊಳ್ಳುವ ಪ್ರಾಮಾಣಿಕ ಪ್ರೀತಿಯ ಸಾಕ್ಷಿಯಾಗಿದೆ. ನಾವು ಅಂಗೀಕರಿಸಿಕೊಳ್ಳುವ ಧಾರ್ಮಿಕ ತತ್ವವು ಹೃದಯದಲ್ಲಿ ಪಾಪವನ್ನು ನಾಶಪಡಿಸಿ, ಆತ್ಮವನ್ನು ಸಕಲ ವಿಧವಾದ ಕಲ್ಮಷದಿಂದ ಶುದ್ಧೀಕರಿಸಿ, ಪರಿಶುದ್ಧತೆಯ ಫಲವನ್ನು ಫಲಿಸುವುದಾದರೆ ಆಗಲೇ ಅದು ದೇವರಿಂದಾದ ಸತ್ಯವೆಂದು ನಾವು ಅರಿತುಕೊಳ್ಳಬಹುದು. ನಮ್ಮ ಜೀವ್ಯದಲ್ಲಿ ಧರ್ಮಬುದ್ಧಿ, ದಯಾಪರತೆ, ಸೌಮ್ಯಹೃದಯ, ಸಹಾನುಭೂತಿ, ಇವುಗಳೆಲ್ಲಾ ವ್ಯಕ್ತವಾದಾಗಲೂ; ನಮ್ಮ ಹೃದಯದಲ್ಲಿ ಸೌಶೀಲ್ಯದ ಆನಂದವು ನೆಲಸಿರುವಾಗಲೂ; ನಮ್ಮನ್ನು ಮಹಿಮೆ ಪಡಿಸಿಕೊಳ್ಳದೆ ಕ್ರಿಸ್ತನನ್ನೇ ಎಲ್ಲಕ್ಕಿಂತಲೂ ಅಧಿಕವಾಗಿ ಘನಪಡಿಸುವಾಗಲೂ, ನಾವು ಹಿಡಿದಿರುವ ಧರ್ಮವು ಸರಿಯಾದದ್ದೆಂದು ಅರಿತುಕೊಳ್ಳಬಹುದು. “ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆದರೆ ಅದರಿಮ್ದಲೇ ಆತನನ್ನು ಬಲ್ಲವರಾಗಿದ್ದೇವೆಂದು ತಿಳುಕೊಳ್ಳುತ್ತೇವೆ.” 1 ಯೋಹಾನ 2: 3.MBK 147.1