Loading...
Larger font
Smaller font
Copy
Print
Contents
ಪರ್ವತ ಪ್ರಸಂಗ - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  “ನಿನ್ನ ಕಣ್ಣು ನೆಟ್ಟಗಿದ್ದರೆ ನಿನ್ನ ದೇಹವೆಲ್ಲಾ ಬೆಳಕಾಗಿರುವುದು.”

  ಇಲ್ಲಿ ರಕ್ಷಕನ ಮಾತುಗಳು, ಏಕೋದ್ದೇಶವನ್ನೂ, ಹೃತ್ಪೂರಕವಾದ ದೈವಭಕ್ತಿಯನ್ನೂ ತೋರ್ಪಡಿಸುತ್ತವೆ. ಉದ್ದೇಶವು, ಸತ್ಯವನ್ನು ಗ್ರಹಿಸಿ ಎಲ್ಲಾ ಸ್ಥಿತಿಗಳಲ್ಲೂ ಅದಕ್ಕೆ ವಿಧೇಯವಾಗಿರುವಂತೆ, ಯಥಾರ್ಥವೂ ಮತ್ತು ಆಂದೋಲನವಾಗದೆಯೂ ಇರಬೇಕು, ಆಗ ನೀವು ದೈವಜ್ಞಾನವನ್ನು ಹೊಂದುವಿರಿ. ಪಾಪದೊಡನೆ ಸಂಬಂಧವು ಅಂತ್ಯವಾದಾಗಲೇ ಯಥಾರ್ಥವಾದ ದೈವಭಕ್ತಿಯು ಪ್ರಾರಂಭಿಸುತ್ತದೆ. ಆಗ ಹೃದಯದ ಮನೋಭಾವವು ಪೌಲನು ಬರೆದಿರುವಂತಿರುವುದು. ಹೇಗೆಂದರೆ: “ಸಹೋದರರೆ, ನಾನಂತೂ ಹಿಡಿದುಕೊಂಡವನೆಂದು ನನ್ನನ್ನು ಈವರೆಗೂ ಎಣಿಸಿಕೊಳ್ಳುವುದಿಲ್ಲ; ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟ ಮುಂದಿನವುಗಳನ್ನು ಹೆಡಿಯುವುದಕ್ಕೆ ಎದೆ ಬೊಗ್ಗಿದವನಾಗಿ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು, ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.” “ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತುಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನೂ ನಷ್ಟವೆಂದೆಣಿಸುತ್ತೇನೆ” ಫಿಲಿಪ್ಪಿ 3: 13, 14, 8.MBK 94.1

  ಆದರೆ ಕಣ್ಣುಗಳು ಆತ್ಮಾನುರಾಗದಿಂದ ಕುರುಡಾದರೆ ಎಲ್ಲವೂ ಅಂಧಕಾರಮಯವಾಗುವುದು. “ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ ನಿನ್ನ ದೇಹವೆಲ್ಲಾ ಕತ್ತಲಾಗಿರುವುದು.” ಈ ಭಯಂಕರ ಕತ್ತಲೆಯೇ ಯೆಹೂದ್ಯರನ್ನು ಹಟಮಾರಿತನದ ಅವಿಶ್ವಾಸದಿಂದ ಆವರಿಸಿ ಅವರ ಪಾಪದಿಂದ ಅವರನ್ನು ವಿಮೋಚಿಸಲು ಬಂದಾತನ ಸೌಜನ್ಯವನ್ನೂ ಸೇವೆಯನ್ನು ಅವರು ಮುಚ್ಚಲು ಅಸಾಧ್ಯವಾಗುವಂತೆ ಮಾಡಿತು.MBK 94.2

  ಮನಸ್ಸನ್ನು ಅಂದೋಲವಾಗಲು ಸಮ್ಮತಿಸುವಾಗಲೇ ಶೋಧನೆಗೆ ಒಳಗಾಗಲು, ಮತ್ತು ದೇವರ ಮೇಲಣ ಭರವಸೆಯಲ್ಲಿ ಸ್ಥಿರವಾಗಿರಲು ಪ್ರಾರಂಭವಾಗುತ್ತದೆ. ನಮ್ಮನ್ನು ಸಂಪೂರ್ಣವಾಗಿ ದೇವರಿಗೆ ಒಪ್ಪಿಸದಿದ್ದರೆ, ಆಗ ನಾವು ಕತ್ತಲಲ್ಲಿದ್ದೇವೆಂದರ್ಥವಾಗುತ್ತದೆ. ಯಾವುದನ್ನಾದರೂ ಸ್ವಲ್ಪವಾಗಿ ಉಳಿಸಿಕೊಂದರೂ ನಾವು ಸೈತಾನನು ನಮ್ಮೊಳಕ್ಕೆ ಪ್ರವೇಶಿಸಿ, ನಮ್ಮನ್ನು ಅವನ ಶೋಧನೆಯಿಂದ ದಾರಿ ತಪ್ಪಿ ನಡಿಸಲು ಒಂದು ಬಾಗಿಲನ್ನು ತೆರೆದಿಡುತ್ತೇವೆಂದ ಹಾಗಾಯಿತು. ನಂಬಿಕೆಯ ಕಣ್ಣುಗಳು ದೇವರನ್ನು ಕಾಣದಂತೆ ನಮ್ಮ ದೃಷ್ಟಿಯನ್ನು ಕತ್ತಲೆಗವಿಸಿದರೆ, ಪಾಪಕ್ಕೆ ಅಡಚಣೆ ಇಲ್ಲದೆ ಹೋಗುವುದೆಂದು ಅವನಿಗೆ ಗೊತ್ತು.MBK 94.3

  ಪಾಪೇಚ್ಛೆಯು ಚಾಲ್ತಿಯಲ್ಲಿರುವಲ್ಲಿ ಆತ್ಮವು ಮಾಯಾಜಾಲದಲ್ಲಿ ಸಿಲುಕಿದೆಯೆಂದು ವ್ಯಕ್ತವಾಗುತ್ತದೆ. ಇಂಥಾ ಪ್ರತಿಯೊಂದು ಇಚ್ಛೆಯನ್ನೂ ಪೂರ್ತಿಗೊಳಿ ಸುವ ಉದ್ಯಮದಲ್ಲಿ ದೇವರ ಕಡೆಗೆ ಆತ್ಮದ ಜುಗುಪ್ಸೆಯು ಬಲಗೊಳ್ಳುತ್ತದೆ. ಸೈತಾನನ ಹಾದಿಯನ್ನು ಹಿಂಬಾಲಿಸಿದರೆ, ನಾವು ದುಷ್ಟತನದ ಛಾಯೆಯಿಂದ ಮುತ್ತಲ್ಪಟ್ಟು, ಪ್ರತಿಯೊಂದು ಹೆಜ್ಜೆಯೂ ಗಾಢಾಂಧಕಾರಕ್ಕೆ ನಮ್ಮನ್ನು ನಡಿಸಿ, ಹೃದಯದ ಅಂಧತೆಯನ್ನು ಹೆಚ್ಚಿಸುತ್ತದೆ.MBK 94.4

  ಈ ಕಟ್ತಳೆಯು ಭೌತಪ್ರಪಂಚಕ್ಕೂ ಹೇಗೋ ಹಾಗೆಯೇ ಆಧ್ಯಾತ್ಮಿಕ ಪ್ರಪಂಚಕ್ಕೂ ಸಲ್ಲುತ್ತದೆ. ಕತ್ತಲೆಯಲ್ಲೇ ತಲ್ಲೀನನಾಗಿರುವವನು ಕೊನೆಯಲ್ಲಿ ದೃಷ್ಟಿಯ ಶಕ್ತಿಯನ್ನೇ ಕಳಕೊಳ್ಳುವನು. ಮಧ್ಯರಾತ್ರಿಯ ಅಂಧಕಾರಕ್ಕೂ ಮಿಗಿಲಾದ ಕತ್ತಲೆಯಿಂದ ಮುಚ್ಚಲ್ಪಡುವನು; ಅಂಥವನಿಗೆ ನಡುಹಗಲಿನ ಅತಿ ಪ್ರಕಾಶವೂ ಬೆಳಕನ್ನುಂಟುಮಾಡಲಾರದು. “ಅವನು ಕತ್ತಲೆಯಲ್ಲಿ ನಡೆದುಕೊಳ್ಳುತ್ತಾನೆ. ಕತ್ತಲೆಯು ಅವನ ಕಣ್ಣುಗಳನ್ನು ಕಾಣದ ಹಾಗೆ ಮಾಡಿದ್ದರಿಂದ ತಾನು ಎಲ್ಲಿಗೆ ಹೋಗುತ್ತಾನೋ ಅವನಿಗೆ ತಿಳಿಯದು.” 1 ಯೋಹಾನ 3: 11. ದೃಢವಾಗಿ ದುಷ್ಟತನವನ್ನು ಅಭ್ಯಾಸಿಸುವುದರಿಂದಲೂ, ಬೇಕೆಂದು ದೈವಪ್ರೀತಿಯ ವಾದವನ್ನು ತೃಣೀಕರಿಸುವುದರಿಂದಲೂ, ಪಾಪಿಯು ಸುಕೃತ್ಯಗಳನ್ನು ದ್ವೇಷಿಸಿ, ದೇವರ ಮೇಲಣ ಆಶೆಯನ್ನೂ ಪರಲೋಕದ ಬೆಳಕನ್ನು ಹೊಂದುವ ಶಕ್ತಿಯನ್ನೂ ಕಳಕೊಳ್ಳುವನು. ಕೃಪೆಯ ಆಮಂತ್ರಣವು ಇನ್ನೂ ಪ್ರೀತಿಭರಿತವಾಗಿದೆ, ಅವನ ಆತ್ಮದಲ್ಲಿ ಮೊದಲು ಬೆಳಕು ಉದಯವಾದಂತೆ ಅದೇ ಬೆಳಕು ಈಗಲೂ ಪ್ರಕಾಶಿಸುತ್ತಿದೆ; ಆದರೆ ಧ್ವನಿಯು ಕಿವುಡಾದ ಕಿವಿಗಳ ಮೇಲೂ, ಬೆಳಕು ಕುರುಡಾದ ಕಣ್ಣುಗಳ ಮೇಲೂ ಬೀಳುತ್ತದಷ್ಟೆ.MBK 95.1

  ಒಂದು ಆತ್ಮದಲ್ಲಿ ರಕ್ಷಣೆಯ ನಿರೀಕ್ಷೆಯು ಸ್ವಲ್ಪವಾದರೂ ಇರುವವರೆಗೆ ದೇವರು ಅವನನ್ನು ಅವನ ಮಾರ್ಗದಲ್ಲೇ ಬಿಟ್ಟು ಎಂದೆಂದಿಗೂ ಪರಿತ್ಯಜಿಸುವುದಿಲ್ಲ. “ಮನುಷ್ಯನು ದೇವರಿಂದ ವಿಮುಖನಾಗುತ್ತಾನೆಯೇ ಹೊರತು, ದೇವರು ಮನುಷ್ಯನಿಮ್ದ ವಿಮುಖನಾಗುವುದಿಲ್ಲ.” ಎಲ್ಲಾ ಸಂಯೋಗಗಳೂ ವಿನಾಯಿತಿಗಳೂ ಸಂಪೂರ್ಣ ನಿಷ್ಫಲವೆಂದು ಕಂಡುಬರುವ ಪರ್ಯಂತರವೂ, ನಮ್ಮ ಪರಮ ತಂದೆಯು ಬೇಡುತ್ತಾ, ಎಚ್ಚರಿಸುತ್ತಾ, ಮತ್ತು ಕನಿಕರದ ಭರವಸೆಯನ್ನೀಯುತ್ತಾ ಹಿಂಬಾಲಿಸುವನು. ಜವಾಬ್ದಾರಿಕೆಯು ಪಾಪಿಯ ಮೇಲೆಯೇ ಆತುಕೊಂಡಿದೆ.ಇಂದು ದೇವರಾತ್ಮನನ್ನು ಪ್ರತಿಭಟಿಸುವುದರಿಂದ, ಎರಡನೆಯ ಸಾರಿ ಮಹಾ ಪ್ರಭಾವದಿಮ್ದ ಬರುವ ಬೆಳಕನ್ನು ಪ್ರತಿಭಟಿಸಲು ಮಾರ್ಗವನ್ನು ಸಿದ್ಧಪಡಿಸುತ್ತಾನೆ. ಹೀಗೆ ಒಂದೊಂದು ಹೆಜ್ಜೆಗೂ ಪ್ರತಿಭಟಿಸುತ್ತಾ ಮುಂದುವರಿಯುತ್ತಾನೆ. ಕಡೆಯಲ್ಲಿ ಆ ಬೆಳಕು ಯಾವ ಪರಿಣಾಮವನ್ನೂ ಉಂಟುಮಾಡದೆ, ದೇವರಾತ್ಮನ ಕೂಗಿಗೆ ಸ್ವಲ್ಪವಾ ದರೂ ಪರಿವರ್ತಿಸಲು ಕೂಡದವನಾಗುವನು. ಆಗ “ನಿನ್ನೊಳಗಿರುವ ಬೆಳಕೆ ಕತ್ತಲಾಗು” ವುದು. ನಾವು ತಿಳಿದ ಸತ್ಯಾಂಶಗಳೇ ಅಪಾರ್ಥ ಪಡಿಸಲ್ಪಟ್ಟು ಆತ್ಮದ ಅಂಧತೆಯು ಅಧಿಕವಾಗುವುದು.MBK 95.2