Loading...
Larger font
Smaller font
Copy
Print
Contents
ಪರ್ವತ ಪ್ರಸಂಗ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    “ನೀವು ಪ್ರಾರ್ಥನೆ ಮಾಡುವಾಗ ಕಪಟಿಗಳ ಹಾಗೆ ಮಾಡಬೇಡಿರಿ.”

    ಪರಿಸಾಯರು ಪ್ರಾರ್ಥನೆಯ ಕಾಲಗಳನ್ನು ನಿಯಮಿಸಿದ್ದರು; ಪ್ರಾರ್ಥನೆಯ ಸಮಯವು ಬರುವಾಗಲೆಲ್ಲಾ ಕ್ಲುಪ್ತ ಸಮಯದಲ್ಲಿ ದೇಶಾಂತರದಲ್ಲಿ ಎಲ್ಲಿದ್ದರೂ ಕೂಡ,-ಬೀದಿಯಲ್ಲಿಯೋ ಅಥವಾ ಸಂತೆಯ ಚೌಕಗಳಲ್ಲಿ ಜನಗೊಂದಲದ ಮಧ್ಯದಲ್ಲಿಯೂ,-ಅವರ ಸಾಂಪ್ರದಾಯಿಕವಾದ ಪ್ರಾರ್ಥನೆಗಳನ್ನು ಗಟ್ಟಿಯಾದ ಸ್ವರದಲ್ಲಿ ಕಂಠಪಾಠವಾಗಿ ಹೇಳುವರು. ಅಂಥ ಆತ್ಮ ಶ್ಲಾಘನೆಯ ಆರಾಧನೆಯನ್ನು ಕ್ರಿಸ್ತನು ಕಟುವಾಗಿ ಖಂಡಿಸಿದನು. ಬಹಿರಂಗ ಪ್ರಾರ್ಥನೆಯನ್ನು ಆತನು ಪೇಕ್ಷೆ ಮಾಡಲಿಲ್ಲ; ಯಾಕಂದರೆ ತಾನೇ ತನ್ನ ಶಿಷ್ಯರೊಡನೆ ಜನಸಮೂಹದ ಮುಂದೆ ಪ್ರಾರ್ಥನೆ ಮಾಡಿದನು. ಆದರೆ ಖಾಸಗಿ ಪ್ರಾರ್ಥನೆಯನ್ನು ಬಹಿರಂಗದಲ್ಲಿ ಮಾಡಬಾರದೆಂದು ಬೋಧಿಸಿದನು. ಅಂತರಂಗ ಆರಾಧನೆಯಲ್ಲಿ ನಮ್ಮ ಪ್ರಾರ್ಥನೆಗಳು ಪ್ರಾರ್ಥನೆಯನ್ನು ಕೇಳುವ ದೇವರೊಬ್ಬನಿಗೇ ಹೊರತು ಬೇರೆ ಯಾರ ಕಿವಿಗೂ ಬೀಳಬಾರದು. ಅಂಥ ವಿಜ್ಞಾಪನೆಗಳನ್ನು ಬೇರಾವ ಕುತೂಹಲವುಳ್ಳ ಕಿವಿಯೂ ಕೇಳಿಸಿಕೊಳ್ಳಬಾರದು.MBK 86.3

    “ನೀನು ಪ್ರಾರ್ಥನೆ ಮಾಡಬೇಕಾದರೆ ನಿನ್ನ ಏಕಾಂತ ಕೋಣೆಯೊಳಗೆ ಹೋಗಿ ಬಾಗಿಲನ್ನು ಮುಚ್ಚಿಕೋ.” ಅಂತರಂಗ ಪ್ರಾರ್ಥನೆಗೆ ಒಂದು ಸ್ಥಳವನ್ನು ಇಟ್ಟುಕೋ. ಯೇಸುವು ದೇವರೊಡನೆ ಸಂಪರ್ಕ ಹೊಂದಲು ಕೆಲವು ಸ್ಥಳಗಳನ್ನು ಆರಿಸಿದ್ದನು, ಹಾಗೆಯೇ ನಾವೂ ಸಹ ಮಾಡಬೇಕು. ನಾವು ಅಡಿಗಡಿ ಏಕಾಂತವಾದ ಸ್ಥಳದಲ್ಲಿ, ಅದು ಎಷ್ಟೇ ಕೀಳಾಗಿದ್ದರೂ ಸಹ, ಅಲ್ಲಿ ದೇವರೊಡನೆ ಏಕಾಂತವಾಗಿರುವುದು ಅವ್ಶ್ಯ.MBK 87.1

    “ಅಂತರಂಗದಲ್ಲಿರುವ ನಿನ್ನ ತಂದೆಗೆ ಮಾಡು”. ಯೇಸುವಿನ ಹೆಸರಿನಲ್ಲಿ ನಾವು ಮಕ್ಕಳೇಂಬ ಭರವಸೆಯಿಂದ ದೇವರ ಸನ್ನಿಧಿಗೆ ಬರಬಹುದು. ನಮಗೆ ಯಾವ ಮನುಷ್ಯನೂ ಮಧ್ಯಸ್ಥಿಕೆಯನ್ನು ವಹಿಸಬೇಕಾಗಿಲ್ಲ. ಯೇಸುಸ್ವಾಮಿಯ ಮೂಲಕವಾಗಿ ದೇವರೊಡನೆ ನಮ್ಮನ್ನು ತಿಳಿದವನೂ ಪ್ರ್ಇತಿಸುವವನೂ ಆದವನೊಡನೆ ಹೇಗೋ ಹಾಗೇ ನಮ್ಮ ಹೃದಯಗಳನ್ನು ತೆರೆಯಬಹುದು.MBK 87.2

    ಏಕಾಂತ ಕೋಣೆಯಲ್ಲಿ ದೇವರೊಬ್ಬನ ಕಣ್ಣುಗಳೇ ಹೊರತು ಬೇರಾವ ಕಣ್ಣುಗಳೂ ಕಾಣದ, ಆತನ ಕಿವಿಗಳೇ ಹೊರತು ಬೇರಾವ ಕಿವಿಗಳೂ ಕೇಳದಿರುವಲ್ಲಿ, ನಮ್ಮ ಹೃದಯದಲ್ಲಿ ಅತಿ ಗುಪ್ತವಾಗಿರುವ ಆಕಾಂಕ್ಷೆ ಹಂಬಲಿಕೆಗಳನ್ನೆಲ್ಲಾ ಅನಂತ ಪ್ರೀತಿಸ್ವರೂಪನಾದ ತಂದೆಯ ಮುಂದೆ ವಿಜ್ಞಾಪಿಸಬಹುದು; ಆತ್ಮದ ಅಂತರಂಗದಲ್ಲಿ ಮಾನವನ ಅವಶ್ಯಕತೆಯ ಕೂಗಿಗೆ ಉತ್ತರಕೊಡಲು ತಪ್ಪದಿರುವ ದೇವರ ಧ್ವನಿಯು ನಮ್ಮ ಹೃದಯದಲ್ಲಿ ಮಾತನಾಡುವುದು.MBK 87.3

    “ಕರ್ತನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆ.” ಯಾಕೋಬ 5:11. ಹಟಮಾರಿಗಳಾದವರ ಪಾಪನಿವೇದನೆಯನ್ನು ಕೇಳಿ ಅವರ ಮಾನಸಾಂತರವನ್ನು ಅಂಗೀಕರಿಸಿಕೊಳ್ಳಲು ಆತನು ಬೇಸರಗೊಳ್ಳದ ಮಮತೆಯಿಂದ ಕಾದಿರುತ್ತಾನೆ. ತಾಯಿಯು ತನ್ನ ಮುದ್ದ ಮಗುವಿನ ಅಂಗೀಕಾರ ಸೂಚನೆಯಾದ ನಗೆಯನ್ನು ಎದುರುನೋಡುವಂತೆ ನಮ್ಮಿಂದ ಕೃತಜ್ಞತೆಯನ್ನು ಎದುರುನೋಡುತ್ತಾನೆ. ಅವನ ಹೃದಯವು ನಮಗಾಗಿ ಎಷ್ಟು ಆಸಕ್ತಿಯಿಂದಲೂ ಸೌಮ್ಯತೆಯಿಂದಲೂ ಹಾತೊರೆಯುತ್ತದೆಯೆಂದು ನಾವು ಅರಿತುಕೊಳ್ಳಬೇಕೆಂದು ಆಶಿಸುತ್ತಾನೆ. ನಮ್ಮ ಸಂಕಟಗಳನ್ನು ಆತನ ಅನುತಾಪಕ್ಕೂ, ನಮ್ಮ ದುಖಃಗಳನ್ನು ಆತನ ಮಮತೆಗೂ, ನಮ್ಮ ಗಾಯಗಳನ್ನು ಆತನ ಸ್ವಸ್ಥತೆಗೂ, ನಮ್ಮ ನಿರ್ಬಲವನ್ನು ಆತನ ಅಪಾರ ಶಕ್ತಿಗೂ, ನಮ್ಮಶೂನ್ಯತೆಯನ್ನು ಆತನ ಪರಿಪೂರ್ಣತೆಗೂ ಒಯ್ಯುವಂತೆ ನಮ್ಮನ್ನು ಕರೆಯುತ್ತಾನೆ. ಆತನ ಬಳಿಗೆ ಬಂದ ಒಬ್ಬನಾದರು ಎಂದೂ ಆಶಾಭಂಗ ಹೊಂದಲಿಲ್ಲ. “ಆತನನ್ನೇ ದೃಷ್ಟಿಸಿದವರು ಪ್ರಕಾಶವನ್ನು ಹೊಂದಿದರು; ಅವರ ಮುಖವು ಲಜ್ಜೆಯಿಂದ ಕೆಡುವುದೇ ಇಲ್ಲ.” ಕೀರ್ತನೆ 34: 5. MBK 87.4

    ಅಂತರಂಗದಲ್ಲಿ ದೇವರನ್ನು ಹುಡುಕುತ್ತಾ, ತಮ್ಮ ಅವಶ್ಯಕತೆಗಳನ್ನು ಕರ್ತನಿಗೆ ವಿಜ್ಞಾಪಿಸಿ ಸಹಾಯವನ್ನು ಯಾಚಿಸುವವರು ವ್ಯರ್ಥವಾಗಿ ವಿಜ್ಞಾಪಿಸುವುದಿಲ್ಲ. “ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಫಲ ಕೊಡುವನು.” ನಾವು ಕ್ರಿಸ್ತನನ್ನು ನಮ್ಮ ಅನುದಿನದ ಒಡನಾಡಿಯಾಗಿ ಅಂಗೀಕರಿಸಿಕೊಂಡರೆ, ಅಗೋಚರವಾದ ಲೋಕದ ಶಕ್ತಿಯೆಲ್ಲಾ ನಮ್ಮನ್ನು ಆವರಿಸಿವೆಯೆಂದು ಭಾವಿಸುವೆವು. ಹೀಗೆ ಆತನನ್ನು ದೃಷ್ಟಿಸುವುದರಿಂದ ಆತನ ಸ್ವಾರೂಪ್ಯಕ್ಕೆ ಹೊಂದಿಕೆಯಾಗುವೆವು. ದೃಷ್ಟಿಸಿ ನೋಡುವುದರಿಂದ ನಾವು ಮಾರ್ಪಡುವೆವು. ನಮ್ಮ ಸೌಶೀಲ್ಯವು ಪರಲೋಕ ರಾಜ್ಯಕ್ಕಾಗಿ ಕೋಮಲವೂ, ಪರಿಶಿದ್ಧವೂ ಮತ್ತು ಶ್ರೇಷ್ಠವೂ ಆಗುವುದು. ನಮ್ಮ ಕರ್ತನ ಸಂಪರ್ಕ ಮತ್ತು ಸಹವಾಸದ ಫಲವು ನಮ್ಮ ದೈವಭಕ್ತಿಯನ್ನೂ, ಪವಿತ್ರತೆಯನ್ನೂ ಮತ್ತು ಹುರುಪನ್ನೂ ವೃದ್ಧಿಪಡಿಸುವುದೇ ಆಗಿದೆ. ಪ್ರಾರ್ಥನೆಯಲ್ಲಿ ಬುದ್ಧಿ ಸೂಕ್ಷ್ಮತೆಯು ವೃದ್ಧಿಯಾಗುತ್ತದೆ. ನಾವು ದೈವಜ್ಞಾನವನ್ನು ಹೊಂದುತ್ತೇವೆ. ಇದು ನಮ್ಮ ಕಾರ್ಯತತ್ಪರತೆ ಮತ್ತು ಉತ್ಸಾಹದಲ್ಲಿ ತೋರಿಬರುತ್ತದೆ.MBK 88.1

    ಪ್ರತಿನಿತ್ಯದ ಆಸಕ್ತಿಯುಳ್ಳ ಪ್ರಾರ್ಥನೆಯ ಮೂಲಕವಾಗಿ, ತನ್ನ ಸಹಾಯಕ್ಕೂ ಆಸರೆಗೂ ಮತ್ತು ಶಕ್ತಿಗೂ ದೇವರ ಮರೆಹೋಗುವ ಆತ್ಮವು ಸ್ರೇಷ್ಠ ಹೆಗ್ಗುರಿಯುಳ್ಳದ್ದೂ, ಸತ್ಯದ ಮತ್ತು ಜವಾಬ್ದಾರಿಕೆಯ ಗ್ರಹಿಕೆಯುಳ್ಳದ್ದೂ, ನಡತೆಯ ಘನೋದ್ದೇಶವುಳ್ಳದ್ದೂ ಮತ್ತು ನೀತಿಗಾಗಿ ನಿರಂತರವೂ ಹಸಿದು ಬಾಯಾರಿದ್ದೂ ಆಗಿರುವುದು. ದೇವರೊಡನೆ ಸಂಪರ್ಕ ಕಲ್ಪಿಸುವುದರಿಂದ, ನಮ್ಮ ಹೃದಯದಲ್ಲಿ ನೆಲೆಸಿರುವ ಪ್ರಭೆ, ಸಮಾಧಾನ ಮತ್ತು ಪ್ರಶಾಂತತೆಯನ್ನು, ಇತರರಿಗೆ ಪ್ರಸರಿಸಲು ಸಾಧ್ಯವಾಗುತ್ತದೆ. ದೇವರಿಗೆ ಪ್ರಾರ್ಥಿಸುವುದರಿಂದ ಪಡೆದ ಶಕ್ತಿಯೂ ಮನಸ್ಸನ್ನು ವಿಚಾರಮಗ್ನತೆಯಲ್ಲಿಯೂ ಮತ್ತು ಪೋಷಣೆಯಲ್ಲಿಯೂ ಪರ್ಪೇತುಪಡಿಸಲು ಕೂಡಿದ ಪ್ರಯಾಸವೂ ಒಬ್ಬನನ್ನು ಅನುದಿನದ ಕರ್ತವ್ಯಗಳಿಗೆ ಸಿದ್ಧಪಡಿಸಿ, ಎಲ್ಲಾ ಸಂದರ್ಭಗಳಲ್ಲಿಯೂ ಆತ್ಮವನ್ನು ಸಮಾಧಾನದ ಸ್ಥಿತಿಯಲ್ಲಿಡುವುದು.MBK 88.2

    ನಾವು ದೇವರ ಸಾಮೀಪ್ಯವನ್ನೈದಿದರೆ, ಆತನಿಗಾಗಿ ಮಾತಾಡುವಂತೆಯೂ ಮತ್ತು ಸ್ತೋತ್ರ ಮಾಡುವಂತೆಯೂ ನಮ್ಮ ಬಾಯಲ್ಲಿ ತನ್ನ ವಚನಗಳನ್ನಿಡುವನು, ದೇವದೂತರ ಹಾಡುಗಳಿಂದ ಒಂದು ರಾಗವನ್ನು ನಮ್ಮ ಪರಮತಂದೆಗೆ ಕೃತಜ್ಞತೆಯನ್ನು ಸಲ್ಲಿಸುವುದನ್ನು ಕಲಿಸುವನು. ಜೀವದ ಪ್ರತಿಯೊಂದು ನಡತೆಯಲ್ಲಿಯೂ ಆಂತರ್ಯದಲ್ಲಿ ವಾಸಿಸುವ ರಕ್ಷಕನ ಬೆಳಕೂ ಮತ್ತು ಪ್ರೀತಿಯೂ ಹೊರ ಹೊಮ್ಮುವುದು, ಬರ್ಬಿಸಂಕಟಗಳು ದೇವಕುಮಾರನಲ್ಲಿ ನಂಬಿಕೆಯ ಮೂಲಕವಾಗಿ ಜೀವಿಸಿದ ಜೀವ್ಯವನ್ನು ಸೋಂಕಲಾರವು.MBK 88.3