Loading...
Larger font
Smaller font
Copy
Print
Contents
ಪರ್ವತ ಪ್ರಸಂಗ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸೇವೆಯೇ ಯಥಾರ್ಥವಾದ ಉದ್ದೇಶ.

    “ಜನರು ನೋಡಲಿ ಎಂದು ನಿಮ್ಮ ಧರ್ಮಕಾರ್ಯವನ್ನು ಅವರ ಮುಂದೆ ಮಾಡಬಾರದು, ನೋಡಿರಿ.”

    ಪರ್ವತದ ಮೇಲೆ ಕ್ರಿಸ್ತನು ನುಡಿದ ವಾಕ್ಯಗಳು, ಎಣೆಯಿಲ್ಲದ ಆತನ ಜೀವಮಾನದ ಉಪದೇಸವಾಗಿತ್ತು, ಆದರೆ ಜನರು ಇದನ್ನು ಗ್ರಹಿಸಲಾರದಾದರು. ಅಂಥಾ ಮಹಾ ಶಕ್ತಿಯನ್ನು ಹೊಂದಿ, ಅದನ್ನು ಅವರಿಗೆ ಮಹಾ ಹಿತವೆಂದು ಕಂಡದ್ದನ್ನು ಸಾಧಿಸಲು ಆತನು ಉಪಯೋಗಿಸಲಿಲ್ಲವೇಕೆ ಎಂಬುದನ್ನು ಗ್ರಹಿಸಲಾರದಾದರು. ಅವರ ಮನಸ್ಸೂ, ಉದ್ದೇಶವೂ ಮತ್ತು ಮಾದರಿಯೂ ಆತನದಕ್ಕೆ ವ್ಯತಿರಿಕ್ತವಾಗಿದ್ದುವು. ಧರ್ಮಶಾಸ್ತ್ರವನ್ನು ಗೌರವಿಸುವುದರಲ್ಲಿ ತಾವು ಬಹು ಜಾಗರೂಕರೆಂದು ಹೇಳುವುದರಲ್ಲಿ, ತಮ್ಮ ಆತ್ಮ ಶ್ಲಾಘನೆಯನ್ನು ಅಪೇಕ್ಷಿಸುವ ಉದ್ದಿಶ್ಯವುಳ್ಳವರಾಗಿದ್ದರು; ಆತ್ಮಾನುರಾಗವುಳ್ಳಾತನು ಧರ್ಮಶಾಸ್ತ್ರವನ್ನು ಮೀರುವವನೆಂದು ಕ್ರಿಸ್ತನು ಪ್ರಕಟಿಸಿದನು.MBK 82.1

    ಆದರೆ ಫರಿಸಾಯರು ಅವಲಂಬಿಸಿದ ತತ್ವಗಳೆಲ್ಲಾ ಯುಗಯುಗಾಂತರಗಳಿಂದಲೂ ನಡೆದುಬಂದಿರುವ ಮಾನವ ಸ್ವಭಾವವಷ್ಟೆ. ಪರಿಸಾಯತ್ವದ ಆತ್ಮವು ಮಾನವ ಸ್ವಭಾವದ ಆತ್ಮವೇ; ರಕ್ಷಕನು ತನ್ನ ಮತ್ತು ಶಾಸ್ತ್ರಿಗಳ ಆತ್ಮಗಳಿಗೂ ಮಾದರಿಗಳಿಗೂ ಇರುವ ತಾರತಮ್ಯವನ್ನು ತೋರಿಸುವುದರಲ್ಲಿ, ಆತನ ಬೋಧನೆಯು ಎಲ್ಲಾ ಕಾಲದಲ್ಲಿಯೂ ಎಲ್ಲಾ ಜನರಿಗೂ ಅನ್ವಯಿಸುತ್ತದೆ.MBK 82.2

    ಕ್ರಿಸ್ತನು ಜೀವಿಸಿದ್ದ ಕಾಲದಲ್ಲಿ ಪರಿಸಾಯರು ತಮ್ಮ ಸೌಶೀಲ್ಯದ ಫಲವೆಂದು ತಿಳಿದ ಲೌಕೀಕ ಗೌರವವನ್ನೂ ಉಚ್ಛ್ರಾಯ ಸ್ಥಿತಿಯನ್ನೂ ಹೊಂದಲು ಪರಲೋಕದ ಅನುಗ್ರಹಕ್ಕಾಗಿ ನಿರಂತರವೂ ಹೆಣಗುತ್ತಿದ್ದರು. ಅದೇ ಸಮಯದಲ್ಲಿ ತಮ್ಮ ಧರ್ಮಕಾರ್ಯಗಳನ್ನು ಜನರ ಮುಂದೆ ಪ್ರದರ್ಶಿಸುತ್ತಾ ಅವರ ಗಮನವನ್ನು ಸೆಳೆಯಲೂ ಮತ್ತು ಪವಿತ್ರತೆಯ ಸತ್ಕೀರ್ತಿಯನ್ನು ಸಂಪಾದಿಸಲೂ ಪ್ರಯಾಸ ಪಡುತ್ತಿದ್ದರು.MBK 82.3

    ಕ್ರಿಸ್ತನು ಅವರ ಡಾಂಭಿಕ ಪ್ರದರ್ಶನವನ್ನು ಆಕ್ಷೇಪಿಸಿ, ದೇವರು ಅಂಥಾ ಸೇವೆಯನ್ನು ಮೆಚ್ಚನೆಂದೂ, ಮತ್ತು ಅವರು ಹಂಬಲಿಸಿದ ಜನರ ಮುಖಸ್ತುತಿಯೂ ಮತ್ತು ಶ್ಲಾಘನೆಯೂ ಅವರು ಹೊಂದಬಹುದಾದ ಇಹದ ಸಂಭಾವನೆ ಮಾತ್ರವೇ ಎಂದು ಪ್ರಕಟಿಸಿದನು.MBK 83.1

    “ಆದುದರಿಂದ ನೀನು ಧರ್ಮ ಕೊಡುವಾಗ ಅಂತರಂಗವಾಗುವ ಹಾಗೆ ನಿನ್ನ ಬಲಹೈ ಮಾಡಿದ್ದು ಎಡಗೈಗೂ ತಿಳಿಯದಿರಲಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಫಲ ಕೊಡುವನು.” MBK 83.2

    ಉಪಕಾರ ಕೃತ್ಯಗಳು ಯಾವಾಗಲೂ ರಹಸ್ಯವಾಗಿರಬೇಕೆಂದು ಕ್ರಿಸ್ತನು ಈ ವಾಕ್ಯಗಳಲ್ಲಿ ಬೋಧಿಸಲಿಲ್ಲ. ಪೌಲ ಅಪೋಸ್ತಲನು, ಪವಿತ್ರಾತ್ಮ ಪ್ರೇರಿತನಾಗಿ ಬರೆಯುವಾಗ ಮೆಕದೋನ್ಯದ ಕ್ರೈಸ್ತರ ಉದಾರ ಆತ್ಮಾರ್ಪಣೆಯನ್ನು ರಹಸ್ಯವಾಗಿಡದೆ ಕ್ರಿಸ್ತನು ಅವರಲ್ಲುಂಟುಮಾಡಿರುವ ಕೃಪೆಯನ್ನು ತಿಳಿಸಿ, ಇತರರೂ ಅದೇ ರೀತಿಯಾದ ಸ್ವಭಾವ ಪೂರಿತರಾಗುವಂತೆ ಪ್ರೇರಿಸಿದನು. ಕೊರಿಂಥ ಸಭೆಗೂ ಅವನು ಬರೆದು ತಿಳಿಸಿದ್ದೇನಂದರೆ. “ನಿಮ್ಮ ಆಸಕ್ತಿಯು ಅವರಲ್ಲಿ ಬಹುಜನರನ್ನು ಪ್ರೇರೇಪಿಸಿತು.” 2 ಕೊರಿಂಥ 9: 2.MBK 83.3

    ಕ್ರಿಸ್ತನ ಸ್ವಂತ ನುಡಿಗಲೇ ಆತನ ಉದ್ದೇಶವನ್ನು ಪರಿಷ್ಕಾರವಾಗಿ ತಿಳಿಸಿವೆ, ಜನರಿಂದ ಹೊಗಳಿಕೆಯನ್ನೂ ಗೌರವವನ್ನೂ ಹೊಂದುವುದೇ ಧರ್ಮಕೊಡುವುದರ ಉದ್ದೇಶವಾಗಿರಬಾರದು. ಯಥಾರ್ಥವಾದ ಧರ್ಮಶ್ರದ್ಧೆಯು ಆಡಂಬರಕ್ಕಾಗಿ ಪ್ರೇರೇಪಿಸಲ್ಪಟ್ಟು ಹೆಣಗುವುದಿಲ್ಲ. ಹೊಗಳಿಕೆಯನ್ನೂ ಮತ್ತು ಮುಖಸ್ತುತಿಯನ್ನೂ ಬಯಸುವವರು, ಮತ್ತು ಅದನ್ನೇ ಮಧುರವಾದದ್ದೆಂದು ತಿಳಿದು ತೃಪ್ತಿಯಾಗಿರುವವರೂ, ಹೆಸರಿಗೆ ಮಾತ್ರ ಕ್ರೈಸ್ತರಾಗಿದ್ದಾರೆ.MBK 83.4

    ಕ್ರಿಸ್ತನ ಹಿಂಬಾಲಕರು ತಮ್ಮ ಒಳ್ಳೆಯ ಕ್ರಿಯೆಗಳಿಂದ ತಮಗೆ ಮಾನ ಬರಬೇಕೆಂದು ಬಯಸದೆ, ಯಾರ ಕೃಪೆಯ ಮತುಉ ಶಕ್ತಿಯ ಮೂಲಕವಾಗಿ ಅದನ್ನು ಮಾಡಿದರೋ ಆತನಿಗೆ ಮಹಿಮೆ ಬರಬೇಕೆಂದು ಎಣಿಸಬೇಕು. ಪವಿತ್ರಾತ್ಮನ ಮೂಲಕವಾಗಿಯೂ ಪ್ರತಿಯೊಂದು ಸತ್ಕ್ರಿಯೆಯೂ ನೆರವೇರುತ್ತದೆ, ಮತ್ತು ಈ ಆತ್ಮವು ಕೊಡಲ್ಪಟ್ತಿರುವುದು ಹೊಂದಿದಾತನ ಮಹಿಮೆಗಲ್ಲ ಕೊಟ್ಟಾತನ ಮಹಿಮೆಗಾಗಿಯೇ. ಕ್ರಿಸ್ತನ ಪ್ರಭಾವವು ಆತ್ಮದಲ್ಲಿ ಪ್ರಜೊಲಿಸುತ್ತಿರುವಾಗ ತುಟಿಗಳು ದೇವರ ಸ್ತೋತ್ರದಿಂದಲೂ ಮತ್ತು ಕೃತಜ್ಞತೆಯಿಂದಲೂ ತುಂಬಿರುವುವು. ನಿಮ್ಮ ಪ್ರಾರ್ಥನೆ, ನಿಮ್ಮ ಕಾರ್ಯನಿರ್ವಾಹ, ನಿಮ್ಮ ಧರ್ಮ ಬುದ್ಧಿ, ನಿಮ್ಮ ಸ್ವಾರ್ಥ ತ್ಯಾಗ, ಇವುಗಳು ನಿಮ್ಮ ಯೋಚನೆಯ ಮತ್ತು ಸಂಭಾಷಣೆಯ ವಿಷಯವಾಗಿರು ವುದಿಲ್ಲ. ಕ್ರಿಸ್ತನು ವೃದ್ಧಿಗೊಂಡು ಸ್ವಾರ್ಥತೆಯು ಅಡಗುವುದು, ಮತ್ತು ಕ್ರಿಸ್ತನೇ ಸಮಸ್ತದಲ್ಲೂ ಸಮಸ್ತನಾಗಿ ವ್ಯಕ್ತವಾಗುವನು.MBK 83.5

    ನಾವು ಹೃತ್ಪೂರಕವಾಗಿ ಕೊಡಬೇಕು, ನಮ್ಮ ಧರ್ಮಕಾರ್ಯಗಳ ಪ್ರದರ್ಶನಕ್ಕೆಂದಲ್ಲ ಆದರೆ, ಸಂಕಟದಲ್ಲಿರುವವರ ಮೇಲಿನ ಮರುಕದಿಂದಲೂ ಮತ್ತು ಪ್ರೀತಿಯಿಂದಲೂ ಕೊಡಬೇಕು. ಉದ್ದೇಶದಲ್ಲಿ ನಿರ್ವಂಚನೆ, ಹೃದಯದ ಯಥಾರ್ಥವಾದ ದಯೆ, ಇಂಥಾ ಉದ್ದೇಶಗಳನ್ನೇ ಪರಲೋಕವು ಗಣ್ಯವಾದುದೆಂದು ಎಣಿಸುವುದು. ನಿರ್ವಂಚನೆಯ ಪ್ರೀತಿಯಿಂದ ಕೂಡಿದ ಆತ್ಮವನ್ನು, ಮನಃಪೂರ್ವಕವಾದ ಧರ್ಮನಿಷ್ಠೆಯನ್ನೂ, ದೇವರು ಓಫೀರಿನ ಅಪರಂಜಿಗಿಂತಲೂ ಅತ್ಯಮೂಲ್ಯವಾದ್ದೆಂದು ಪರಿಗಣಿಸುತ್ತಾನೆ.MBK 84.1

    ನಮಗೆ ದೊರಕಬಹುದಾದ ಪ್ರತಿಫಲವನ್ನಲ್ಲ ಆದರೆ ನಾವು ಮಾಡಬೇಕಾದ ಸೇವೆಯನ್ನೇ ಕುರಿತು ನೆನಸಬೇಕು; ಹೀಗಿದ್ದರೂ ಇಂಥಾ ಸ್ವಭಾವದಲ್ಲಿ ತೋರಿಸಲ್ಪಟ್ಟ ಮರುಕವು ತನ್ನ ಪ್ರತಿಫಲವನ್ನು ಹೊಂದದೆ ಇರದು. “ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.” ಸತ್ಯದೇವರು ತಾನೇ ನಮಗೆ ಮಹಾ ಪ್ರತಿಫಲವಾಗಿರಲು, ಇದು ಇತರ ಎಲ್ಲವನ್ನೂ ಒಳಗೊಂಡಿದೆ. ಆತ್ಮವು ಆತನ ಸೌಜನ್ಯಕ್ಕೆ ಸಮರೂಪಗೊಂಡರೆ ಮಾತ್ರವೇ ಆತನನ್ನು ಹೊಂದಿ ಆತನಲ್ಲಿ ಆನಂದಿಸುವುದು. ಸಾದೃಶವು ಸಾದೃಶವನ್ನೇ ಮೆಚ್ಚುವುದಷ್ಟೆ. ಮಾನವರ ಸೇವಾರ್ಥವಾಗಿ ನಾವು ನಮ್ಮನ್ನು ದೇವರಿಗೆ ಒಪ್ಪಿಸಿಕೊಡುವ ಹಾಗೆ ಆತನು ತನ್ನನ್ನು ನಮಗೆ ಅನುಗ್ರಹಿಸಿದ್ದಾನೆ.MBK 84.2

    ಯಾವನೊಬ್ಬನೂ ಸಹ ತನಗೆ ತಾನೇ ಪುಷ್ಕಲವಾಗಿ ಸಂಭಾವನೆಯನ್ನು ಹೊಂದದೆ ತನ್ನ ಹೃದಯದಲ್ಲಿಯೂ ಮತ್ತು ಜೀವ್ಯದಲ್ಲಿಯೂ ದೇವರ ಆಶೀರ್ವಾದದ ತೊರೆಯು ತನ್ನ ಮೂಲಕವಾಗಿ ಇತರರಿಗೆ ಪ್ರವಹಿಸುವಂತೆ ಮಾಡಲು ಸಾಧ್ಯವಿಲ್ಲ. ಬೆಟ್ಟಗಳಿಂದ ಪ್ರವಾಹವಾಗಿ ಹರಿದು ಸಮುದ್ರಕ್ಕೆ ಬೀಳುವ ನದಿಗಳಿಗೆ ಸಣ್ಣ ಸಣ್ಣ ನಾಲೆಗಳನ್ನೊದಗಿಸಿಕೊಡುವ ಗುಡ್ಡಗಳಿಗೂ ಮತ್ತು ಬೈಲುಗಳಿಗೂ ಅದರಿಂದೇನೂ ನಷ್ಟವಾಗದು. ಅವುಗಳು ಕೊಟ್ಟದ್ದು ನೂರ್ಮಡಿಯಾಗಿ ಹೆಂದಕ್ಕೆ ಕೊಡಲ್ಪಡುವುದು. ತನ್ನ ಪಥದಲ್ಲಿ ಹಾಡುತ್ತಾ ಹೋಗುವ ನದಿಯು ತನ್ನ ಹಿಂದೆ ಹುಲುಸಾದ ಮತ್ತು ಫಲೋತ್ಪಾದಕವಾದ ತನ್ನ ಬಹುಮಾನವನ್ನು ಬಿಟ್ಟು ಹೋಗುತ್ತದೆ. ಅದರ ದಡದಲ್ಲಿರುವ ಹುಲ್ಲು ನೂತನ ಪಚ್ಚೆಯಾಗಿದೆ, ವೃಕ್ಷಗಳು ಪುಷ್ಕಲವಾದ ಫಲೋತ್ಪಾದಕವಾಗಿದೆ, ಪುಷ್ಪಗಳು ಯಥೇಷ್ಟವಾಗಿವೆ. ಬೇಸಿಗೆಯ ಬಿಸಲಿನ ತಾಪದಿಂದ ಭೂಮಿಯು ನಗ್ನವಾಗಿ ಕಂದುತ್ತಿರುವಾಗ, ನದೀಪಥದಲ್ಲಿ ಹುಲು ಸಾದ ಕುರುಹಿನ ಗೆರೆಯು ಕಾಣುವುದು; ಮತ್ತು ಪರ್ವತದ ಸಂಪತ್ತನ್ನು ಸಮುದ್ರಕ್ಕೆ ಸಾಗಿಸಲು ತನ್ನ ವಕ್ಷಸ್ಥಲವನ್ನು ತೆತ್ತ ಬಯಲು ನೂತನವಾಗಿಯೂ ಮತ್ತು ಅಲಂಕಾರವಾಗಿಯೂ ತೊಡಿಸಲ್ಪಟ್ಟಿದೆ,—ಲೋಕಕ್ಕೆ ದೇವರ ಕೃಪೆಯನ್ನು ಸಾಗಿಸಲು ತಮ್ಮನ್ನು ನಾಲೆಗಳಾಗಿ ಒಪ್ಪಿಸುವವರಿಗೆ ದೇವರು ಕೊಡುವ ಪ್ರತಿಫಲದ ಸಾಕ್ಷಿಯಾಗಿದೆ.MBK 84.3

    ಇದು ಬಡವರಿಗೆ ಕರುಣೆ ತೋರಿಸುವವರಿಗೆ ಉಂಟಾಗುವ ಆಶೀರ್ವಾದ. ” ಹಸಿದವರಿಗೆ ಅನ್ನವನ್ನು ಹಂಚುವುದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವುದು, ನಿನ್ನಂತೆ ನರನಾಗಿರುವ ಯಾವನಿಗೇ ಆಗಲಿ ಮಿಖ ತಪ್ಪಿಸಿಕೊಳ್ಳದಿರುವುದು,.....ಇದನ್ನು ಆಚರಿಸುವಾಗ ನಿಮಗೆ ಬೆಳಕು ಉದಯದಂತೆ ಭೇದಿಸಿಕೊಂಡು ಬರುವುದು. ನಿಮ್ಮ ಕ್ಷೇಮವು ಬೇಗನೆ ವಿಕಸಿಸುವುದು;.... ಮತ್ತು ಯೆಹೋವನು ನಿಮ್ಮನ್ನು ನಿತ್ಯವೂ ನಡಿಸುತ್ತಾ ಮರುಭೂಮಿಯಲ್ಲಿಯೂ ನಿಮ್ಮ ಆತ್ಮವನ್ನು ತೃಪ್ತಿಗೊಳಿಸುವನು.... ನೀವು ತಂಪಾದ ತೋಟಕ್ಕೂ ನೀರಿಗೆ ಮೋಸವಿಲ್ಲದ ಬುಗ್ಗೆಗೂ ಸಮಾನವಾಗುವಿರಿ.” ಯೆಶಾಯ 58: 7-11.MBK 85.1

    ಉಪಕೃತಿಯ ಕಾರ್ಯವು ಇಮ್ಮಡಿಯಾಗಿ ಆಶೀರ್ವದಿಸಲ್ಪಡುವುದು. ಬಡವರಿಗೆ ಕೊಡುವವನು ಅವರನ್ನು ಹರಸುವುದಲ್ಲದೆ ಅದಕ್ಕಿಂತಲೂ ಅಧಿಕವಾಗಿ ಅವನೇ ಆಶೀರ್ವದಿಸಲ್ಪಡುವನು. ಆತ್ಮದಲ್ಲಿ ನೆಲಸಿರುವ ಕ್ರಿಸ್ತನ ಕೃಪೆಯು ಸ್ವಾರ್ಥಪರತೆಗೆ ವಿರುದ್ಧವಾದ ಸುಗುಣಗಳನ್ನು ವೃದ್ಧಿಪಡಿಸುತ್ತದೆ,—ಜೀವ್ಯವನ್ನು ಶುದ್ಧೀಕರಿಸುವ, ಮೇಲ್ಮೆಗೈವ, ಮತ್ತು ಸಂಪದ್ಯುಕ್ತರಾಗಿ ಮಾಡುವ ಗುಣಗಳನ್ನು ವೃದ್ಧಿಪಡಿಸುವುದು.MBK 85.2

    ರಹಸ್ಯದಲ್ಲಿ ಮಾಡಿದ ಧರ್ಮಕಾರ್ಯಗಳು ಹೃದಯಗಳನ್ನು ಬಂಧಿಸಿ, ಪ್ರತಿಯೊಂದು ಉದಾರಗುಣಕ್ಕೂ ಬುಗ್ಗೆಯಾದಾತನ ಹೃದಯದ ಸಾಮೀಪ್ಯಕ್ಕೆ ಅವರನ್ನು ಸೆಳೆಯುವುದು. ಹೂವಿನಿಂದ ಪರಿಮಳವು ನಿಶ್ಶಬ್ದವಾಗಿ ಹೊರಸೂಸುವಂತೆ ಸಣ್ಣ ಉಪಚಾರಗಳು, ಪ್ರೀತಿಯ ಪುಟ್ಟ ಕ್ರಿಯೆಗಳು, ಮತ್ತು ಸ್ವಾರ್ಥತ್ಯಾಗವೂ ಜೀವ್ಯದಿಂದ ಸರಾಗವಾಗಿ ಪ್ರವಹಿಸುವುವು;-ಇವು ಜೀವ್ಯದ ಆಶೀರ್ವಾದ ಉಲ್ಲಾಸಗಳ ಅಲ್ಪಾಂಶವನ್ನೂ ಒಳಗೊಂಡಿಲ್ಲ. ಅಂತ್ಯದಲ್ಲಿ, ಇತರರ ಹಿತಕ್ಕಾಗಿಯೂ ಮತ್ತು ಸಂತೋಷಕ್ಕಾಗಿಯೂ ಮಾಡಿದ ಸ್ವಾರ್ಥತ್ಯಾಗವು ಲೋಕದಲ್ಲಿ ಎಷ್ತೇ ಸಣ್ಣದಾದರು, ಸಮರ್ಪಕವಲ್ಲದಿದ್ದರೂ, ಪರಲೋಕದಲ್ಲಿ ಮಹಿಮೆಯ ರಾಜನೊ ಡನೆ, ಐಶ್ವರ್ಯವಂತನಾಗಿದ್ದು ನಮಗಾಗಿ ಬಡವನಾದಾತನೊಡನೆ, ನಮ್ಮ ಸಂಯೋಗದ ಚಿಹ್ನೆಯಾಗಿ ಸಮರ್ಪಕವಾಗುವುದು.MBK 85.3

    ಧರ್ಮಕಾರ್ಯಗಳು ರಹಸ್ಯವಾಗಿಯೇ ಮಾಡಲ್ಪಟ್ಟಿರಬಹುದು, ಆದರೆ ಧರ್ಮ ಮಾಡಿದಾತನ ಸೌಶೀಲ್ಯದಿಂದಾದ ಫಲಿತಾಂಶವು ರಹಸ್ಯವಾಗಿರಲಾರದು. ನಾವು ಹೃತ್ಪೂರಕವಾದ ಆಸಕ್ತಿಯಿಂದ ಕ್ರಿಸ್ತನ ಹಿಂಬಾಲಕನಂತೆ ಸೇವಿಸಿದರೆ, ಹೃದಯವು ದೇವರೊಡನೆ ಸಾಮೀಪ್ಯ ಸಹಾನುಭೂತಿಯುಳ್ಳದ್ದಾಗಿ, ದೇವರಾತ್ಮನು ನಮ್ಮ ಆತ್ಮದಲ್ಲಿ ಚಲಿಸುತ್ತಾ, ದೈವ ಸ್ಪರ್ಶಕ್ಕೆ ಆತ್ಮವು ಪವಿತ್ರವಾದ ಮಧುರ ಧ್ವನಿಯನ್ನು ಸೂಸುತ್ತದೆ.MBK 86.1

    ಬುದ್ದಿವಂತಿಕೆಯಿಂದ ತಮಗೆ ಕೊಡಲ್ಪಟ್ಟ ವರಗಳನ್ನು ವೃದ್ಧಿಪಡಿಸಿದವರಿಗೆ ಹೆಚ್ಚೆಚ್ಚಾದ ತಲಾಂತುಗಳನ್ನು ಕೊಡುವಾತನು ಯಾವಾತನ ಕೃಪೆಯಿಂದಲೂ ಮತ್ತು ಶಕ್ತಿಯಿಂದಲೂ ಸೇವೆ ಮಾಡಿದಿರೋ ಆ ಪ್ರಿಯ ಕುಮಾರನಲ್ಲಿ ತನ್ನ ನಂಬಿಕೆಯುಳ್ಳ ಜನರ ಸೇವೆಯನ್ನು ಅಂಗೀಕರಿಸಿಕೊಳ್ಳಲು ಸಂತೋಷವುಳ್ಳವನಾಗಿದ್ದಾನೆ. ತಮ್ಮ ಸಾಮರ್ಥ್ಯಗಳನ್ನು ಸತ್ಕ್ರಿಯೆಗಳಲ್ಲಿ ವಿನಿಯೋಗಿಸಿ ತಮ್ಮ ಕ್ರೈಸ್ತ ಸೌಜನ್ಯದ ವೃದ್ಧಿಯನ್ನೂ ಪರಿಪೂರ್ಣತೆಯನ್ನೂ ಹಂಬಲಿಸಿದವರು ಬರುವ ಮುಂದಿನ ಲೋಕದಲ್ಲಿ ತಾವು ಬಿತ್ತಿದ್ದನ್ನು ಕೊಯ್ಯುವರು. ಇಹದಲ್ಲಿ ಆರಂಭವಾದ ಕಾರ್ಯವು ಸರ್ವೋತ್ತಮವೂ ಅತಿ ಪಾವನವೂ ಆದ ನಿತ್ಯಜೀವದಲ್ಲಿ ಸಂಪೂರ್ಣತೆಯನ್ನು ಹೊಂದುವುದು.MBK 86.2