Loading...
Larger font
Smaller font
Copy
Print
Contents
ಪರ್ವತ ಪ್ರಸಂಗ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    “ಆದದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಯಾವ ದೋಷವೂ ಇಲ್ಲದವನಾಗಿರುವಂತೆ ನೀವೂ ದೋಷವಿಲ್ಲದವರಾಗಿರ್ರಿ.”

    “ಆದದರಿಂದ” ಎಂಬ ವಾರ್ತೆಯು ಹಿಂದೆ ಆದವುಗಳ ಊಹೆಯ ಮುಕ್ತಾಯವನ್ನು ಸೂಚಿಸುತ್ತದೆ. ಯೇಸು ತನ್ನ ಉಪದೇಶವನ್ನು ಕೇಳುತ್ತಿದ್ದವರಿಗೆ ದೇವರ ವಿಫಲವಾದ ಕನಿಕರ ಮತ್ತು ಪ್ರೀತಿಯನ್ನು ವರ್ಣಿಸುತ್ತಿದ್ದನು, ಆದುದರಿಂದ ಯಾವ ದೋಷವೂ ಇಲ್ಲದವರಾಗಿರ್ರಿ ಎಂದು ಆಜ್ಞಾಪಿಸುತ್ತಾನೆ. ಪರಲೋಕದಲ್ಲಿರುವ ನಿಮ್ಮ ತಂದೆಯು “ಉಪಕಾರ ನೆನಸದವರಿಗೂ ಮತ್ತು ಕೆಟ್ಟವ ರಿಗೂ ಉಪಕಾರಿಯಾಗಿ” (ಲೂಕ 6: 35) ರುವುದರಿಂದಲೂ, ಮತ್ತು ನಿಮ್ಮನ್ನು ಉದ್ಧರಿಸಲಿಕ್ಕಾಗಿ ದೊಡ್ಡ ಮನಸ್ಸು ಮಾಡಿರುವುದರಿಂದಲೂ, ನೀವೂ ಸ್ವಭಾವದಲ್ಲಿ ಆತನಂತಾಗಿ, ಮಾನವರ ಮುಂದೆಯೂ ಮತ್ತು ದೇವದೂತರ ಮುಂದೆಯೂ ದೋಷರಹಿತರಾಗಿರಬಹುದು.MBK 79.4

    ಕೃಪೆಯಿಂದಾದ ನಿತ್ಯಜೀವಕ್ಕೆ ಷರತ್ತುಗಳೇನಂದರೆ, ಏದೇನಿನಲ್ಲಿದ್ದಂಥವುಗಳೇ,-ಲೋಪವಿಲ್ಲದ ನೀತಿ, ದೇವರೊಡನೆ ಹೊಂದಿಕೆ, ಆತನ ಆಜ್ಞೆಗಳನ್ನು ಅನ್ಯೋನ್ಯತೆಯಿಂದ ಅನುಸರಿಸುವುದು ಇವೇ. ಹಳೆ ಒಡಂಬಡಿಕೆಯಲ್ಲಿ ಕೊಟ್ಟಿರುವ ಗುಣಗಳ ಆದರ್ಶವು ಹೊಸ ಒಡಂಬಡಿಕೆಯಲ್ಲೂ ಕೊಡಲ್ಪಟ್ಟಿರುವಂಥಾದ್ದೇ. ಈ ಆದರ್ಶವು ನಾವು ಸಾಧಿಸಲಾರದ್ದಲ್ಲ. ದೇವರು ಕೊಡುವ ಪ್ರತಿಯೊಂದು ಆಜ್ಞೆಯಲ್ಲಿಯೂ ಮತ್ತು ಎಚ್ಚರಿಕೆಯಲ್ಲಿಯೂ ಒಂದು ವಾಗ್ದಾನವಿದೆ, ಆಜ್ಞೆಗಳಿಗೆ ಆಧಾರವಾಗಿ ಸ್ಪಷ್ಟವಾಗಿವೆ. ನಾವು ಆತನಂತಾಗಲು ದೇವರು ಅವಕಾಶವನ್ನು ಕಲ್ಪಿಸಿದ್ದಾನೆ, ವಕ್ರತೆಯು ಅಡ್ಡಬಂದು ಆತನ ಕೃಪೆಯನ್ನು ಭಂಗಪಡಿಸದವರೆಲ್ಲರಲ್ಲೂ ಇದನ್ನು ಈಡೇರಿಸುವನು.MBK 80.1

    ದೇವರು ನಮ್ಮನ್ನು ಎಣೆಯಿಲ್ಲದ ಪ್ರೀತಿಯಿಂದ ಪ್ರೀತಿಸಿದ್ದಾನೆ, ಮತ್ತು ನಾವು ಎಲ್ಲಾ ಜ್ಞಾನಕ್ಕೆ ಮೀರುವ ಕ್ರಿಸ್ತನ ಪ್ರೀತಿಯ ಅಗಲ, ಉದ್ದ, ಎತ್ತರ, ಆಳ ಎಷ್ಟೆಂಬುದನ್ನು ಗ್ರಹಿಸಿದಾಗ ನಮ್ಮ ಪ್ರೀತಿಯು ಆತನೆಡೆಗೆ ಹರಿಯುತ್ತದೆ. ಕ್ರಿಸ್ತನ ಆಕರ್ಷಣೀಯವಾದ ಚೆಲುವಿಕೆಯು ಪ್ರಕಟನೆಯಿಂದಲೂ, ನಾವು ಇನ್ನೂ ಪಾಪಿಗಳಾಗಿರುವಾಗಲೇ ಆತನು ನಮಗೆ ತೋರಿದ ಪ್ರೀತಿಯ ಗ್ರಹಿಕೆಯಿಂದಲೂ, ಮೂರ್ಖ ಹೃದಯ ಕರಗಿ ನಿಗ್ರಹಿಸಲ್ಪಟ್ಟು, ಪಾಪಿಯು ಮಾರ್ಪಟ್ಟು ಪರಲೋಕದ ಮಗುವಾಗುವನು. ದೇವರು ಬಲಾತ್ಕಾರ ಸಾಧನೆಗಳನ್ನು ಅನುಸರಿಸುವುದಿಲ್ಲ; ಹೃದಯದಿಂದ ಪಾಪವನ್ನು ಹೊರದೂಡಲು ಆತನು ಉಪಯೋಗಿಸುವ ಸಾಧನೆಯು ಪ್ರೀತಿಯೇ. ಇದರ ಮೂಲಕವಾಗಿ ಹೆಮ್ಮೆಯನ್ನು ನಮ್ರತೆಗೂ, ಹಗೆತನ ಮತ್ತು ಅವಿಷ್ವಾಸವನ್ನು ಪ್ರೀತಿ ಮತ್ತು ನಂಬಿಕೆಗೂ ಮಾರ್ಪಡಿಸುವನು.MBK 80.2

    ಯೆಹೂದ್ಯರು ತಮ್ಮ ಸ್ವಂತ ಪ್ರಯತ್ನದಿಂದ ಪರಿಪೂರ್ಣತೆಯನ್ನು ಹೊಂದುವ ಹಂಬಲಿಕೆಯಿಂದ ಶ್ರಮಿಸುತ್ತಿದ್ದರು, ಆದರೆ ವಿಫಲ ಮನೋರಥರಾದರು. ಅವರ ನೀತಿಯು ಪರಲೋಕ ರಾಜ್ಯವನ್ನೆಂದೋ ಪ್ರವೇಶಿಸದೆಂದು ಕ್ರಿಸ್ತನು ಮೊದಲೇ ಅವರಿಗೆ ಹೇಳಿದ್ದನು. ಈಗ ಪರಲೋಕ ರಾಜ್ಯವನ್ನು ಸ್ವಾಸ್ಥ್ಯವನ್ನಾಗಿ ಹೊಂದುವವರ ನೀತಿಯ ಸ್ವಭಾವವನ್ನು ಅವರಿಗೆ ತೋರ್ಪಡಿಸುತ್ತಾನೆ. ಪರ್ವತ ಪ್ರಸಂಗದಲ್ಲೆಲ್ಲಾ ಅದರ ಫಲಗಳನ್ನು ವಿವರಿಸಿ, ಈಗ ಒಂದೇ ವಾಕ್ಯದಲ್ಲಿ ಅದರ ಮೂಲವನ್ನೂ ಮತ್ತು ಸ್ವಭಾವವನ್ನೂ ಪ್ರಕಟಿಸುತ್ತಾನೆ; ದೇವರು ಯಾವ ದೋಷವೂ ಇಲ್ಲದವನಾಗಿರುವಂತೆ ನೀವೂ ದೋಷವಿಲ್ಲದವರಾಗಿರ್ರಿ. ಧರ್ಮಶಾಸ್ತ್ರವು ದೇವರ ಸೌಜನ್ಯದ ನಕಲಾಗಿದೆ. ನಿಮ್ಮ ಪರಮತಂದೆಯಲ್ಲಿ ಆತನ ರಾಜ್ಯದ ಅಸ್ತಿಭಾರವಾದ ಮೂಲತತ್ವಗಳ ಪರಿಪೂರ್ಣ ಪ್ರಕಟನೆಯನ್ನು ನೋಡಿರಿ.MBK 80.3

    ದೇವರು ಪ್ರೀತಿಸ್ವರೂಪನು. ಸೂರ್ಯನ ಬೆಳಕಿನ ಕಿರಣಗಳಂತೆ, ಪ್ರೀತಿಯೂ, ಪ್ರಭಾವವೂ ಮತ್ತು ಉಲ್ಲಾಸವೂ ಆತನಿಂದ ಆತನ ಸೃಷ್ಟಿಗಳಿಗೆಲ್ಲಾ ಹರಿಯುವುದು. ಕೊಡುವುದೇ ಆತನ ಸ್ವಭಾವ. ಆತನ ಜೀವ್ಯವೇ ಅಸ್ವಾರ್ಥಪರ ಪ್ರೀತಿಯ ಪ್ರವಾಹವಾಗಿದೆ.MBK 81.1

    ಆತನು ಯಾವ ದೋಷವೂ ಇಲ್ಲದವನಾಗಿರುವಂತೆ ಅದೇ ರೀತಿಯಲ್ಲಿ ನಮ್ಮನ್ನೂ ಯಾವ ದೋಷವೂ ಇಲ್ಲದವರಾಗಿರ್ರಿ ಎಂದು ಹೇಳುತ್ತಾನೆ. ಆತನು ಪ್ರಪಂಚಕ್ಕೇ ಪ್ರಭಾವ ಮತ್ತು ಆಶೀರ್ವಾದದ ಕೇಂದ್ರವಾಗಿರುವಂತೆ ನಾವೂ ನಮ್ಮ ಪುಟ್ಟ ಮಂಡಲಿಗೆ ಕೇಂದ್ರವಾಗಿರಬೇಕು. ನಮ್ಮ ಸ್ವಂತವಾದುದು ಒಂದೂ ನಮ್ಮಲ್ಲಿ ಇಲ್ಲ. ಆದರೆ ಆತನ ಪ್ರೀತಿಯ ಪ್ರಭಾವವು ನಮ್ಮ ಮೇಲೆ ಹೊಳೆಯುತ್ತದೆ. ನಾವು ಅದರ ಪ್ರಭೆಯನ್ನು ಪ್ರತಿಬಿಂಬಿಸಬೇಕು. ಆತನಿಂದ ಎರವು ತೆಗೆದುಕೊಂಡ ಸೌಜನ್ಯದಿಂದ, ಆತನು ಯಾವ ದೋಷವೂ ಇಲ್ಲದವನಾಗಿರುವಂತೆ ನಾವೂ ನಮ್ಮ ಕ್ಷೇತ್ರದಲ್ಲಿ ದೋಷವಿಲ್ಲದವರಾಗಿರಬಹುದು.MBK 81.2

    ನಿಮ್ಮ ತಂದೆಯು ಯಾವ ದೋಷವೂ ಇಲ್ಲದವನಾಗಿರುವಂತೆ ನೀವೂ ದೋಷವಿಲ್ಲದವರಾಗಿರ್ರಿ ಎಂದು ಕ್ರಿಸ್ತನು ಹೇಳಿದನು. ನೀವು ದೇವರ ಮಕ್ಕಳಾಗಿರುವುದಾದರೆ, ಆತನ ಸೌಜನ್ಯದಲ್ಲಿ ಭಾಗಿಗಳಾಗಿದ್ದೀರಿ, ಮತ್ತು ಆತನಂತೆಯೇ ಇರುವಿರಿ. ಪ್ರತಿಯೊಂಡು ಮಗುವೂ ತನ್ನ ತಂದೆಯ ಜೀವ್ಯವನ್ನು ಅನುಸರಿಸಿಯೇ ಜೀವಿಸುವುದು. ನೀವು, - ದೇವರು ತನ್ನ ಆತ್ಮದ ಮೂಲಕವಾಗಿ ಪಡೆದ,-ಮಕ್ಕಳಾಗಿದ್ದರೆ, ದೇವರ ಜೀವ್ಯಕ್ಕನುಗುಣವಾಗಿ ಜೀವಿಸುವಿರಿ. “ಕ್ರಿಸ್ತನಲ್ಲಿಯೇ ದೇವರ ಸರ್ವಸಂಪೂರ್ಣತೆಯು ಆವರಿಸಿ ವಾಸಮಾಡುತ್ತದೆ.” ಕೊಲೊಸ್ಸೆ 2:9; ಮತ್ತು “ಯೇಸುವಿನ ಜೀವವು ನಮ್ಮ ಮರ್ತ್ಯಶರೀರದಲ್ಲಿ” ತೋರಿಬರುತ್ತದೆ. (2 ಕೊರಿಂಥ 4: 11) ಆ ಜೀವವು ನಿಮ್ಮಲ್ಲಿ ಆತನಲ್ಲಿದ್ದಂತ ಗುಣಗಳನ್ನೂ ಮತ್ತು ಕ್ರಿಯೆಗಳನ್ನೂ ವ್ಯಕ್ತಪಡಿಸುತ್ತದೆ. ಹೀಗೆ ನೀವು ಆತನ ಆಜ್ಞೆಗಳಲ್ಲಿರುವ ಪ್ರತಿಯೊಂದು ಬೋಧನೆಗೂ ಹೊಂದಿಕೆಯಾಗುವಿರಿ; ಯಾಕಂದರೆ ಯೆಹೋವನ ಧರ್ಮಶಾಸ್ತ್ರವು “ಪ್ರಾಣವನ್ನು ಉಜ್ಜೀವಿಸ ಮಾಡುವಂಥದ್ದು.” ಕೀರ್ತನೆ 19: 7. ಪ್ರೀತಿಯ ಮೂಲಕವಾಗಿ “ಶರೀರ ಭಾವಕ್ಕೆ ಅನುಸಾರವಾಗಿ ನಡೆಯದೆ ಪವಿತ್ರಾ ತ್ಮಾನುಸಾರವಾಗಿ ನಡೆಯುವವರಾದ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮವು ನೆರವೇರುವುದಕ್ಕೆ ಮಾರ್ಗವಾಯಿತು.” ರೋಮಾಯ 8: 4.MBK 81.3

    * * * * *