Loading...
Larger font
Smaller font
Copy
Print
Contents
ಪರ್ವತ ಪ್ರಸಂಗ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    “ನಿನ್ನ ಸಹೋದರ ಸಂಗಡ ಒಂದಾಗು”

    ದೇವರ ಪ್ರೀತಿಯು ಇಲ್ಲಮೆಗಿಂತಲೂ ಉತ್ತಮವಾದುದು; ಅದು ಸಹಜವೂ ಪರಿಣಾಮಕಾರಿಯೂ ಆದ ತತ್ವವಾಗಿದೆ, ಇತರರಿಗೆ ಧಾರಾಳವಾಗಿ ಸದಾ ಪ್ರವಹಿಸುವ ಜೀವಬುಗ್ಗೆಯಾಗಿದೆ. ಕ್ರಿಸ್ತನ ಪ್ರೀತಿಯು ನಮ್ಮಲ್ಲಿ ನೆಲಸಿರುವುದಾದರೆ, ನಮ್ಮ ಸಹೋದರರನ್ನು ಹಗೆಮಾಡದೆ ಇರುವುದಲ್ಲದೆ, ಅವರಿಗೆ ಯಾವಾಗಲೂ ಪ್ರೀತಿಯನ್ನು ತೋರಿಸಲು ಪ್ರಯತ್ನಿಸುವೆವು.MBK 62.4

    ಯೇಸುವು ಹೇಳಿದ್ದೇನಂದರೆ, “ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತಿರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು”, ಕಾಣಿಕೆಯನ್ನರ್ಪಿಸುವವನು ಕ್ರಿಸ್ತನ ಮೂಲಕವಾಗಿ ದೇವರ ಕೃಪೆಯಲ್ಲಿಯೂ ಮತ್ತು ಪ್ರೀತಿಯಲ್ಲಿಯೂ ಭಾಗಿಯಾಗಿದ್ದಾನೆಂಬ ನಂಬಿಕೆಯನ್ನು ಅರ್ಪಿಸಲ್ಪಡುವ ಈ ಕಾಣಿಕೆಗಳು ವ್ಯಕ್ತಪಡಿಸುತ್ತವೆ. ಆದರೆ ಒಬ್ಬನು ದೇವರ ಕ್ಷಮಾಗುಣಪೂರಿತವಾದ ಪ್ರೀತಿಯಲ್ಲಿ ನಂಬಿಕೆಯನ್ನು ತೋರ್ಪಡಿಸುತ್ತಾ, ತಾನೇ ಪ್ರೀತಿರಹಿತ ಸ್ವಭಾವದಲ್ಲಿ ಲೋಲುಪ್ತನಾಗಿರಲು, ಅದು ಬರೇ ನಟನೆಯೆಂದು ತೋರಿಬರುವುದು.MBK 63.1

    ಒಬ್ಬನು ದೇವರನ್ನು ಸೇವಿಸುತ್ತೇನೆಂದು ನಟಿಸುತ್ತಾ ಒಬ್ಬ ಸಹೋದರನಿಗೆ ವಿರೋಧವಾಗಿ ತಪ್ಪು ಮಾಡಿದರೆ ಅಥವ ಘಾಸಿಪಡಿಸಿದರೆ, ಅವನು ಆ ಸಹೋದರನಿಗೆ ದೇವರ ಗುಂಅಗಳನ್ನು ತಪ್ಪಾಗಿ ನಿರೂಪಿಸುತ್ತಾನೆ, ಈ ತಪ್ಪು ನಿವೇದಿಸಲ್ಪಡಬೇಕು, ಮತ್ತು ದೇವರೊಡನೆ ಹೊಂದಿಕೆಯುಳ್ಳವನಾಗಿರಬೇಕಾದರೆ ಅವನು ಇದನ್ನು ಪಾಪವೆಂದೇ ಪರಿಗಣಿಸಬೇಕು, ನಮ್ಮ ಸಹೋದರನು ನಮಗೆ ವಿರೋಧವಾಗಿ ನಾವು ಆತನಿಗೆ ಮಾಡಿರುವ ತಪ್ಪಿಗಿಂತಲೂ ಮಹಾ ದೊಡ್ಡ ತಪ್ಪನ್ನು ಮಾಡಿರಬಹುದು, ಆದರೂ ಇದು ನಮ್ಮ ಜವಾಬ್ದಾರಿಕೆಯನ್ನು ಕಡಿಮೆ ಮಾಡುವುದಿಲ್ಲ. ನಾವು ದೇವರ ಸನ್ನಿಧಿಗೆ ಬರುವಾಗ ನಮ್ಮ ಮೇಲೆ ಮತ್ತೊಬ್ಬರ ಮನಸ್ಸಿನಲ್ಲಿ ಏನೋ ಇದೆಯೆಂದು ನಮ್ಮ ಜ್ಞಾಪಕಕ್ಕೆ ಬಂದರೆ, ನಮ್ಮ ಪ್ರಾರ್ಥನೆಯ, ಕೃತಜ್ಞತೆಯ ಮತ್ತು ನಮ್ಮ ಆತ್ಮಸಂತೋಷದಿಂದ ತಂದ ಕಾಣಿಕೆಯನ್ನು ಅಲ್ಲಿಯೇ ಬಿಟ್ಟು ನಮಗೆ ವೈಮನಸ್ಯವುಳ್ಳ ಸಹೋದರನ ಬಳಿಗೆ ಹೋಗಿ, ದೈನ್ಯತೆಯಿಂದ ನಮ್ಮ ತಪ್ಪುಗಳನ್ನು ನಿವೇದಿಸಿ, ಕ್ಷಮಾಪಣೆಯನ್ನು ಕೇಳಬೇಕು.MBK 63.2

    ನಾವು ಯಾವ ವಿಧದಲ್ಲಾದರೂ ನಮ್ಮ ಸಹೋದರನನ್ನು ವಂಚಿಸಿದ್ದರೆ ಅಥವಾ ಘಾತಿಸಿದ್ದರೆ, ನಾವು ಪರಿಹಾರ ಕೊಡಬೇಕು. ನಾವು ಉದ್ದೇಶಪೂರ್ವಕವಲ್ಲದೆ ಸುಳ್ಳುಸಾಕ್ಷಿ ಹೇಳಿದ್ದರೆ, ಅವನ ಮಾತುಗಳನ್ನು ತಪ್ಪಾಗಿ ಹೇಳಿದ್ದರೆ, ಅವನ ವ್ಯಕ್ತಿತ್ವಕ್ಕೇನಾದರೂ ಯಾವ ರೀತಿಯಲ್ಲಾದರೂ ಧಕ್ಕೆ ತಂದಿದ್ದರೆ, ನಾವು ಅವನ ವಿಷಯದಲ್ಲಿ ಯಾರೊಡನೆ ಮಾತಾಡಿದ್ದೇವೋ ಅವರ ಬಳಿಗೆ ಹೋಗಿ ಹಾನಿಕರವಾದ ನಮ್ಮ ತಪ್ಪು ಹೇಳಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು.MBK 63.3

    ಸಹೋದರರಲ್ಲಿ ಕಷ್ಟಕರವಾದ ವಿಷಯಗಳು ಇತರರ ಬಳಿಗೆ ಹೋಗದೆ, ಅವರ ನಡುವೆ ಅವರೇ ಮುಚ್ಚುಮರೆಯಿಲ್ಲದೆ ಯಥಾರ್ಥವಾಗಿ ಕ್ರೈಸ್ತಪ್ರೀತಿಯ ಭಾವದಲ್ಲಿ ಸಂಭಾಷಿಸಿದರೆ, ಎಷ್ಟೋ ದುಷ್ಪರಿಣಾಮಗಳನ್ನು ತಡೆಅಯಬಹುದಲ್ಲವೇ! ಅನೇಕರು ಕಳಂಕಿತವಾಗಿರುವ ಎಷ್ಟೋ ದ್ವೇಷದ ಮೂಲವನ್ನೇ ಹಾಳು ಮಾಡಿ, ಕ್ರಿಸ್ತನ ಹಿಂಬಾಲಕರು ಆತನ ಪ್ರೀತಿಯಲ್ಲಿ ಎಷ್ಟು ಸಾಮೀಪ್ಯವಾಗಿಯೂ ಸೌಮ್ಯರೀತಿಯಲ್ಲೂ ತಲ್ಲೀನರಾಗಿರಬಹುದಲ್ಲವೇ!MBK 63.4