Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಅಧ್ಯಾಯ 06. - ಪ್ರಕಾಶ ರೂಪಾಂತರವು

  ಯೇಸುವಿನ ಪ್ರಕಾಶ ರೂಪಾಂತರದ ಸಮಯದಲ್ಲಿ ಶಿಷ್ಯರ ನಂಬಿಕೆಯು ಬಹಳವಾಗಿ ಬಲಗೊಂಡುದನ್ನು. ನಾನು ಕಂಡೆನು. ತಮ್ಮ ಕಹಿಸಂಕಟಗಳು, ನಿರಾಶೆಗಳ ನಡುವೆ ಯೇಸುವು ವಾಗ್ದಾನ ಮಾಡಲ್ಪಟ್ಟ ಮೆಸ್ಸೀಯನು ಎಂಬ ಭರವಸೆ ಉಂಟುಮಾಡಿ ಸಾಬೀತು ಪಡಿಸಲು ದೇವರು ಈ ಘಟನೆ ಸಂಭವಿಸುವಂತೆ ಮಾಡಿದನು. ರೂಪಾಂತರದ ವೇಳೆಯಲ್ಲಿ ಯೇಸುವಿನ ಶ್ರಮೆಮರಣದ ವಿಷಯವಾಗಿ ಮಾತನಾಡಲು ದೇವರು ಮೋಶೆ ಎಲೀಯನನ್ನು ಕಳುಹಿಸಿದನು.ದೇವದೂತರ ಬದುಲು ಭೂಲೋಕದ ವಿಚಾರಣಾ ಪರೀಕ್ಷಗಳು ಅನುಭವವಿದ್ದವರನ್ನು ತನ್ನ ಕುಮಾರನೊಂದಿಗೆ ಸಂಭಾಷಿಸಲು ಕಳುಹಿಸಿದನು. ಕೆಲವು ಶಿಷ್ಯರು ಈ ರಾಪಾಂತರವನ್ನು ನೋಡಲ ಅವಕಾಶ ಪಡೆದರು. ಅಲ್ಲಿ ಅವರ ಕಣ್ಣ ಮುಂದೆ ಆತನ ಮುಖವು ಪ್ರಕಾಶಿಸಲ್ಪಟ್ಟು ಹೊಳೆಯಿತು, ರೂಪ ಬೇರೆಯಾಯಿತು, ಆತನ ವಸ್ತ್ರಗಳು ಬಹು ಬೆಳ್ಳಗೆ ಹೊಳೆಯುತ್ತಿದ್ದವು; “ಈತನು ಪ್ರೀಯನಾಗಿರುವ ನನ್ನ ಮಗನು ; ಈತನ ಮಾತನು ಕೇಳಿರಿ.” ಎಂಬ ಬಹು ಗಂಬೀರ ದೇವವಾಣಿಯನ್ನು ಶಿಷ್ಯರು ಕೇಳಿಸಿಕೊಂಡರು . ಎಲೀಯಯನು ದೇವರ ಪ್ರವಾದಿಯಗಿದ್ದು ಆತನ ಜೊತೆಜೊತೆಗೆ ನಡೆದವನು . ಅವನ ಕೆಲಸವು ಸುಗವಾಗಿರರಲಿಲ್ಲ. ಈತನ ಮುಖಾಂತರ ದೇವರು ಪಾಪವನ್ನು ನೇರವಾಗಿ ಖಂಡಿಸಿದನು . ತನ್ನ ಜೀವವನ್ನು ರಕ್ಷಿಸಿಕೊಳ್ಳಲು ಒಂದು ಸ್ಥಳದಿಂದ ಮತ್ತೊಂದಕ್ಕೆ ಓಡಬೇಕಾಯಿತು ಕಾಡುಮೃಗವೊಂದನ್ನು ನಾಶಪಡಿಸಲು ಬೇಟೆಯಾಡುವಂತೆ ಜನರು ಎಲೀಯನನ್ನು ಅಟ್ಟಿಸಿಕೊಂಡು ಹೋದರು. ದೇವರು ಎಲೀಯನನ್ನು ಸಶರೀರವಾಗಿ ರೂಪಾಂತರಿಸಿದನು. ದೂತರು ಮಹಾಮಹಿಮೆಯಿಂದ ಜಯಶಾಲಿಯಂತೆ ಅವವನನ್ನು ಪರಲೋಕಕ್ಕೆ ಕರೆದೊಯ್ದರು.GCKn 52.1

  ದೇವರು ಹೆಚ್ಚಾಗಿ ಗೌರವಿಸಿದ ವ್ಯಕ್ತಿ ಮೋಶೆ, ಇವನಿಗಿಂತ ಪೂರ್ವದಲ್ಲದ್ದವರಿಗಿಂತಲೂ ಹೆಚ್ಚಾಗಿದ್ದವನು. ಒರ್ವ ಮನುಷ್ಯನು ತನ್ನ ಗೆಳೆಯನೊಂದಿಗೆ ಮಾತಾಡುವಂತೆ ದೇವರೊಂದಿಗೆ ಮುಖಮುಖಿಯಾಗಿ ಮಾತನಾಡುವ ಅವಕಾಶ ಹೊಂದಿದ ವ್ಯಕ್ತಿ. ದೇವರನ್ನು ಆವರಿಸಿದ ತೀವ್ರಪ್ರಕಾಶವನ್ನೂ ಉಜ್ವಲ ಪ್ರಭೆಯನ್ನು ಕಣ್ಣಾರೆ ಕಾಣುವ ಅವಕಾಶ ಪಡೆದವನು. ಮೋಶೆಯ ಮೂಲಕ ಐಗುಪ್ತ್ಯರ ಗುಲಾಮತ್ವದಿಂದ ಇಸ್ರಾಯೇಲರು ಬಿಡಿಸಲ್ಪಟ್ಟರು. ಇವನು ಮದ್ಯಸ್ಥಗಾರನಾಗಿದ್ದನು. ಜನರಿಗೂ ದೇವರ ಉಗ್ರಕೋಪಕ್ಕೊನಡುವೆ ನಿಂತವನಾಗಿದ್ದನು. ಇಸ್ರಾಯೇಲರು ಗುಣಗುಟ್ಟಿದಾಗ, ಅಪನಂಬಿಕೆ ತೋರಿದಾಗ, ದೂಷಣೀಯ ಪಾಪವೆಸಗಿದಾಗ ದೇವರ ಕೋಪವು ಉರಿಯಿತು. ಇದು ಮೋಶೆಗೆ ಈ ಜನರ ಮೇಲಿದ್ದ ಪ್ರೀತಿಯ ಪರೀಕ್ಷೆಯಾಗಿತ್ತು.ಒಂದುವೇಳೆ ಮೋಶೆಯು, ಇಸ್ರಾಯೇಲರ ನಾಶಕ್ಕೆ ಒಪ್ಪಿದ್ದರೆ, ತರುವಾಯ ಆತನಿಂದಲೇ ಬೇರೆ ಒಂದು ಜನಾಂಗ ಉಂಟಾಗುವಂತೆ ಮಾಡುವೆನು. ಎಂದು ದೇವರು ವಾಗ್ದಾನ ಮಾಡಿದನು. ಆಗ ಇಸ್ರಾಯೇಲರಿಗಾಗಿ ಬೇಡಿಕೊಳ್ಳುವುದರಲ್ಲಿ ತನ್ನ ಪ್ರೀತಿಯನ್ನು ಪ್ರದರ್ಶಿಸಿದನು. ಈನಿರಾಶೆಯಲ್ಲಿಯಾ ದೇವರು ಕೋಪಗ್ನಿಯನ್ನು ಹಿಂತೆಗೆದುಕೊಳ್ಳೆಬೇಂದೂ, ಅವರಿಗೆ ಕರುಣೆ ತೋರಿಸಿ ಮನ್ನಿಸಬೇಕೆಂದೂ ಇಲ್ಲವಾದರೆ ಜೀವಿತರ ಪಟ್ಟಿಯಿಂದ ತನ್ನ ಹೆಸರನ್ನು ಅಳಿಸಿಬಿಡಬೇಕೆಂದು ಪ್ರಾರ್ಥಿಸಿದನು .GCKn 53.1

  ಕುಡಿಯುವುದಕ್ಕೆ ನೀರಿಲ್ಲದ ಕಾರಣ ಇಸ್ರಾಯೇಲರು ದೇವರಿಗೆ ವಿರುದ್ದವಾಗಿಯಾ, ಮೋಶೆಗೆ ವಿರುದ್ದವಾಗಿಯಾ ಗುಣಗುಟ್ಟಿದರು. ನಮ್ಮನ್ನು ನಮ್ಮ ಮಕ್ಕಳನ್ನೂ ಕರೆತಂದು ಸಾಯಮಾಡಿದ್ದೀಯ ಎಂದು ತಪ್ಪು ಹೋರಿಸಿದರು. ದೇವರು ಇವರ ಗುಣಗುಟ್ಟುವಿಕೆಯನ್ನು ಕೇಳಿ ಇಸ್ರಾಯೇಲರಿಗೆ ನೀರು ಸಿಗುವಂತೆ ಬಂಡೆಯನ್ನು ಮುಟ್ಟಲು ಮೋಶೆಗೆ ಹೇಳಿದರು. ಮೋಶೆ ಕೋಪದಿಂದ ಬಂಡೆಯನ್ನು ಹೊಡೆದು ಆ ಪ್ರತಿಷ್ಠೆಯನ್ನು ತನ್ನದಾಗಿಸಿಕೊಂಡನು. ಇಸ್ರಾಯೇಲರ ಎಡೆಬಿಡದ ಮೊಂಡುತನ, ಗುಣುಗುಟ್ಟುವಿಕೆ ಆತನಲ್ಲಿ ಅಪಾರವಾದ ನೋವನ್ನುಂಟು ಮಾಡಿತು.ಒಂದು ಕ್ಷಣದಲ್ಲಿ ದೇವರ ಅಪಾರ ಸಲಹೆಯನ್ನು ಮರೆತನು ಮತ್ತು ಅವರ ಗುಣಗುಟ್ಟುವಿಕೆ ತನ್ನ ವಿರುದ್ದವಾಗಲ್ಲ ದೇವರ ವರುದ್ದ ಎಂಬುದನ್ನು ಮರೆತನು. ಆತನು ತನ್ನ ಬಗ್ಗೆ ಮಾತ್ರ ಯೋಚಿಸಿದನು. ಅವನು ಇಸ್ರಾಯೇಲರ ಮೇಲೆ ಎಷೋ ಪ್ರೀತಿಯನ್ನಿಟ್ಟರೂ ಪ್ರತಿಯಾಗಿ ಅವರು ಕೃತ ಘ್ನತೆ ಪ್ರಕಟಿಸಿದರಲ್ಲ ಎಂದುಕೊಂಡನು. ಜನರು ತನಗೆ ಕಟುವಾಗಿ ತಪ್ಪೆಸಗಿದ್ದಾರೆ ಎಂದುಕೊಂಡನು,GCKn 54.1

  ಮೋಶೆಯು ಬಂಡೆಯನ್ನು ಒಡೆಯುವಾಗ ದೇವರಿಗೆ ಗೌರವ ಸಲ್ಲಿಸುವುದರಲ್ಲಿ ಮತ್ತು ಇಸ್ರಾಯೇಲರೂ ಆತನಿಗೇ ಘನಮಾನ ಸಲ್ಲಿಸುವಂತೆ ಮಾಡುವುದರಲ್ಲಿ ಸೋತನು. ಇದರಿಂದ ಅಸಮಾಧಾನಗೊಂಡ ದೇವರು, ಆತನು ವಾಗ್ದಾತ್ತ ದೇಶಕ್ಕೆ ಸೇರುವುದಿಲ್ಲವೆಂದು ಹೇಳಿದನು. ಇಸ್ರಾಯೇಲರನ್ನು ನೇರದಾರಿಗೆ ತರಲು ಆಗ್ಗಾಗೆ ಅವಕಾಶ ಕಲ್ಪಿಸಿ, ತನ್ನ ಸಾಮರ್ಥ್ಯ ಪ್ರದರ್ಶಿಸಿ, ಅವರ ನೆನಪಿನಲ್ಲಿ ಉಳಿಯುವಂತೆ,ಘನಮಾನ ಪಡೆಯುವಂತೆ ಮಾಡುವುದೇ ದೇವರ ಯೋಜನೆಯಾಗಿತ್ತು.GCKn 54.2

  ಆಜ್ಞಾಶಾಸನಗಳಾದ ಆ ಎರಡು ಕಲ್ಲಿನ ಹಲಗೆಗಳನ್ನು ಹಿಡಿದುಕೊಂಡು ಮೋಶೆಯು ಬೆಟ್ಟದಿಂದ ಇಳಿದು ಬರಲು, ಇಸ್ರಾಯೇಲರು ಚಿನ್ನದ ಬಸವನನ್ನು ಆರಾಧಿಸುತ್ತಿರುವುದ್ದನ್ನು ಕಂಡನು. ಅವನ ಕೋಪವು ತಾರಕಕ್ಕೇರಿ ಕಲ್ಲಿನ ಹಲಗೆಗಳನ್ನು ನೆಲಕ್ಕೆ ಹಾಕಿ ಒಡೆದು ಬಿಟ್ಟನು. ಇದರಲ್ಲಿ ಮೋಶೆ ಯಾವ ಪಾಪ ಮಾಡದಿರುವುದ್ದನ್ನು ನಾನು ಕಂಡೆನು. ದೇವರಮಹಿಮೆಯ ಉಪೇಕ್ಷೆಯನ್ನು ಸಹಿಸದೆ ಅವನು ಸಿಟ್ಟಿಗೆದ್ದನು. ಆದರೆ ತನ್ನ ಹೃದಯದ ನೈಜಭಾವನೆಗಳಿಗೆ ಸಿಲುಕಿ ದೇವರಿಗೆ ಸಲ್ಲಬೇಕಾದ ಮಹಿಮೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಪಾಪಮಾಡಿದನು. ಈ ಪಾಪಕ್ಕಾಗಿ ವಾಗ್ದಾತ ದೇಶದ ಪ್ರವೇಶದಿಂದ ವಂಚಿತನಾದನು .GCKn 55.1

  ದೂತರ ಮುಂದೆ ಮೋಶೆಯನ್ನು ದೊಷಿಸಲು ಸೈತಾನನು ಸಮಯ, ಮತ್ತು ಕಾರಣಕ್ಕಾಗಿ ಹುಡುಕುತ್ತಿದ್ದನು. ದೇವರನ್ನು ಅಪ್ರಸನ್ನಗೂಳಿಸುವಂತೆ ಮಾಡುವುದರಲ್ಲಿ ವಿಜಯಿಯಾದನು ತನ್ನನ್ನು ತಾನೇ ಕೊಚ್ಚಿಕೊಳ್ಳುತ್ತಾ, ಇದೇ ರೀತಿ ಲೋಕರಕ್ಷಕನು ಮಾನವ ವಿಮೋಚನೆಗಾಗಿ ಬರುವಾಗಲೂ ಅಧೀನಮಾಡಿಕೊಳ್ಳುವೆನೆಂದು ಹೇಳಿದನು. ಈ ರೂಪಾಂತರದಲ್ಲಿ ಮೋಶೆ ಸೈತಾನನ ಶಕ್ತಿಗೆ ಪಕ್ಕಾಗಿ ಮರಣದ ದಬ್ಬಾಳಿಕೆಗೆ ಈಡಾದನು. ಒಂದುವೇಳೆ ದೃಡನಾದ್ದು ತನ್ನನ್ನು ಮಹಿಮೆಪಡಿಸಿಕೊಳ್ಳದಿದ್ದರೆ ದೇವರು ಮೋಶೆಯನ್ನು ವಾಗ್ದಾತ್ತ ದೇಶಕ್ಕೆ ಕರೆದೊಯ್ದು ಅನಂತರ ಮರಣಕ್ಕೊಪ್ಪಿಸದೆ ರೂಪಾಂತರಗೊಳಿಸಿ ಪರಲೋಕಕ್ಕೆ ಸೇರಿಸುತ್ತಿದನು.GCKn 55.2

  ಮೋಶೆಯು ಮರಣ ಹೊಂದಿದುದನ್ನು ನಾನು ಕಂಡೆನು ,ಆದರೆ ಯಾವ ಭ್ರಷ್ಟತೆಯನ್ನು ಕಾಣುವ ಮೊದಲೇ ಮಿಕಾಯೇಲನು ಬಂದು ಆತನಿಗೆ ಜೀವವನ್ನು ಅನುಗ್ರಹಿಸಿದನು. ಈ ಸಂದರ್ಭದಲ್ಲಿ ಸೈತಾನನು ಬಂದು ಈ ದೇಹವು ನನ್ನದು ಎಂದು ಆಗ್ರಹಿಸಿದನು. ಆದರೆ ಮೋಶೆಪುನರುತ್ಥಾನ ಹೊಂದಿ ಮಿಕಾಯೇಲನೊಂದಿಗೆ ಪರವನ್ನು ಸೇರಿದನು. ತನಗೆ ತುತ್ತಾಗಿದ್ದ ದೇಹವನ್ನು ಕೊಡದೆಹೋದುದರಿಂದ ಸೈತಾನನು ದೇವರನ್ನು ತೀಕ್ಷ್ಣವಾಗಿ ವಿರೋದಿಸುತ್ತಾ ಅನ್ಯಾಯಗಾರನೆಂದು ದೊಷಿಸಿದನು. ಸೈತಾನನ ಶೋಧನೆಗೆ ಒಳಗಾಗಿ ದೇವರ ಸೇವಕನು ಜಾರಿಬಿದ್ದಿದರೂ ಮಿಕಾಯೇಲನು ಪಿಶಾಚನನ್ನು ಆಕ್ಷೇಪಿಸದೆ ತಂದೆಯಾದ ದೇವರಿಗೊಪ್ಪಿಸಿ ‘ದೇವರು ನಿನ್ನನ್ನು ಖಂಡಿಸಲಿ’ ಅಂದನು.GCKn 56.1

  ಯೇಸುವು ಶಿಷ್ಯರೊಂದಿಗೆ ಸಂಭಾಷಿಸುತ್ತ ದೇವರು ತನ್ನ ಮಹಾ ಘನಮಾನ ಮಹಿಮೆಗಳೊಂದಿಗೆ ಬರವಾಗ ಮರಣವನ್ನು ಕಾಣದ ಹಲವಾರು ಜನರು ತನ್ನೊಂದಿಗೆ ನಿಲ್ಲುವರು ಎಂದನು. ಅಂತಯೇ ಪ್ರಕಾಶರೂಪಂತರದಲ್ಲಿ ಇದು ಸಂಭವಿಸಿತು. ಅತನ ಮುಖಭಾವ ಬದಲಾಗಿ ಸೂರ್ಯನಂತೆ ಪ್ರಕಾಶಿಸಿತು, ವಸ್ತ್ರಗಳು ಬೆಳ್ಳಗೆ ಹೊಳೆಯುತ್ತಿದ್ದವು. ಯೇಸುವಿನ ಎರಡನೇ ಬರುವಣದಲ್ಲಿ ಸತ್ತು ಮೇಲೆದ್ದವರು ಸೂಚಕವಾಗಿ ಮೋಶೆಯೂ, ಮರಣವನ್ನು ಕಾಣದೆ ಮಾರ್ಪಡಿಸಲ್ಪಟ್ಟು ಪರಲೋಕಕ್ಕೇರಿದವರನ್ನು ಸೂಚಿಸುವಂತೆ ಎಲೀಯನು ಕಂಡುಬಂದರು. ಶಿಷ್ಯರು ಬಹು ಭಯಾಶ್ಚರ್ಯದಿಂದ ಯೇಸುವಿನ ಮಹೋನ್ನತ ಪ್ರಭುಶಕ್ತಿಯನ್ನು ಕಂಡರು ಮತ್ತು ಮೋಡವು ಆ ಮೂವರನ್ನು ಆವರಿಸಿಕೊಂಡಿತು. ಈತನೇ ಪ್ರಿಯನಾದ ನನ್ನ ಮಗನು; ಈತನ ಮಾತನ್ನು ಕೇಳಿರಿ ಎಂಬ ದೇವವಾಣಿಯನ್ನು ಕೇಳಿಸಿಕೊಂಡರು.GCKn 56.2

  ನೋಡಿ; ವಿಮೋಚನಕಾಂಡ 32ನೇ ಅಧ್ಯಾಯ : ಅರಣ್ಯಕಾಂಡ 20;7-12: ಧರ್ಮೋಪದೇಶಕಾಂಡ 34:5: 2ಅರಸು 2:11: ಮಾರ್ಕ ಅಧ್ಯಾಯ 9: ಯಾದ 9GCKn 57.1