Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಅಧ್ಯಾಯ 36. - ಯಾಕೋಬನ ಹೋರಾಟದ ಸಮಯ

  ದೇವಭಕ್ತರು ತಾವು ವಾಸಿಸುತ್ತಿದ್ದ ಹಳ್ಳಿಪಟ್ಟಣಗಳನ್ನು ತೊರೆದು ಬಂದು ಗುಂಪಾಗಿ ಸೇರಿಕೊಂಡು ನಿರ್ಜನ ಪ್ರದೇಶದಲ್ಲಿ ವಾಸಿಸುವುದನ್ನು ನಾನು ಕಂಡೆನು. ದೂತರು ಅವರಿಗೆ ಬೇಕಾದ ಊಟ ನೀರಿನ ವ್ಯವಸ್ಥೆ ಮಾಡಿದರು; ಆದರೆ ದುಷ್ಟರೋ ಬಾಯರಿಕೆ ಹಸಿವೆಯಿಂದ ಸಂಕಂಟ ಪಡುತ್ತಿದ್ದರು. ನಂತರ ಭೂಮಿಯ ನಾಯಕರೆಲ್ಲಾ ಸೇರಿ ಸಮಾಲೋಚಿಸುತ್ತಿರುವುದನ್ನು ನಾನು ಕಂಡೆನು. ಅವರ ಸುತ್ತಲೂ ಸೈತಾನನೂ ಅವನ ದೂತರು ಗಡಬಿಡಿಯಿಂದ ಸುಳಿದಾಡುತ್ತಿದ್ದರು ಇವರಿಂದ ಲಿಖಿತವಾದ ಸುತ್ತೋಲೆ ಹಾಗೂ ಅದರ ಪ್ರಜೆಗಳು ದೇಶದ ಕಟ್ಟಕಡೆಗಳಿಗೆಲ್ಲಾ ಹೊರಡಿಸಲ್ಪಟ್ಟು ಆಜ್ಞಾಪಿಸಲಾಯಿತು. ಭಕ್ತರೆಲ್ಲಾ ಸಬ್ಬತ್ತನ್ನು ತೊರೆದು ವಾರದ ಮೊದಲನೆಯ ದಿನದ ಆಚರೆಣೆಗೆ ಬದ್ದರಾದರೆ ಸ್ವತಂತ್ರರಾಗಿರಬಹುದು. ಒಂದುವೇಳೆ ತಮ್ಮದೇ ಆದ ವಿಶಿಷ್ಟ ನಂಬಿಕೆಗೆ ಅಂಟಿಕೊಂಡರೆ ಸ್ವಲ್ಪ ಕಾಲಾವಧಿಯ ನಂತರ ಮರಣದಂಡನೆಗೆ ಒಳಗಾಗುವ ಸ್ವಾತಂತ್ರ್ಯ ಅವರಿಗಿದೆ ಎಂಬ ಆಜ್ಞೆ ಹೊರಟಿದ್ದನ್ನು ಕಂಡೆನು. ಈ ಸಮಯದಲ್ಲಿ ಭಕ್ತರೆಲ್ಲಾ ಒಗ್ಗಟ್ಟಾಗಿ ಶಾಂತಿಯಿಂದ ದೇವರಲ್ಲಿ ನಂಬಿಕೆಯಿಟ್ಟು ,ಆತನ ವಾಗ್ದಾನದ ಮೇಲೆ ಆತುಕೊಂಡವರಾಗಿ, ತಮಗಾಗಿ ತಪ್ಪಿಸಿಕೊಳ್ಳುವ ಮಾರ್ಗವು ಸಿದ್ದವಾಗುತ್ತದೆಂದು ನಂಬಿದರು ಇನ್ನೂ ಕೆಲವೆಡೆ ಲಿಖಿತಗೊಂಡ ಆಜ್ಞಾಶಾಸನವು ಜಾರಿಗೆ ಬರುವ ಮೊದಲೇ ದುಷ್ಟರು ಭಕ್ತರನ್ನು ಕೊಲ್ಲಲು ಮೇಲೆ ಬೀಳುವರು; ಆದರೆ ದೂತರು ಯೋಧರ ಸ್ವರೂಪದಲ್ಲಿ ಬಂದು ಅವರಿಗಾಗಿ ಯುದ್ಧ ಮಾಡುವರು. ಸೈತಾನನು ಮಹೋನ್ನತನ ಭಕ್ತರನ್ನು ನಾಶಗೊಳಿಸುವ ಅವಕಾಶವನ್ನು ಅಪೇಕ್ಷಿಸಿದರೆ ದೇವರು ಅವರನ್ನು ಕಾಯಲು ದೂತರಿಗೆ ಆಜ್ಞಾಪಿಸಿದನು ಏಕೆಂದರೆ ಸುತ್ತಲಿರುವ ಅನ್ಯಜನರು ಮದ್ಯದಲ್ಲಿ ಆಜ್ಞೆಗಳನ್ನು ಕೈಕೊಂಡವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದು ದೇವರಿಗೆ ಗೌರವ ತರುವುದಾಗಿದೆ. ನಂಬಿಗಸ್ಥರಾಗಿ ಬಹು ಕಾಲದಿಂದ ಆತನ್ನನ್ನು ಎದುರುನೋಡುತ್ತಾ ಮರಣವನ್ನು ಕಾಣದೆ ಜೀವಂತರಾಗಿರುವವರನ್ನು ರೂಪಾಂತರಗೊಳಿಸುವುದರಲ್ಲಿ ಯೇಸುವು ಗೌರವಕ್ಕೆ ಪಾತ್ರನಾಗಿವನು.GCKn 273.1

  ಬಹುಬೇಗನೆ ಭಕ್ತರು ಮಾನಸಿಕ ಆದೋಲನಕ್ಕೆ ಒಳಗಾಗುವುದನ್ನು ನಾನು ಕಂಡೆನು. ಅವರ ದುಷ್ಟಭೂನಿವಾಸಿಗಳಿಂದ ಸುತ್ತುವರಿದಿದ್ದರು .ಹೊರನೋಟಕ್ಕೆ ಪ್ರತಿಯೊಂದೂ ಅವರಿಗೆ ವಿರುದ್ಧವಾಗಿತ್ತು ಕೊನೆಗೂ ನಾವು ದುಷ್ಟರ ಕೈಯಿಂದ ಹತರಾಗುವುದಕ್ಕೆ ದೇವರು ಬಿಟ್ಟುಕೊಟ್ಟಿದ್ದಾರೆ ಎಂದು ಕೆಲವರು ಭಯಪಡಲಾರಂಭಿಸಿದರು. ಒಂದುವೇಳೆ ಇವರು ಕಣ್ಣುಗಳು ತೆರೆಯಲ್ಪಟ್ಟಿದ್ದರೆ ಅವರ ಸುತ್ತಲೂ ದೇವರ ದೂತರಿರುವುದನ್ನು ಕಂಡುಕೊಳ್ಳುತ್ತಿದ್ದರು. ಆನಂತರ ಕೋಪೋದ್ರಿಕ್ತ ದುಷ್ಟರು ತಂಡೋಪತಂಡವಾಗಿ ಬಂದು ಭಕ್ತರನ್ನು ತುಂಡರಿಸಲು ಕಾತುರಗೊಂಡರು. ಆದರೆ ಅವರು ಸಮೀಪಕ್ಕೆ ಸಾರಿಬರುವ ಮುನ್ನ ಭಕ್ತರ ಸುತ್ತಲಿದ್ದ ಸರ್ವಶಕ್ತನ ದೂತರನ್ನು ಎದುರಿಸಬೇಕು ಅದು ಅಸಾಧ್ಯವಾದದ್ದು! ದೇವದೂತರು ಒತ್ತರಿಸಿಬರಿತ್ತಿದ್ದ ಅವರನ್ನು ಹಿಂಜರಿದು ಬೀಳುವಂತೆ ತಳ್ಳಿದರು. ಈ ಸಮಯವು ಭಕ್ತರಿಗೆ ಭಯಂಕರವೂGCKn 274.1

  ತ್ರಾಸಧಾಯಕವೂ ಆಗಿತ್ತು. ಅವರು ವಿಮೋಚನೆಗಾಗಿ ರಾತ್ರಿಹಗಲು ದೇವರಿಗೆ ಮೊರೆಯಿಟ್ಟರು. ಹೊತನೋಟಕ್ಕೆ ಅವರು ತಪ್ಪಿಸಿಕೊಳ್ಳಲು ಸಾದ್ಯವಾದಂತೆ ತೋರಿತು. ದುಷ್ಟರು ತಮ್ಮ ವಿಜಯೋತ್ಸವವನ್ನು ಆಗಲೇ ಪ್ರಾರಂಭಿಸಿ; ನಮ್ಮ ಕೈಗಳಿಂದ ದೇವರು ನಿಮ್ಮನ್ನೇಕೆ ಬಿಡಿಸಲಿಲ್ಲ? ನೀವೇ ಮೇಲಕ್ಕೆ ಹೋಗಿ ಜೀವ ಉಳಿಸಿಕೊಳ್ಳಬಾರದೋ? ಎಂದು ಕುಚೋದ್ಯವಾಡಿದರು. ಭಕ್ತರು ಅವರ ಮಾತಿಗೆ ಯಾವ ಬೆಲೆಯನ್ನೂ ಕೊಡಲಿಲ್ಲ. ಯಾಕೋಬನಂತೆ ದೇವರೊಂದಿಗೆ ಹೋರಾಡುತ್ತಿದ್ದರು.ದೇವದೂತರು ಅವರನ್ನು ಬಿಡಿಸಲು ಕಾತುರಗೊಂಡರು; ಆದರೆ ಭಕ್ತರು ಇನ್ನೂ ಸ್ವಲ್ಪಕಾಲ ಈ ಪಾತ್ರೆಯಲ್ಲಿ ಕುಡಿಯಬೇಕಾಗಿತ್ತು ಮತ್ತು ಧೀಕ್ಷೆಹೊಂದಬೇಕಾಗಿತ್ತು. ದೂತರು, ಅವರ ನಂಬಿಕೆಯಲ್ಲಿ ಭರವಸೆಯಿಟ್ಟು ಕಾಯುತ್ತಿದ್ದರು. ದೇವರು ತನ್ನ ಪ್ರಭಲಶಕ್ತಿಯನ್ನು ಪ್ರಕಟಿಸಿ, ಮಹಾಮಹಿಮೆಯಿಂದ ವಿಮೋಚಿಸುವ ಕಾಲ ಹತ್ತಿರವಾಗುತ್ತಿತ್ತು. ಅನ್ಯರ ಮದ್ಯದಲ್ಲಿ ತನ್ನ ಆಪೇಕ್ಷಣೆಗೆ ಸಿಲುಕುವುದನ್ನು ದೇವರು ಸಹಿಸಲಾರರು. ತನ್ನ ನಾಮ ಮಹಿಮೆಗಾಗಿ ಆತನು ತಾಳ್ಮಯಿಂದ ಕಾದಿದ್ದವರನ್ನು ವಿಮೋಚಿಸಿ ಹೆಸರುಗಳನ್ನು ಪುಸ್ತಕದಲ್ಲಿ ಬರೆದಿಡುವನು.GCKn 275.1

  ಪ್ರಾಮಾಣಿಕ ನೋಹನ ಕಾಲವನ್ನು ನನಗೆ ತೋರಿಸಲಾಯಿತು .ಮಳೆ ಸುರಿಯಿತು, ಪ್ರಳಯವಿ ಬಂತು, ನೋಹನು ಆತನ ಕುಂಟುಂಬವೂ ನಾವೆಯಲ್ಲಿ ಸೇರಿಕೊಂಡಿತು. ಅನಂತರ ದೇವರು ಬಾಗಿಲನ್ನು ಮುಚ್ಚಿದನು. ಆ ಕಾಲದ ಜನರು ಅಪಹಾಸ್ಯಮಾಡಿ ಕುಚೋದ್ಯವಾಡಿದಾಗ ನೋಹನು ಬಹು ಪ್ರಮಾಣಿಕನಾಗಿ ಅವರನ್ನು ಎಚ್ಚರಿಸಿದನು ಭೂಮಿಯ ಮೇಲೆ ಮಳೆ ಸುರಿಯುತ್ತಾ ಬರಲು, ಒಬ್ಬರಾದನಂತರ ಒಬ್ಬರು ಮುಳುಗುತ್ತಿರುವಾಗ ತಾವು ಪರಿಹಾಸ್ಯಮಾಡುತ್ತಿದ್ದ ನಾವೆಯು ಪ್ರಾಮಾಣೆಕನಾದ ನೋಹ ಮತ್ತು ಅವನ ಕುಂಟುಂಬವನ್ನು ರಕ್ಷಿಸಿ ಸುರಕ್ಷಿತವಾಗಿ ತೇಲುವುದನ್ನು ಕಂಡರು. ಹಾಗೆಯೇ ಮುಂಬರುವ ದೇವರ ಮಹಾಕೋಪದ ಬಗೆಗೆ ಎಚ್ಚರಿಸುತ್ತಿದ್ದ ದೇವಜನರು ರಕ್ಷಿಸಿಸಲ್ಪಡುವುದನ್ನು ನಾನು ಕಂಡೆನು. ಭೂನಿವಾಸಿಗಳನ್ನು ಅವರು ಯಥಾರ್ಥತೆಯಿಂದ ಎಚ್ಚರಿಸಿದರು, ಮೃಗದ ಆಜ್ಞೆಗೆ ತಳಬಾಗದೆ, ಅದರ ಗುರುತನ್ನು ಅಂಗೀಕರಿಸಿಕೊಳ್ಳದೆ ರೂಪಂತರ ಹೊಂದಲು ಕಾತುರದಿಂದಿರುವವರನ್ನು ದುಷ್ಟರು ನಾಶಪಡಿಸಲು ದೇವರು ಅನುಮತಿಸುವುದಿಲ್ಲ. ಒಂದುವೇಳೆ ಅನುಮತಿ ನೀಡಿದ್ದಾದರೆ ಸೈತಾನನೂ ಆತನ ಕೆಟ್ಟದೂತರೂ, ದೇವರನ್ನು ದೂಷಿಸುವವರೆಲ್ಲಾ ತೃಪ್ತಿಯಿಂದ ತಣಿಯುವರು. ಇಷ್ಟುಕಾಲ ತಾವು ಪ್ರೀತಿಸಿದವನನ್ನು ಕಾಣಲು ಅವಿಶ್ರಾಂತವಾಗಿ ಕಾಯುತ್ತಿದ್ದವರ ಮೇಲೆ ತನ್ನ ಪ್ರಾಬಲ್ಯವನ್ನು ಸಾಧಿಸಿದ ಸೈತಾನನ ಸರ್ವಾಧಿಕಾರಕ್ಕೆ ಆಹ್! ಎಂತಹ ಜಯ! ಭಕ್ತರೆಲ್ಲಾ ಆಕಾಶಕ್ಕೆ ಎತ್ತಲ್ಪಡುವರೆಂಬ ವಿಷಯವನ್ನು ಯಾರೆಲ್ಲಾ ಗೇಲಿಮಾಡಿದರೋ ಅವರು, ದೇವರು ಆತನ ಮಕ್ಕಳಿಗೆ ತೋರಿಸುವ ಸುರಕ್ಷೆ ಮತ್ತು ಮಹಾಪ್ರಭಾವ ತುಂಬಿದ ವಿಮೋಚನೆಯನ್ನು ಕಣ್ಣಾರೆ ಕಾಣುವರು.GCKn 275.2

  ಭಕ್ತರು ಪಟಣ್ಣವನ್ನು ಮತ್ತು ಹಳ್ಳಿಯನ್ನು ಬಿಟ್ಟುಹೋಗುವಾಗ ದುಷ್ಟರು ಬೆಂಬತ್ತಿ ಹೋಗಿ ಅವರನ್ನು ಕತ್ತರಿಸಲು ತಮ್ಮ ಕತ್ತಿಯನ್ನು ಮೇಲೆತ್ತುವಾಗ ಅದು ತುಂಡಾಗುವುದು. ಮತ್ತು ಒಣಹುಲ್ಲಿನಂತೆ ನಿರ್ಬಲವಾಗಿ ಕೆಳಗೆ ಬೀಳುವುದು. ದೇವದೂತರು ಭಕ್ತರನ್ನು ಭದ್ರಪಡಿಸುವರು . ವಿಮೋಚನೆಗಾಗಿ ಹಗಲು ರಾತ್ರಿ ಮೊರೆಯಿಡುವಾಗ ಅವರ ಕೂಗು ದೇವರ ಸನ್ನಿಧಾನಕ್ಕೆ ತಲುಪುವುದು. GCKn 277.1

  ಓದಿ: ಆದಿಕಾಂಡ ಅಧ್ಯಾಯ 6 ಮತ್ತು 7; 32:24-28; ಕೀರ್ತನೆ 91; ಮತ್ತಾಯ 20: 23; ಪ್ರಕಟಣೆ 13:11-17GCKn 277.2