ಅಧ್ಯಾಯ 37. - ಕ್ತರ ವಿಮೋಚನೆ
ದೇವರು ತನ್ನ ಜನರ ವಿಮೋಚನೆಗೆ ಆರಿಸಿಕೊಂಡ ಕಾಲವು ಮದ್ಯರಾತ್ರಿಯಾಗಿತ್ತು. ದುಷ್ಟರು ಇನ್ನೂ ಅಪಹಾಸ್ಯ ಮಾಡುತ್ತಿರುವಾಗಲೇ ಸೂರ್ಯನು ತಟನೆ ಪ್ರಬಲವಾಗಿ ಪ್ರಕಾಶಿಸಿದನು ಮತ್ತು ಚಂದ್ರನು ನಿಶ್ಚಲನಾದನು. ಈ ದೃಶ್ಯವನ್ನು ದುಷ್ಟರು ದಿಗ್ಭ್ರಾಂತರಾಗಿ ವೀಕ್ಷಿಸಿದರು. ಒಂದಾದ ನಂತರ ಒಂದು ಸೂಚಕ ಕಾರ್ಯಗಳೂ, ಅದ್ಬುತಕಾರ್ಯಗಳು ಸಂಭವಿಸಿದವು ಎಲ್ಲವೂ ನೈಜವಲ್ಲದ ರೀತಿ ಸಾಗಿಬರುವಂತ್ತಿತ್ತು ಭಕ್ತರು ಗಂಭೀರ ಹರ್ಷದಿಂದ ತಮ್ಮ ಬಿಡುಗಡೆಯ ಸಂಕೇತವನ್ನು ಕಂಡರು.GCKn 278.1
ತೊರೆಗಳು ಹರಿಯುವುದನ್ನು ಬಿಟ್ಟು ತಟಸ್ಥವಾದವು ದಟ್ಟ ಕಾರ್ಮೋಡಗಳು ಎದ್ದು ಒಂದಕ್ಕೊಂದು ಸಂಘಟ್ಟಿಸಿದವು. ಆದರೆ ಸ್ಥಗಿತವಾಗಿ ಪ್ರಭೆಯಿಂದ ಕೂಡಿದ್ದ ಸ್ಥಳವು ಕಂಡುಬಂದು ಅದರೊಳಗಿಂದ ದೇವರ ಧ್ವನಿಯು ಜಲಸಮೂಹದಂತೆ ಹೊರಟು ಭೂಪರಲೋಕವನ್ನು ಕಂಪಿಸುವಂತೆ ಮಾಡಿತು. ಮಹಾಭೂಕಂಪವಾಯಿತು,ಸಮಾಧಿಗಲು ತೆರೆಯಲ್ಪಟ್ಟವು, ಯಾರೆಲ್ಲಾ ಮೂರನೆಯ ದೇವದೂತನ ಸಂದೇಶದಲ್ಲಿ ವಿಶ್ವಾಸವಿಟ್ಟು ಸಬ್ಬತ್ತನ್ನು ಆಚರಿಸಿ ಮರಣಿಸಿದರೋ ಅವರು ತಮ್ಮ ಧೂಳಿನ ಹಾಸಿಗೆಯಿಂದ ಎದ್ದುಬಂದು, ದೇವರ ಆಜ್ಞಾಪಾಲಕರಿಗೆ ಆತನು ಮಾಡುವ ಸಮಾಧಾನದ ವಾಗ್ದಾನವನ್ನು ಕೇಳಿ. ಸ್ತುತಿಸ್ತೋತ್ರ ಮಾಡಿದರು.GCKn 278.2
ಆಕಾಶವು ತೆರೆದು ಮುಚ್ಚಿಕೊಳ್ಳುತ್ತಾ ಕೋಲಾಹಲವಾಯಿತು. ಗಾಳಿಯಲ್ಲಿನ ಜೊಂಡಿನಂತೆ ಪರ್ವತಗಳು ಕಂಪಿಸಿ. ಒರಟು ಬಂಡೆಗಳನ್ನು ಎಲ್ಲಾ ಕಡೆಗೆ ಎರಚಿತು. ಸಮುದ್ರವು ಕುದಿಯುವ ಪಾತ್ರೆಯಂತಾಗಿ ಕಲ್ಲುಗಳನ್ನು ಭೂಮಿಯ ಮೇಲೆ ತೂರಿದವು. ಮತ್ತು ದೇವರು ಯೇಸುವಿನ ಬರುವಣದ ಸಮಯ ಹಾಗೂ ದಿನವನ್ನು ತಿಳಿಸುವಾಗ, ತನ್ನ ಜನರಿಗೆ ವಿಮೋಚನೆಯ ವಾಗ್ದಾನವನ್ನು ಪ್ರಕಟಿಸುತ್ತಾ ಒಂದು ವಾಕ್ಯವನ್ನು ಹೇಳಿ ತುಸುಕೊತ್ತು ನಿಲ್ಲಿಸಲು ಆ ಮಾತುಗಳು ಭೂಮಿಯ ಮೂಲಕ ಉರುಳುತ್ತಾ ಹೋಯಿತು. ಯೆಹೋವನ ಬಾಯಿಂದ ಮಾತುಗಳು ಹೊರಡಲು ಅದು ಮೋಡಗಳ ಘರ್ಜನೆಯಂತೆ ತೂರಿಕೊಂಡು ಆತನ ಇಸ್ರಾಯೇಲ್ ಜನಾಂಗದವರ ಕಣ್ಣುಗಳು ಆಕಾಶದ ಸ್ಥಿರವಾಗಿ ನಿಂತವು .ಅದು ಅದ್ಬುತವು ಗಂಭೀರವಾಗಿತ್ತು. ಪ್ರತಿವಾಕ್ಯದ ಕೊನೆಯಲ್ಲಿ ಭಕ್ತರು ಮಹಿಮೆ!! ಹಲ್ಲೆಲುಯಾ!! ಎಂದು ಕೂಗುತ್ತಿದ್ದರು, ಅವರ ಮುಖವು ದಿವ್ಯಪ್ರಭೆಯಿಂದ ಹೊಳೆಯಿತು; ಅದು ಮೋಶೆಯು ಸಿನಾಯಿ ಬೆಟ್ಟದ ಮೇಲಿದ ಬರುವಾಗ ಪ್ರಜ್ವಲಿಸಿದಂತ್ತಿತ್ತು, ಈ ಪ್ರಭೆಯನ್ನು ದುಷ್ಟರು ನೋಡಲಾಗಲಿಲ್ಲ. ಮತ್ತು ದೇವರನ್ನು ಘನಪಡಿಸಿ, ಸಬ್ಬತನ್ನು ಪವಿತ್ರವಾಗಿ ಕೈಗೊಂಡವರ ಮೇಲೆ ನಿರಂತರವಾದ ಆಶೀರ್ವಾದವು ಪ್ರಕಟಗೊಂಡಾಗ, ಮೃಗಕ್ಕೂ ಆತನ ವಿಗ್ರದ ಮೇಲೆ ಜಯಹೊಂದಿದ ಮಹಾ ವಿಜಯೋತ್ಸಹದ ಧ್ವನಿ ಕೇಳಿಸಿತು.GCKn 279.1
ಆನಂತರ ಜ್ಯೂಬಿಲಿ ಸಂವತ್ಸರವು ಪಾರಂಭವಾಯಿತು. ಈಗ ದೇವರು ವಿಶ್ರಾಂತಿಯಲ್ಲಿರಬೇಕು. ಶ್ರದ್ಧಾಭಕ್ತಿಯಿಂದದ್ದ ದಾಸರು ಜಯಹೊಂದಿ ತಮ್ಮನ್ನು ಬಂಧನದ್ದಲ್ಲಿ ಕಟ್ಟಿದ ಸರಪಣಿಗಳನ್ನು ಕಿತ್ತು ಎದ್ದು ಬರುವುದನು ಕಂಡೆನು. ಆಗ ದುಷ್ಟನಾಯಕನು ಮುಂದೇನು ಮಾಡಲಿ ಎಂದು ಗಲಿಬಿಲಿಗೊಂಡನು; ಏಕೆಂದರೆ ದುಷ್ಟರಿಗೆ ದೇವರ ಮಾತುಗಳು ಅರ್ಥವಾಗಲಿಲ್ಲ ಬೇಗನೆ ಮಹಾಬಿಳಿಯ ಮೇಘವು ಕಾಣಿಸಿಕೊಂಡವು ಅದರ ಮೇಲೆ ಮನುಷ್ಯಕುಮಾರನು ಆಸೀನನಾಗಿದ್ದನು.GCKn 279.2
ಈ ಮೇಘವು ದೂತರಲ್ಲಿ ಕಂಡಾಗ ಬಹು ಸಣ್ಣದ್ದಾಗಿತ್ತು. ಅದು ಮನುಷ್ಯಕುಮರನ ಸಂಕೇತವೆಂದು ದೂತನು ಹೇಳಿದನು. ಮೇಘವು ಭೂಮಿಯ ಹತ್ತಿರ ಹತ್ತಿರ ಬರುವಾಗ ನಾವು ಮಹಾ ಪ್ರಕಾಶವನ್ನು, ಜಯಶಾಲಿಯಾಗಿ ಬರುವ ಯೇಸುವಿನ ರಾಜ್ಯಗಾಂಭೀರ್ಯವನ್ನು ಕಂಡವು. ದೂತರ ಪರಿಹಾರವು ಹೊಳೆಯುವ ಕಿರೀಟವನ್ನು ಧರಿಸಿಕೊಂಡು ಆತನ ಬೆಂಗಾವಲಾಗಿ ಬರುವರು. ಈ ಬೃಹತ ದೃಶ್ಯದ ವೈಭಾವವನ್ನು ಯಾವ ಭಾಷಯಲ್ಲಿ ಪಾರಿಸ್ಕರವಾಗಿ ವಿವರಿಸಲಾರದು ಪ್ರಭಾವಭರಿತ ಸಜೀವ ಮೇಘಗಳು ಅಸೀಮಿತ ಮಹಿಮೆಯಿಂದ ಹತ್ತಿರ ಬಂದಾಗ ನಮಗೆ ಪ್ರೀತಿಮಯ ಯೇಸುವನ್ನು ನೋಡಲಾಯಿತು. ಆತನು, ಮುಳ್ಳಿನ ಕರೀಟವಲ್ಲ, ಮಹಿಮೆ ತುಂಬಿದ ಕಿರೀಟವು ಪವಿತ್ರ ಲಾಲಟವನ್ನು ಅಲಂಕರಿಸಿತ್ತು. ಆತನ ವಸ್ತ್ರ ಹಾಗೂ ತೊಡೆಯ ಮೇಲೆ ರಾಜಾಧಿರಾಜನು, ಕರ್ತರ ಕರ್ತನು ಎಂಬ ಹೆಸರು ಬರೆಯಾಲಾಗಿತ್ತು .ಆತನ ಕಣ್ಣುಗಳು ಬೆಂಕಿಯ ಉರಿಯಂತೆಯಾ, ಆತನ ಪಾಧಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯಾ, ಆತನ ಧ್ವನಿಯು ಅಸಂಖ್ಯಾತ ವಾಧ್ಯಗಳು ಒಟ್ಟಿಗೆ ನಾದಹೊರಡಿಸಿದಂತೆಯೂ ಇತ್ತು. ಅತನ ಮುಖಯು ಮಧ್ಯಾಹ್ನದಲ್ಲಿ ಪ್ರಕಾಶಿಸುವ ಸೂರ್ಯನಂತಿತ್ತು ಅತನ ಮುಂದೆ ಭೂಲೋಕವು ಕಂಪಿಸಿತು, ಆಕಾಶವು ಸುರುಳಿಯೋಪಾಧಿಯಲ್ಲಿ ಸುತ್ತಲ್ಪಟ್ಟು ಹೋಗಿಬಿಟ್ಟಿತು. ಎಲ್ಲಾ ಬೆಟ್ಟಗಳೂ ಧ್ವೀಪಗಳು ತಮ್ಮ ತಮ್ಮ ಸ್ಥಳಗಳಿಂದ ಚಲಿಸಿದವು. ಎಲ್ಲಾ ಭೂರಾಜರೂ ಪ್ರಭುಗಳು, ಸಹಾಸ್ರಾಧಿಪತಿಗಳೂ, ಐಶ್ವರ್ಯವಂತರೂ, ಪರಾಕ್ರಮ ಶಾಲಿಗಳೂ ,ಎಲ್ಲಾ ದಾಸರೂ, ಸ್ವತಂತ್ರರೂ ಬೆಟ್ಟಗಳ ಗವಿಗಳಿಗೂ ಬಂಡೆಗಳ ಸಂದುಗಳಿಗೂ ಓಡಿಹೋಗಿ ತಮ್ಮನ್ನು ಮರೆಮಾಡಿಕೊಂಡು. ಬೆಟ್ಟಗಳಿಗೂ ಬಂಡೆಗಳಿಗೂ --- ನಮ್ಮ ಮೇಲೆ ಬೀಳಿರಿ, ಸಿಂಹಾಸನದ ಮೇಲೆ ಕೂತಿರುವಾತನ ಮುಖಕ್ಕೂ, ಯಜ್ಞದ ಕುರಿಯಾದಾತನ ಕೋಪಕ್ಕೂ, ನಮ್ಮನ್ನು ಮರೆಮಾಡಿರಿ, ಆತನ ಕೋಪವು ಕಾಣೆಸುವ ಮಹಾದಿನವು ಬಂದದೆ ಅದರ ಮುಂದೆ ನಿಲ್ಲುವುದಕ್ಕೆ ಯಾರು ಶಕ್ತರು ಎಂದು ಹೇಳಿದರು.GCKn 280.1
ಭೂಮಿಯ ಮೇಲಿದ್ದ ದೇವರ ಮಕ್ಕಳನ್ನು ಸ್ವಲ್ಪ ಸಮಯಕ್ಕೆ ಮುಂಚೆ ನಾಶಪಡಿಸಬೇಕೆಂದು ಕಾದಿದ್ದವರು, ಅವರು ಮೇಲೆ ದೇವರ ಮಹಿಮೆ ನೆಲೆಗೊಂಡವರಾಗಿ ಮಹಾಪ್ರಭಾವವುಳ್ಳವರಾಗಿರುವುದನ್ನು ಕಂಡರು. ಈ ಎಲ್ಲಾ ಭಯಂಕರ ಘಟನೆಗಳು ಸಂಭವಿಸುವಾಗ, ಭಕ್ತರ ಆನಂದಭರಿತ ಧ್ವನಿಯು --- ಆಹಾ ಈತನೇ ತನೇ ನಮ್ಮ ದೇವರು, ನಾವು ಈತನಿಗಾಗಿ ನಿರೀಕ್ಷಿಸಿಕೊಂಡಿದ್ದೇವೆ, ಆತನು ನಮ್ಮನು ರಕ್ಷಿಸಲಿ ಎಂದುವನ್ನು ಕೇಳಿದರು. ಸತ್ತು ನಿದ್ರೆಹೋಗುತ್ತಿದ್ದ ಭಕ್ತರನ್ನು ದೇವಕುಮಾರನು ಎಬ್ಬಿಸುವ ಸ್ವರವನ್ನು ಕೇಳುವಾಗ ಭೂಮಿಯು ಗಂಭೀರವಾಗಿ ನಡುಗಿತು. ಅವರು ನಿರ್ಲಯತ್ವದ ವಸ್ತ್ರಗಳನ್ನು ಧರಿಸಿದವರಾಗಿ ಎದ್ದುಬಂದು ಜಯವಾಯಿತು! ಜಯವಾಯಿತು; ಮರಣ ಮತ್ತು ಸಮಾಧಿಯ ಮೇಲೆ ಜಯವಾಯಿತು ಓ ಮರಣವೇ, ನಿನ್ನ ವಿಷದಕೊಂಡಿ ಎಲ್ಲಿ? ಮರಣವೇ, ನಿನ್ನ ಜಯವೆಲ್ಲಿ? ಎಂದು ಕೂಗುವರು. ಆನಂತರ ಅವರು ಸಜೀವದಿಂದಿರುವ ನೀತಿವಂತರೊಂದಿಗೆ ಸೇರಿ ವಿಜಯೋತ್ಸಹದ ರಾಗವನ್ನು ದೀರ್ಘವಾಗಿ ಪ್ರತಿಧ್ವನಿಸವ ಸ್ವರಗಲನ್ನೆತ್ತಿ ಹಾಡುವರು. ಸಮಾಧಿಗೆ ಸೇರಿದ್ದ ರೋಗಿಷ್ಟ ದೇಹಗಳು ಆರೋಗ್ಯತುಂಬಿ ಅಮರತ್ವದ ಬಲದಿಂದ ಎದ್ದುಬರುವವವು, ಸಜೀವ ನೀತಿವಂತರು ಕಣ್ಣುರೆಪ್ಪೆ ಮುಚ್ಚುವಷ್ಟರೊಳಗೆ ಮಾರ್ಪಟು ಹೊಂದಿ ಪುನರುತ್ತಾನ ಹೊಂದಿದವರೊಡಗೊಡಿ ಅಂತರಿಕ್ಷೆದಲ್ಲಿ ಕರ್ತನನ್ನು ಸೇರಿಕೊಳ್ಳುವರು. ಓಹಃ! ಅದೆಂತಹ ವೈಭವದ ಸಮ್ಮಿಲನ !ಮರಣವು ಬೇರ್ಪಡಿಸಿದ ಗೆಳೆಯರು ಇನ್ನೆಂದಿಗೂ ಬೇರ್ಪಡದ ಹಾಗೆ ಒಂದಾಗುವರು.GCKn 281.1
ಆ ಮೇಘರಥದ ಎರಡೂಕಡೆರೆಕ್ಕೆಗಳಿದ್ದವು, ಅದರ ಹಿಂದೆ ಸಜಾವ ಚಕ್ರಗಳಿದ್ದವು; ಅದು ಉರುಳುತ್ತಾ ಎತ್ತಲ್ಪಡುವಾಗ ಚಕ್ರಗಳು “ಪರಿಶುದ್ಧನು” ಎಂದು ಕೂಗಿದವು, ರಕ್ಕೆಗಳೂ ಸಹ ಪರಿಶುದ್ಧನೂ ಎಂದವು. ಸುತ್ತುವರೆದ್ದಿದ ಪವಿತ್ರ ದೂತಗಣಗಳೂ ಸಹ ಪರಿಶುದ್ಧನೂ, ಪರಿಶುದ್ಧನೂ, ಸರ್ವಶಕ್ತನಾದ ದೇವರು ಎಂದು ಕೂಗುವರು. ಮೇಘಗಳಲ್ಲದ್ದ ಭಕ್ತರೂ ಸಹ ಮಹಿಮೆ, ಹಲ್ಲೆಲೂಯ ಎಂದರು, ಅದು ಪರಲೋಕ ಪಟ್ಟಣದ ಕಡೆಗೆ ಸಾಗಿತು. ಆ ಪಟ್ಟಣವನ್ನು ಪ್ರವೇಶಿಸುವ ಮುನ್ನ ಭಕ್ತರೆಲ್ಲಾ ಪರಿಪೂರ್ಣ ಚಚ್ಚೌಕಾಕಾರದಲ್ಲಿ ನಿಲ್ಲಿಸಲ್ಪಟ್ಟರು. ಯೇಸು ಅವರ ಮದ್ಯದಲ್ಲಿದ್ದನು. ಆತನ ಭುಜಗಳೂ ಶರೀರವೂ ಭಕ್ತರಿಗಿಂತಾ ಎತ್ತರವಾಗಿ ಇದ್ದವು. ಆತನ ಪ್ರೀತಿ ಸೂಸುವ ಮೊಗವೂ ರಾಜಠೀವಿಯು ಚೌಕಾಕಾರದಲ್ಲಿ ನಿಂತವರೆಲ್ಲರೂ ಕಾಣುವಂತೆ ಇತ್ತು.GCKn 282.1
ಓದಿ: 2ಅರಸು 2:11; ಯೆಶಾಯ 25;9; 1ಕೊರಿಂಥ 15:51-55; 1ಥೆಸಲೋನಿಕ 4;13-17; ಪ್ರಕಟನೆ 1:13-16, 6:14-17 19;16 GCKn 283.1