Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ 22. - ವಿಲಿಯಂ ಮಿಲ್ಲರ್

    ದೇವರು ತನ್ನ ದೂತನನ್ನು, ಸತ್ಯವೇದ ನಂಬಿದ ಒರ್ವ ರೈತನ ಹೃದಯವನ್ನು ಪ್ರೇರೇಪಿಸಲು ಕಳುಹಿಸಿದನು ದೇವರ ಮಕ್ಕಳಿಗೆ ಕಾಣದಂತೆ ಕತ್ತಲೆಯಲ್ಲಿ ಇಡಲ್ಪಟ್ಟಿದ್ದ ಪ್ರವಾದನೆಯನ್ನು ಅರ್ಥೈಸಿಕೊಳ್ಳುವಂತೆ ತಿಳುವಳಿಕೆ ನೀಡಿ, ಬುದ್ದಿಗೆ ಮಾರ್ಗದರ್ಶನ ಮಾಡಲು ದೇವದೂತರು ಈತನನ್ನು ಆಗಾಗ್ಗೆ ಬೇಟೆಮಾಡುತ್ತಿದ್ದರು. ಸತ್ಯದ ಸರಪಳಿಯ ಆರಂಭವನ್ನು ಅವನಿಗೆ ತೆರೆದು ಕೊಡಾಲಾಯಿತು, ನಂತರ ಒಂದು ಕುಣಿಕೆಯಿಂದ ಮತ್ತೊಂದು ಕುಣಿಕೆಯನ್ನು ಹುಡುಕುತ್ತಾ ದೇವರು ವಾಕ್ಯದ ಆದ್ಬುತವನ್ನು ಕಂಡು ಮೆಚ್ಚುವವನಾಗುವವರೆಗೂ ನಡೆಸಲ್ಪಟ್ಟನು. ಈತನು ಪರಿಪೂರ್ಣಸತ್ಯದ ಸರಪಳಿಯನ್ನು ಕಂಡನು. ಯಾವ ವಾಕ್ಯವು ಪ್ರೇರಿತವಾದುದಲ್ಲವೆಂದುಕೊಂಡನೊ ಅದೀಗ ಬಹು ಸುಂದರವೂ, ಪ್ರಭಾವವುಳ್ಳದ್ದಾಗಿ ಕಂಡು ಬಂತು. ಕ್ರೈಸ್ತವೇದದ ಒಂದುಭಾಗವು ಮತ್ತೊಂದರಲ್ಲಿ ವಿವರಿಸಲ್ಪಟ್ಟಿರುವುದನ್ನು ಕಂಡುಕೊಂಡನು. ಒಂದು ಭಾಗದಲ್ಲಿ ತಿಳುವಳಿಕೆಯು ನಿಂತುಹೋದಾಗ ಮತ್ತೊಂದು ಭಾಗದ ವೇದವಾಕ್ಯದಲ್ಲಿ ಮುಂದುವರೆದಿರುವುದನ್ನು ಹುಡುಕಿ ಕಂಡುಕೊಂಡನು. ಪವಿತ್ರ ದೇವರವಾಕ್ಯವು ಆನಂದಕರವೂ, ಆಶ್ಚರ್ಯಕರವೂ, ಮತ್ತು ಗೌರವನ್ವಿತವಾಗಿದೆ ಎಂದು ಈತನು ಲಕ್ಷ್ಯಕೊಡಲಾರಂಭಿಸಿದನು.GCKn 174.1

    ಇವನು ಪ್ರವಾಧನೆಗಳನ್ನು ಅನುಸರಿಸಿಕೊಳ್ಳುತ್ತಾ ಬರಲು, ಈ ಲೋಕದ ನಿವಾಸಿಗಳು ಇತಿಹಾಸದ ಅಂತಿಮ ದಿನಗಳಲ್ಲಿ ವಾಸಿಸುತ್ತಿದ್ದು ಅದರ ಜ್ಞಾನವಿಲ್ಲದಿರುವುದನ್ನು ಕಂಡುಕೊಂಡನು. ಸಭೆಯಲ್ಲಿರುವ ಭ್ರಷ್ಟಚಾರವೆಲ್ಲಾ ಕಂಡು ಬಂತು. ಅವರ ಪ್ರೀತಿಯು ಯೇಸುವಿನಿಂದ ವಿಮುಖಗೊಂಡು ಲೋಕದೆಡೆಗೆ ನಿಂತಿರುವುದೂ ಹಾಗೂ ಅವರು ದೇವರಿಂದ ದೊರಕುವ ಮಾನ್ಯತೆಗೆ ಬೆಲೆ ಕೊಡದೆ ಲೋಕದ ಮಾನ್ಯತೆಯನ್ನು ಅಪೇಕ್ಷಿಸಿದ್ದನ್ನು ಕಂಡುಕೊಂಡನು; ಐಹಿಕ ಸಂಪತ್ತಿಗೆ ಮಹಾಕಾಂಕ್ಷೆಯಿಂದಿದ್ದು ಪರಲೋಕದ ಸಂಪತ್ತಿನೆಡೆಗೆ ಜನರು ತಿರಸ್ಕಾರ ತೋರಿದರು. ಕಪಟತನ ,ಕತ್ತಲೆ ,ಮರಣ ಎಲೆಡೆ ತುಂಬಿರುವುದನ್ನು ನೋಡಿದನು. ಅವನ ಆತ್ಮವು ಅಲ್ಲೋಲ ಕಲೋಲವಾಯಿತು. ಎಲೀಯನನ್ನು ಹಿಂಬಾಲಿಸಲು ಎಲೀಶನು ತನ್ನ ಎತ್ತು, ಹೊಲವನ್ನು ತೊರೆದು ಬರಲು ದೇವರು ಕರೆದಂತೆ ವಿಲಿಯಂನನ್ನೂ ಸಹ ತನ್ನ ಜಮೀನನ್ನು ತೊರೆದು ಬರಲು ದೇವರು ಕರೆದರು. ವಿಲಿಯಂ ಮಿಲ್ಲರ್ ನಡುಗುತ್ತಾ ಜನರಿಗೆ ದೇವರರಾಜ್ಯದ ರಹಸ್ಯವನ್ನು ಬಿಚ್ಚಿಡಲಾರಂಭಿಸಿದನು. ಪ್ರತಿ ಪ್ರಯತ್ನದಲ್ಲೂ ಆತನ ಬಲ ವೃದ್ಧಿಸುತ್ತಿತ್ತು. ಈತನು ಜನರನ್ನು ಪ್ರವಾದನೆಗಳು ಮೂಲಕ ಕ್ರಿಸ್ತನ ಎರಡನೆ ಬರುವಣಕ್ಕೆ ಸೆಳೆಯುತ್ತಿದ್ದನು. ಸ್ನಾನಿಕನಾದ ಯೋಹಾನನು ಯೇಸುವಿನ ಮೊದಲ ಬರುವಣವನ್ನು ಘೋಷಿಸುತ್ತಾ ಅದಕ್ಕಾಗಿ ಮಾರ್ಗವನ್ನು ಸಿದ್ದಮಾಡುತ್ತಿದ್ದಂತೆ ವಿಲಿಯಂಮಿಲ್ಲರ್ ಮತ್ತು ಅನುಚರರು ದೇವಕುಮಾರನ ಎರಡಯ ಬರುವಣವನ್ನು ಸಾರಿದರು.GCKn 174.2

    ನನ್ನನ್ನು, ಶಿಷ್ಯರಿದ್ದ ಕಾಲಾವಧಿಗೆ ಕರೆದೊಯ್ದು, ಪ್ರಿಯನಾದ ಯೋಹಾನನಿಗೆ ನಿರ್ವಹಿಸಬೇಕಾಗಿದ್ದ ವಿಶೇಷ ಕೆಲಸವು ದೇವರಿಂದ ನಿಯೋಜಿಸಲ್ಪಟ್ಟಿದ್ದನ್ನು ನಾನು ಕಂಡನು. ಸೈತಾನನು ಈ ಕೆಲಸಕ್ಕೆ ಅಡೆತಡೆ ಉಂಟುಮಾಡಲು ತೀರ್ಮಾನಿಸಿ ಅವನನ್ನು ನಾಶಮಾಡಲು ತನ್ನ ಸೇವಕರನ್ನು ಕಳುಹಿಸಿದನು. ಆದರೆ ಯೋಹಾನನನ್ನು ದೇವರು ತನ್ನ ದೂತರನ್ನು ಕಳುಹಿಸಿ ಅದ್ಬುತವಾಗಿ ರಕ್ಷಿಸಿದನು. ಯೋಹಾನನ ಬಿಡುಗಡೆಯಲ್ಲಿ ವ್ಯಕ್ತವಾದ ಯೇಸುವಿನ ಮಹಾಶಕ್ತಿಗೆ ಸಾಕ್ಷಿಗಳಾಗಿದ್ದವರು ದಿಗ್ಬ್ರಮೆಗೊಂಡರು , ದೇವರು ಆತನೊಂದಿಗಿದ್ದುದನ್ನು ಮನವರಿಕೆ ಮಾಡಿಕೊಂಡು ಯೇಸುವಿನ ಬಗೆಗಿನ ಅವನ ಸಾಕ್ಷಿಯು ಯಥಾರ್ಥವಾದದ್ದೆಂದುಕೊಂಡರು. ಈತನನ್ನು ನಾಶಪಡಿಸಬೇಕೆಂದಿದ್ದವರು ಮತ್ತೊಮ್ಮೆ ಜೀವತೆಗೆಯುವ ಪ್ರಯತ್ನಕ್ಕೆ ಕೈಹಾಕಲು ಭಯಪಟ್ಟರು, ಯೇಸುವಿಗಾಗಿ ಎಲ್ಲವನ್ನು ಸಹಿಸಿಕೊಳ್ಳಲು ಅವನಿಗೆ ಅನುಮತಿ ನೀಡಲಾಯಿತು. ಆತನ ಶತೃಗಳು ಸುಳ್ಳು ಆಪಾದನೆ ಹೊರಿಸಿದರು , ನಿರ್ಜನವಾದ ದ್ವೀಪವೂಂದಕ್ಕೆ ಕ್ಷಣಮಾತ್ರದಲ್ಲಿ ಬಹಿಷ್ಕರಿಸಲಾಯಿತು. ಅಲ್ಲಿ ತಾನೇ, ದೇವರು, ಈ ಭೂಮಿಯ ಮೇಲೆ ಸಂಭವಿಸಲಿರುವುದನ್ನೆಲ್ಲಾ ತಿಳಿಸಿದನು ಹಾಗೂ ಅಂತ್ಯಕಾಲದವರೆಗೂ ಸಭೆಯ ಸ್ಥಿತಿಗತಿಯನ್ನು , ಅವಳ ಹಿಮ್ಮೆಟ್ಟುವಿಕೆಯನ್ನು ಮತ್ತು ದೇವರ ಮೆಚ್ಚುಕೆಗೆ ಪಾತ್ರಳಾದಲ್ಲಿ ಸಿಗುವ ಸ್ಥಾನಮಾನ ಮತ್ತು ಕೊನೆಯಲ್ಲಿ ದೊರಕುವ ಜಯದ ಬಗೆಗೆ ಪ್ರಕಟಿಸಲು ಕರ್ತನು ತನ್ನ ದೂತರನ್ನು ಯೋಹಾನನ ಬಳಿಗೆ ಕಳುಹಿಸಿದರು. ಪರಲೋಕದಿಂದ ಯೋಹಾನನ ಕಂಡೆಗೆ ರಾಜಗಾಂಭೀರ್ಯದಿಂದ ದೂತನು ಇಳುದು ಬಂದನು , ಅವನ ಮುಖವು ಪರಲೋಕದ ಮಹಾಪ್ರಕಾಶದಿಂದ ಹೊಳೆಯುತ್ತಿತ್ತು. ದೇವರ ಸಭೆಯ ಮೇಲಿನ ಆಳವಾದ ಪುಳಕಿತಗೊಳ್ಳುವ ಆ ಸಕ್ತಿಯ ವಿಷಯವನ್ನು ಪ್ರಕಟಿಸಿದನು. ಮತ್ತು ಅವರು ಸಹಿಸಿಕೊಳ್ಳಬೇಕಾಂದ ಅಪಾಯಕಾರವಾದ ಸಂಘಟನೆಯ ಸಂಗತಿಗಳನ್ನು ತಿಳಿಸಿದನು, ಯೋಹಾನನು, ತಾವು ಉಗ್ರವಿಚಾರಣೆ ಮೂಲಕ ಹಾದುಹೋಗಿ ಪುಟಕಿಟ್ಟು ಪರಿಶುಭ್ರರಾಗುವುದೂ, ಕೊನೆಯಲ್ಲಿ ಜಯಶಾಲಿಗಳಾಗಿ ದೇವರರಾಜ್ಯದಲ್ಲಿ ಮಹಾಮಹಿಮೆಯಿಂದ ರಕ್ಷಿಸಲ್ಪಡುವುದನ್ನು ದರ್ಶಿಸಿದನು. ದೇವರ ಸಭೆಯು ಅಂತ್ಯದಲ್ಲಿ ಜಯಗೊಳಿಸುವುದನ್ನು ಯೋಹಾನನಿಗೆ ದೂತನು ತೋರಿಸುವಾಗ, ದೂತನಮುಖವು ಪರಮ ಸಂತೋಷದಿಂದ ಉಜ್ವಲವಾಗಿ ಪ್ರಕಾಶಿಸುತ್ತಿತ್ತು . ಸಭೆಯು ಅಂತಿಮ ಬಿಡುಗಡೆಯನ್ನು ದರ್ಶಿಸುತ್ತಿರುವಾಗ ಯೋಹಾನನು ಪರವಶನಾದನು ಆ ದೃಶ್ಯದ ಮಹಾಮಹಿಮೆಯನ್ನು ಕಂಡಾಗ ಬಹು ಭಯಭಕ್ತಿಯಿಂದ, ತೀವ್ರಗೌರವದಿಂದ ದೇವದೂತನ ಪಾದಗಳ ಮೇಲೆ ಬಿದ್ದನು. ಆ ದೂತನು ಅವನನ್ನೆತ್ತಿ, ಮೃದುವಾಗಿ ಖಂಡಿಸುತ್ತಾ ಅವನಿಗೆ- ಮಾಡಬೇಡ ನೋಡು; ನಾನು ನಿನಗೂ ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವ ನಿನ್ನ ಸಹೋದರರಿಗೂ ಜೊತೆಯ ದಾಸನಾಗಿದ್ದೇನೆ; ದೇವರನ್ನು ಆರಾಧಿಸು ಏಕೆಂದರೆ ಯೇಸುವಿನ ವಿಷಯವಾದ ಸಾಕ್ಷಿಯು ಪ್ರವಾದನ ಆತ್ಮವೇ ಅಂದನು. ನಂತರ ದೂತನು ಪರಲೋಕದ ಉಜ್ವಲ ತೇಜಸ್ಸು, ಕಣ್ಣುಕೋರೈಸುವ ವೈಭವವನ್ನು ತೋರಿಸಿದನು. ಯೋಹಾನನು ಈ ಪಟ್ಟಣದ ಮಹಾಪ್ರಕಾಶವನ್ನು ಕಂಡು ಪರವಶನಾದನು. ಈ ಮೊದಲೇ ದೂತನು ನೀಡಿದ ಎಚ್ಚರಿಕೆಯನ್ನು ಮರೆತು ಮತ್ತೊಮ್ಮೆ ಅವನ ಪಾದಕ್ಕೆ ಬೀಳಲು ದೂತನು ಮತ್ತೆ ಮೃದುವಾಗಿ ಖಂಡಿಸುತ್ತಾ - ಮಾಡಬೇಡ ನೋಡು, ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ ಈ ಪುಸ್ತಕದಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವವರಿಗೂ ಜೊತೆಯ ದಾಸನಾಗಿದ್ದೇನೆ, ದೇವರನ್ನು ಆರಾಧಿಸು ಎಂದರು.GCKn 175.1

    ಬೋಧಕರೂ ಮತ್ತು ಇತರ ಜನರು ಪವಿತ್ರಗ್ರಂಥದ ಇತರ ಪುಸ್ತಕಗಳಿಗಿಂತ ಪ್ರಕಟನೆಯು ರಹಸ್ಯವಾದುದ್ದೆಂದೂ ಅದೇನೂ ಅಷ್ಟುಮುಖ್ಯವಾಲವೆಂದು ಭಾವಿಸುತ್ತಾರೆ. ಆದರೆ ಅಂತ್ಯಕಾಲದಲ್ಲಿ ಜೀವಿಸುತ್ತಿರುವವರಿಗೆ ಅವರ ಸ್ಥಿತಿಗತಿಯ ನಿಜ ಪರಿಸ್ಥಿತಿಯನ್ನು ಹಾಗೂ ಜವಾಬ್ದಾರಿಯನ್ನು ನಿಚ್ಚಳವಾಗಿ ತಿಳಿದುಕೊಳ್ಳಲು ಮತ್ತು ವಿಶೇಷ ಸಹಾಯ ಹೊಂದಲು ಈ ಪುಸ್ತಕವು ಪ್ರಸಕ್ತ ಪ್ರಕಟನೆಯಾಗಿದೆ ಎಂಬುದನ್ನು ನಾನು ಕಂಡೆನು. ವಿಲಿಯಂ ಮಿಲ್ಲರನ ಮನಸ್ಸನು ದೇವರು ಪ್ರವಾದನೆಗಳೆಡೆಗೆ ತಿರುಗಿಸಿದರು ಮತ್ತು ಪ್ರಕಟಣೆಯ ಪುಸ್ತಕದ ಮೇಲೆ ಅವನಿಗೆ ಮಹಾಬೆಳಕನ್ನು ನೀಡಿದರು.GCKn 178.1

    ಒಂದುವೇಳೆ ಜನರು ದಾನಿಯೇಲನ ದರ್ಶನವನ್ನು ಅರ್ಥಮಾಡಿಕೊಂಡಿದರೆ ಯೋಹಾನನ ದರ್ಶನವನ್ನು ಅದಕ್ಕಿಂತ ಮಿಗಿಲಾಗಿ ಅರ್ಥಮಾಡಿಕೊಳ್ಳುತ್ತಿದ್ದರು. ಆದರೆ ಸೂಕ್ತವಾದ ಸಮಯದಲ್ಲಿ ದೇವರು, ಆತನ್ನು ಆರಿಸಿಕೊಂಡ ದಾಸನಿಗೆ ತಿಳಿಸಿದನು, ಮಿಲ್ಲರನ್ನು ಪವಿತ್ರಾತ್ಮನ ಬಲದಿಂದ ಬಹು ಸ್ಪಷ್ಟವಾಗಿ ಪ್ರವಾದನೆಗಳನ್ನು ಬಿಚ್ಚಿದನು ಮತ್ತು ದಾನಿಯೇಲನ ಹಾಗೂ ಯೋಹಾನನ ದರ್ಶನದ ಸಾಮರಸ್ಯವನ್ನೂ ಮತ್ತು ಸತ್ಯವೇದದ ಇತರ ಪುಸ್ತಕಗಳನ್ನು ತೆರೆದಿಟ್ಟು, ಪವಿತ್ರ ಹಾಗೂ ಭಯಂಕರ ದೇವರ ಎಚ್ಚರಿಕ್ಕೆಗಳನ್ನು ಮನುಷ್ಯದ ಹೃದಯದಲ್ಲಿ ಮನೆಮಾಡಿಕೊಳ್ಳುವಂತೆ ಅಚ್ಚೊತ್ತಿದನು, ಈತನ ಶೋತೃಗಳ, ಬೋಧಕರು, ಜನರು, ಪಾಪಿಗಳು ಹಾಗೂ ನಾಸ್ತಿಕರಲ್ಲಿ ನ್ಯಾಯವಿಚಾರಣೆಯ ದಿನದಲ್ಲಿ ದೃಡವಾಗಿ ನಿಲ್ಲಲ್ಲು ಮಾಡಿಕೊಳ್ಳಬೇಕಾದ ಸಿದ್ದತೆ ಬಗೆಗೆ ಬಹು ಆಳವಾದ ಭಕ್ತಿಭಾವದ ಮನಗಾಣ್ಕೆ ಕಂಡುಬಂತು.GCKn 178.2

    ದೇವರು ಮತ್ತು ಆತನ ದೂತರು ವಿಲಿಯಂ ಮಿಲ್ಲರ್ ನ ಸುವಾರ್ತಾಸೇವೆಯಲ್ಲಿ ಜೊತೆ ಸೇರಿದರು. ಅವನು ದೃಡನೂ ಎದೆಗುಂದದವನೂ. ಆದನು ಅವನ ಕೈಗೆ ನಂಬಿಕೆಯಿಂದ ವಹಿಸಿದ ಕಾರ್ಯವನ್ನು ದೈರ್ಯದಿಂದ ಪ್ರಚಾರಮಾಡಿದನು. ದುಷ್ಟತನದಿಂದ ಕೂಡಿದ್ದ ಈ ಲೋಕದ ಹಾಗೂ ತಣಗಿದ್ದ ಲೌಕಿಕ ಸಭೆಯ ಸ್ಥಿತಿಯು ಮಿಲ್ಲರನಿಗೆ ತನ್ನ ಶಕ್ತಿಯನ್ನು ಕ್ರಿಯಾಶೀಲಗೊಳಿಸುವಂತೆ ತೊಂದರೆಗಳನ್ನು ಅನುಭವಿಸುವಂತೆಯೂ, ಏಕಾಂಗಿತನವನ್ನೂ ಸಂಕಟವನ್ನೂ ಸ್ವಇಚ್ಛೆಯಿಂದ ತಾಳಿಕೊಳ್ಳುವಂತೆ ಮಾಡಿತು. ತೋರಿಕೆಯ ಕ್ರೈಸ್ತರೂ ಮತ್ತು ಈ ಲೋಕವು ವಿರೋಧಿಸಿದರೂ ಮತ್ತು ಸೈತಾನನು ಅವನ ದೂತರು ಪೀಡನೆಯಿಂದ ಅಪ್ಪಳಿಸಿದರೂ ಸಹ ಆತನನ್ನು ಆಹ್ವಾನಿಸಲ್ಪಟ್ಟ ಸ್ಥಳಗಳಲೆಲ್ಲಾ ನಿರಂತರವಾಗಿ ನಿತ್ಯಸುವಾರ್ತೆ ಸಾರುವುದನ್ನು ನಿಲ್ಲಿಸದೆ ಮತ್ತು ದೇವರಿಗೆ ಭಯಪಟ್ಟು, ಆತನಿಗೆ ಘನಪಡಿಸಿರಿ, ಆತನು ನ್ಯಾಯತೀರ್ಪು ಮಾಡುವ ಗಳಿಗೆಯು ಬಂದಿದೆ ಎಂಬ ಸತ್ಯವನ್ನು ಪ್ರಚಾರ ಮಾಡಿದನು .GCKn 179.1

    ಓದಿ: 1 ಅರಸು 19:16-21 ; ದಾನಿಯೇಲ ಅಧ್ಯಾಯ 7-12; ಪ್ರಕಟನೆ ಅಧ್ಯಾಯ 1, 14:7; 19:8-10 22:6-10 GCKn 180.1