Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 02. - ಮಾನವನ ಬೀಳುವಿಕೆ

    ಪರಿಶುದ್ದ ದೂತರು ಆಗಾಗ್ಗೆ ಏದೆನ್ ತೋಟಕ್ಕೆ ಭೇಟಿ ನೀಡಿ,ಆದಾಮ ಹವ್ವರಿಗೆ ಅವರ ವೃತ್ತಿಯ ಬಗ್ಗೆ ಹಾಗೂ ಸೈತಾನನ ದಂಗೆ ಮತ್ತು ಬೀಳುವಿಕೆಯ ಬಗೆಗೆ ಬೋದಿಸುತ್ತಿದ್ದುದನ್ನು ನಾನು ಕಂಡೆನು. ಈ ಜೋಡಿಯು ವೃತಿನಿರತರಾಗಿರುವಾಗ ಒಬ್ಬರಿಂದೊಬ್ಬರು ಬೇರ್ಪಡಬಾರದು ಏಕೆಂದರೆ ಭೂಮಿಗೆ ಬಿದ್ದ ಶತೃವಿನ ಜೊತೆಗೆ ಸಂಪರ್ಕಹೊಂದಬಹುದು ಎಂದು ಸೈತಾನನ ಬಗೆಗೆ ದೂತರು ಎಚ್ಚರಿಸುತ್ತಿದ್ದರು. ದೇವರ ಆಜ್ಞೆಗಳಿಗೆ ವಿಧೇಯರಾಗಿ ಆತನೊಟ್ಟಿಗೆ ಅನ್ಯೋನತೆಯಲ್ಲಿರುವುದು ಕ್ಷೇಮಕರವಾಗಿರುವುದೆಂದೂ, ಸೈತಾನ ನು ಯಾವರೀತಿಯಲ್ಲೂ ಅವರ ಮೇಲೆ ಬಲ ಪ್ರಯೋಗಿಸನೆಂದು ದೂತರು ಬುದ್ದಿಮಾತು ಹೇಳಿದರು.GCKn 25.1

    ಸೈತಾನನು ತನ್ನ ಕಾರ್ಯವನ್ನು ಹವ್ವಳ ಮೂಲಕ ಆರಂಭಿಸಿದನು. ಆವಳು ಪ್ರಥಮವಾಗಿ ತನ್ನ ಸಂಗಾತಿಯನ್ನು ಬಿಟ್ಟು ಏಕಾಂಗಿಯಾಗಿ ಸುತ್ತಾಡುವ ತಪ್ಪು ಮಾಡಿದಳು. ನಂತರ ನಿಷೇಧಿಸಲ್ಪಟ್ಟ ಮರದ ಸುತ್ತಾಮುತ್ತಾ ಕಾಲಹರಣ ಮಾಡಿದಳು. ಆನಂತರ ಶೋಧಕನ ಸ್ವರಕ್ಕೆ ಓಗೊಟ್ಟು ನೀನು’ ಅ ಹಣ್ಣನ್ನು ತಿಂದ ಕ್ಷಣವೇ ಸಾಯುವಿ’ .ಎಂಬ ಮಾತಗಳನ್ನು ಅನುಮಾನ ಪಡುವ ಧೈರ್ಯ ತೋರಿದಳು. ಬಹುಷಃ ಕರ್ತನ ಹೇಳಿಕೆಯ ಅರ್ಥ ಬೇರೆಯೇ ಇರಬೇಕೆಂದು ಭಾವಿಸಿ ಅವಿದೇಯತೆಗೆ ಸಿಲುಕಿ ತನ್ನ ಕೈಗಳನ್ನು ಚಾಚಿ ಆ ಹಣ್ಣನ್ನು ಕಿತ್ತು ತಿಂದಳು. ಅದು ಕಣ್ಣಿಗೆ ರಮ್ಯವಾಗಿಯು ರುಚಿಗೆ ರಸವತ್ತಾಗಿಯು ಇತ್ತು, ದೇವರು ಇಂತಹ ಮಧುರವಾದ ಹಣ್ಣನ್ನು ನಿಷೇಧಿಸಿದ್ದು ಏಕೆ? ಎಂದು ಅವಳು ಅಸೂಯೆಗೊಂಡಳು. ಅ ಹಣ್ಣನ್ನು ತನ್ನ ಪತಿಗೂ ಕೊಟ್ಟು ಅವನನ್ನೂ ಶೋಧಿಸಿದಳು. ಸರ್ಪವು ಹೇಳಿದ್ದೆನೆಲ್ಲಾ ಆದಾಮನಿಗೆ ತಿಳಿಸಿ ಆದು ಮಾತನಾಡುವುದರ ಬಗ್ಗೆ ಆಶ್ಚರ್ಯಪಟ್ಟಿದ್ದನ್ನೂ ಅರುಹಿದಳು.GCKn 25.2

    ಅದಾಮನ ಮುಖಭಾಗದ ಮೇಲೆ ದುಃಖ ಮುಸುಕಿದ್ದುದನ್ನು ನಾನು ಕಂಡೆನು. ಅವನು ಭಯಾಶ್ವರ್ಯದಿಂದ ತುಂಬಿದನು. ಅವನ ಮನಸ್ಸು ತಲ್ಲಣಗೊಂಡಿತು. ತಮಗೆ ಎಚ್ಚೆರಿಕೆ ಕೊಡಲ್ಪಟ್ಟಿದ್ದ ಶತೃವೇ ಇವನೂ ಎಂದು ಅರಿತು, ತನ್ನ ಹೆಂಡತಿ ನಿಜವಾಗಿ ಸಾಯುವಳು ಅಂದುಕೊಂಡನು. ಇದರಿಂದ ಬೇಪರ್ಡುವಿಕೆ ಅನಿವಾರ್ಯವಾಯಿತು. ಅವನಿಗೆ ಅವಳ ಮೇಲಿದ್ದ ಗಾಢವಾದ ಪೀತಿಯ ಪ್ರಯುಕ್ತ ಬಿಟ್ಟಿರಲಾರದೆ ಆಳವಾದ ನಿರಾಶೆಯಿಂದ ಹಣ್ಣನ್ನು ತಿನ್ನುವ ನಿರ್ದಾರ ತೆಗೆದುಕೊಂಡನು ಆಕೆಯ ಗತಿಯೊಡನೆ ಪಾಲ್ಗೊಳ್ಳಲು ನಿರ್ಧರಿಸಿ ಹಣ್ಣನ್ನು ತೆಗೆದು ಶೀರ್ಘವಾಗಿ ತಿಂದನು ,GCKn 26.1

    ಇದೀಗ ಸೈತಾನನಿಗೆ ಹಿಗ್ಗು ತುಂಬಿತು. ಪರಲೋಕದಲ್ಲಿ ದಂಗೆ ಎಬ್ಬಿಸಿ ಅವನನ್ನು ಹಿಂಭಾಲಿಸಿದ ದಂಗೆಕೋರರು ಅವನೊಟ್ಟಿಗೆ ಇದ್ದರು. ತಾನು ಬದ್ದುದಲ್ಲದೆ ಇತರರನ್ನೂ ತನ್ನಡೆಗೆ ಎಳೆದನು. ಈಗ ಸ್ತ್ರೀಯನ್ನು ಶೋಧನೆಗೆ ಒಳಪಡಿಸಿ, ದೇವರನ್ನು ಅನುಮಾನಿಸಿ, ಆತನ ವಿವೇಕವನ್ನು ವಿಚಾರಿಸುವಂತೆ ಮಾಡಿ, ಆತನ ಯೋಜನೆಗಳನ್ನು ಛೇಧಿಸಿ ನೋಡುವಂತೆ ಪ್ರೇರೆಪಿಸಿದ್ದನು. ಸ್ತ್ರೀ ಏಕಾಂಗಿಯಾಗಿ ಶೋಧನೆಗೆ ಬೀಳುವುದಿಲ್ಲ ಎಂಬ ಅರಿವು ಅವನಿಗಿತ್ತು. ಅದಾಮನು. ಹವ್ವಳಮೇಲಿನ ಪ್ರೀತಿಯಿಂದ ದೈವಾಜ್ಞೆಗಳಿಗೆ ಅವಿಧೇಯನಾಗಿ ಅವಳೊಂದಿಗೆ ಜಾರಿಬಿದ್ದನು.GCKn 26.2

    ಮಾನವನ ಬೀಳುವಿಕೆಯ ಸಂಗತಿ ಪರಲೋಕಕ್ಕೆ ಮುಟ್ಟಿತು.ಅಲ್ಲಿನ ಸಕಲ ತಂತಿವಾದ್ಯಗಳ ಸದ್ದಡಗಿತು ದೂತರು ದುಃಖದಿಂದ ತಮ್ಮ ತಲೆಯ ಮೇಲಿದ್ದ ಕಿರೀಟವನ್ನು ಇಳಿಸಿದರು. ಇಡೀ ಪರಲೋಕವೇ ತಲ್ಲಣಿಸಿತು. ಈ ಜೋಡಿಯನ್ನೇನು ಮಾಡುವುದು? ಎಂಬುದರ ಬಗ್ಗೆ ಒಂದು ಸಮಾಲೋಚನೆ ನೆಡೆಯಿತು. ಈ ಮಾನವರು ತಮ್ಮ ಕೈಚಾಚಿ ಜೀವವೃಕ್ಷದ ಹಣ್ಣನ್ನು ತಿಂದು ಅಮರರಾಗಬುಹುದೆಂಬ ಭಯ ದೂತರಲ್ಲಿ ತುಂಬಿತು .ಆದೆರೆ ದೇವರು ಅತಿಕ್ರಮಿಸಿದವರನ್ನು ತೋಟದಿಂದ ಹೊರಹಾಕುವುದಾಗಿ ತಿಳಿಸಿ ಜೀವವೃಕ್ಷದ ದಾರಿಯನ್ನು ಕಾಯಲು ದೂತಗಣವನ್ನು ನೇಮಿಸಿದನು.GCKn 27.1

    ಆದಾಮ ಹವ್ವಳನ್ನು ದೇವರಿಗೆ ಅವಿದೇಯರಾಗಿಸಿ, ಆತನ ಅಸಮಾದಾನಕ್ಕೊಳಗಾಗಿಸಿ, ಜೀವವೃಕ್ಷದ ಹಣ್ಣನ್ನು ತಿಂದು ಅಮರರಾಗಿ ಜೀವಿಸುವಂತೆ ಮಾಡಿ, ಪಾಪ ಮತ್ತು ಅವಿದೇಯತೆ ನಿರಂತರಾವಾಗಿರುವಂತೆ ಸಾಧಿಸುವುದೇ ಸೈತಾನನ ಯೋಜನೆಯಾಗಿತ್ತು. ಆದರೆ ದೂತರ ದಂಡನ್ನು ನೇಮಿಸಿ ಜೀವವೃಕ್ಷದ ಮಾರ್ಗವನ್ನು ರಕ್ಷಿಸಿ, ದಂಪತಿಗಳನ್ನು ಹೊರತಳ್ಳಲು ನಿಯೋಜಿಸಲಾಯಿತು. ಅವರಬಲಗೈಯಲ್ಲಿ ಯಾವುದೋ ಕತ್ತಿಗಳೋಪಾದಿಯಲ್ಲಿ ಹೊಳೆಯುತ್ತಿರುವುದು ಕಂಡುಬಂದವು.GCKn 27.2

    ಸೈತಾನನು ವಿಜಯಿಯಾದನು. ತನ್ನ ಬೀಳುವಿಕೆಯಿಂದ ಇತರರು ನರಳುವಂತೆ ಮಾಡಿದನು. ಪರಲೋಕದಿಂದ ಅವನನ್ನು ತಳ್ಳಿಬಿಡಲಾಯಿತು. ಇವರನ್ನೂ ಪರದೈಸಿನಿಂದ ದೂಡಿಬಿಡಲಾಯಿತು.GCKn 28.1

    ಆದಿಕಾಂಡ 3 ಅದ್ಯಾಯವನ್ನು ನೋಡಿರಿGCKn 28.2

    Larger font
    Smaller font
    Copy
    Print
    Contents