Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 19. - ಮರಣ, ನಿರಂತರ ದುರವಸ್ಥೆಯ ಜೀವಿತವಲ್ಲ

    ಸೈತಾನನು ತನ್ನ ವಂಚನೆಯ ಕಾರ್ಯವನ್ನು ಏದೆನಿನಲ್ಲಿ ಪ್ರಾರಂಭಿಸಿದನು. ಅವನು ಹವ್ವಳಿಗೆ, ನೀನು ಹೇಗೂ ಸಾಯುವುದಿಲ್ಲ ಎಂದನು. ಇದು ಆತ್ಮದ ಅಮರತ್ವದ ಬಗೆಗೆ ಸೈತಾನನ ಮೊದಲ ಪಾಠವಾಗಿದೆ; ಅಂದಿನಿಂದ ಇಂದಿನವರೆಗೂ ಮುಂದುವರಿಸಿಕೊಂಡು ಬಂದಿರುತ್ತಾನಲ್ಲದೆ ದೇವರ ಮಕ್ಕಳ ಬಂಧನದಿಂದ ಮುಕ್ತರಾಗುವವರೆಗೂ ಮುಂದುವರಿಸುತ್ತಾನೆ. ಏದೆನಿನಲ್ಲಿದ್ದ ಆದಾಮನು ಹವ್ವಳ ಕಡೆಗೆ, ಬೊಟ್ಟು ಮಾಡಿ ನನಗೆ ತೋರಿಸಲಾಯಿತು. ಅವರು ನಿಷೇಧಿಸಲ್ಪಟ್ಟಿದ್ದ ಮರದ ಫಲದಲ್ಲಿ ಪಾಲ್ಗೊಂಡರು, ಜೀವವೃಕ್ಷದ ಸುತ್ತಲೂ ಧಗಧಗನೆ ಪ್ರಜ್ವಲಿಸುತ್ತಾ ಸುತ್ತುವ ಕತ್ತಿಯನ್ನು ಇರಿಸಲಾಯಿತು, ನಂತರ ತೋಟದಿಂದ ಅವರನ್ನು ಬಹಿಷ್ಕರಿಸಲಾಯಿತು, ಏಕೆಂದರೆ ಅವರು ಜೀವವೃಕ್ಷದ ಹಣ್ಣನ್ನು ತಿಂದು ಅಮರ ಪಾಪಿಗಳಾಗುತ್ತಿದ್ದರು. ಜೀವವೃಕ್ಷವು ಅಮರತ್ವವನ್ನು ನಿರಂರತಗೊಳಿಸುತ್ತಿತ್ತು. ಒಬ್ಬ ದೂತನು - ಅದಾಮನ ಸಂತತಿಯಲ್ಲಿ ಯಾರಾದರು ಪ್ರಜ್ವಲಿಸುವ ಕತ್ತಿಯಿಂದ ಪಾರಾಗಿ ಬಂದು ಜೀವವೃಕ್ಷದ ಫಲದಲ್ಲಿ ಪಾಲುಗೊಂಡಿದ್ದಾನೋ ಎಂದು ಪ್ರಶ್ನಿಸುವುದನ್ನು ನಾನು ಕೇಳಿದೆನು, ಆಗ ಇನ್ನೊರ್ವ ದೂತನು — ಆದಾಮನ ಕುಂಟುಂಬದ ಯಾರೊಬ್ಬನೊ ಪ್ರಜ್ವಲಿಸುವ ಕತ್ತಿಯನ್ನು ದಾಟಿಹೋಗಿ ಜೀವವೃಕ್ಷದ ಫಲದಲ್ಲಿ ಪಾಲ್ಗೊಂಡಿಲ್ಲ ಎಂದು ಉತ್ತರ ಕೊಟ್ಟನು. ಆದ್ದರಿಂದ ಯಾವ ಒಬ್ಬ ಅಮರ ಪಾಪಿಯು ಇಲ್ಲ. ಪಾಪಮಾಡಿದ ಅತ್ಮವು ನಿತ್ಯಮರಣ ಹೊಂದುವುದು; ಪುನರುತ್ಥಾನದ ನಿರೀಕ್ಷೆಯಿಲ್ಲದ ನಿತ್ಯಮರಣಕ್ಕೆ ಈಡಾಗುವುದು; ಬಳಿಕ ದೇವರ ಕೋಪವು ಶಾಂತಗೊಳ್ಳುತ್ತೆದೆ.GCKn 152.1

    ಪಾಪಕ್ಕೊಳಗಾದ ಆತ್ಮವು ಸತ್ತೇಸಾಯುವುದು ಎಂಬ ದೇವರ ಮಾತಿನ ಅರ್ಥವು, ಅದು ಸಾಯುವುದಿಲ್ಲ ಸಂಕಟದಲ್ಲಿ ನಿತ್ಯಜೀವಿಸುವುದು ಎಂದು ಜನರು ನಂಬುವಂತೆ ಮಾಡಿ ಸೈತಾನನು ಗೆದ್ದುಕೊಡುದ್ದು ನನಗೆ ಆಶ್ಚರ್ಯವನ್ನು ತಂದಿತು. ಆಗ ದೇವದೂತರು ಹೇಳಿದ್ದೇನೆಂದರೆ — ಜೀವನ ಜೀವನವೇ, ಅದು ಯಾತನೆ ಅಥವಾ ಆನಂದದಿಂದಲಾದರೂ ಸರಿ ಆದರೆ ಮರಣವು ನೋವಿಲ್ಲದ್ದು , ಹರ್ಷವಿಲ್ಲದ್ದು, ಹಗೆಯಿಲ್ಲದ್ದು .GCKn 152.2

    ಪಾಪಕ್ಕೊಳಗಾದ ಆತ್ಮವು ಸತ್ತೇಸಾಯುವುದು ಎಂಬ ದೇವರ ಮಾತಿನ ಅರ್ಥವು, ಅದು ಸಾಯುವುದಿಲ್ಲ ಸಂಕಟದಲ್ಲಿ ನಿತ್ಯಜೀವಿಸುವುದು ಎಂದು ಜನರು ನಂಬುವಂತೆ ಮಾಡಿ ಸೈತಾನನು ಗೆದ್ದುಕೊಡುದ್ದು ನನಗೆ ಆಶ್ಚರ್ಯವನ್ನು ತಂದಿತು. ಆಗ ದೇವದೂತರು ಹೇಳಿದ್ದೇನೆಂದರೆ — ಜೀವನ ಜೀವನವೇ, ಅದು ಯಾತನೆ ಅಥವಾ ಆನಂದದಿಂದಲಾದರೂ ಸರಿ ಆದರೆ ಮರಣವು ನೋವಿಲ್ಲದ್ದು , ಹರ್ಷವಿಲ್ಲದ್ದು, ಹಗೆಯಿಲ್ಲದ್ದು .GCKn 153.1

    ನೀವು ಹೇಗೂ ಸಾಯುವುದಿಲ್ಲ ಎಂದು ಆದಾಮ ಹವ್ವಳೊಂದಿಗೆ ಹೇಳಿದ ಸುಳ್ಳನ್ನು ಹಾಗೂ ವಂಚನೆಯನ್ನು ಹರಡಲು ವಿಶೇಷ ಪ್ರಯತ್ನ ಮಾಡಬೇಕೆಂದು ಸೈತಾನನು ಆತನ ದೂತರಿಗೆ ಆಜ್ಞಾಪಿಸಿದನು. ಈ ತಪ್ಪು ತಿಳುವಳಿಕೆಯನ್ನು ಜನರು ಅಂಗೀಕರಿಸುತ್ತಾ ಬರಲು ಸೈತಾನನು ಅವರನ್ನು ಮತ್ತೊಂದು ಗ್ರಹಿಕೆಗೆ ಎಳೆದು ಪಾಪಿಯ ನಿತ್ಯ ಯಾತನೆಯಲ್ಲಿ ಜೀವಿಸುವನೆಂದು ನಂಬಿಸಿದನು. ಇದರಿಂದ ಸೈತಾನನ ಪ್ರತಿನಿಧಿಗಳ ಮೂಲಕ ಕೆಲಸ ಮಾಡಲು ಹಾಗೂ ದೇವರು ಸೇಡು ತೀರಿಸಿಕೊಳ್ಳುವ ಕ್ರೂರಿಎಂಬ ಭಾವವನ್ನು ಜನರ ಮನಸ್ಸಿನಲ್ಲಿ ಬಿತ್ತುವ ಮಾರ್ಗವು ಸಿದ್ದವಾಯಿತು. ಯಾರು ದೇವರನ್ನು ಮೆಚ್ಚುಸುವುದಿಲ್ಲವೊ ಅವರನ್ನು ನರಕಕ್ಕೆ ತಳ್ಳುವನು, ಮತ್ತು ಆತನ ಕೋಪವನ್ನು ಸದಾ ಅನುಭವಿಸುವಂತೆ ಮಾಡುವನು; ಆಗ ಅವರು ಹೇಳಿಕೊಳ್ಳಲಾಗದ ಯಾತನೆಯಲ್ಲಿ ಒದ್ದಾಡುವರು; ಶಾಶ್ವತ ಬೆಂಕಿಯಲ್ಲಿ ಭಯಂಕರ ಕಷ್ಟಪಡುತ್ತಾ ವಿಲವಿಲನೆ ಒದ್ದಾಡುವುದನ್ನು ನೋಡಿ ದೇವರು ತೃಪ್ತಿಹೊಂದುವನು. ಹೀಗೆ ಸೈತಾನನು ಸೃಷ್ಟಿಸಿದ ಸುಳ್ಳನ್ನು ಅಂಗೀಕರಿಸಿದಲ್ಲಿ ದೇವರು ಪ್ರೀತಿಯನು ಮೆಚ್ಚಿಕೆಗೆ ಪಾತ್ರನೆಂಬುದನ್ನು ಬಹು ಜನರು ತಳ್ಳಿಹಾಕಿ ಮನಸ್ಸಿನಲ್ಲಿ ದ್ವೇಷಿಸಿ ಅತಿಭಯಂಕರನೆಂದು ಭಾವಿಸ ಬೇಕಾಗುವುದು ಎಂದು ಅವನು ತಿಳಿದಿದ್ದನು; ಆ ನಂತರ ದೇವರ ವಾಕ್ಯದ ಬೆದರಿಕೆಯು ಅಕ್ಷರಶಃ ನೆರೆವೇರುವುದಿಲ್ಲ ಎಂದು ಅನೇಕರು ನಂಬುವಂತಾಗುವುದು; ಏಕೆಂದರೆ ದೇವರು ಸುಗುಣಗಳಾದ ಪ್ರೀತಿ,ದಮೆ, ತಾನೇ ಸೃಷ್ಟಿಸಿದವರನ್ನು ನಿತ್ಯ ಚಿತ್ರಹಿಂಸೆಗೆ ತಳ್ಳುವುದಕ್ಕೆ ವಿರುದ್ದವಾದದ್ದಾಗಿದೆ. ಸೈತಾನನು, ದೇವರ ನ್ಯಾಯವನ್ನೂ, ವಾಕ್ಯದ ಬೆದರಿಕೆಯನ್ನು ಜನರು ಪರಿಪೂರ್ಣ ಅಲಕ್ಷಿಸುವಂತೆ ಮಾಡಲು, ಒಬ್ಬನಾದರೂ ನಾಶವಾಗದೆ ಎಲ್ಲರೂ ರಕ್ಷಿಸಲ್ಪಡುವರು ಎಂಬ ಮಾತಿನಂತೆ ಸಂತರೂ ಪಾಪಿಗಳೆಲ್ಲರೂ ಆತನ ರಾಜ್ಯದಲ್ಲಿ ರಕ್ಷಿಸಲ್ಪಡುವುದು ಎಂಬ ಮಾತ್ತೊಂದು ಪರಮಾವಧಿಗೆ ಸೆಳೆದನು ಆತ್ಮದ ಅಮರತ್ವ, ನಿತ್ಯಯಾತನೆ ಎಂಬ ಜನಪ್ರಿಯ ಸುಳ್ಳು ಪರಿಣಾಮಕಾರಿಯಗಿ ಆಗುವಾಗ ಮತ್ತೊಂದು ವರ್ಗದವರ ಬಲಹೀನತೆಯನ್ನು ಬಳಸಿ ಸತ್ಯವೇದವು ಸ್ಪೂರ್ತಿಶೂನ್ಯವಾದದ್ದೆಂದು ಪರಿಗಣಿಸುವಂತೆ ಮಾಡಿದನು .ಅವರ ,ಸತ್ಯವೇದವು ಹಲವಾರು ಒಳೆಯದನ್ನು ಭೋಧಿಸುತ್ತೇದೆ; ಆದರೆ ಅದರ ಮೇಲೆ ಆತುಕೊಂಡು ಪ್ರೀತಿಸಲಾಗದಾಯಿತು; ಏಕೆಂದರೆ ಅವರಿಗೆ ನಿತ್ಯಯಾತನೆಯ ತತ್ವವನ್ನು ಮನಸ್ಸಿನಲ್ಲಿ ಗಾಢವಾಗಿ ಪ್ರಭಾವ ಬೀರುವಂತೆ ಭೋಧಿಸಲಾಗಿತ್ತು.GCKn 153.2

    ಸೈತಾನನೂ, ಮತ್ತೊಂದು ವರ್ಗದವರನ್ನು ತನ್ನ ಅನುಕೂಲಕ್ಕೆ ತೆಗೆದುಕೊಳ್ಳುತ್ತಾ ದೇವರ ಅಸ್ತಿತ್ವವನೇ ನಿರಾಕರಿಸುವಂತೆಯೂ ಮಾಡುವನು.ದೇವರು ಮಾನವ ಕುಂಟುಂಬದಲ್ಲಿ ಒಂದು ಭಾಗವನ್ನು ಚಿತ್ರಹಿಂಸೆಗೊಳ್ಳಪಡಿಸಿ, ಬಹುವಾಗಿ ನಿತ್ಯಯಾತನೆಗೆ ಒಪ್ಪಿಸುವುದಾದರೆ ಸತ್ಯವೇದದ ದೇವರ ಗುಣದಲ್ಲಿ ಸ್ಥಿರತೆ ಕಂಡುಬರದು ಎಂದು ಸತ್ಯವೇದವುವನ್ನು ಅದರಲೇಖಕರನ್ನು ತಿರಸ್ಕರಿಸಿ, ಮರನವು ನಿರಂತರ ನಿದ್ದೆಯಾಗಿದೆ ಎಂದು ಅವರು ಭಾವಿಸುವರು.GCKn 155.1

    ಆ ನಂತರ ಸೈತಾನನು ಮತ್ತೊಂದು ವರ್ಗದ ಜನರನ್ನು ಅಂದರೆ ಭಯಪಡುವ ಪುಕ್ಕಲರನ್ನು ಪಾಪಕ್ಕೆಳೆಯುವನು, ಅವರು ಪಾಪಕ್ಕೊಳಗಾದ ನಂತರ, ಪಾಪದ ಸಂಬಳ ಮರಣ, ನಿತ್ಯಚಿತ್ರಹಿಂಸೆಗೊಳಗಾಗುತ್ತಾ ಅಂತ್ಯವೇ ಇಲ್ಲದ ಜೀವನ ಅವರದಾಗುತ್ತದೆ ಎಂಬುದನ್ನು ಎತ್ತಿಹಿಡಿಯುವನು. ಸೈತಾನನು ತನ್ನ ಅವಕಾಶಗಳನ್ನು ವೃದಿಸಿಕೊಳ್ಳುತ್ತಾ, ಅವರು ಬಲಹೀನ ಮನಸ್ಸಿನ ಮೇಲೆ ನಿತ್ಯ ನರಕದ ಭಯಾನಕತೆಯನ್ನು ವಿಜೃಂಭಿಸುವಂತೆ ಮಾಡಿ, ಆಲೋಚನಾ ಶಕ್ತಿಯನ್ನೇ ಕುಗ್ಗಿಸುವನು. ಆಗ ಸೈತಾನನೂ ಆತನ ದೂತರೂ ಉಲ್ಲಾಸದಿಂದ ಸಂಭ್ರಮಿಸುವರು. ಮತ್ತು ದರ್ಮವಿರೋಧಿಗಳೂ ನಾಸ್ತಿಕರೂ ಒಂದುಗೂಡಿ ಕ್ರೈಸ್ತತ್ವನ್ನು ಆಕ್ಷೇಪಿಸುವರು. ಈ ಪ್ರಸಿದ್ದ ಧರ್ಮವಿರೋದತ್ವದ ದುಷ್ಪರಿಣಾಮವು ಸತ್ಯವೇದ ಹಾಗೂ ಅದರ ಲೇಖಕರನ್ನು ನಂಬಿದುದರ ನೈಜ ಫಲಿತಾಂಶ ಎಂದು ತಿಳಿದುಕೊಳ್ಳುವರು.GCKn 155.2

    ಸೈತಾನನ ಈ ಕೃತ್ಯಗಳ ಮೇಲೆ ಪರಲೋಕಗಣಗಳು ಕ್ರೋಧಗೊಳ್ಳುವುದನ್ನು ನಾನು ಕಂಡೆನು. ದೇವದೂತರು ಮಹಾ ಪರಕ್ರಾಮಿಗಳಾಗಿ ಶತೃವಿನ ಬಲವನ್ನು ಮಟ್ಟಹಾಕಲು ನಿಯೋಜಿತವಾಗಿರುವಲ್ಲಿ, ಸೈತಾನನ ಈ ಭ್ರಮೆಯು ಮನುಷ್ಯನ ಮನಸ್ಸಿನ ಮೇಲೆ ಅಗಾಧ ಪರಿಣಾಮ ಉಂಟುಮಾಡಿ ಏಕೆ ಸಂಕಟ ಪಡಬೇಕು? ಎಂದು ನಾನು ಪ್ರಶ್ನಿಸಿದನು. ಆಗ ನಾನು, ಮನುಷ್ಯನನ್ನು ನಾಶಗೊಳಿಸಲು ಸೈತಾನನು ತನಿಂದಾಗುವ ಎಲ್ಲಾ ಪ್ರಯತ್ನ ಮಾಡುವುದು ದೇವರಿಗೆ ತಿಳಿದಿತ್ತು ಎಂಬುದನ್ನು ಕಂಡೆನು; ಆದ್ದರಿಂದ ಅತನು ತನ್ನ ಮಾತುಗಳನ್ನೆಲ್ಲಾ ಲಿಖಿತಗೊಳಿಸಿ. ಬಲಹೀನ ಮನುಷ್ಯನಾದರು ಪಾಪಮಾಡಭಾರದೆಂದು ತನ್ನ ಯೋಜನೆಗಳನ್ನು ಸರಳಗೊಳಿಸಿದನು. ಅತನು ವಾಕ್ಯವನ್ನು ಕೊಟ್ಟಮೇಲೆ ಅದನ್ನು ಸೈತಾನನೂ ಅವನ ಪ್ರತಿನಿಧಿಗಳು ಯಾವರೀತಿಯಿದಲೂ ನಾಶಮಾಡಭಾರದೆಂದು ಅದನ್ನು ಭದ್ರಪಡಿಸಿ ರಕ್ಷಿಸಿದನು. ಇತರ ಗ್ರಂಥಗಳು ನಾಶವಾಗುವುದು ಆದರೆ ಈ ಪವಿತ್ರ ಗ್ರಂಥವು ನಾಶವಾಗದೆ ಅಮರವಾಗುವುದು, ಅಂತ್ಯಕಾಲವು ಹತ್ತಿರವಾಗುವಾಗ ಸೈತಾನನ ಭ್ರಮೆ ಹೆಚ್ಚು ಹೆಚ್ಚಾಗುತ್ತಾ ಬರಲು ದೈವಗ್ರಂಥದGCKn 156.1

    ಪ್ರತಿಗಳು ಸಹ ಅಸಂಖ್ಯಾತವಾಗುವವು. ದೇವರ ಚಿತ್ತವನ್ನು ತಿಳಿದುಕೊಳ್ಳಲು ಇಚ್ಛಿಸುವ ಪ್ರತಿಯೊಬ್ಬರಿಗೂ ಕೊಡಲ್ಪಡುವುದು. ಸಾದ್ಯವಾದರೆ ಸೈತಾನನ ಅದ್ಬುತವಾದ ಮಿಥ್ಯೆ ಹಾಗೂ ವಂಚನೆಯನ್ನು ತಡೆಯಲು ತಮ್ಮನ್ನು ವಾಕ್ಯದ ಶಸ್ತ್ರಗಳಿಂದ ರಕ್ಷಿಸಿಕೊಳ್ಳಬಹುದು .GCKn 156.2

    ದೇವರು ಸತ್ಯವೇದವನ್ನು ಬಹು ಭದ್ರವಾಗಿ ಕಾಪಿಡುವುದನ್ನು ನಾನು ಕಂಡೆನು. ಆದರೆ ಅದರ ಕೆಲವು ಪ್ರತಿಗಳು ಮಾತ್ರದೂರಕುವಾಗ ವಿದ್ಯಾವಂತರು ಕೆಲವು ಸಂದರ್ಭದಲ್ಲಿ ಪದಗಳನ್ನು ಸರಳಗೊಳಿಸುವೆವು ಎಂದು ಯೋಚಿಸಿ, ಆಚಾರ ಸಂಸ್ಕಾರಗಳಿಂದ ವ್ಯವಸ್ಥಿತವಾಗಿರುವ ತಮ್ಮ ಅನಿಸಿಕೆಗಳನ್ನು ಸ್ಥಾಪಿಸುತ್ತಾ ಕಣ್ಣಿಗೆ ಮಣ್ಣೆರೆಚಿದರು. ಆದರೆ ದೇವರ ವಾಕ್ಯವು ಸರಪಳಿಯಂತೆ ಪರಿಪೂರ್ಣವಾಗಿದ್ದು ಒಂದುಭಾಗದ ಬರವು ಮತ್ತೊಂದು ಭಾಗದಲ್ಲಿ ವಿವರಿಸಲಾಗಿದ್ದುದನ್ನು ನಾನು ಕಂಡೆನು. ಸತ್ಯಾನ್ವೇಷಣೆಯಲ್ಲಿರುವವರು ತಪ್ಪು ಮಾರ್ಗದಲ್ಲಿ ಹೋಗಲಾಗದು; ಏಕೆಂದರೆ ಜೀವನ ಮಾರ್ಗವನ್ನು ಪ್ರಕಟಗೊಳಿಸುವ ದೇವರು ವಾಕ್ಯವು ಸರಳಸುಲಭವಾದದ್ದು ಮಾತ್ರವಲ್ಲದೆ ಆತನ ವಾಕ್ಯದಲ್ಲಿ ಅಡಗಿರುವ ಜೀವನ ವಿಧಾನವನ್ನು ತಿಳಿಸಿಕೊಡಲು ಪವಿತ್ರಾತ್ಮನನ್ನು ಅನುಗ್ರಹಿಸಲಾಯಿತು.GCKn 157.1

    ದೇವದೂತರು ಯಾರ ಚಿತ್ತವನ್ನೂ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವುದಿಲ್ಲ ವೆಂಬುವುದನ್ನು ನಾನು ಕಂಡೆನು. ದೇವರು ಮನುಷ್ಯರ ಮುಂದೆ ಜೀವ ಮತ್ತು ಮರಣವನ್ನು ಇಟ್ಟಿದ್ದಾನೆ. ಅವರಿಗೆ ಆಯ್ಕೆ ಕೊಡಲ್ಪಟ್ಟಿದೆ, ಬಹುಜನರು ಜೀವವನ್ನು ಇಚ್ಛಿಸುತ್ತಾರಾದರೂ ವಿಸ್ತಾರವಾದ ಮಾರ್ಗದಲ್ಲಿ ನಡೆಯುತ್ತಾರೆ ಏಕೆಂದರೆ ಅವರು ಜೀವವನ್ನು ಆಯ್ಕೆಮಾಡಿರುವುದಿಲ್ಲ .GCKn 157.2

    ಪಾಪದಿಂದ ಕಳಂಕಗೊಂಡ ಮಾನವಾನಿಗಗಿ ತನ್ನ ಮಗನನ್ನೇ ಅರ್ಪಿಸಿದ ದೇವರ ಕರುಣೆ ಸಂತಾಪವನ್ನು ನಾನು ಕಂಡೆನು. ಬಹುಪ್ರೀತಿಯಿಂದ ಕ್ರಯಕ್ಕೆ ಕೊಳ್ಳಲ್ಪಟ್ಟ ರಕ್ಷೆಣೆಯನ್ನು ಅಂಗೀಕರಿಸದ ಬಹುಜನರು ಶಿಕ್ಷೆಗೆ ಒಳಗಾಗಲೇ ಬೇಕು. ದೇವರ ಸೃಷಿಗಳೇ ಆದವರು ಆತನ ಅಧಿಪತ್ಯಕ್ಕೆ ವಿರುದ್ದವಾಗಿ ದಂಗೆ ಎಂದರು ; ಆದರೆ ದೇವರು ಅವರನ್ನು ನಿತ್ಯಯಾತನೆ ಅನುಭವಿಸಲು ತಳ್ಳಿಬಿಡಲಿಲ್ಲ ಎಂಬುದನ್ನು ನಾನು ಕಂಡೆನು. ಅವರನ್ನು ಪರಲೋಕಕ್ಕೂ ಕರೆದು ಕೊಂಡು ಹೋಗಲು ಸಾದ್ಯವಿಲ್ಲ; ಏಕೆಂದರೆ ಪರಿಶುದ್ದರೂ, ಪವಿತ್ರರೂ ವಾಸವಗಿರುವಲ್ಲಿ ಅವರೂ ಇದ್ದರೆ ಪರಿಪೂರ್ಣ ತಲ್ಲಣಕ್ಕೆ ಒಳಗಾಗುವುದುGCKn 158.1

    ದೇವರು ಪರಲೋಕಕ್ಕೂ ಕರೆದುಕೂಂಡು ಹೋಗಲಾರರು ಮತ್ತು ನಿತ್ಯಸಂಕಟಕ್ಕೂ ಬಿಡಲಾರರು. ಅಂತಿಮವಾಗಿ, ಅವರು ಜೀವಿಸಿರಲೇ ಇಲ್ಲವೇನೋ ಎಂಬಂತೆ ನಾಶವಾಗುವರು, ಆಗ ಆತನ ನ್ಯಾಯನೀತಿಗೆ ತೃಪ್ತಿಯಾಗುವುದು. ಆತನು ಮನುಷ್ಯರನ್ನು ಮಣ್ಣಿನಿಂದ ಸೃಷ್ಟಿಸಿದನು. ಅಪವಿತ್ರರೂ ಅವಿಧೇಯರೂ ಬೆಂಕಿಯಿಂದ ಬೂದಿಯಾಗಿ ಹಿಂದಿರುಗುವರು. ಈ ಕಾರ್ಯದಲ್ಲಿ ದೇವರ ಧರ್ಮಶೀಲತೆ ಹಾಗೂ ಅನುಕಂಪವಿದ್ದು ಎಲ್ಲರೂ ಆತನ ಸದ್ಗುಣಗಳನ್ನು ಮೆಚ್ಚಿಕೊಂಡು ಆರಾಧಿಸುವಂತೆ ಮಾಡಬೇಕೆಂಬುದನ್ನು ನಾನು ಕಂಡೆನು; ನಂತರ ಎಲ್ಲಾ ದುಷ್ಟ ಸಮುಧಾಯವು ಭೂಮಿಯಿಂದ ನಾಶವಾಗುವುದು , ಪರಲೋಕಗಣಗಳೆಲ್ಲಾ, ಆಮೆನ್! ಎಂದು ಉದ್ವರಿಸುವರು.GCKn 158.2

    ಸೈತಾನನು, ಕ್ರೈಸ್ತರೆಂದು ತಮ್ಮನ್ನು ಕರೆಸಿಕೊಂಡು ತಾನು ಸೃಷ್ಟಿಸಿದ ಭ್ರಮೆಗಳಿಗೆ ಬಹು ಹತ್ತಿರ ಬಂದವರನ್ನು ಸಂತೃಪ್ತಿಯಿಂದ ನೋಡಿದನು. ಮತ್ತೂ ಹೆಚ್ಚಾದ ಹೊಸಭ್ರಮೆಗಳನ್ನು ಹುಟ್ಟಿಸುವುದು ಆತನ ಕೆಲಸವಾಗಿದೆ. ಬಲವೃಧಿಸಿ ಉತ್ತಮ ಕಲಕಾರನಾಗಿ ಅವನು ವೃದ್ಧಿಸುವನ್ನು ತನ್ನ ಪ್ರತಿನಿಧಿಗಳೂ,ಪೋಪರೊ, ಪಾಧ್ರಿಗಳು ತಮ್ಮನ್ನು ತಾವೇ ಅತಿರೇಕಗೊಳಿಸುತ್ತಾ ಹಾಗೂ ಜನರನ್ನು ಉದ್ರೇಕಗೊಳಿಸಿ, ದೇವರನ್ನು ಪ್ರೀತಿಸುತ್ತಾ ಭ್ರಮೆ ಭ್ರಾಂತಿಗಳಿಗೆ ತೆಲೆಭಾಗದವರನ್ನು ಉಗ್ರವಾಗಿ ಹಿಂಸೆಗೊಳಿಸುವಂತೆ ಮಾಡಿದನು. ಕ್ರಿಸ್ತನ ಭಕ್ತರಾದ ಹಿಂಬಾಲಕರನ್ನು ನಾಶಮಾಡಲು ತನ್ನ ಅನುಯಾಯಿಗಳನ್ನು ಪ್ರಚೋದಿಸಿದನು. ಓಹ! ಅಮ್ಯೂಲ ದೇವಜನರು ತಾಳಿಕೊಳ್ಳಬೇಕಾದ ಕಷ್ಟ ಸಂಕಟಗಳು ವರ್ಣಿಸಲಸಾದ್ಯವಾದದ್ದು! ದೇವದೂತರು ಅದೆಲ್ಲವನ್ನೂ ನಂಬುಗೆಯ ದಾಖಲೆಗಳನ್ನಾಗಿ ಮಾಡಿದ್ದಾರೆ. ಆದರೆ ಸೈತಾನನೂ ಅವನ ದೂತರು, ವಿಜೃಂಭಿಸಿ ಸತ್ಯಕ್ಕಾಗಿ ಹಿಂಸೆಪಡುತ್ತಿದ್ದವರನ್ನು ಕಾಪಾಡಿ ಬಲಪಡಿಸಿತ್ತಿದ್ದ ದೇವದೂತರಿಗೆ, ಭಕ್ತರನ್ನು ಕೊಂದುಹಾಕಿ ಭೂಲೋಕದ ಮೇಲೆ ನಿಜಕ್ರೈಸ್ತರು ಅಸ್ತಿತ್ವವೇ ಇಲ್ಲದಂತೆ ಮಾಡುವೆವೆಂದು ತಿಳಿಸಿದರು. ದೇವರಸಭೆಯು ಪವಿತ್ರವಾಗಿದುದ್ದನ್ನು ನಾನು ಕಂಡೆನು. ಯಾವ ಕಪಟ ಹೃದಯದವರೂ ದೇವರ ಸಭೆಗೆ ಸೇರುವುದನ್ನು ಆಗ ನಾನು ಕಾಣಲಿಲ್ಲ; ಏಕೆಂದರೆ ದೈರ್ಯವಾಗಿ ಆತನ ನಂಬಿಕೆಯಲ್ಲಿ ದೃಡವಾಗಿ ನಿಜಕ್ರೈಸ್ತರು ಸೈತಾನನೂ ಆತನ ದುಷ್ಟದೂತರು ಕಂಡುಹಿಡಿದ ಹಾಗೂ ಮನುಷ್ಯನ ಮನಸ್ಸಿನಲ್ಲಿ ತುಂಬಿಸಿದ್ದ ಪ್ರತಿಹಿಂಸೆ, ಕ್ಲೇಶ ಮತ್ತು ಸುಡುಗಂಬದ ಸಾವಿನ ಸಂಗತಿಗಳ ಅಪಾಯದಲ್ಲಿದ್ದರು, ಅವರನ್ನು ಭಯವು ಆವರಿಸಿತ್ತು .GCKn 159.1

    ಓದಿ ; ಆದಿಕಾಂಡ ಅಧ್ಯಾಯ 3; ಪ್ರಸಂಗಿ 9:5,12:7; ಲೂಕ 21:33; ಯೋಹಾನ 3:16 2ತಿಮೋಥಿ 3:16 ಪ್ರಕಟಣೆ 20:14-15, 21:1, 22:12-19GCKn 160.1

    Larger font
    Smaller font
    Copy
    Print
    Contents