Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ 10. - ಕ್ರಿಸ್ತನ ಪುನರುತ್ಥಾನವು

    ಮಹಿಮೆಯ ಅರಸನಾದ ಯೇಸುವು ಸಮಾಧಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಶಿಷ್ಯರು ಕರ್ತನ ಮರಣದ ಬಗ್ಗೆ ದಃಖಿಸುತ್ತಾ ಸಬ್ಬತ್ ದಿನದ ವಿಶ್ರಾಂತಿಯಲ್ಲಿದ್ದರು. ರಾತ್ರಿಯು ನಿಧಾನವಾಗಿ ಸಾಗುತ್ತಾ ಇನ್ನೂ ಮೊಬ್ಬಿರುವಾಗ ಅಲ್ಲೆ ಹಾರಾಡುತ್ತಿದ್ದ ದೂತರಿಗೆ ತಮ್ಮ ಪ್ರೀತಿಯ ಅಧಿಪತಿ ಹಾಗೂ ದೇವರ ಪ್ರೀತಿಯ ಕುಮಾರನು ಬಿಡುಗಡೆ ಹೊಂದುವ ಸಮಯ ಹತ್ತಿರವಾಗುತ್ತಿದೆ ಎಂದು ತಿಳಿದಿತ್ತು. ಆತನ ವಿಜಯೋತ್ಸವದ ಗಳಿಗೆಗಾಗಿ ಕಾಯುತ್ತಿರುವಲ್ಲಿ, ಒಬ್ಬ ಪ್ರಬಲನೂ ಸಮರ್ಥನೂ ಆದ ದೇವದೂತನು ಪರಲೋಕದಿಂದ ವೇಗವಾಗಿ ಇಳಿದು ಬಂದನು. ಆತನ ಮುಖವು ಮಿಂಚಿನಂತೆ, ವಸ್ತ್ರವು ಹಿಮದಂತೆ ಬೆಳ್ಳೆಗಿತ್ತು. ಆತನ ಬೆಳಕು ಸುತ್ತಲೂ ಹರಡಿ ಮುಸಿಕಿದ್ದ ಕತ್ತಲೆಯೂ ಓಡಿ ಹೋಯಿತು. ಯೇಸುವಿನ ದೇಹವನ್ನು ಅಧಿನಪಡಿಸಿಕೊಳಲು ಕಾಯುತ್ತಿದ್ದ ದುಷ್ಟದೂತಗಣಗಳು ಅತನ ಮಹಿಮೆಯ ಪ್ರಕಾಶದಿಂದ ಭಯಗೊಂಡವರಾಗಿ ಪರಾರಿಯದರು. ಯೇಸುವಿನ ಹಿಂಸಾಕೃತ್ಯಗಳಿಗೆ ಸಾಕ್ಷಿಯಗಿದ್ದು. ಆತನ ಪರಿಶುದ್ಧ ಸಮಾಧಿ ಸ್ಥಳವನ್ನು ಕಾದುಕೊಂಡು ಕುಳಿತಿದ್ದ ದೂತನು ಪರಲೋಕ ದೂತನೊಂದಿಗೆ ಸೇರಿಕೊಂಡನು, ಅವರು ಒಟ್ಟಾಗಿ ಸಮಾಧಿ ಹತ್ತಿರ ಬಂದರು. ಅವರು ಹತ್ತಿರ ಬರುವಾಗ ಭೂಮಿಯು ನಡುಗಿ ಭಯಂಕರ ಭೂಕಂಪವಾಯಿತು. ಪ್ರಬಲನಾದ ದೂತನು ಕಲ್ಲನ್ನು ಹಿಡಿದು ಸಮಾಧಿಯಿಂದ ಉರುಳಿಸಿ ಅದರ ಮೇಲೆ ಕುಳಿತನು.GCKn 86.1

    ದೇವದೂತರ ಅತಿಶಯವಾದ ಪ್ರಕಾಶವು ಸೂರ್ಯನಂತೆ ಪ್ರಕಾಶಿಸಿದಾಗ ಕಾವಲುಗಾರರಿಗೆ ತಿವ್ರ ಭಯ ಉಂಟಾಯಿತು. ಯೇಸುವಿನ ದೇಹವನ್ನು ಕಾಯುವ ಅವರಶಕ್ತಿ ಎಲ್ಲಿ ಹೋಯಿತು? ತಮ್ಮ ಕೆಲಸ ಬಗೆಗಾಗಲೀ, ಶಿಷ್ಯರು ಅತನನ್ನು ಕದ್ದುಕೊಂಡು ಹೋಗುವನ್ನಾಗಲೀ ಚಿಂತಿಸಲಾರದಾದರು. ಅವರಿಗೆ ಅಶ್ಚರ್ಯ ಮಿಶ್ರಿತ ದಿಗಿಲಾಯಿತು. ರೋಮನ್ ಪಹರೆಯವರು ದೂತರು ಕಂಡು ಸತ್ತವರಂತೆ ಬೋರಲು ಬಿದ್ದರು. ಒರ್ವ ದೂತನು ವಿಜಯೋಲ್ಲಾಸ ದಿಂದ ಕಲ್ಲನ್ನು ಉರುಳಿಸುತ್ತಾ ದೊಡ್ಡ ಸ್ವರದಲ್ಲಿ ‘ದೇವಕುಮಾರನೇ! ನಿನ್ನ ತಂದೆಯು ಕರೆಯುತ್ತಿದ್ದಾನೆ! ಎದ್ದು ಬಾ!’ ಅಂದನು. ಮರಣವು ಇನ್ನೂ ಹೆಚ್ಚು ಅಧಿಪತ್ಯ ಸಾಧಿಸಲಾಗಲಿಲ್ಲ. ಯೇಸು ಸಾವಿನಿಂದ ಎಚ್ಚೆತ್ತನು. ಮತ್ತೊಬ್ಬ ದೂತನು ಸಮಾಧಿಯೂಳಗೆ ಬರಲು ಯೇಸು ವಿಜಯಿಯಾಗಿ ಎದ್ದನು. ಆ ದೂತನು ಯೇಸುವಿನ ತಲೆಯ ಸುತ್ತಲೂ ಕಟ್ಟಿದ್ದ ವಸ್ತ್ರವನ್ನು ಬಿಚ್ಚಿದನು, ಯೇಸುವು ಜಯಶಾಲಿಯಾಗಿ ಮುಂದೆ ನೆಡೆದನು ದೂತಗಣವು ಪವಿತ್ರ ಗಂಭೀರತೆಯಿಂದ ದೃಶ್ಯವನ್ನು ದಿಟ್ಟಿಸಿದರು. ಯೇಸು ರಾಜ್ಯಗಾಂಭೀಱ್ಯದಿಂದನೆಡೆದು ಬರುವಾಗ ಹೊಳೆಯುತ್ತಿದ್ದನು, ದೂತರು ಸಾಷ್ಟಾಂಗ ಬಿದ್ದು ಆರಾಧಿಸಿದರು.GCKn 87.1

    ಬಳಿಕ ವಿಜಯಗಾನದಿಂದ ಜಯಕಾರ ಮಾಡಿದರು. ಏಕೆಂದರೆ ಸೈತಾನನು ದಿವ್ಯ ಸೆರೆಯಾವನನ್ನು ಹಿಡಿದಿಡಲಾಗಿ. ಈಗ ಜಯಗಳಿಸಲಿಲ್ಲ, ದೇವದೂತರು ಪ್ರಜ್ವಲ ಬೆಳಕಿನೆದುರು ನಿಲ್ಲದೆ ದುಷ್ಟ ದೂತರು ಓಡಿದರು. ಅವರು ತಮ್ಮ ರಾಜನ ಬಳಿಗೆ ಬಂದು, ಅವರು ಯಾರನ್ನು ದ್ವೇಷಿಸುತ್ತಿದ್ದರೋ ಆತನು ಸಾವಿನಿಂದ ಎಚ್ಚೆತ್ತನು. ಅವರ ಬಲೆಗೆ ಬಿದ್ದಿದ ಯೇಸುವನ್ನು ಬಲಪ್ರಯೋಗದಿಂದ ದೂತರು ಕಿತ್ತುಕೊಂಡರೆಂದು ಬಹು ನಿಷ್ಠುರವಾಗಿ ಗೊಣಗಿದರು.GCKn 87.2

    ಸೈತಾನನು ಮತ್ತು ಅವನ ದೂತರು, ಪಾಪದಲ್ಲಿ ಬಿದ್ದು ಜನರ ಮೇಲಿನ ತಮ್ಮ ಶಕ್ತಿಯು ಕರ್ತನ ಜೀವಕ್ಕೆ ಎರವಾಗಿ ಸಮಾಧಿಹೊಂದಿದ್ದನು ತಿಳಿದು ಕ್ಲುಪ್ತಕಾಲ ಮಾತ್ರ ಉಲ್ಲಾಸದಿಂದಿದ್ದರು; ಆದರೆ ಅವರ ನರಕ ಸದೃಶ ಗೆಲುವು ಕ್ಷಣಮಾತ್ರವಾಗಿತ್ತು. ಯೇಸುವು ಮರಣದ ಸೆರೆಯಿಂದ ಎದ್ದು ಅಧಿಕಾರಿಯುತವಾಗಿ ನೆಡೆದು ಬರಲು, ಕೆಲವು ಸಮಯದಲ್ಲೆ ಸಾಯುವೆನೆಂದೂ ತನ್ನ ರಾಜ್ಯವು ಭಾದ್ಯಸ್ಥನಿಗೆ ಹಸ್ತಾಂತರವಾಗುವುದೆಂದು ಸೈತಾನನು ತಿಳಿದುಕೊಂಡನು. ತನ್ನೆಲ್ಲಾ ಯುಕ್ತಿಶಕ್ತಿಗಳಿಂದ ಯೇಸುವಿನ ಮೇಲೆ ಜಯಸಾಧಿಸಲಾಗಲಿಲ್ಲವಲ್ಲಾ, ಮಾನವನಿಗಾಗಿ ರಚಿಸಲ್ಪಟ್ಟ ರಕ್ಷಣಾಯೋಜನೆಯ ಮಾರ್ಗ ತೆರೆಯಲ್ಪಟ್ಟಿದ್ದು ಅವರೆಲ್ಲರ ರಕ್ಷಣೆಗೆ ದಾರಿಯಾಯಿತಲ್ಲಾ ಎಂದು ಸೈತಾನನು ಬಹು ರೌದ್ರನಾಗಿ ಪ್ರಲಾಪಿಸಿದನು.GCKn 88.1

    ಕಲವು ಗಳಿಗೆ ಮಾತ್ರ ಸೈತಾನನು ದುಃಖಪಟ್ಟು ನಿರಾಶೆಗೊಂಡನು. ಆತನು ತನ್ನ ದೂತರೊಂದಿಗೆ, ದೇವರ ರಾಜ್ಯಧಿಕಾರದವಿರುದ್ದ ಕೆಲಸ ಮಾಡುವುದು ಹೇಗೆ ಎಂದು ಸಮಾಲೋಚನೆಗೆ ಇಳಿದನು. ನಂತರ ಸೈತಾನನು ತನ್ನ ದೂತರಿಗೆ, ಮಹಾಯಾಜಕರೂ ಹಿರಿಯರ ಬಳಿಗೆ ಹೋಗಿರಿ. ಈಗಾಗಲೇ ಅವರನ್ನು ಮೋಸಗೊಳಿಸಿ, ಅಂಧರನ್ನಾಗಿ ಮಾಡಿ, ಅವರು ಯೇಸುವಿನ ಕಡೆಗೆ ಹೃದಯವನ್ನು ಕಠಿಣಮಾಡಿಕೊಳ್ಳುವುದರಲ್ಲಿ ವಿಜಯ ಸಾಧಿಸಿದ್ದೇವೆ. ಯೇಸುವನ್ನು ವಂಚಕನೆಂದು ನಂಬುವಂತೆ ಮಾಡಿದ್ದೇವೆ. ಯಾಜಕರು ಹಿರುಯರು ಯೇಸುವನ್ನು ಕೊಲ್ಲುವಂತೆ ಮಾಡಿದ್ದೇವೆ. ರೋಮನ್ ಪಹರೆಯವನು ಕ್ರಿಸ್ತನು ಎದ್ದಿದ್ದಾನೆಂಬ ಹಗೆಯವಾರ್ತೆ ತೆಗೆದುಕೊಂಡು ಹೋಗಿದ್ದಾನೆ. ಯೇಸುವು ಎದ್ದಿರುವುದು ಜನರಿಗೆ ತಿಳಿದುಬಂದಲ್ಲಿ ನಿರಾಪರಧಿಯ ಕೊಲೆಗೆ ಪಾತ್ರರೆಂದು ಅವರನ್ನು ಕಲ್ಲೆಸದು ಕೊಲ್ಲುವರು ಎಂಬ ವಿಷಯವನ್ನು ಪ್ರಜ್ವಲ ಬೆಳಕಿನಲ್ಲಿ ಎತ್ತಿ ಹಿಡಿಯೋಣ ಎಂದನು .GCKn 88.2

    ರೋಮನ್ ಪಹರೆಯವರು, ದೇವದೂತರು ಅದೇಮಹಿಮಾ ಪ್ರಕಾಶದಿಂದ ಪರಲೋಕಕ್ಕೆ ಹಿಂತಿರುಗಿ ಹೋದುದನ್ನು ಕಂಡು ಎದ್ದು ಸುತ್ತಾಮುತ್ತಾ ನೋಡುತ್ತಾ ತಮಗೆ ಕ್ಷೇಮವೇ ಎಂದು ನೋಡಿಕೊಂಡದ್ದನ್ನು ನಾನು ಕಂಡೆನು. ಆ ದೊಡ್ಡ ಕಲ್ಲು ಉರುಳಿ ಯೇಸುವು ಎದ್ದುದನ್ನು ಕಾವಲುಗಾರರು ಕಂಡರು, ದಿಗ್ಬ್ರಮೆಗೊಂಡರು. ಕಂಡ ದೃಶ್ಯವನ್ನು ಮಹಾಯಜಕಗೂ ಹಿರಿಯರಿಗೂ ಮುಟ್ಟಿಸಲು ತ್ವೆರೆಗೊಂಡರು;GCKn 89.1

    ಈ ಸುದ್ಧಿಯಿಂದ ಕೊಲೆಗಾರರೆಲ್ಲರ ಮುಖ ನಿಸ್ತೇಜವಾಯಿತು. ತಮ್ಮ ಕಾರ್ಯಗಳಿಗಾಗಿ ಥರಥರಿಕೆ ಉಂಟಾಯಿತು. ಒಂದುವೇಳೆ ಈ ಸುದ್ದಿಯು ನಿಜವಾದರೆ ನಾವು ಸತ್ತೆವು ಎಂದುಕೊಂಡರು. ಏನೋ ಮಾಡಬೇಕೊ, ಏನು ಹೇಳಬೇಕೋ ತಿಳಿಯದೆ ಒಬ್ಬನ್ನೊಬ್ಬರು ಮೌನದಿಂದ ನೋಡುತ್ತಾ ಕ್ಷಣಮಾತ್ರ ಮಂಕಾದರು. ಅವರು ತಮ್ಮ ಸ್ವಖಂಡನೆ ಮಾಡಿಕೊಂಡರೆ ಹೊರತು ನಂಬಲಾಗದ ಸ್ಥಿತಿಯಲ್ಲಿದ್ದರು. ಮುಂದೇನು ಮಾಡುವುದೆಂದು ಒತ್ತಟ್ಟಿಗೆ ಸೇರಿ ಆಲೋಚಿಸಿದರು. ಯೇಸುವು ಸಮಾಧಿಯಿಂದ ಎದ್ದು ಅದ್ಬುತ ಸಂಗತಿಯೂ, ಅದನ್ನೂ ಕಂಡ ಪಹರೆಯಾವರು ಸತ್ತಂತೆ ಬಿದ್ದ ಸುದ್ದಿಯು ಎಲ್ಲ ಜನರಿಗೆ ತಿಳಿದರೆ ಅವರು ನಿಜವಾಗಿ ಕೋಪದಿಂದ ಹುಚ್ಚೆದು ನಮ್ಮನ್ನು ಕೊಲ್ಲದೆ ಇರಲಾರರು ಅಂದುಕೊಂಡರು. ಸುದ್ದಿಯನ್ನು ರಹಸ್ಯಗಿಡಲೋಸುಗ ಸೈನಿಕರನ್ನು ಕೊಡುಕೊಳ್ಳಲು ತೀರ್ಮಾನಿಸಿಕೊಂಡರು. ಅವರಿಗೆ ಹೆಚ್ಚು ಹಣವನ್ನು ನೀಡಿ, ಯೇಸುವಿನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆಮಾಡುತ್ತಿರುವಾಗ ದೇಹವನ್ನು ಕದ್ದುಕೊಂಡು ಹೋದರು ಎಂದು ಹೇಳಿರಿ ಎಂದು ತಾಕೀತು ಮಾಡಿದರು. ಒಂದುವೇಳೆ ಕೆಲಸದ ಸಮಯದಲ್ಲಿ ನಿದ್ದೆಮಾಡಿದ್ದೇಕೆಂದು ಪ್ರಶ್ನಿದರೆ ಎಂದು ಪಹರೆಯಾವರು ಕೇಳಿದಾಗ ಯಾಜಕರು ಮತ್ತು ಹಿರಿಯರು, ದೇಶಾಧಿಪತಿಯನ್ನು ಒಪ್ಪಿಸಿ ರಕ್ಷಿಸುತ್ತೇವೆ ಎಂದು ಅಭಯ ನೀಡಿದರು. ಹಣದ ಆಶೆಗಾಗಿ ರೋಮನ್ ಕಾವಲುಗಾರರು ತಮ್ಮ ಗೌರವನ್ನು ಮಾರಿಕೊಂಡು ಯಾಜಕರ ಮತ್ತು ಹಿರಿಯರ ಸಲಹೆಗೆ ಓಗೊಟ್ಟರು.GCKn 89.2

    ಯೇಸುವುಶಿಲುಬೆಯಲ್ಲಿ ತೂಗಾಡುತ್ತಾ ಮಹಾದ್ವನಿಯಿಂದ ‘ತೀರಿತು’ ಎಂದು ಕೂಗಿದಾಗ ಬಂಡೆಗಳು ಸೀಳಿದವು, ಭೂಮಿ ಕಂಪಿಸಿತ್ತು, ಕೆಲವು ಸಮಾಧಿಗಳು ತೆರೆದವು, ಏಕೆಂದರೆ ಯೇಸುವು ಮರಣದಿಂದ ಎದ್ದು ಸಾವನ್ನೂ ಸಮಾಧಿಯನ್ನು ಗೆದ್ದನು; ವಿಜಯೋತ್ಸಾಹದಿಂದ ಮರಣಕಾರಾಗೃಹದಿಂದ ಎದ್ದು ನೆಡೆದು ಬಂದನು; ಭೂಮಿಯು ಕಂಪಿಸುತ್ತಿರಲು ಆ ಪರಿಶುದ್ಧ ಸ್ಥಳದ ಸುತ್ತ ಪರಲೋಕದ ಮಹಾಮಹಿಮೆ ಸುತ್ತುವರಿಯಿತು. ಆತನ ಕರೆಗೆ ವಿಧೇಯರಾಗಿ, ನಿದ್ದೆಹೋಗಿದ್ದ ಅನೇಕ ಭಕ್ತರ ದೇಹಗಳು ಎದ್ದು ಕ್ರಿಸ್ತನು ಎದ್ದು ಬಂದುದಕ್ಕೆ ಸಾಕ್ಷಿಯದರು. ಪುನರುತ್ಥಾನ ಹೊಂದಿದ ಪ್ರಿಯ ಭಕ್ತರು ಮಹಿಮೆ ಹೊಂದಿದರು. ಇವರ ಸೃಷ್ಟಿಕಾರ್ಯ ಸಂಭವಿಸಿದ ಕಾಲದಿಂದ ಕ್ರಿಸ್ತನ ಕಾಲದವರೆಗೂ ಆರಿಸಲ್ಪಟ್ಟ ಕೆಲವರು ಪವಿತ್ರರು. ಮಹಾಯಾಜಕರು ಮತ್ತು ಫರುಸಾಯರು ಕ್ರಿಸ್ತನ ಪುನರುತ್ಥಾನವನ್ನು ಮುಚ್ಚಿಡಬೇಕೆಂದು ಯೋಚಿಸುತ್ತಿರುವಾಗ ದೇವರು ಸಮಾಧಿಯಿಂದ ದಂಡನ್ನು ಎಬ್ಬಿಸಿ ಯೇಸುವಿನ ಮಹಿಮೆಗೆ ಸಾಕ್ಷಿಯಾಗುವಂತೆ ಮಾಡಿದರು.GCKn 90.1

    ಪುನರುತ್ಥಾನ ಹೊಂದಿರುವ ವಿವಿದ ದೇಹಕಾರದ ಸ್ಥಿತಿಯಲ್ಲಿದ್ದರು ಭೂಲೋಕದವರು ಸಂತತಿಯಿಂದ ಸಂತತಿಗೆ ಹಂತಹಂತವಾಗಿ ತಮ್ಮ ಶಕ್ತಿ, ಸಹನೆ ಕಳೆದುಕೊಂಡು ಕ್ಷಯಿಸುತ್ತಾ ಹೋಗುತ್ತಿದ್ದಾರೆಂದು ನನಗೆ ತಿಳಿಸಲಾಯಿತು. ಸೈತಾನನಿಗೆ ರೋಗ ಮರಣ ಉಂಟುಮಾಡುವ ಶಕ್ತಿ ಇದೆ. ಪ್ರತಿ ಕಾಲಮಾನದಲ್ಲಿ ಈ ಶಾಪವು ಹೆಚ್ಚಾಗಿದ್ದು ಸೈತಾನನ ಶಕ್ತಿ ಹೆಚ್ಚು ವಿಜೃಂಭಿಸುತ್ತಾ ಬರುತ್ತದೆ. ಪುನರುತ್ಥಾನ ಹೊಂದಿದವರಲ್ಲಿ ಕೆಲವರು ಇತರಗಿಂತ ರೂಪದಲ್ಲೂ ಆಕಾರದಲ್ಲೂ ಹೆಚ್ಚು ವಿನೀತರಾಗಿದ್ದರು. ನೋಹ ಅಬ್ರಹಾಮನ ಕಾಲದಲ್ಲಿದ್ದವರು ಹೆಚ್ಚುಕಡಿಮೆ ದೂತರಂತೆ ಸಮಧಾನಿಗಳಾಗಿ ಬಲಯುತರಾಗಿಯೂ ಇದ್ದರೆಂದು ನನಗೆ ವಿವರಿಸಲಾಯಿತು. ಆದರೆ ಪ್ರತಿ ಸಂತತಿಯೂ ಬರಬರುತ್ತ ರೋಗಗಳಿಗೆ ತುತ್ತಾಗಿ, ದಿನೇದಿನೇ ಬಲಹೀನವಾಗಿ ಕ್ಲುಪ್ತ ಜೀವಿತಕಾಲವನ್ನು ಹೊಂದಿದ್ದಾರೆ. ಜನರನು ಬೇಸರಗೊಳ್ಳಿಸಿ ಕೃಶವಾಗಿಸುವ ತಂತ್ರವು ಹೇಗೆಂದು ಸೈತಾನನು ಕಲಿಯುತ್ತಲಿದ್ದಾನೆGCKn 91.1

    ಯೇಸುವಿನ ನಂತರ ಪುನರುತ್ಥಾನ ಹೊಂದಿದ ಪವಿತ್ರರು ಹಲವರಿಗೆ ಗೋಚರಿಸಿದರು, ಮಾನವ ಬಲ ಸಂಪೂರ್ಣವಾಯಿತು, ಯಹೂದ್ಯರು ಶಿಲುಬೆಗೆ ಯೇಸುವು ಮರಣವನ್ನು ಜಯಿಸಿ ಎದ್ದಿದ್ದಾನೆ .ನಾವೂ ಅತನೊಂದಿಗೆ ಎದ್ದೆವು ಎಂದು ಅವರು ತಿಳಿಸಿದರು. ಅತನ ಮಹಾಶಕ್ತಿಯ ಮೂಲಕ ತಾವೂ ಸಮಾಧಿಯಿಂದ ಎಬ್ಬಿಸಲ್ಪಟ್ಟೆವೆಂದು ಸಾಕ್ಷಿ ನುಡಿದರು. ಸೈತಾನನ ದೂತರು ಹಾಗೂ ಮಹಾಯಾಜಕರು ಹರಡಿದ ಸುಳ್ಳುಸುದ್ದಿಯ ಮದ್ಯೆ ನಿಜಸಂಗತಿ ಮುಚ್ಚಿಡಲಾಗಲಿಲ್ಲ; ಏಕೆಂದರೆ ಸಮಾಧಿಯಿಂದ ಎಬ್ಬಿಸಲ್ಪಟ್ಟ ಪವಿತ್ರದಂಡು ಅದ್ಬುತ ತುಂಬಿದ ಹರ್ಷೋಲ್ಲಾಸದ ಸುವಾರ್ತೆಯನ್ನು ಹರಡಿದರು, ಮಾತ್ರವಲ್ಲದೆ ಯೇಸುವು ಬಹು ದುಃಖದಿಂದ ಹೃದಯಸ್ಥಂಬಿತರಾಗಿ ಶಿಷ್ಯರಿಗೆ ಪ್ರತ್ಯಕ್ಷನಾಗಿ ಅವರ ಭಯವನ್ನು ತೆಗೆದು ಉಲ್ಲಾಸ ತುಂಬಿದನು.GCKn 92.1

    ಈ ಸುದ್ದಿಯು ಪಟ್ಟಣದಿಂದ ಪಟ್ಟಣಕ್ಕೆ, ನಗರದಿಂದ ನಗರಕ್ಕೆ ಹರಡುತ್ತಾ ಬರಲು ಯಹೂದ್ಯರಿಗೆ ಮರಣದಿಂದ ಭಯ ತುಂಬಿತು. ಅವರು ಶಿಷ್ಯರ ಮೇಲೆ ತಮ್ಮಗಿದ್ದ ದ್ವೇಷವನ್ನು ಗೋಪ್ಯವಾಗಿಟ್ಟರು. ಅವರ ಕೆಲಸ ಸುಳ್ಳು ಸುದ್ದಿಯನ್ನು ಹರಡುವುದು. ಕೆಲವರು ಇದನ್ನೇ ಸತ್ಯವೆಂದು ನಂಬಿದರು. ಆದರೆ ಪಿಲಾತನು ನಡುಗಿದನು. ಯೇಸುವು ಮರಣದಿಂದ ಎದ್ದದ್ದು ಹಾಗೂ ಅತನೊಂದಿಗೆ ಎಬ್ಬಿಸಲ್ಪಟ್ಟ ಅಸಂಖ್ಯಾತ ಜನರು ಸಾಕ್ಷಿಕೊಟ್ಟ ಸಂಗತಿಯನ್ನು ಅವನು ಬಹಳವಾಗಿ ನಂಬಿದನು. ಅವನಲ್ಲಿದ್ದ ಶಾಂತಿ ನಿರಂತರವಾಗಿ ಅಡಗಿತು. ಈ ಲೋಕದ ಗೌರವ, ಸ್ಥಾನಮಾನ ಮತ್ತು ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತದೆಂದು ಅವನು ಯೇಸುವನ್ನು ಸಾವಿಗೆ ಒಪ್ಪಿಸಿದ್ದನು. ಯಾವನ ರಕ್ತಕ್ಕೆ ಹೊಣೆಯಾದನೋ ಅವನ ರಕ್ತವು ಸಾಮಾನ್ಯ ಮುಗ್ದ ಮನುಷ್ಯನದಲ್ಲ ಆದರೆ ದೇವಕುಮಾರನದೆಂದು ಈಗ ಪರಿಪೂರ್ಣವಾಗಿ ಮನಗಂಡನು. ಪಿಲಾತನ ಜೀವನ ದುರವಸ್ಥೆಗೀಡಾಯಿತು; ಅಂತ್ಯದವರೆಗೂ ದುರವಸ್ಥೆಯಲ್ಲಿತು; ಆತನ ನಿರೀಕ್ಷೆ ಆನಂದವನ್ನು ನಿರಾಶೆ ಆತಂಕವು ಮೆಟ್ಟಿಹಾಕಿತು. ಯಾವ ಸಂತೈಕೆಗೂ ಎಡೆಗೊಡದೆ ಕ್ಲೇಶದಿಂದ ಸತ್ತನು.GCKn 92.2

    ಹೆರೋದನ ಹೃದಯವು ಹೆಚ್ಚು ಹೆಚ್ಚು ಕಠಿಣವಾಗುತ್ತಾ ಬಂತು. ಯೇಸುವು ಮತ್ತೆ ಎದ್ದು ಬಂದ ವಾರ್ತೆ ಮುಟ್ಟಿದ್ದಾಗ ಹೆರೋದನ ಹೃದಯವು ಅಷ್ಟೇನೂ ಕಳವಳ ಗೊಳ್ಳಲಿಲ್ಲ. ಅವನು ಯಾಕೋಬನನ್ನು ಕೊಲ್ಲಿಸಿದನು; ಇದರಿಂದ ಯಹೂದ್ಯರಿಗೆ ಮಹದಾನಂದವಾಯಿತೆಂದು ಉತ್ತೇಜಿತನಾಗಿ ಪೇತ್ರನನ್ನು ಕೊಲ್ಲಿಸಬೇಕೆಂದು ಹಿಡಿದು ಸೆರೆಯಲ್ಲಿಟ್ಟನು. ಆದರೆ ಪೇತ್ರನು ಮಾಡಬೇಕಾದ ಕೆಲಸವು ಇನ್ನೂ ಇದ್ದುದರಿಂದ ದೇವರು ತನ್ನ ದೂತರನು ಕಳುಹಿಸಿ ಅವನನ್ನು ಬಿಡಿಸಿದನು. ಹೆರೋದನಿಗೆ ವಿಚಾರಣ ಕಾಲವು ಬಂದಿತು. ಬಹು ಜನಜಂಗುಳಿಯ ಮದ್ಯದಲ್ಲಿಯೇ ತನ್ನ ಬಗ್ಗೆ ಕೊಚ್ಚಿಕೊಳ್ಳುತ್ತಿರುವಾಗಲೇ ದೇವರು ಅವನನ್ನು ಹೊಡೆದರು. ಅವನು ಬಹು ತುಚ್ಛಮರಣವನ್ನು ಹೊಂದಿದನು.GCKn 93.1

    ಬೆಳಗ್ಗೆ ಹೊತ್ತು ಮೂಡುವ ಮೊದಲೇ ಪವಿತ್ರ ಸ್ತ್ರೀಯರು ಸುಗಂಧ ದ್ರವ್ಯಗಳನ್ನು ತೆಗೆದುಕೊಂಡು ಯೇಸುವಿನ ದೇಹವನ್ನು ಅಭಿಷೇಕಿಸಲು ಸಮಾಧಿಯ ಬಳಿಗೆ ಬಂದರು, ಆಗ ಇಗೊ! ಆ ಭಾರವಾದ ಕಲ್ಲು ಉರುಳಿಸಲ್ಪಟ್ಟಿರುವುದನ್ನೂ, ಸಮಾಧಿಯಲ್ಲಿ ಯೇಸುವಿನ ದೇಹ ಇಲ್ಲದ್ದಿರುವುದನ್ನೂ ಕಂಡರು. ಅವರ ಹೃದಯವು ಕುಂದಿತು. ಶತೃಗಳು ದೇಹವನ್ನು ತೆಗೆದುಕೊಂಡು ಹೋಗಿದ್ದಾರೆಂದು ಭಯಪಟ್ಟರು. ನೋಡುತ್ತಿರುವಾಗಲೇ, ಬಿಳಿವಸ್ತ್ರವನ್ನು ಧರಿಸಿಕೊಂಡು ಪ್ರಕಾಶಮಾನವಾಗಿ ಹೊಳೆಯುವ ಇಬ್ಬರು ದೇವದೂತರು ಕಂಡು ಬಂದರು. ಅವರಿಗೆ ಸ್ತ್ರೀಯರ ಗಲಿಬಿಲಿ ಅರ್ಥವಾಯಿತ. ಅವರು ಯೇಸುವನ್ನು ಹುಡುಕುತ್ತಿದ್ದಾರೆ, ಆದರೆ ಆತನು ಅಲ್ಲಿಲ್ಲ, ಆತನು ಎದ್ದಿದ್ದಾನೆ ಹಾಗೂ ದೇಹವನ್ನು ಮಲಗಿಸಿದ್ದ ಸ್ಥಳವನ್ನು ಅವರು ನೋಡಬಹುದು ಎಂದರು. ಮತ್ತು ನೀವು ಆತನ ಶಿಷ್ಯರ ಬಳಿಗೆ ಹೋಗಿ, ಅವರಿಗಿಂತ ಮುಂಚೆ ಯೇಸು ಗಲಿಲಾಯಕ್ಕೆ ಹೋಗುತ್ತಾನೆಂದೂ ಅವರಿಗೆ ತಿಳಿಸಿರಿ ಎಂದರು. ಆದರೆ ಸ್ತ್ರೀಯರು ಭಯಾಶ್ಚರ್ಯಗೊಂಡರು. ಕರ್ತನು ಶಿಲುಬೆಗೆ ಹಾಕಲ್ಪಟ್ಟಿದ್ದರಿಂದ ಬಹು ದುಃಖಪಟ್ಟು ಪ್ರಲಾಪಿಸುತ್ತಿದ್ದ ಶಿಷ್ಯರ ಬಳಿಗೆ ಅವರು ತ್ವರೆಯಾಗಿ ಓಡಿಬಂದು ತಾವು ಕಂಡಿದ್ದನ್ನೆಲ್ಲಾ ಆತುರಾತುರವಾಗಿ ತಿಳಿಸಿದರು. ಶಿಷ್ಯರು ಯೇಸು ಜೀವಿತನಾಗಿ ಎದ್ದಿದ್ದನ್ನು ನಂಬದೆ, ಸುದ್ದಿತಂದ ಸ್ತ್ರೀಯರೊಡನೆ ಸಮಾಧಿಗೆ ಬಂದು ಅಲ್ಲಿ ಯೇಸು ಇಲ್ಲದಿರುವುದನ್ನು ಕಂಡರು. ನಾರುಬಟ್ಟೆ ಮಾತ್ರ ಅಲ್ಲಿತ್ತು. ಯೇಸುವು ಸತ್ತವರೊಳಗಿನಿಂದ ಜೀವಿತನಾಗಿರುವ ಶುಭಸುದ್ದಿಯನ್ನು ನಂಬಿದವರಾಗಿ ತಾವು ಕಂಡಿದ್ದು ಹಾಗೂ ಸ್ತ್ರೀಯರಿಂದ ಬಂದ ಸುದ್ದಿಯ ಬಗ್ಗೆ ಆಶ್ಚರ್ಯಗೊಂಡರು. ಮನೆಗೆಹೊಂದರು. ಆದರೆ ಮರಿಯಳು ಸಮಾಧಿಯ ಸುತ್ತಮುತ್ತ ತಿರುಗಾಡುತ್ತಿದ್ದಳು. ಮೋಸಹೋದೆನೇನೋ ಎಂದು ನಿರಾಶೆಗೂಂಡಳು. ಹೊಸ ತೊಂದರೆಗಳು ಕಾದಿವೆ ಎಂದು ತಳಮಳಗೊಂಡಳು. ಅವಳ ದುಃಖವು ಉಲ್ಬಣಗೊಂಡು ಬಹುವಾಗಿ ಅಳಲಾರಂಭಿಸಿದಳು. ಮತೊಮ್ಮೆ ಸಮಾಧಿಯಲ್ಲಿ ಬೊಗ್ಗಿ ನೋಡಲು ಬೆಳ್ಳೆಗಿರುವ ವಸ್ತ್ರಗಳನ್ನು ಧರಿಸಿದ್ದ ಇಬ್ಬರು ದೇವದೂತರನ್ನು ಕಂಡಳು. ಅವರ ಮುಖಭಾವವು ಪ್ರಕಾಶಮಾನವಾಗಿ ಹೊಳೆಯುತ್ತಿತ್ತು. ಒಬ್ಬನು ತಲೆದೆಸೆಯಲ್ಲೂ ಮತ್ತೊಬ್ಬ ಯೇಸುವು ಮಲಗಿದ್ದ ಪಾದಬಳಿಯಲ್ಲಿಯೂ ಕುಳಿತಿದ್ದನು. ಅವರು ಆಕೆಯೊಂದಿಗೆ ಬಹು ಕರುಣೆಯಿಂದ “ಯಾಕೆ ಅಳ್ಳುತ್ತಿ?” ಎಂದರು ಅವರು ನನ್ನ ಸ್ವಾಮಿಯನ್ನು ತೆಗೆದುಕೊಂಡು ಹೋಗಿದ್ದಾರೆ; ಆತನ್ನನ್ನು ಎಲ್ಲಿಟ್ಟಿದ್ದಾರೋ ನನಗೆ ಗೊತ್ತಿಲ್ಲ ಅಂದಳು.GCKn 94.1

    ಅವಳು ಸಮಾಧಿಯಿಂದ ಹೊರಬರುವಾಗ ಯೇಸು ಅವಳ ಬಳಿಯಲ್ಲಿ ನಿಂತ್ತಿರುವುದನ್ನು ಕಂಡಳು. ಆದರೆ ಆತ ಯೇಸುಎಂಬುವುದನ್ನು ತಿಳಿಯದಾದಳು. ಯೇಸು ಅವಳೊಂದಿಗೆ ಮೃದುವಾಗಿ, ಅವಳ ಅಳುವಿಗೆ ಕಾರಣವನ್ನೂ ಮತ್ತು ಯಾರನ್ನು ಹುಡುಕುತ್ತಿರುವಳೆಂದು ಕೇಳಿದನು. ಆಕೆ ಆತನನ್ನು ತೋಟಗಾರನೆಂದು ಬಗೆದು ಅಯ್ಯಾ ನೀನು ಎತ್ತಿಕೊಂಡು ಹೋಗಿದ್ದರೆ ಎಲ್ಲಿ ಇಟ್ಟಿದ್ದಿ? ನನಗೆ ಹೇಳು ನಾನು ತೆಗೆದುಕೊಂಡು ಹೋಗುತ್ತೇನೆ ಎಂದು ಬೇಡಿದಳು. ಯೇಸು ತನ್ನ ಪರಮ ದ್ವನಿಯಿಂದ ಆಕೆಯೊಂದಿಗೆ ಮಾತನಾಡುತ್ತ ‘ಮರಿಯಳೆ!’ ಎಂದು ಹೇಳಿದನು. ಆ ದ್ವನಿಯ ಪರಿಚಯ ಅವಳಿಗಿದ್ದುದರಿಂದ ಗುರುವೇ! ಎನ್ನುತ್ತಾ ಬಹು ಸಂಭ್ರಮ ಸಂತೋಷದಿಂದ ತಬ್ಬಿಕೊಳ್ಳಲು ಕಾತುರಳಾದಾಗ; ಯೇಸುಹಿಂದೆ ಸರಿದು ನನ್ನನ್ನು ಹಿಡಿಯ ಬೇಡ, ನಾನು ಇನ್ನೂ ತಂದೆಯ ಬಳಿಗೆ ಏರಿಹೋದವನ್ನಲ್ಲ; ನೀನು ನನ್ನ ಸಹೋದರರ ಬಳಿಗೆ ಹೋಗಿ — ನಾನು, ನಮ್ಮ ತಂದೆಯು ನಿಮ್ಮ ತಂದೆಯೂ, ನನ್ನದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ಏರಿಹೋಗುತೇನೆ ಎಂದು ಅವರಿಗೆ ಹೇಳು ಎಂದನು. ಮಗ್ದಲದ ಮರಿಯಳು ಬಹು ಆನಂದದಿಂದ ಶಿಷ್ಯರ ಬಳಿಗೆ ಶುಭವಾರ್ತೆಯನ್ನು ಹೊತ್ತು ಓಡಿದಳು. ಯೇಸು ತತ್ಕ್ಷಣವೇ ತಂದೆಯ ಬಳಿಗೆ ಹೋದನು. ಆತನ ತುಟ್ಟಿಗಳಿಂದಲೇ ತನ್ನ ಬಲಿಯು ಸ್ವೀಕರಿಸಲ್ಪಟ್ಟಿರುವುದನ್ನು, ಆತನು ಎಲ್ಲಾವನು ಸುಸೂತ್ರವಾಗಿ ನಡೆಸಿದನೆಂದು ಅಲ್ಲದೆ ತಂದೆಯಿಂದ ಭೂಪರಲೋಕಗಳ ಒಡೆತವನ್ನು ಪಡೆದಿರುವನೆಂದೂ ತಿಳಿದುಕೊಳ್ಳಲು ಹೋದನು.GCKn 95.1

    ದೇವಕುಮಾರನ ಸುತ್ತಲೂ ದೇವದೂತರು ಮೇಘದೋಪಾದಿಯಲ್ಲಿ ಸುತ್ತುವರೆದು, ಮಹಿಮಾರಾಜನು ಒಳಬರಲು ಅನುವಾಗುವಂತೆ ಅನಂತಕಾಲದ ಬಾಗಿಲನ್ನು ತೆರೆದಿಟ್ಟರು. ನಾನು ನೋಡಿದ್ದೇನೆಂದರೆ, ಯೇಸುವು ಪ್ರಕಾಶಭರಿತ ಪರಲೋಕ ಗಣಗಳು ಜೊತೆ ಹಾಗೂ ತಂದೆಯು ಪ್ರಸನ್ನತೆಯಲ್ಲಿ ದೇವರ ಮಹಿಮೆ ಸುತ್ತುವರೆದಿರುವಾಗಲೂ ಆತನು ತನ್ನ ಬಡ ಶಿಷ್ಯರನ್ನು ಮರೆಯಲಿಲ್ಲ; ತಂದೆಯಿಂದ ಪ್ರಭಾವ ಬಲ ಹೊಂದಿದ ನಂತರ ಅವರು ಹಿಂತಿರುಗಿ ಆ ಶಕ್ತಿಯನ್ನು ಅವರಿಗೂ ಹಸ್ತಾಂತರಿಸಲು ಬಯಸಿದನು. ಅದೇ ದಿನ ಇಳಿದು ಬಂದು ಶಿಷ್ಯರ ಮದ್ಯದಲ್ಲಿ ಕಾಣಿಸಿಕೊಂದರು; ಆತನು ತಂದೆಬಳಿಗೆ ಏರಿಹೋಗಿ ಪರಮಶಕ್ತಿ ಹೊಂದಿದ್ದನ; ಅವರು ಆತನನ್ನು ಮುಟ್ಟಿನೋಡಲು ಅನುಮತಿಸಿದನು.GCKn 96.1

    ಈ ಸಮಯದಲ್ಲಿ ತೋಮನು ಅವರ ಸಂಗಡ ಇರಲಿಲ್ಲ; ಶಿಷ್ಯರು ಹೇಳಿದ ಸುದ್ದಿಯನ್ನು ಬಡಪೆಟ್ಟಿಗೆ ನಂಬಲಿಲ್ಲ; ಅತನ ಕೈಗಳಲ್ಲಿ ಮೊಳೆಗಳಿಂದಾದ ಗಾಯಗಳನ್ನು ನೋಡದೆ, ಕ್ರೂರವಾದ ಈಟಿಯು ನೆಟ್ಟಿದ ಪಕ್ಕೆಯ ಗಾಯದಲ್ಲಿ ಬೆರಳನ್ನಿಟ್ಟು ಪರೀಕ್ಷಿಸದ ಹೊರೆತು ನಂಬುವುದಿಲ್ಲ ಎಂದನು. ಇದರಲ್ಲಿ ಆತನು ಸಹೋದರರಲ್ಲಿ ಇಟ್ಟಿದ್ದ ಅಪನಂಬಿಕೆಯನ್ನು ತೋರಿಸಿದನು. ಈ ರೀತಿಯಾದ ಗುರುತುಗಳನ್ನು ಎಲ್ಲರು ಅಪೇಕ್ಷಿಸಿದಾದಲ್ಲಿ ಯಾರು ಯೇಸುವನ್ನು ಅಂಗೀಕರಿಸಿ ಆತನ ಪುನರುತ್ಥಾನದಲ್ಲಿ ನಂಬಿಕೆ ಇಡುವುದಿಲ್ಲ. ದರೆ ಶಿಷ್ಯರ ವರದಿಯೂ ಒಬ್ಬರಿಂದೂಬ್ಬರಿಗೆ ಹೋಗುತ್ತಾ ಕಂಡವರು ಹಾಗೂ ಕೇಳಿದವರ ತುಟಿಗಳಿಂದ ಬಂದುದನ್ನು ಅಂಗೀಕರಿಸಬೇಕೆಂಬುವುದ ದೇವರ ಚಿತ್ತವಾಗಿದೆ. ಈ ಅಪನಂಬಿಕೆ ದೇವರಿಗೆ ಇಷ್ಟವಾಗಲಿಲ್ಲ .ಯೇಸು ಮತ್ತೊಮ್ಮೆ ಶಿಷ್ಯರ ಸಂಧಿಸಿದಾಗ ತೋಮನು ಅಲ್ಲಿದ್ದನು. ಯೇಸುವನ್ನು ಕಂಡ ಮಾತ್ರದಿಂದಲೇ ನಂಬಿದನು. ಆದರೆ ಈ ಮೊದಲು ಅವನು ನೋಡುವ ಭಾವವು ತೃಪ್ತಿಗೊಳ್ಳದ ಹೊರತು ನಂಬುವುದಿಲ್ಲ ಎಂದು ಪ್ರಕಟಿಸಿದನು. ಅವನಿಗೆ ಇಚ್ಛೆಪಟ್ಟ ಗುರುತನು ಕಾಣಲು ಯೇಸು ಅವಕಾಶ ನೀಡಿದನು. ಆಗ ತೋಮನು, ಸ್ವಾಮಿಯೇ, ನನ್ನ ದೇವರೇ ಎಂದು ಉದ್ವರಿಸಿದನು .ಆದರೆ ಯೇಸು ತೋಮನ ನಂಬಿಕೆಯನ್ನು ಖಂಡಿಸಿದನು. ಆತನು ತೋಮನಿಗೆ — ನೀನು ನನ್ನನ್ನು ನೋಡಿದ್ದರಿಂದ ನಂಬಿದ್ಧಿ!; ನೋಡದೆ ನಂಬಿದವರು ಧನ್ಯರು ಎಂದು ಹೇಳಿದರು GCKn 97.1

    ಆಗ ನಾನು ಕಂಡಿದ್ದೇನೆಂದರೆ, ಯಾರಿಗೆ ಮೊದಲು ಹಾಗೂ ಎರಡನೇ ದೂತನ ಸಂದೇಶದಲ್ಲಿ ಅನುಭವವಿಲ್ಲವೂ ಅವರು, ಅದನ್ನು ಅನುಭವಿಸಿದವರ ಮೂಲಕ ಕೇಳಿ ಸಂದೇಶವನ್ನು ಹಿಂಬಾಲಿಸಬೇಕಾಗಿದೆ ಎಂಬುದನ್ನು ನಾನು ಕಂಡೆನು. ಯೇಸುವನ್ನು ಶಿಲುಬೆಗೆ ಹಾಕಿದಂತೆ ಈ ಸಂದೇಶಗಳೂ ಶಿಲುಬೆಗೆ ಹಾಕಲ್ಪಡುತ್ತದೆ ಎಂಬುದನ್ನು ನಾನು ಕಂಡೆನು. ಶಿಷ್ಯರು ಪ್ರಕಟಿಸಿದಂತೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲ್ಲದೇ ಆ ಹೆಸರಿನಿಂದಲ್ಲದೇ ಆ ಹೆಸರಿನಿಂದಲೇ ರಕ್ಷಣೆ ದೊರೆಯುತ್ತದೆ. ಅದರಂತೆ ದೇವರ ಸೇವಕರು ಭಯವಿಲ್ಲದೆ ಪ್ರಾಮಾಣಿಕವಾಗಿ ಮೂರನೆ ದೂತನ ಸಂದೇಶದ ಸತ್ಯದ ಒಂದು ಭಾಗವನ್ನು ಅಂಗೀಕರಿಸಿದವರು ಸಂತೋಷದಿಂದ ಮೊದಲ, ಎರಡನೆಯ ಮತ್ತು ಮೂರನೆಯಸಂದೇಶವನ್ನು ದೇವರು ಕೊಟ್ಟಂತೆ ಅಂಗೀಕರಿಸಬೇಕಾಗಿದೆ. ಇಲ್ಲವಾದರೆ ಅವರಿಗೆ ಯಾವ ವಿಷಯದಲ್ಲೂ ಪಾತ್ರವಾಗಲ್ಲಿ ಹಾಗೂ ಆಯ್ಕೆಯಾಗಲಿ ಇರುವುದಿಲ್ಲ.GCKn 98.1

    ನಾನು ನೋಡಿದ್ದೇನೆಂದರೆ — ಪವಿತ್ರ ಸ್ತ್ರೀಯರೂ ಯೇಸುವಿನ ಪುನರುತ್ಥಾನದ ಸುದ್ದಿಯನ್ನು ಹರಡುತ್ತಿರುವ ಸಮಯದಲ್ಲಿ, ರೋಮನ್ ಪಹರೆಯವರು, ಮಹಾಯಾಜಕರು, ಹಿರಿಯರೂ ಅವರ ಬಾಯಲ್ಲಿ ಬಿತ್ತಿದ ಸುಳ್ಳನ್ನು ಅಂದರೆ ಶಿಷ್ಯರು ರಾತ್ರಿಯಲ್ಲಿ ಬಂದು ಅವರು ಮಲಗಿ ದ್ದಾಗ ಯೇಸುವಿನ ದೇಹವನ್ನು ಕದ್ದುಕೊಂಡು ಹೋದರು ಎಂಬುದನ್ನು ಸಾರಲಾರಂಭಿಸಿದರು. ಈ ಸುಳ್ಳನು ಸೈತಾನನೇ ಮಹಾಯಾಜಕರ, ಹಿರಿಯರ ಹೃದಯ ಮತ್ತು ಬಾಯಲ್ಲಿರಿಸಿದನು. ಈ ಮಾತುಗಳನ್ನು ಒಪ್ಪಿಕೊಳ್ಳಲು ಜನರೆಲ್ಲಾ ಸಿದ್ದರಿದ್ದರು. ಆದರೆ ದೇವರು, ರಕ್ಷಣೆಯು ಆತುಕೊಳ್ಳುವ ಈ ಸಂಗತಿಯನ್ನು ಸತ್ಯವಾಗಿಸಿ, ಈ ಮುಖ್ಯವಾದ ಘಟನೆ ಸಂಭವಿಸುವಂತೆ ಮಾಡಿ ಯಾವ ಅನಮಾನಕ್ಕೂ ಮೀರಿದ ಹಾಗೆ ಮಾಡಿದನು. ಮಹಾಯಾಜಕರಿಗೂ ಹಿರಿಯರಿಗೂ ಮುಚ್ಚಿಡಲು ಅಸಾದ್ಯವಾಗುವಂತೆ ಮಾಡಲಾಯಿತು. ಕ್ರಿಸ್ತನ ಪುನರುತ್ಥಾನಕ್ಕೆ ಹಲವಾರು ಭಕ್ತರು ಸತ್ತವರೊಳಗಿಂದ ಎದ್ದು ಬಂದು ಸಾಕ್ಷಿಗಳಾದರು.GCKn 98.2

    ಯೇಸುವು ನಲ್ವತ್ತು ದಿನಗಳು ಶಿಷ್ಯರೊಂದಿಗೆ ಇರುತ್ತಾ, ಅವರ ಹೃದಯಕ್ಕೆ ಉಲ್ಲಾಸ, ಆನಂದವುಂಟಾಗುವಂತೆ ಮಾಡಿದ್ದಲ್ಲದೆ ದೇವರಾಜ್ಯದ ಬಗೆಗೆ ಸಂಪೂರ್ಣ ಅರಿವನ್ನು ಉಂಟಾಮಾಡಿದನು. ಅತನ ಶ್ರಮ ಸಂಕಟ, ಮರಣ ಹಾಗೂ ಪುನರುತ್ಥಾನದ ವಿಷಯದಲ್ಲಿ ತಾವು ಕಂಡು ಕೇಳಿದ್ದರ ಬಗ್ಗೆ ಸಾಕ್ಷಿಗಳಾಗಿರಬೇಕು; ಆತನು ಪಾಪಕ್ಕೆ ಬಲಿಯಾಗಿದ್ದರಿಂದ ಎಲ್ಲಾರು ಆತನ ಬಳಿಗೆ ಬಂದು ಜೀವವನ್ನು ಕಂಡುಕೊಳ್ಳಬೇಕೆಂದು ಅಪ್ಪಣಿ ಕೊಟ್ಟನು. ಅವರು ಸಹ ಹಿಂಸೆಗೊಳ್ಳಗಾಗುವರು ಮತ್ತು ಯಾತನೆ ಪಡುವರು; ಆದರೆ ತಮ್ಮ ಅನುಭವವನ್ನು ಪೂರಕಗೊಳಿಸಿಕೊಂಡು ಹೇಳುವಾಗ ಮತ್ತು ಯೇಸು ನುಡಿದದ್ದೆಲ್ಲವನ್ನೂ ನೆನಪಿಗೆ ತಂದುಕೊಳ್ಳುವಾಗ ಅವರಿಗೆ ಉಪಸಮನ ದೊರಕುವುದು ಎಂದು ಯೇಸು ಮೃದುವಾಗಿ ಪ್ರಾಮಾಣಿಕವಾಗಿ ನುಡಿದನು. ಆತನು ಸೈತಾನನ ಶೋಧನೆಗಳೆಲ್ಲವನ್ನೂ ಗೆದ್ದು, ಕಷ್ಟ ಸಂಕಟ ಮೂಲಕ ಹೊರ ಬಂದು ಜಯ ಹೊಂದಿರುವೆನೆಂತಲೂ, ಅಲ್ಲದೆ ಆತನ ಮೇಲೆ ಸೈತಾನನಿಗೆ ಯಾವ ಅಧಿಕಾರವು ಇಲ್ಲ ಆದರೆ ಶಿಷ್ಯರ ಮೇಲೆ ಹಾಗೂ ಆತನ ಹೆಸರಿನ್ನಲ್ಲಿ ನಂಬಿಕೆಯಿಡುವವರ ಮೇಲೆ ಶೋಧನೆ ಹಾಗೂ ಬಲಪ್ರಹಾರವಾಗುವುದು ಎಂದನು.GCKn 99.1

    ಆತನು ಜಯಿಸಿದಂತೆಯೇ ಅವರೂ ಜಯಗಳಿಸಬಹುದೆಂದು ನುಡಿದನು. ಅದ್ಬುತ ಕಾರ್ಯಗಳನ್ನು ಮಾಡಲು ಅಧಿಕಾರ ಬಲವನ್ನು ಶಿಷ್ಯರಿಗೆ ಅನುಗ್ರಹಿಸಿದನು. ಆದರೂ ದುಷ್ಟಜನರು ಅವರ ದೇಹದ ಮೇಲೆ ಅಧಿಕಾರ ತೋರಿಸಿದರೂ, ಸಂದರ್ಭಕ್ಕೆನುಸಾರವಾಗಿ ದೂತರನ್ನು ಕಳುಹಿಸಿ ಬಿಡುಸುವನೆಂದು; ಅವರು ಸುವಾರ್ತಾಸೇವೆಯ ಜವಾಬ್ದಾರಿ ಮುಗಿಯವವರೆವಿಗೊ ಯಾರು ಜೀವ ತೆಗೆಯಲಾರದು ಎಂದು ಹೇಳಿದನು. ಶಿಷ್ಯರ ಸಾಕ್ಷಿಕಾರ್ಯವು ಮುಗಿದಾಗ ಅದಕ್ಕೆ ಮುದ್ರೆ ಹಾಕಲು ಅವರ ಜೀವಕ್ಕೆ ಎರವಾಗುವರೆಂದನು. ಆತನ ಕುತೂಹಲಿ ಹಿಂಬಾಲಕರು ಸಂತೋಷದಿಂದ ಕಿವಿಗೊಟ್ಟರು. ಆತನ ಪವಿತ್ರ ಅಧರಗಳಿಂದ ಉದುರಿದ ಪ್ರತಿ ಪದವನ್ನು ಭುಜಸಿದರು. ಆಗ ಈತನೇ ಲೋಕರಕ್ಷಕನೆಂದು ಅವರು ದೃಡಪಡಿಸಿಕೊಂಡರು. ಪ್ರತಿಮಾತು ಹೃದಯದ ಹಾಳಕ್ಕೆ ಇಳಿಯುತ್ತಿರುವಾಗ ಇಂತಹ ಪರಮ ಭೋದಕನಿಂದ ಬೇರ್ಪಡಬೇಕಲ್ಲಾ; ಆ ಕ್ಷಣವು ಕಳೆದ ಮೇಲೆ ಯಾವ ಸಂತೈಕೆಯ ಕೃಪಾವಾಕ್ಯಗಳನ್ನು ಆತನ ತುಟ್ಟಿಗಳಿಂದ ಕೇಳಾಗುವುದಿಲ್ಲವಲ್ಲಾ ಎಂಬ ದುಃಖ ಅವಾರಿಗಾಯಿತು. ಆದರೆ ಆತನು - ನಿಮಗೆ ಸ್ಥಳವನ್ನು ಸಿದ್ದಮಾಡುವುದಕ್ಕೆ ಹೋಗುತ್ತೇನಲ್ಲ, ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ದಮಾಡಿದ ಮೇಲೆ ತಿರುಗಿ ಬಂದು ನಿಮ್ಮನು ಕರೆದುಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು, ಎಂದಾಗ ಶಿಷ್ಯರ ಹೃದಯವು ಪ್ರೀತಿ ಮತ್ತು ಮಹಾದಾನಂದದಿಂದ ತುಂಬಿತು. ನಿಮಗೆ ಪವಿತ್ರಾತ್ಮನೆಂಬ ಸಹಾಯಕನನ್ನು ಕಳುಹಿಸುವೆನು ಆತನು ನಿಮ್ಮನ್ನು ಹರಸಿ, ಮಾರ್ಗದರ್ಶನ ನೀಡಿ ಸತ್ಯಕ್ಕೆ ನಡೆಸುವನು ಎಂದು ಹೇಳಿ ಕೈಗಳನ್ನೆತ್ತಿ ಆಶೀರ್ವಾದಿಸಿದನು.GCKn 100.1

    ನೋಡಿರಿ:GCKn 101.1

    1) ಪ್ರಕಟಣೆ 14:6-8 ಅಧ್ಯಾಯ 23 ಮತ್ತು 24ರಲ್ಲಿ ವಿವರಿಸಲಾಗಿದೆGCKn 101.2

    2) ಪ್ರಕಟಣೆ 14:9-12 ಅಧ್ಯಾಯ 28ರಲ್ಲಿ ವಿವರಿಸಲಾಗಿದೆ; ಮತ್ತಾಯ 27:52-53 ;ಅಧ್ಯಾಯ 28; ಮಾರ್ಕ 16:1-18; ಲೂಕ 24:1-50; ಯೋಹಾನ ಅಧ್ಯಾಯ 20; ಅ. ಕೃತ್ಯ ಅಧ್ಯಾಯ 12GCKn 101.3