Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಅಧ್ಯಾಯ 26. - ಮತ್ತೊಂದು ದೃಷ್ಟಾಂತ

  ಈ ಭೂಲೋಕದಲ್ಲಿ ನಡೆಯುತ್ತಿದ್ದ ಕೆಲಸಕಾರ್ಯಗಳಲ್ಲಿ ಇಡೀ ಪರಲೋಕವೇ ಆಸಕ್ತವಾಗಿದುದ್ದನ್ನು ನನಗೆ ತೋರಿಸಲಾಯಿತು. ಯೇಸುವಿನ ಎರಡನೇ ಬರುವಣಕ್ಕೆ ಸಿದ್ದರಾಗಬೇಕೆಂದೂ, ಭೂನಿವಾಸಿಗಳನ್ನು ಎಚ್ಚರಿಸಬೇಕೆಂದು ಪರಲೋಕದಲ್ಲಿ ಯೇಸುವಿನ ಸಮ್ಮುಖದಿಂದ ಒರ್ವ ಬಲಿಷ್ಟದೇವದೂತನು ಇಳಿದುಬಂದನು. ಆ ಭಲಾಢ್ಯ ದೂತನನ್ನು ನಾನು ಕಂಡೆನು. ಅವನ ಮುಂದೆ ಮಿತಿಮೀರಿದ ಪ್ರಕಾಶ ಹಾಗೂ ಶೋಭಾಯಮಾನವಾದ ಬೆಳಕು ಸರಿದು ಹೋಯಿತು ಇವನ ಕೆಲಸ ಭೂಮಿಯನ್ನು ತನ್ನ ಮಹಿಮೆಯಿಂದ ಬೆಳಗಿಸುವುದು ಮತ್ತು ಮುಂಬರುವ ರೌದ್ರತೆಯ ಬಗ್ಗೆ ಎಚ್ಚರಿಸುವುದಾಗಿದೆ ಎಂದು ನನಗೆ ಹೇಳಲಾಯಿತು. ಜನಸಮೂಹವು ಬೆಳಕನ್ನು ಅಂಗೀಕರಿಸಿತು ಕೆಲವರು. ಗಂಭೀರರಾದರು ಅದೇ ಸಮಯದಲ್ಲಿ ಇತರರು ಮಹಾದನದಿಂದ ಪರವಶರಾದರು. ಎಲ್ಲರ ಮೇಲೂ ಬೆಳಕು ಪ್ರಕಾಶಿಸಿತಾದರೂ ಕೆಲವರು ಬರೀ ಅದರ ಪ್ರಭಾವಕ್ಕೆ ಒಳಗಾದರು, ಆದರೆ ಹೃದಯ ಪೂರ್ತಿಯಾಗಿ ಅಂಗೀಕರಿಸಲಿಲ್ಲ. ಯಾರೆಲ್ಲ ಅಂಗೀಕರಿಸಿದರೋ ಅವರು ತಮ್ಮ ಮುಖವನ್ನು ಮೇಲೆ ಪರಲೋಕದೆಡೆಗೆ ಎತ್ತಿ, ದೇವರನ್ನು ಮಹಿಮೆಪಡಿಸಿದರು. ಬಹು ಜನರು ಕೋಪೋದ್ರಿಕ್ತರಾದರು. ಭಲಾಢ್ಯ ದೂತನಿಂದ ಬೀರಲ್ಪಟ್ಟ ಬೆಳಕನ್ನು ಅಲಕ್ಷಿಸಿದ ಧರ್ಮಬೋಧಕರೂ ಹಾಗೂ ಕೆಚ್ಚೆದೆಯ ದುಷ್ಟ ದೂತರೊಂದಿಗೆ ಜನರು ಸೇರಿಕೊಂಡರು. ಆದರೆ ಅಂಗೀಕಸಿದವರೆಲ್ಲಾ ಈ ಲೋಕದಿಂದ ತಮ್ಮನ್ನು ಬಿಡಿಸಿಕೊಂಡು ಒಂದಾಗಿ ಒಟ್ಟುಗೂಡಿದರು.GCKn 205.1

  ಸಾಧ್ಯವಾದಷ್ಟು ಈ ಬೆಳಕಿನಿಂದ ಹಿಂದಿಸೆಳೆದುಕೊಳಲು ಸೈತಾನನೂ ಮತ್ತು ಅವನ ದೂತರೂ ಬಹಳ ಕಾರ್ಯಮಗ್ನರಾದರು. ಅಲಕ್ಷಿಸಿದ ಕೆಲವರು ಅಂಧಕಾರದಲ್ಲಿ ಇಡಲ್ಪಟ್ಟರು. ಪರಲೋಕಜನಿತ ಸಂದೇಶವು ಪರಿಚಯಿಸಲ್ಪಟ್ಟಾಗ ತೋರಿಕೆಯ ದೇವರ ಮಕ್ಕಳ ಕಡೆಗೆ ದೇವದೂತನು ತೀವ್ರ ಆಸಕ್ತಿಯಿಂದ ನೋಡುತ್ತಾ ಅವರು ಬೆಳೆಸಿಕೊಂಡ ಗುಣಸ್ವಾಭವವನ್ನು ದಾಖಲಿಸುತ್ತಿರುವುದನ್ನು ನನಗೆ ತೋರಿಸಲಾಯಿತು. ಯೇಸುವಿನ ಮೇಲೆ ಕಪಟ ಪ್ರೀತಿಯನ್ನು ನಟಿಸುತ್ತಿದ್ದವರು ದ್ವೇಷ,ಕೊಚೋದ್ಯದ ಧಿಕ್ಕಾರದಿಂದ ಪರಲೋಕ ಸಂದೇಶಕ್ಕೆ ವಿಮುಖರಾದರು. ಚರ್ಮದ ಕಾಗದವನ್ನು ಹಿಡಿದು ದೂತನು ಈ ನಾಚಿಕೆಯ ವಿಷಯಗಳನ್ನೆಲ್ಲಾ ದಾಖಲು ಮಾಡಿಕೊಂಡನು. ತೋರ್ವಿಕೆಯ ಅನುಯಾಯಿಗಳು ಯೇಸುವನ್ನು ಹಗುರಾಗಿ ಕಂಡ ಕಾರಣದಿಂದ ಇಡೀ ಪರಲೋಕವೇ ಇವರ ದುರ್ನಡೆತೆಗೆ ರೋಷಗೊಂಡಿತು.GCKn 206.1

  ವಿಶ್ವಾಸಗಳ ನಿರಾಶೆಯನ್ನು ನಾನು ಕಂಡೆನು. ಅವರು ಎದುರು ನೋಡುತ್ತಿದ್ದ ಕಾಲಾವಧಿಗೆ ಅನುಗುಣವಾಗಿ ಕರ್ತನನ್ನು ಕಾಣಲಿಲ್ಲ. ಭವಿಷ್ಯವನ್ನು ಮುಚ್ಚಿಟ್ಟು ತನ್ನ ಜನರನ್ನು ನಿರ್ಧಾರದತುದಿಗೆ ತರಬೇಕೆಂಬುದು ದೇವರ ಉದ್ದೇಶವಾಗಿತ್ತು. ಕಾಲವು ಪರಿಪೂರ್ಣವಾಗದ ಹೊರತು ದೇವರು ನಿಶ್ಚಯಿಸಿದ ಕಾರ್ಯವನ್ನು ಸಾಧಿಸಲಾಗುತ್ತಿರಲಿಲ್ಲ ಭವಿಷ್ಯದಲ್ಲಿ ಬಹುದೂರ ಮನಸ್ಸನ್ನು ತೊಡಗಿಸುವಂತೆ ಬಹು ಜನರನ್ನು ಸೈತಾನನು ನಡೆಸಿದನು. ಕ್ರಿಸ್ತನ ಬರುವಣಕ್ಕಾಗಿ ಪ್ರಕಟಿಸಲ್ಪಟ್ಟ ಕಾಲಾವಧಿಯಲ್ಲಿ ಅಕ್ಕರೆಯಿಂದ ಸಿದ್ದತೆಮಾಡಿಕೊಳ್ಳಲು ಮನಸ್ಸುಮಾಡಿಕೊಳ್ಳಬೇಕಾಯಿತು. ಹಾಗೆಯೇ ಕಾಲವು ಮುನ್ಸಾಗುತ್ತಾ ಬರಲು ದೇವದೂತನು ಬೆಳಕನ್ನು ಪರಿಪೂರ್ಣವಾಗಿ ಅಂಗೀಕರಿಸಿಕೊಳ್ಳದವರು ಪರಲೋಕ ಸಂದೇಶವನ್ನು ಉಪೇಕ್ಷಿಸಿದವರೊಂದಿಗೆ ಸೇರಿಕೊಂಡು ನಿರಾಶೆಗೊಂಡವರನ್ನು ಹಿಯ್ಯಾಳಿಸಲು ಪ್ರಾರಂಭಿಸಿದರು. ದೂತರು ಯೇಸುವಿನ ಸಲಹೆ ಕೇಳುತ್ತಿದ್ದುದನ್ನು ನಾನು ನೋಡಿದೆನು. ಈ ದೂತರು ಕ್ರಿಸ್ತನ ತೋರ್ವಿಕೆಯ ಹಿಂಬಾಲಕರ ಸ್ಥಿತಿಯನ್ನು ಗುರುತಿಸಿಕೊಂಡಿರುವುದನ್ನೂ ನಾನು ಕಂಡನು. ನಿರ್ಧಿಷ್ಟ ಸಮಯವು ತಡೆಹಿಡಿಯಲ್ಪಟ್ಟು ಜನರು ಪರೀಕ್ಷೆಗೆ ಒಳಗಾಗಿ ತೀರ್ಮಾನಿಸಲ್ಪಟ್ಟರು ಮತ್ತು ಬಹು ಜನರು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದರು. ಅವರೆಲ್ಲಾ, ತಾವು ಕ್ರೈಸ್ತರೆಂದು ಎತ್ತರದ ಧ್ವನಿಯಲ್ಲಿ ಕೂಗಿದವರು, ಆದರೆ ಪ್ರತಿಸೂಕ್ಷ್ಮ ವಿಷಯದಲ್ಲೂ ಕ್ರಿಸ್ತನನ್ನು ಹಿಂಬಾಲಿಸುವಲ್ಲಿ ಸೋತವರಾಗಿದ್ದರು. ಈ ತೋರ್ವಿಕೆಯ ಕ್ರೈಸ್ತರ ಸ್ಥಿತಿಗೆ ಸೈತಾನನು ವಿಜೃಂಭಿಸಿದನು. ಇವನ ಬಲೆಯಲ್ಲಿ ಅವರಿದ್ದರು. ಬಹುಸಂಖ್ಯೆಯಲ್ಲಿ ಜನರು ನೇರಮಾರ್ಗವನ್ನು ಬಿಟ್ಟು ಹೋಗುವಂತೆ ಅವನು ಮಾಡಿದನ್ನು ಮತ್ತು ಅವರು ಇತರ ಮಾರ್ಗಗಳಿಂದ ಪರಲೋಕಕ್ಕೆ ಹೋಗಲು ಪ್ರಯತ್ನಸಿದರು. ಚಿಯೋನಿನಲ್ಲಿ ಪವಿತ್ರರೂ, ಪರಿಶುದ್ಧರೂ ಲೋಕವನ್ನು ಪ್ರೀತಿಸುತ್ತಿದ್ದ ಕಪಟಿಗಳು,ಪಾಪಿಗಳು ಎಲ್ಲರು ಮಿಶ್ರವಾಗಿ ಇದ್ದುದನ್ನು ದೂತರು ಕಂಡರು. ಯೇಸುವನ್ನು ನಿಜವಾಗಿ ಪ್ರೀತಿಸುತ್ತಿದ್ದವರನ್ನು ಅವರು ಗಮನಿಸುತ್ತಿದ್ದರು; ಈ ಭ್ರಷ್ಟರು ಪರಿಶುದ್ಧರನ್ನು ಬಾಧಿಸುತ್ತಿದ್ದರು.GCKn 206.2

  ಯೇಸುವನ್ನು ನೋಂಡಬೇಕೆಂದು ಹೃದಯಾಂತರಾಳದಿಂದ ಕಾಯುತ್ತಿದ್ದವರನ್ನು ಆತನ ಬಗೆಗೆ ಮಾತನಾಡಬಾರದೆಂದು ತೋರ್ವಿಕೆಯ ಕ್ರೈಸ್ತರು ನಿಷೇಧಿಸಿದರು. ಯೇಸುವಿನ ಪ್ರತ್ಯೆಕ್ಷತೆಯನ್ನು ಆಶಿಸುತ್ತಿದ್ದ ಉಳಿದ ಜನರ ಮೇಲೆ ಅನುಕಂಪ ಸುರಿಸುತ್ತಾ ದೇವದೂತರು ಇಡೀ ದೃಶ್ಯವನ್ನು ವೀಕ್ಷಿಸುತ್ತಿದ್ದರು. ಮತ್ತೊಬ್ಬ ಪ್ರಭಲ ದೇವದೂತನಿಗೆ ಭೂಲೋಕಕ್ಕೆ ಇಳಿದುಹೋಗಬೇಕೆಂದು ಅದೇಶಿಸಲಾಯಿತು. ಯೇಸುವು ಅವನ ಕೈಗೆ ಒಂದು ಓಲೆಯನ್ನು ಇತ್ತನು. ಅವನು ಇಳಿದು ಬರುತ್ತಾ ಬಿದ್ದಳು! ಬಿದ್ದಳು! ಬಾಬೆಲೋನ್ ಬಿದ್ದಳು ಎಂದು ಕೂಗುದನು. ಅನಂತರ ನಿರಾಶೆಗೊಂಡವರು ಮತ್ತೆ ಉತ್ಸಕರಾಗಿ ಪರಲೋಕದ ಕಡೆಗೆ ತಲೆ ಎತ್ತಿ ನಂಬಿಕೆ ಮತ್ತು ನಿರೀಕ್ಷೆಯಿಂದ ಅವರು ಕರ್ತನ ಪ್ರತ್ಯಕ್ಷತೆಯನ್ನು ನೋಡಲೆಳಸಿದುವನ್ನು ನಾನು ಕಂಡೆನು. ಆದರೆ ಬಹು ಜನರು ನಿದ್ರೆಯ ಮೂರ್ಖಸ್ಥಿತಿಯಲ್ಲಿ ಇರುವಂತೆ ಕಂಡಬಂದರು. ಅವರ ಮುಖದ ಮೇಲೆ ಅತೀವ ದುಃಖ ತುಂಬಿದ್ದುದನ್ನು ನಾನು ಕಂಡೆನು. ನಿರಾಶೆಗೊಂಡವರು ಸತ್ಯವೇದದ ಮೂಲಕ ತಾವಿನ್ನೂ ನಿರೀಕ್ಷಣೆಯ ಕಾಲದಲ್ಲಿದ್ದು ಬಹುತಾಳ್ಮೆಯಿಂದ ದರ್ಶನವು ಪರಿಪೂರ್ಣವಾಗಲೂ ಕಾಯ್ದುಕೊಂಡಿರಬೇಕು ಎಂಬುದನ್ನು ಮನಗಂಡರು.1843ರಲ್ಲಿ ಕರ್ತನಿಗಾಗಿ ಎದುರುನೋಡಬೇಕೆಂದಿದ್ದು ಅದೇ ಸೂಚನೆ 1844ಕ್ಕೆ ಆತನನ್ನು ಎದುರು ನೋಡುವಂತೆ ನಡೆಸಿತು. 1843ರಲ್ಲಿ ಬಹು ಜನರಲ್ಲಿ ನೆಲೆಸಿದ್ದು ನಂಬಿಕೆಯ ಶಕ್ತಿಯ ಅದೇ ಪ್ರಮಾಣವು ಅವರಲಿಲ್ಲ ನೆಲೆಗೊಡಿರಲಿಲ್ಲ ವೆಂಬುವುದು ನಾನು ಕಂಡುಕೊಂಡೆನು. ಅವರ ನಿರಾಶೆಯು ನಂಬಿಕೆಯನ್ನು ಕುಂದಿಸಿತು.ಆದರೆ ನಿರಾಶೆಗೊಂಡವರು ಎರಡನೇ ದೂತನ ಕೂಗಿನೊಂದಿಗೆ ಧ್ವನಿಸೇರಿಸಿದ್ದನ್ನು ಪರಲೋಕದ ಗಣಗಳು ಆಸಕ್ತಿಯಿಂದ ಗಮನಿಸುತ್ತಾ ಸಂದೇಶದ ಪ್ರಭಾವವನ್ನು ಗುರುತಿಸಿಕೊಂಡರು.ಕ್ರೈಸ್ತರನಿಸಿಕೊಂಡವರು ನಿರಾಶೆಗೊಂಡವರನ್ನು ಧಿಕ್ಕರಿಸುತ್ತಾ ಕುಚೋದ್ಯವಾಡುತ್ತಿದ್ದುದನ್ನು ಅವರು ಗಮನಿಸಿದರು. ಅಪಹಾಸ್ಯಗಾರರ ತುಟಿಗಳಿಂದ, ನೀವಿನ್ನು ಮೇಲಣ ಲೋಕಕ್ಕ ಹೋಗಲಿಲ್ಲ! ಎಂಬ ಮಾತುಗಳು ಹೊರಬಿದ್ದಾಗ ಒಬ್ಬ ದೂತನು ಬರೆಯುತ್ತಾ ಅವರು ದೇವರನ್ನು ಅಪಹಾಸ್ಯ ಮಾಡಿದರು ಎಂದು ದಾಖಲಿಸಿದನು.GCKn 208.1

  ಎಲೀಯನು ಸ್ವರ್ಗಾರೋಹಣವಾದ ಕಾಲಘಟ್ಟವನ್ನು ನನಗೆ ತೋರಿಸಲಾಯಿತು. ಅವನು ಕಂಬಳಿಯು ಎಲೀಷನ ಮೇಲೆ ಬಿತ್ತು. ದುಷ್ಟ ಹುಡುಗರು ಹಿಂಬಾಲಿಸಿಕೊಂಡು ಹೋಗುತ್ತಾ - ಬೋಳುಮಂಡೆಯವನೇ ,ಏರು; ಬೋಳುಮಂಡೆಯವನೇ, ಏರು ಎಂದು ಪರಿಹಾಸ್ಯ ಮಾಡಿದರು! ಅವರು ದೇವರನ್ನು ಪರಿಹಾಸ್ಯ ಮಾಡಿದರು ಮತ್ತು ಅದಕ್ಕೆ ತಕ್ಕುದಾದ ಶಿಕ್ಷೆಯನ್ನು ಅನುಭವಿಸಿದರು. ಈ ಮಕ್ಕಳು ತಮ್ಮ ತಂದೆತಾಯಿಯರಿಂದ ಈ ನಡೆವಳಿಕೆಯನ್ನು ಕಲಿತಿದ್ದರು. ದೇವಭಕ್ತರು ಏರಿಹೋಗಲು ವಿಷವನ್ನು ಜರಿದು ಗೇಲಿ ಮಾಡಿದವರು ದೇವರ ಉಪದ್ರವಗಳನ್ನು ಸಂಧಿಸುವರು ಆದರೆ ಅಪಹಾಸ್ಯ ಮಾಡುವುದು ಸಣ್ಣ ವಿಷಯವಲ್ಲ ಎಂಬ ಅರಿವು ಅವರಿಗಾಗುವುದು.GCKn 209.1

  ಯೇಸುವು ತನ್ನ ಜನರ ಕುಂದುತ್ತಿರುವ ನಂಬಿಕೆಯನ್ನು ಬಲಗೊಳ್ಳಿಸಿ ಪುನಶ್ಚೇತನಗೊಳಿಸಲು ತ್ವೆರೆಯಾಗಿ ಅವರ ಬಳಿಗೆ ದೂತರನ್ನು ಕಳುಹಿಸಿ ಎರಡನೇ ದೂತನ ಸಂದೇಶವನ್ನು ಅರ್ಥಮಾಡಿಕೊಳ್ಳವಂತೆ ಅವರನ್ನು ಸಿದ್ದಪಡಿಸಲು ಹಾಗೂ ಪರಲೋಕದಲ್ಲಿ ಆಗುವ ಮುಖ್ಯವಾದ ಚಲನೆಯ ಬಗೆಗೆ ತಿಳಿಸಬೇಕೆಂದು ಆದೇಶ ನೀಡಿದರು. ಈ ದೂತರು ಯೇಸುವಿನಿಂದ ಮಹಾಶಕ್ತಿಯಬೆಳಕನ್ನು ಪಡೆದುಕೊಂಡು ಭೂಮಿಗೆ ಶೀಘ್ರವಾಗಿ ಹಾರುತ್ತಾ ಹೋಗಿ ಆದೇಶವನ್ನು ನೆರವೇರಿಸಲು ಮತ್ತು ಎರಡನೆಯ ದೂತನ ಕಾರ್ಯದಲ್ಲಿ ಸಹಾಯಕರಾಗಲು ಇಳಿದು ಬಂದುದನ್ನು ಕಂಡೆನು. ಈ ದೂತರು ಇಗೋ, ಮದಲಿಂಗನು; ಅವವನನ್ನು ಎದುರುಗೊಳ್ಳುವುದಕ್ಕೆ ಹೊರಡಿರಿ ಎಂದು ಕೂಗುವಾಗ ದೇವರ ಮಕ್ಕಳ ಮುಖದ ಮೇಲೆ ಮಹಾಪ್ರಕಾಶವು ನೆಲೆಸಿತು. ಆ ಬಳಿಕ ನಿರಾಶೆಗೊಂಡಿದ್ದ ಭಕ್ತರು ಎದ್ದು ಎರಡನೆಯ ದೂತನೊಂದಿಗೆ ಸೇರಿಕೊಂಡು ಇದೋ; ಮದಲಿಂಗನು; ಅವನನ್ನು ಎದುರುಗೊಳ್ಳುವುದಕ್ಕೆ ಹೊರಡಿರಿ ಎಂದು ಪ್ರಕಟಿಸಿದುದನ್ನೂ ನಾನು ಕಂಡೆನು. ದೂತರಿಂದ ಹೊರಟ ಬೆಳಕು ಎಲ್ಲೆಲ್ಲೂ ನೆಲೆಸಿದ್ದ ಕತ್ತಲೆಯೊಳಗೆ ತೂರಿಹೋಯಿತು. ಆದರೆ ಸೈತಾನನು ಮತ್ತು ದೂತರು, ಈ ಬೆಳಕು ಪಸರಿಸಿದಂತೆ ಅದರ ನಿಯಾಮಿತ ಪ್ರಭಾವವನ್ನು ಅಡ್ಡಿಪಡಿಸಿದರು. ಅವರು ದೇವದೂತರೊಂದಿಗೆ, ದೇವರು ಆತನ ಜನರನ್ನು ವಂಚಿಸಿದ್ದಾರೆ, ಆದ್ದರಿಂದ ನಿಮ್ಮಶಕ್ತಿ ಮತ್ತು ಬೆಳಕಿನಿಂದ ಜನರು ಯೇಸು ಬರುವನೆಂಬುವುದುನ್ನು ನಂಬಿಸಲಾಗಿಲ್ಲ ಎಂದು ಹೇಳಿ ಕಾದಾಡಿದರು. ಸೈತಾನನು ಮತ್ತು ದೂತರು ಜನರ ಮನಸ್ಸನ್ನು ಬೆಳಕಿನಿಂದ ಸೆಳೆದು ದೂತರ ಮಾರ್ಗಕ್ಕೆ ಬೇಲಿ ಹಾಕಿದಾಗ್ಯೂ ದೇವದೂತರು ತಮ್ಮ ಕೆಲಸವನ್ನು ಮುಂದುವರಿಸಿದರು. ಯಾರು ಯಾರು ಅಂಗೀಕರಿಸಿದರೋ ಅವರು ಸಂತೋಷ ಪಟ್ಟರು. ಅವರು ತಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಯೇಸುವಿನ ಬರುವಣವನ್ನು ಕಾಣಲು ಕಾತುರಗೊಂಡರು. ಕೆಲವರು ಬಹುಮನಗುಂದಿದವರಾಗಿ ಅಲುತ್ತಾ ಪ್ರಾರ್ಥಿಸುತ್ತಿದ್ದರು. ಅವರ ಕಣ್ಣುಗಳು ತಮ್ಮನೇ ಕೇಂದ್ರಿಕರಿಸಿದಂತೆ ಕಾಣುತ್ತಿತ್ತು ಮತ್ತು ಮೇಲೆ ನೋಡಲು ಅವರಿಗೆ ದೈರ್ಯಬರಲಿಲ್ಲ .GCKn 210.1

  ತಮ್ಮೊಳಗೆ ನಿರಾಶೆಯಿದಿದ್ದವರ ಮೇಲೆ ಪರಲೋಕದ ಅಮೂಲ್ಯವಾದ ಬೆಳಕು ಹರಿದು ಅವರು ಮತ್ತು ಅವರ ಕಣ್ಣುಗಳಲ್ಲಿದ್ದ ಕತ್ತಲೆಯನ್ನು ಓಡಿಸಿತು, ಆಗ ಅವರ ಮೇಲೆಕ್ಕೆ ನೋಡಿದಾಗ ಧನ್ಯತೆಯು ಪವಿತ್ರಾನಂದವೂ ಅವರ ದೇಹಾಕಾರದಲ್ಲಿ ವ್ಯಕ್ತವಾಯಿತು ಯೇಸು ಮತ್ತು ದೂತಗಣಗಳು ಬಹು ಮೆಚ್ಚಿಗೆಯಿಂದ ಕಾದ್ದುಕೊಂಡಿದ್ದ ನಂಬಿಗಸ್ತರನ್ನು ದೃಷ್ಟಿಸಿದರು.GCKn 211.1

  ಮೊದಲ ದೂತನ ಸಂದೇಶವನ್ನು ದಿಕ್ಕರಿಸಿ ವಿರೋಧಿಸಿದವರು ಎರಡನೆಯ ದೂತನ ಬೆಳೆಕನ್ನೂ ಕಳೆದುಕೊಂಡರು, ಮತ್ತು ಇಗೋ ಮದಲಿಂಗನು ಎಂಬ ಸಂದೇಶವನ್ನು ಸಾರುತ್ತಿದ್ದವರ ಶಕ್ತಿಪ್ರಭಾವದಿಂದಲೂ ಲಾಭವನ್ನು ಪಡೆಯಲಿಲ್ಲ. ಯೇಸು ಅಸಂತುಷ್ಟಿಯಿಂದ ಅವರೆಡೆಗೆ ವಿಮುಖನಾದನು. ಅವರೋ, ಯೇಸುವನ್ನು ಹಗುರವಾಗಿ ಕಂಡು ತಿರಸ್ಕರಿಸಿದರು. ಸಂದೇಶವನ್ನು ಅಂಗೀಕರಿಸಿದವರು ಮಹಾಪ್ರಭೆಯ ಮೋಡದಿಂದ ಸುತುವರೆಯಲ್ಪಟ್ಟರು. ಅವರು ದೇವರು ಚಿತ್ತವನ್ನು ತಿಳಿಯಲು ಕಾದುಕೊಡು ಎಚ್ಚರಿಕೆಯಿಂದ ಪ್ರಾರ್ಥಿಸುತ್ತಿದ್ದವರು. ಯೇಸುವನ್ನು ನೋಯಿಸಲು ಭಯಪಟ್ಟವರು. ದೇವರ ಮಕ್ಕಳಿಂದ ಈ ದಿವ್ಯಪ್ರಭೆಯನ್ನು ನಂದಿಸಬೇಕೆಂದು ನೋಡುತ್ತಿದ್ದ ಸೈತಾನನನ್ನೂ ಅವನ ದೂತರನ್ನೂ ನಾನು ಕಂಡೆನು; ಆದರೆ ಬೆಳೆಕನ್ನು ಹೊಂದಿದ್ದವರು ಎಷ್ಟರವರೆಗೆ ಅದನ್ನು ಪಾಲನೆಮಾಡಿಕೊಂಡು ಈ ಲೋಕದಿಂದ ತಮ್ಮ ದೃಷ್ಟಿಯನ್ನು ತಿರುಗಿಸಿ ಮೇಲೆಕ್ಕೆ ಯೇಸುವಿನಲ್ಲಿ ನೆಲೆಗೊಳಿಸಿದ್ದರೋ ಅವರ ಮೇಲೆ ಸೈತಾನನು ತನ್ನ ಶಕ್ತಿಯನ್ನು ಪ್ರಯೋಗಿಸಿ ಆ ಬೆಳೆಕಿನಿಂದ ಅವರನ್ನು ಅಪಹರಿಸಲಾಗಲಿಲ್ಲ, ಪರಲೋಕದಿಂದ ಬಂದು ಸಂದೇಶವು; ಸೈತಾನ ಹಾಗೂ ದೂತರೂ ಯೇಸುವನ್ನು ಪ್ರೀತಿಸುತ್ತೇವೆಂದು ಹೇಳಿಕೊಳ್ಳುತ್ತಾ ತೋರುವಿಕೆಯಿಂದದ್ದವರು ಮತ್ತು ಆತನ ಬರುವಣವನ್ನು ಕಡೆಗಣಿಸಿ, ನಂಬಿಗಸ್ತರನ್ನು ಕುಚೋದ್ಯಮಾಡುತ್ತಾ ಗೇಲಿಮಾಡುತ್ತಿದ್ದವರನ್ನು ರೊಚ್ಚಿಗೆಬ್ಬಿಸಿತು. ಬಂದು ಪ್ರತಿ ಕುಚೋದ್ಯ, ಅಪಹಾಸ್ಯ ,ಹೀಯ್ಯಾಳಿಕೆ ಮತ್ತು ಬೈಗುಳನ್ನು ಒರ್ವದೂತನು ಗುರುತುಮಾಡಿಕೊಂಡನು. ಬಹುಜನರು ಇಗೋ ಮದಲಿಂಗನು ಬರುತ್ತಾನೆ ಎಂಬ ವಾರ್ತೆಯನ್ನು ಉಚ್ಛಕಂಠದಿಂದ ಕೂಗುತ್ತಿದ್ದವರು ಯೇಸುವಿನ ಬರುವಣವನ್ನು ಪ್ರೀತಿಸದೆ ಇರುವವರನ್ನು ಮತ್ತು ಆತನು ಎರಡನೆ ಬರುವಣವನ್ನು ನೆಲೆಗೊಂಡಿರಬಾರದೆಂದು ತಡೆಹಿಡಿದವರನ್ನು ತಳ್ಳಿಬಿಟ್ಟರು ಯೇಸುವು, ಆತನ ಬರುವಣವನ್ನು ಅಲಕ್ಷಿಸಿದವರಿಂದ ಮುಖವನ್ನು ತಿರುಗಿಸಿಕೊಂಡನು. ಮತ್ತು ಈ ಅಶುದ್ಧರಿಂದ ಕಳಂಕಿತರಾಗಬಾರದೆಂದು ತನ್ನ ಜನರನ್ನು ಬೇರ್ಪಡಿಸಿ ಹೊರಗೆ ಕರೆದು ತರಲು ದೂತರನ್ನು ಕಳುಹಿಸಿದನು. ಸಂದೇಶಕ್ಕೆ ವಿಧೇಯರಾದವರು ಸ್ವತಂತ್ರರಾಗಿ ಎದ್ದು ಐಕ್ಯತೆಯಿಂದ ನಿಂತುಕೊಂಡರು. ಪವಿತ್ರವಾದ ಮಹೋನ್ನತ ಕಾಂತಿ ಅವರ ಮೇಲೆ ಹೊಳೆಯಿತು, ಅವರು ಲೋಕವನ್ನು ತ್ಯಜಿಸಿ, ಅದರ ವ್ಯಾಮೋಹವನ್ನು ಹರಿದುಕೊಂಡು, ಎಲ್ಲಾ ಐಹಿಕ ಆಸಕ್ತಿಯನ್ನು ತ್ಯಾಗಮಾಡಿದರು. ಲೋಕದ ಸಂಪತ್ತನ್ನು ತೊರೆದರು ಮತ್ತು ಅವರ ಪ್ರೀತಿಮಯ ವಿಮೋಚಕನನ್ನು ಕಾಣಲು ಆಕಾಶದ ಕಡೆಗೆ ದೃಷ್ಟಿಸಲು ತೊಡಗಿದರು ಪವಿತ್ರಾನಂದವು ಅವರ ಮುಖದಲ್ಲಿ ತುಂಬಿಕೊಂಡು ಅವರೊಳಗೆ ಸಮಾಧಾನ ಶಾಂತಿ ತುಂಬಿ ನೆಲೆಸಿತು ಅವರ ಶೋಧನೆಯ ಕಾಲವು ಮುಂದುವರೆಯುವುದರಿಂದ ಅವರನ್ನು ಬಲಗೊಳಿಸಲು ಯೇಸು ದೂತರನ್ನು ಕಳುಹಿಸಿದನು. ಈ ಕಾದುಕೊಂಡಿದವರು ಇನ್ನೂ ಸಾಕಷ್ಟು ಪುಟ್ಟಕ್ಕೆ ಹಾಕಲ್ಪಡಲಿಲ್ಲ ಎಂಬುದನ್ನು ನಾನು ಕಂಡೆನು. ಅವರಿನ್ನೂ ತಪ್ಪುದೋಷಗಳಿಂದ ಮುಕ್ತರಾಗಿರಲಿಲ್ಲ. ಅನ್ಯಜನರಿಂದಲೂ ಪೋಪರಿಂದಲೂ ತಮಗೆ ಹಸ್ತಾಂತರಿಸಲ್ಪಟ್ಟ ತಪ್ಪು ದೋಷಗಳಿಂದ ಕಳಚಿಕೊಳ್ಳಲು ದೇವರ ಕರುಣೆ ಶುಭವೂ ಭೂಲೋಕದವರಿಗೆ ಎಚ್ಚರಿಕೆಯನ್ನು ಕಳುಹಿಸುವುದರಲ್ಲಿ ಹಾಗೂ ಕಾಲಾವಧಿಗೆ ಕರೆತರಲು ಕೊಟ್ಟ ಪುನರಾವರ್ತಿತ ಸಂದೇಶಗಳಿಂದ ಅವರು ತಮ್ಮನ್ನೇ ಪರೀಕ್ಷಿಸಿಕೊಳ್ಳಲು ನಡೆಸಿದುದನ್ನು ನಾನು ಕಂಡೆನು, ದೇವರು ಅವರಿಗಾಗಿ ಮಹಾಬಲದಿಂದ ಕಾರ್ಯಮಾಡಲು ಹಾಗೂ ಅವರು ದೇವರ ಎಲ್ಲಾ ಆಜ್ಞೆಗಳನ್ನು ಕೈಕೊಳ್ಳುವಂತೆ ಮಾಡಲು ತನ್ನ ಸಂದೇಶಗಳ ಮೂಲಕ ತನ್ನ ಜನರನ್ನು ಆರಿಸಿ ಹೊರೆತಂದನು ತನ್ನ ಮಹಾಬಲದಿಂದ ಅವರೆಲ್ಲ ಆತನ ಕಟ್ಟಳೆಗಳನ್ನು ಪಾಲಿಸಲಾಗುವಂತೆ ಕಾರ್ಯಮಾಡಿದನು.GCKn 211.2

  ನೋಡಿ: 2ಅರಸು 2:11-25 ; ದಾನಿಯೇಲ 8:14; ಹಬಕ್ಕೂಕ 2:1-4; ಮತ್ತಾಯ 25:6; ಪ್ರಕಟನೆ 14:8;18:1-5GCKn 214.1