ಅಧ್ಯಾಯ 03. - ರಕ್ಷಣಾ ಯೋಜನೆ
ಮನುಷ್ಯನು ಕಳೆದುಹೋದದ್ದು ಮತ್ತು ದೇವರು ಸೃಸ್ಟಿಸಿದ ಲೋಕವು ಸಂಕಟ ರೋಗ ಮರಣದಿಂದ ಕೊಡಿದ ಮರ್ತ್ಯರಿಂದ ಇನ್ನುಮುಂದೆ ತುಂಬಿರುವುದನ್ನೂ, ಅಪರಾದಮುಕ್ತರಾಗಲು ಯಾವುದೇ ದಾರಿ ಇಲ್ಲದಿರುವುದನ್ನು ಮನಗಂಡು ಪರಲೋಕದಲ್ಲೆಲ್ಲಾ ಶೋಕ ಸಂತಾಪ ತುಂಬಿತು. ಆದಾಮನ ಕುಟುಂಬವೆಲ್ಲಾ ಮರಣಿಸಲೇಬೇಕಾಯಿತು. ದುಃಖ ಹಾಗೂ ಅನುಕಂಪ ಹರಡಿದ್ದ ಯೇಸುವಿನ ಮುಖವನ್ನು ನಾನು ಕಂಡೆನು. ಒಡನೆಯೇ ಪ್ರಕಾಶ ಮುಸುಕಿದ್ದ ದೇವರ ಬಳಿಗೆ ಆತನು ಹೋದನು. ನನ್ನ ಜೊತೆಯಲ್ಲಿದ್ದ ದೂತನು “ಅವರಿಬ್ಬರೂ ಗಂಭೀರಿವಾದ ಚರ್ಚೆಯಲ್ಲಿದ್ದಾರೆ” ಎಂದು ನನಗೆ ತಿಳಿಸಿದನು. ಈ ಸಮಯದಲ್ಲಿ ಇಡೀ ದೂತಗಣವೆಲ್ಲಾ ತೀವ್ರ ಆತಂಕದಿಂದ ಕೂಡಿತ್ತು. ಮೂರುಭಾರಿ ತಂದೆಯ ಮಹಾಪ್ರಕಾಶದಿಂದ ಆತನು ಮುಚಲ್ಪಟ್ಟನು. ಮೂರನೆ ಭಾರಿ ದೇವರ ಸನ್ನಿಧಿಯಿಂದ ಹೊರಬರುವ ವ್ಯಕ್ತಿಯಾಗಿ ಕಂಡನು. ಶಾಂತ ಮುಖಮುದ್ರೆಯಿಂದ, ಎಲ್ಲಾ ತಳಮಳ ಸಂಕಟದಿಂದ ಮುಕ್ತನಾಗಿ, ಮಾತುಗಳಿಗೆ ನಿಲುಕದ ದಯಾಪರತೆ, ಪ್ರೀತಿಭಾವ ತುಂಬಿದ ಯೇಸುವಾಗಿ ಕಂಡುಬಂದನು. ತಪ್ಪಿಹೋದ ಮಾನವನಿಗಾಗಿ ಒಂದು ಮಾರ್ಗ ಸಿದ್ದವಾಗಿದೆ ಎಂದು ಆತನು ದೂತರಿಗೆ ತಿಳಿಸಿದನು. ಮಾನವನ ಪಾಪ ಕ್ಷಮಾಪಣೆಗಾಗಿ ತನ್ನ ಪ್ರಾಣವನ್ನು ಈಡುಮಾಡಿ ಮರಣಕ್ಕೆ ಒಪ್ಪಿಸಿಕೊಡುವುದರ ಬಗೆಗೆ ತಂದೆಯನ್ನು ಇದುವರೆವಿಗೂ ಬೇಡಿಕೊಳ್ಳುತ್ತಿದ್ದೆನೆಂದು ಆತನು ತಿಳಿಸಿದನು.ಆಜ್ಞೆಗಳಿಗೆ ವಿಧೇಯರಾಗಿ ತನ್ನ ರಕ್ತದ ಯೋಗ್ಯೆತೆಯಿಂದ ದೇವರ ಕೃಪಾಕಟಾಕ್ಷಕ್ಕೆ ಒಳಗಾಗಿ ಮತ್ತೊಮ್ಮೆ ಏದೆನ್ ತೋಟಕ್ಕೆ ಪ್ರವೇಶಿಸಿ ಜೀವವೃಕ್ಷದ ಹಣ್ಣನ್ನು ತಿನ್ನಲು ಅವರು ಯೋಗ್ಯರಾಗುವರು ಎಂದನು.GCKn 29.1
ಮೊಟ್ಟಮೊದಲಾಗಿ ತಮ್ಮ ಅಧಿಪತಿಯು ಯಾವುದನ್ನೂ ಮುಚ್ಚಿಡದೆ ರಕ್ಷಣಾಯೋಜನೆಯನ್ನು ತಿಳಿಸಿದಾಗ ಅವರು ಉಲ್ಲಾಸಪಡಲಾಗಲಿಲ್ಲ. ತಂದೆಯ ಉಗ್ರಕೋಪಕ್ಕೂ , ಮಾನವರ ಪಾಪಕ್ಕೂ ನಡುವೆ ನಿಲ್ಲುವೆನು, ಆದರೆ ಕೆಲವರು ಮಾತ್ರ ತನ್ನನ್ನು ದೇವರ ಮಗನೆಂದು ಅಂಗೀಕರಿಸುವರು. ಹೆಚ್ಚುಕಡಿಮೆ ಎಲ್ಲರೂ ದ್ವೇಷಿಸಿ ತಿರಸ್ಕರಿಸುವರು, ಅದರೂ ತಾನು ಪರಲೋಕದ ಎಲ್ಲಾ ಮಹಿಮೆಯನ್ನು ತೊರೆದು, ಮಾನವನಾಗಿ ಲೋಕಕ್ಕೆ ಬಂದು ಅವರ ಎಲ್ಲಾ ಶೋಧನೆಗಳ ಅನುಭವವನ್ನು ವೈಯಕ್ತಿಕವಾಗಿ ಪರಿಚಯಿಸಿಕೊಳ್ಳುವೆನು ಅದರಿಂದ ಶೋಧನೆಗೆ ಒಳಗಾದವರಿಗೆ ಯಾವರೀತಿಯ ನೆರವು ನೀಡಬೇಕೆಂದು ತಿಳಿಯುವುದು.ಬೋಧಕನಾಗಿ ತನ್ನ ಕಾರ್ಯ ಸಫಲವಾದ ಮೇಲೆ ಮಾನವರ ಕೈಗೆ ಒಪ್ಪಸಲ್ಪಡುವೆನು. ಸೈತಾನನೂ ಆತನ ದೂತರೂ, ದುಷ್ಟಜನರು ಮುಖಾಂತರ ಕೊಡುವ ಎಲ್ಲಾ ಕ್ರೂರಶಿಕ್ಷೆ ಸಂಕಟಗಳಿಗೆ ತೆರೆದಿಟ್ಟವನಾಗಿ ಒರ್ವ ಮಹಾಪಾಪಿಯ ತೆರದಿ ಭೂಪರಲೋಕಗಳ ನಡುವೆ ತೂಗಬೇಕಾಗುತ್ತದೆ. ದೂತರು ಸಹ ದೃಷ್ಟಿಸಲು ನಡುಗುವಂತಹ ಹಿಂಸಗೆ ಒಳಪಡುವ ಸಮಯ ಬಂದಾಗ ಮುಖವನ್ನು ಮುಚ್ಚಿಕೊಳ್ಳುವರು. ಅದರಲ್ಲಿ ಶಾರೀರಕ ಹಿಂಸೆ ಮಾತ್ರವಲ್ಲದೆ ಮಾನಸಿಕ ಹಿಂಸೆಯೇ ತೀವ್ರವಾಗಿರುತ್ತದೆ. ಲೋಕದ ಪಾಪಭಾರವೆಲ್ಲಾ ಅತನ ಮೇಲಿರುತ್ತದೆ. ಆತನು ಪಾಪಕ್ಕಾಗಿ ಮರಣಿಸಿ ಮೂರನೇ ದಿನ ಎದ್ದು, ದಾರಿ ತಪ್ಪಿದವರ ಉದ್ಧಾರಕ್ಕಾಗಿ ಮದ್ಯಸ್ಥಿಕೆವಹಿಸಲು ದೇವರಬಳಿ ಏರಿ ಹೋಗುವೆನು ಎಂದನು.GCKn 30.1
ದೇವದೂತರು ಅಡ್ಡಬಿದ್ದು ತಾವೂ ಜೀವತೆರುವೆವು ಎಂದರು. ಯೇಸು, ತನ್ನ ಮರಣದಿಂದ ಮಾತ್ರ ಮಾನವನನ್ನು ರಕ್ಷಿಸುವ, ಕ್ರಯಕೊಟ್ಟು ಬಿಡುಸುವ ಕಾರ್ಯದಲ್ಲಿ ಯೋಗ್ಯನೆಂತಲೂ ತನ್ನ ಜೀವ ಮಾತ್ರ ದೇವರಿಂದ ಅಂಗೀಕರಿಸಲ್ಪಟ್ಟಿದೆ, ಯಾವ ದೂತನ ಜೀವದಿಂದಲೂ ಅಸಾದ್ಯ ಎಂದನು.GCKn 31.1
ದೂತರಿಗೂ ಈ ಮಹಾಕಾರ್ಯದಲ್ಲಿ ಆತನೊಂದಿಗಿದ್ದು ಬಲಪಡಿಸುವ ಪಾತ್ರವಿರುತ್ತದೆ. ತಾನು, ಮಾನವನ ಪಾಪಸ್ವರೂಪ ತೆಗೆದುಕೊಳ್ಳುವಾಗ ಬಲಹೀನನಾಗುವನು. ಆತನ ಹಿಂಸೆ, ಅಪಮಾನಗಳಿಗೆ ದೂತರು ಸಾಕ್ಷಿಗಳಾಗುವಾಗ ತೀವ್ರ ಭಾವೋದ್ರೇಕಕ್ಕೆ ಒಳಗಾಗುವರು, ಅತನ ಮೇಲಿನ ಪೀತಿಯಿಂದ, ಕೊಲೆಗಾರರ ಕೈಯಿಂದ ಬಿಡಿಸಿ ತಪ್ಪಿಸಲು ಮುಂಬರುವರು. ಆದರೆ ಈ ಎಲ್ಲಾ ಘಟನೆಗಳನ್ನು ಅವಲೋಕಿಸಬೇಕೇ ಹೊರೆತು ಬೇರಾವುದನ್ನೂ ದೂತರು ಮಾಡಲಾಗದು. ತನ್ನ ಪುನರುತ್ಥಾನದಲ್ಲಿ ಅವರು ಪಾತ್ರ ನಿರ್ವಹಿಸಬೇಕು,ಈ ರಕ್ಷಣಾಯೋಜನೆ ತೀರ್ಮಾನಿಸಲ್ಪಟ್ಟು ತಂದೆಯಿಂದ ಅಂಗೀಕರಿಸಲ್ಪಟ್ಟಿದೆ ಎಂದು ಯೇಸು ದೂತರಿಗೆ ಹೇಳಿದನು.GCKn 31.2
ಯೇಸುವು ಪವಿತ್ರಶೋಕದಿಂದ ದೇವದೂತರನ್ನು ಸಂತೈಸಿದನು. ಇನ್ನು ಮುಂದೆ ತಾನು ವಿಮೋಚಿಸಬೇಕಾದವರೊಂದಿಗೆ ಇದ್ದು, ವಾಸಿಸಿ, ತನ್ನ ಮರಣದಿಂದ ಕ್ರಯಕೊಟ್ಟು ಬಿಡಿಸಿ, ಮರಣದ ಅಧಿಕಾರ ಹೊಂದಿರುವವನನ್ನು ನಾಶಪಡಿಸುವೆನೆಂದು ಅವರಿಗೆ ತಿಳಿಯಪಡಿಸಿದನು ಮತ್ತು ಆತನ ತಂದೆಯು ತನಗೆ ಪರಲೋಕರಾಜ್ಯವನ್ನೂ, ಘನತೆಯನ್ನೂ ನಿರಂತರವಾಗಿ ದಯಪಾಲಿಸುವನು. ಸೈತಾನನೂ, ಪಾಪಿಗಳು ವಿನಾಶಕ್ಕೆ ಒಳಗಾಗುವರು. ಇನ್ನೆಂದಿಗೂ ಪರಲೋಕವನ್ನಾಗಲೀ, ಶುಧೀಕರಿಸಲ್ಪಟ್ಟ ನೂತನ ಭೂಮಿಯನ್ನಾಗಲೀ ಅವರು ಭಂಗಗೊಳಿಸಲಾರರು. ತಂದೆಯಾದ ದೇವರು ಒಪ್ಪಿರುವ ಈ ಯೋಜನೆಯನ್ನು ಅಂಗೀಕರಿಸಿ, ತನ್ನ ಮರಣದ ದೆಸೆಯಿಂದ ದಾರಿತಪ್ಪಿದ ಮಾನವ ಜನಾಂಗವು ದೇವರ ಕೃಪೆಗೊಳಗಾಗಿ ಪರಲೋಕಕ್ಕೆ ಬಾದ್ಯರಾಗುವ ಮಹಾಕಾರ್ಯದಲ್ಲಿ ಉಲ್ಲಾಸ ಪಡುವಂತೆ ತನ್ನೊಂದಿಗೆ ರಾಜಿಯಾಗಬೇಕೆಂದು ಮನವಿಮಾಡಿಕೊಂಡನು .GCKn 32.1
ಆನಂತರವೇ, ಇಡೀ ಪರಲೋಕ ಜೀವಿಗಳಲ್ಲಿ ಅಸೀಮ ಉಲ್ಲಾಸವು ತುಂಬಿ ತುಳುಕಿತು. ದೂತಗಣಗಳು ಸ್ತುತಿಸೋತ್ರ ಗಾನವನ್ನು ಹಾಡಿದರು. ತಂತಿವಾದ್ಯಗಳು ಮೊದಲಿಗಿಂತಲೂ ಏರು ಶೃತಿ ಹೊರಡಿಸಿದವು. ದಂಗಕೋರ ಜನಾಂಗದ ಏಳಿಗೆಗಾಗಿ ತನ್ನ ಒಬ್ಬನೆ ಮಗನನ್ನು ತ್ಯಾಗ ಮಾಡಿದ ದೇವರ ಧೀನತೆ ಕೃಪೆಗಾಗಿ: ಯೇಸುವಿನ ಸ್ವತ್ಯಾಗಕ್ಕಾಗಿ: ತನ್ನ ತಂದೆಯ ಎದೆಯನ್ನು ಬಿಟ್ಟು ಬರುವ ಅಂಗೀಕಾರಕ್ಕಾಗಿ:, ಹಿಂಸೆ ಸಂಕಟದ ಜೀವನವನ್ನು ಅಪ್ಪಿಕೊಂಡದಕ್ಕಾಗಿ: ಇತರರಿಗೆ ಜೀವಾನುಗ್ರಹ ಮಾಡಲು ತಲೆತಗ್ಗಿಸುವ ಮರಣವನ್ನು ತನ್ನದಾಗಿಸಿಕೊಂಡದಕ್ಕಾಗಿ ಆರಾಧನಾ ಸ್ತುತಿ ಗೀತೆಗಳುನ್ನು ವಾದ್ಯಗಳು ಹೊರಹೊಮ್ಮಿಸಿದವು.GCKn 32.2
ದೂತನು ನನಗೆ ವಿವರಿಸುತ್ತ, ತಂದೆಯಾದ ದೇವರು ತನ್ನ ಮಗನನ್ನು ಯಾವ ನೋವೂ ಇಲ್ಲದೆ ಬಿಟ್ಟುಕೊಟ್ಟರೇನು ? ಇಲ್ಲ, ಇಲ್ಲ! ಪಾಪಿಮಾನವನನ್ನು ನಾಶವಾಗಲು ಬಿಡುವುದೋ ? ಇಲ್ಲ! ಅವರಿಗಾಗಿ ಸಾಯಲು ತನ್ನ ಮಗನನ್ನು ಅರ್ಪಿಸುವುದೋ ? ಎಂಬ ತೊಳಲಾಟ ತಂದೆಯಾಲ್ಲೂ ಇತ್ತು. ಮಾನವರ ರಕ್ಷಣೆಗೆ ಬಗ್ಗೆ ದೇವದೂತರಿಗೂ ಕಾಳಜಿ ಇದ್ದು ನಾಶಗುವ ಮಾನವರಿಗಾಗಿ ತಮ್ಮ ಮಹಿಮೆಯನ್ನು ಪ್ರಾಣತ್ಯಾಗ ಮಾಡಲು ಸಿದ್ದರಾದರು. ಆದರೆ ನನ್ನ ಜೊತೆಗಿದ್ದ ದೂತನು ಹೇಳಿದ್ದೇನೆಂದರೆ —ಅದರಿಂದ ಏನೂ ಆಗದು. ಮಾನವ ಪಾಪವು ಅಗಾಧವಾಗಿದ್ದು ಯಾವ ದೂತನೂ ಅದರ ಸಾಲ ಭರಿಸಲಾಗದು. ದೇವಪುತ್ರನ ಮರಣ ಮತ್ತು ಮದ್ಯಸ್ಥಿಕೆ ಮಾತ್ರ ಕ್ರಯಕೊಟ್ಟು, ತಪ್ಪಿಹೋದ ಮಾನವನ ದುಃಖ ಸಂಕಟಗಳನ್ನು ಪರಿಹರಿಸಬಹುದು ಎಂದನು .GCKn 33.1
ಆದರೆ ದೇವಕುಮಾರನ ಶ್ರಮೆಸಂಕಟದ ಸಮಯದಲ್ಲಿ ಪರಲೋಕದಲ್ಲಿ ಇಳಿದು ಬಂದು ಬಲಪಡಿಸುವ, ಸಂತೈಸುವ ಕಾರ್ಯಭಾರವು ದೂತರಿಗೆ ವಹಿಸಲ್ಪಟ್ಟಿತು. ಸೈತಾನನು ಮತ್ತು ಆತನ ದೂತನಿಂದ ಆವರಿಸಲ್ಪಡುವ ಕತ್ತೆಲೆಯಿಂದ ಕೃಪಾಪಾತ್ರರನ್ನು ಕಾಪಾಡುವ ಜವಾಭ್ದಾರಿ ಅವರದಾಗಿತ್ತು.GCKn 33.2
ದೇವರು ಯಾವುದೇ ಕಾಲಕ್ಕೂ ನಾಶನಕ್ಕೆ ಒಳಗಾದ ಮನುಷ್ಯನಿಗಾಗಿ ಆಜ್ಞೆಗಳನ್ನು ಬದಲಾಸುವುದು ಅಸಾದ್ಯವಾದುದರಿಂದ ತನ್ನ ಮಗನನ್ನು ಮರಣದ ಕರಗಳಿಗೆ ಒಪ್ಪಿಸಿದುದನ್ನು ನಾನು ಕಂಡೆನು.GCKn 34.1
ಮಾನವನನ್ನು ದಾರಿತಪ್ಪಿಸುವ ಮೂಲಕ ದೇವಕುಮಾರನನ್ನು ಉನ್ನತಸ್ಥಾನದಿಂದ ಎಳೆದು ಹಾಕಿದೆನೆಂದು ಸೈತಾನನು ತನ್ನ ದೂತರೊಂದಿಗೆ ಆಹ್ಲಾದಗೊಂಡನು. ಯೇಸುವು ಬಿದ್ದುಹೋದ ಮಾನವಾವತಾರ ಹೊಂದಿದಾಗ ಆತನ ರಕ್ಷಣಾಯೋಜನೆ ಸಫಲವಾಗದಂತೆ ತನ್ನ ಪ್ರಕಾಂಡ ಬಲ ಪ್ರಯೋಗಿಸುವೆನೆಂದು ಸೈತಾನನು ತನ್ನ ದೂತರಿಗೆ ಹೇಳಿದನು .GCKn 34.2
ಇದಾದನಂತರ, ಸೈತಾನನು ಹರ್ಷ ಮತ್ತು ಉತ್ತಮ ದೂತಸ್ವರೂಪದ ದರ್ಶನವು ನನಗಾಗಯಿತು. ಆನಂತರ ಈಗಿನ ಸ್ವರೂಪವನ್ನೂ ಕಂಡೆನು. ಅವನಿಗೆ ರಾಜಯೋಗ್ಯ ಸ್ವರೂಪವು ಈಗಲೂ ಅಸ್ತಿತ್ವದಲ್ಲಿದೆ. ದೊಬ್ಬಲ್ಪಟ್ಟ ದೂತನಾದುದರಿಂದ ಶ್ರೇಷ್ಟ ರೂಪಲಕ್ಷಣವಿದೆ. ಆದರೆ ಮುಖಭಾವದಲ್ಲಿ ಅಸಂತೋಷ, ಹಗೆ, ಉದ್ರೇಕ, ಮೋಸ, ತುಂಟತನ, ಮತ್ಸರ ಮುಂತಾದ ಎಲ್ಲಾ ದುಷ್ಟತನ ಮನೆಮಾಡಿದೆ. ನಾನು ಸೂಕ್ಷ್ಮವಾಗಿ ದೃಷ್ಟಿಸಿದ್ದೆಂದರೆ, ಒಂದು ಕಾಲದಲ್ಲಿ ಶ್ರೇಷ್ಟವಾಗಿದ್ದ ಹುಬ್ಬುಗಳು, ಕಣ್ಣುಗಳ ಮೇಲಿನಿಂದ ಹರಡಿರುವ ವಿಶಾಲವಾದ ಹಣೆಯ ಭಾಗ ,ಬಹುಕಾಲದಿಂದ ಕಾರ್ಯಗಾತನಾಗಿದ್ದ ಪ್ರಯುಕ್ತ ಅತನಲ್ಲಿದ್ದ ಒಳ್ಳೆಯತನವಲ್ಲಾ ಕರಗಿ, ದುಷ್ಟಭಾವದ ಮುಖಚರ್ಯೆ ನೆಲೆಸಿದ್ದು ಕಣ್ಣುಗಳಲ್ಲಿ ಕುತಂತ್ರತೆ ತುಂಬಿ ತೀಕ್ಷ್ದವಾಗಿತ್ತು. ದೇಹಾಕಾರವು ಅಗಾಧಾಗಿದ್ದರೂ ಮುಖ, ಕೈಗಳ ಮಾಂಸಖಂಡಗಳು ಜೋಲುತ್ತಿತ್ತು. ಅತನಗಡ್ಡವು ಎಡಗೈ ಮೇಲೆ ಆತುಕೂಳಿತದ್ದನ್ನು ನಾನು ಕಂಡನು. ಅವನು ಯಾವುದೋ ದೀರ್ಘಾಲೋಜನೆಯಲ್ಲಿ ಮುಳುಗಿದ್ದನು. ಅವನ ಮೇಲೆ ಪ್ರತ್ಯಕ್ಷವಾದ ವಕ್ರನಗು ನನ್ನುನ್ನು ನಡುಗಿಸಿತು. ಅದರಲ್ಲಿ ಪೂರ್ತಿ ಕುಟಿಲತೆ ತುಂಬಿದ್ದು ಸೈತಾನನ ಕಪಟತೆಯಿತ್ತು . ಈ ನಗೆಯು, ಆತನು ಬಿಲಿಪಶುವನ್ನು ನಿರ್ಧರಿಸಿ ಬಲೆಗೆ ಬೀಳುಸುವಾಗ ತೋರುವ ವಿಕಟ ನಗೆ, ಬೀಳಿಸಿದ ಮೇಲೆ ಬರಬರುತ್ತಾ ಹರಡುವ ಬೀಕರ ನಗೆ ಅದಾಗಿತ್ತು.GCKn 34.3
ಯೆಶಾಯ 53 ನೇ ಅದ್ಯಾಯವನ್ನು ನೋಡಿರಿGCKn 35.1