Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 29. - ಒಂದು ದೃಢವಾದ ವೇಧಿಕೆ

    ತಮ್ಮನ್ನು ಜಾಗರೂಕತೆಯಿಂದ ರಕ್ಷಿಸಿಕೊಂಡ ಸ್ಥಿರವಾಗಿ ನಿಂತಿದ್ದ ಜನರನ್ನು ನಾನು ಕಂಡೆನು. ಇವರು ಅಸ್ಥಿರವಾದವರೆಡೆಗೆ ಮುಖಗೊಡದೆ ಒಟ್ಟುಮೊತ್ತದ ನಂಬಿಕೆಯಲ್ಲಿ ದೃಡವಾಗಿದ್ದುದರಿಂದ ದೇವರು ಇವರನ್ನು ಮೆಚ್ಚಿಗೆಯಿಂದ ದೃಷ್ಟಿಸಿದನು. ನನಗೆ ಮೂರು ಮೆಟ್ಟಿಲುಗಳುನ್ನು ತೋರಿಸಲಾಯಿತು. ಅದೇ ಮೂರುದೂತರ ಸಂದೇಶಗಳು. ಈ ಸಂದೇಶದಿಂದ ಒಂದು ತುಣುಕನ್ನೂ ಅಥವಾ ಸೂಜಿಯಷ್ಟನ್ನೊ ಕದಲಿಸಿದವನ ಸ್ಥಿತಿ ಅಯ್ಯೋ! ಎನ್ನುವಂತಾಗುವುದು ಎಂದು ದೂತನು ಹೇಳಿದನು. ಈ ಸಂದೇಶಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಅತಿಮುಖ್ಯ. ಇವುಗಳನ್ನು ಅಂಗೀಕರಿಸದ ರೀತಿಯ ಮೇಲೆ ಆತ್ಮದ ಅಂತ್ಯವು ನೆಲೆಗೊಂಡಿದೆ. ನನ್ನನ್ನು ಈ ಸಂದೇಶಗಳ ಮುಖಂತರ ಕರೆದೊಯ್ಯಲಾಯಿತು. ದೇವರ ಮಕ್ಕಳು ಬಹು ಕಷ್ಟಸಂಕಟ ಹೋರಾಟದಿಂದ ಅಪ್ಯಾಯಮಾನವಾದ ಅನುಭವಗಳನ್ನು ಪಡೆದುಕೊಂಡರು ಎಂಬುವುದನ್ನು ನಾನು ಕಂಡೆನು. ದೇವರು ಹಂತ ಹಂತವಾಗಿ ಇವರನ್ನು ಅಚಲವೇಧಿಕೆಯ ಮೇಲೆ ನಿಲ್ಲುವವರೆವಿಗೂ ನಡೆಸಿದರು .ಅನಂತರ ನಾನು ಕಂಡಿದ್ದೇನೆಂದರೆ, ಕೆಲವು ಜನರು ವೇದಿಕೆಯವರೆಗೂ ಬಂದು ಹತ್ತುವ ಮೊದಲೇ ತಳಹದಿಯನ್ನು ಪರೀಕ್ಷಿಸಲಾರಂಭಿಸಿದರು. ವೇದಿಕೆಯ ತಳಹದಿಯ ನೆಲೆಗಟ್ತಲ್ಲಿ ತಪ್ಪುಹುಡುಕಿ, ಅದನ್ನು ಉತ್ತಮಗೊಳಿಸಿದ್ದಾದರೆ ಜನರು ಸಂತೋಷಿಸುವರೆಂದು ಆಶಿಸಿದರು. ಕೆಲವರು ಉಲ್ಲಾಸದಿಂದ ತಟ್ಟನೆ ಹತ್ತಿಕೊಂಡರು. ಮತ್ತೆ ಕೆಲವು ಹತ್ತಿದ ಜನರು ಇಳಿದಿ ಪರೀಕ್ಷಿಸಿ ದೋಷವನ್ನು ಕಂಡವರಂತೆ ಸರಿಯಾಗಿ ವೇದಿಕೆಯು ನೆಲೆಗೊಂಡಿಲ್ಲ ಎಂದು ಪ್ರಕಟಿಸಿದರು. ಆದರೆ ಈಗಾಗಲೇ ಮೇಲಿದ್ದವರು ದೂರುತ್ತಿದವರಿಗೆ ಬಹು ಆಸಕ್ತಿಯಿಂದ ದೇವರೇ ಈ ವೇದಿಕೆಯ ಮುಖ್ಯ ವಾಸ್ತುಶಿಲ್ಪಿ ಆತನ ವಿರುದ್ದ ವಿನಾಕಾರಣ ಯುದ್ದಮಾಡುತ್ತಿದ್ದೀರಿ ಎಂದು ಎಚ್ಚರಿಸುತ್ತಿದ್ದುದ್ದನ್ನು ನಾನು ಕಂಡೆನು. ಅವರು ಗಟ್ಟಿ ಬುನಾದಿಯ ಮೇಲೆ ನಿಲ್ಲಿಸಿದ ದೇವರ ಅದ್ಬುತ ಕಾರ್ಯವನ್ನು ಸವಿಸ್ತಾರವಾಗಿ ವರ್ಣಿಸುತ್ತಾ ಒಗ್ಗಟ್ಟಾಗಿ ತಮ್ಮ ಕಣ್ಣುಗಳನ್ನು ಪರಲೋಕದ ಕಡೆಗೆತ್ತಿ ಮಹಾಧ್ವನಿಯಿಂದ ದೇವರಿಗೆ ಸ್ತೋತ್ರ ಸಲ್ಲಿಸಿದರು. ಈ ಕಾರ್ಯವು ಕೆಳಗಿಳಿದು ದೂರುತ್ತಿದ್ದವರ ಮೇಲೆ ದಟ್ಟ ಪ್ರಭಾವ ಬೀರಿತಾದ್ದರಿಂದ ದೀನಾ ದೃಷ್ಟಿಯಿಂದ ಮತ್ತೆ ಮೇಲೆ ಹತ್ತಿಕೊಂಡರು.GCKn 230.1

    ಕ್ರಿಸ್ತನ ಮೊದಲನೇ ಬರುವಣದ ಘೋಷಣೆಯ ಕಾಲವನ್ನು ನನಗೆ ತೋರಿಸಿದರು. ಯೇಸುವಿನ ಮಾರ್ಗವನ್ನು ಸಿದ್ದಪಡಿಸಲು, ಎಲೀಯನ ಉತ್ಸಾಹ ಮತ್ತು ಬಲದಿಂದ ಯೋಹಾನನನ್ನು ಕಳುಹಿಸಲಾಯಿತು. ಈತನ ಸಾಕ್ಷಿಯನ್ನು ನಿರ್ಲಕ್ಷಿಸಿದವರು ಯೇಸುವಿನ ಪ್ರಭೋಧನೆಯ ಯಾವ ಲಾಭವನ್ನೂ ಪಡೆಯಲಿಲ್ಲ. ಈತನು ಮೊದಲನೆ ಬರುವಣದ ಘೋಷಣೆಯನ್ನು ವಿರೋದಿಸಿದವರು ಮೆಸ್ಸೀಯನು ಈತನೇ ಎಂಬ ದೃಡವಾದ ಗುರುತನ್ನೂ ಅಂಗೀಕರಿಸದ ಸ್ಥಿತಿಯಲ್ಲಿದ್ದರು. ಯೋಹನನ ಸಂದೇಶವನ್ನು ನಿರಾಕಾರಿಸಿದವರು ಯೇಸುವನ್ನು ನಿರಾಕರಿಸಿ ಕ್ರೂಜೆಗೆ ಹಾಕುವಂತೆ ಸೈತಾನನು ನಡೆಸಿದನು. ಹೀಗೆ ಮಾಡಿದ್ದರಿಂದ, ಪರಲೋಕದ ದೇವದರ್ಶನ ಗುಡಾರದ ಮಾರ್ಗವನ್ನು ತೋರಿಸುವ ಪಂಚಾಶತಮ ದಿನದಲ್ಲಿ ಬಂದು ಆಶೀರ್ವಾದವನ್ನೂ ಕಳೆದುಕೊಂಡರು.ದೇವಾಲಯದ ಹರಿದುಹೋದ ತೆರೆಯು ಯಹೋದ್ಯರ ಬಲಿ. ಆಚೆರಣೆಗಳನ್ನು ಇನ್ನೂ ಮುಂದೆ ಅಂಗೀಕರಿಸಲಾಗದು ಎಂಬುದರ ಸಂಕೇತವನ್ನು ಹೇಳಿತು. ಮಹಾಬಲಿಯು ಕ್ರೂಜೆಯ ಮೇಲೆ ಮುಗಿದು ಅಂಗೀಕರಿಸಲ್ಪಟ್ಟಿತು. ಮತ್ತು ಪರಶುದ್ದಾತ್ಮವು ಪಂಚಾಶತ್ತಮ ದಿನದಂದು ಇಳಿದು ಬಂದು ಶಿಷ್ಯರ ಮನಸ್ಸು ಭೂಲೋಕದ ಪರ್ಣಶಾಲೆಯಿಂದ ಪರಲೋಕದ ಪರ್ಣಶಾಲೆಗೆ ಕರೆದುಕೊಂಡು ಹೋಯಿತು. ಅಲ್ಲಿ ಯೇಸು ತನ್ನ ರಕ್ತದಿಂದ ಪ್ರವೇಶಿಸಿ, ಸಮಾಧಾನದ ಫಲವನ್ನು ಶಿಷ್ಯರ ಮೇಲೆ ಪ್ರಸಾದಿಸಿದನು. ಆದರೆ ಇದನ್ನು ನಂಬದಂತೆ ಯಹೂದ್ಯರನ್ನು ಪರಿಪೂರ್ಣವಾಗಿ ವಂಚಿಸಿ ಅಂಧಕಾರದಲ್ಲಿ ಇಡಲಾಯಿತು. ಇವರು ಇನ್ನೂ ನಿರುಪಯುಕ್ತ ಬಲಿ, ಕಾಣಿಕೆಗಳನ್ನು ಸಲ್ಲಿಸುತ್ತಾ ರಕ್ಷಣಾ ಯೋಜನೆಯ ಬೆಳಕನ್ನು ಕಳೆದುಕೊಂಡರು. ಪರಿಶುದ್ಧ ಸ್ಥಳದಲ್ಲಿ ನಡೆಯುವ ಯೇಸುವಿನ ಮದ್ಯೆಸ್ಥಿಕೆಯಿಂದ ಇವರು ಯಾವ ಲಾಭವನ್ನೂ ಪಡೆಯಲಿಲ್ಲ. ಪರಲೋಕದ ಪರ್ಣಶಾಲೆಯು ಭೂಲೋಕದ ಪರ್ಣಶಾಲೆಯ ಸ್ಥಳವನ್ನು ತೆಗೆದುಕೊಂಡಿತು.ಆದರೂ ಪರಲೋಕದ ಮಾರ್ಗವನ್ನು ಯಹೂದ್ಯರು ತಿಳಿದುಕೊಳ್ಳಲಿಲ್ಲ.GCKn 231.1

    ಯಹೂದ್ಯರು ಯೇಸುವನ್ನು ನಿರಾಕರಿಸಿ ಕ್ರೂಜೆಗೆ ಹಾಕಿದ ವೃತ್ತಾಂತ, ಆತನನು ಲಜ್ಜೆಗೆಟ್ಟು ನುಡಿದ ಬೈಗುಳಗಳ ಚರಿತ್ರೆಯನ್ನು ಬಹು ಜನರು ಓದುವಾಗ ಅವರು ಪೇತ್ರನಂತೆ ಬೊಂಕುವುದೋ ಅಥವಾ ಯಹೂದ್ಯರಂತೆ ತಾವು ಕ್ರೂಜೆಗೆ ಹಾಕುವುದಿಲ್ಲ ಕ್ರಿಸ್ತನನ್ನು ಪ್ರೀತಿಸುವೆವೆಂದು ಮನಗಂಡರು. ಆದರೆ ದೇವರು, ತನ್ನ ಮಗನ ಮೇಲೆ ಈ ಜನರು ಹೊಂದಿರುವೆವೆಂದುಕೊಂಡು ಪ್ರೀತಿ ಅನುಕಂಪವನ್ನು ಪರೀಕ್ಷೆಗೊಳಪಡಿಸಿ ಸಿದ್ದಾಂತಪಡಿಸುವನು.GCKn 232.1

    ಸಂದೇಶದ ಅಂಗೀಕರಣೆಯನ್ನು ಇಡೀಪರಲೋಕದ ಗಣವು ಬಹು ಆಸಕ್ತಿಯಿಂದ ವೀಕ್ಷಿಸಿತು. ಯಾರು ಯೇಸುವನ್ನು ಪ್ರೀತಿಸುತ್ತೆವೆಂದು ಹೇಳುತ್ತಾ ಆತನ ಕ್ರೂಜೆಯ ಕಥೆಯನ್ನು ಓದುವಾಗ ಕಣ್ಣೀರು ಸುರಿಸಿದರೋ ಅವರು ಸಂತೋಷದಿಂದ ಸಂದೇಶವನ್ನು ಸ್ವೀಕರಿಸದೆ ಸಿಟ್ಟಿನಿಂದ ಉರಿದದ್ದು ಯೇಸುವಿನ ಬರುವಣವನ್ನು ಅಪಹಾಸ್ಯಮಾಡಿ ಅದು ಒಂದು ಭ್ರಮೆ ಎಂದು ತೀರ್ಮಾನಿಸಿದರು. ಆತನನ್ನು ನಿಜವಾಗಿ ಪ್ರೀತಿಸಿದವರೊಂದಿಗೆ ಒಡನಾಡದೆ ಹಗೆಮಾಡಿ ಸಭೆಯಿಂದ ಅವರನ್ನು ಓಡಿಸಿದರು. GCKn 233.1

    ಮೊದಲನೆಯ ಸಂದೇಶವನ್ನು ಅಂಗೀಕರಿಸದಿದ್ದವರು ಎರಡೆನಯ ಸಂದೇಶದ ಲಾಭವನ್ನೂ ಪಡೆಯುವುದಿಲ್ಲ. ಮದ್ಯರಾತ್ರಿಯ ಕೂಗು ಅವರನ್ನು ಯೇಸುವಿನೊಂದಿಗೆ ಪರ್ಣಶಾಲೆಯ ಮಹಾಪರಿಶುದ್ಧ ಸ್ಥಳಕ್ಕೆ ಕರೆದುಕೊಂಡು ಹೋಗುವ ಫಲವು ಅವರಿಗೆ ಸಿಗದು. ಮೊದಲನೆಯ ಎರಡೂ ಸಂದೇಶಕ್ಕೆ ವಿಮುಖರಾದವರಿಗೆ ಮೂರನೆಯ ದೂತನ ಸಂದೇಶದ ಬೆಳಕು ಕಾಣುವುದಿಲ್ಲ. ಯಹೂದ್ಯರು ಯೇಸುವನ್ನು ಕ್ರೂಜೆಗೇರಿಸಿದಂತೆ ವಾಸ್ತವವಲ್ಲದ ಸಭೆಗಳು ಆತನ ಸಂದೇಶವನ್ನು ಕ್ರೂಜೆಗೇರಿಸಿದರು. ಹಾಗೂ ಪರಲೋಕದಲ್ಲಾದ ಸಂಚಲನೆ ಅಂದರೆ ಮಹಾಪರಿಶುದ್ಧ ಸ್ಥಳದ ಮಾರ್ಗದ ತಿಳುವಳಿಕೆ ಅವರಿಗಿಲ್ಲವಾಯಿತು ಯೇಸುವಿನ ಮದ್ಯೆಸ್ಥಿಕೆಯಿಂದ ಯಾವ ಪ್ರಯೋಜನವು ಇವರಿಗಿಲ್ಲ. ಯಹೂದ್ಯರು ಉಪಯುಕ್ತವಲ್ಲದ ಬಲಿಯನ್ನು ಅರ್ಪಿಸದಂತೆ ಇಂದಿನ ಜನರು ಪ್ರಾರ್ಥನೆಗಳು ಯೇಸುವು ಬಿಟ್ಟುಹೋದ [ಪರಿಶುದ್ಧ ಸ್ಥಳ] ವಿಭಾಗಕ್ಕೆ ತಲುಪುತ್ತದೆ. ತೋರ್ವಿಕೆಯ ಕ್ರೈಸ್ತರಿಗಾದ ಈ ಮೋಸದಿಂದ ಸೈತಾನನು ಸಂತುಷ್ಟನಾಗಿ ಅವರನ್ನು ತನ್ನ ಬಲೆಯಲ್ಲಿ ಬಂಧಿಸಿ, ಧಾರ್ಮಿಕ ಭಾವವನ್ನು ಧರಿಸಿಕೊಂಡು ಅವರಮನಸ್ಸುಗಳನ್ನು ತನ್ನೆಡೆಗೆ ಸೆಳೆದು,ತನ್ನ ಶಕ್ತಿಯಿಂದ ಸೂಚನೆ ಅದ್ಬುತಗಳಿಂದ ಕಾರ್ಯತತ್ಪರರಾಗುವಂತೆ ಮಾಡುವನು. ಒಬ್ಬೊಬ್ಬನ್ನು ಒಂದೊಂದು ವಿಧವಾಗಿ ವಂಚಿಸಿ ವಿವಿಧ ಮನಸ್ಸುಗಳನ್ನು ವಿವಿಧ ಪ್ರಭಾವಕ್ಕೆ ಒಳಗಾಗಿಸುವ ಭ್ರಮೆ ಅವನಿಗಿದೆ.ಒಂದು ವಂಚನೆಯನ್ನು ಗಾಬರಿಯಿಂದ ನೋಡುವವರು ಮತ್ತೊಂದು ವಂಚನೆಯನ್ನು ಅಂಗೀಕರಿಸುವರು ಕೆಲವರನ್ನು ಪ್ರೇತಾತ್ಮತ್ವಗಳ ಮೂಲಕ ಮೋಸಗೊಳಿಸುವನು. ಆತನು ಪ್ರಕಾಶಮಾನವಾದ ದೂತನಂತೆ ಬಂದು ಪ್ರಭಾವ ಬೀರುವನು.GCKn 233.2

    ಎಲ್ಲಾ ಕಡೆಯು ಸುಧಾರಣೆಗಳಾಗುವುದನ್ನು ನಾನು ಕಂಡೆನು. ಬೇರೆ ಆತ್ಮವು ಕೆಲಸಮಾಡುವಗ ಸಭೆಗಳು ಉತೇಜನಗೊಂಡು ತಮಗಾಗಿ ದೇವರು ಅದ್ಬುತವಾಗಿ ಕೆಲಸಮಾಡುತ್ತಿರುವನೆಂದು ಭ್ರಮೆಗೊಳ್ಳುವರು. ಇದು ಬಹುಬೇಗ ಮರಣಿಸಿ ಸಭೆಗಳನ್ನೂ ಲೋಕವನ್ನು ಮೊದಲಿಗಿಂತ ಹೆಚ್ಚಾದ ದಃಸ್ಥಿತಿಗೆ ತಳ್ಳುತ್ತದೆ.GCKn 234.1

    ಹೆಸರಿಗೆ ಮಾತ್ರ ಕ್ರೈಸ್ತರಾದವರ ಮಧ್ಯದಲ್ಲಿ, ಬಿದ್ದುಹೋದ ಸಭೆಗಳಲ್ಲಿ ದೇವರಿಗೆ ಪ್ರಾಮಾಣಿಕರಾಗಿರುವ ಜನರನ್ನು ನಾನು ಕಂಡನು. ಉಪದ್ರವಗಳು ಸಂಭವಿಸುವ ಮೊದಲೇ ಸಭೆಗಳಿಂದ ಜನರನ್ನೂ ಧರ್ಮಬೋಧಕರನ್ನು ಹೊರತರಲಾಗುವುದು.ಅವರು ಸಂತೋಷದಿಂದ ಸತ್ಯವನ್ನು ಎತ್ತಿಹಿಡಿಯುವರು. ಸೈತಾನನಿಗೆ ಇದರ ಅರಿವಿದೆ ಆದ್ದರಿಂದ ಮೂರನೇ ದೂತನ ಮಹಾಧ್ವನಿಗೆ ಮೊದಲೆ ಧಾರ್ಮಿಕ ಕೂಟದಲ್ಲಿ ಉದ್ರೇಕವನ್ನುಂಟುಮಾಡಿ ಸತ್ಯವನ್ನು ಅಲ್ಲಗಳೆದವರಲ್ಲಿ ತಮ್ಮೊಂದಿಗೆ ದೇವರಿದ್ದಾರೆಂಬ ಹುಸಿನಂಬಿಕೆ ಹುಟ್ಟಿಸುವನು. ನಂಬಿಗಸ್ಥರನ್ನು ಮೋಸಗೊಳಿಸಿ ದೇವರು ಇನ್ನೂ ಸಭೆಗಳಲ್ಲಿ ಕೆಲಸಮಾಡುತ್ತಿರುವನೆಂದು ಯೋಚಿಸುವುದನ್ನು ನಿರೀಕ್ಷಿಸುತ್ತಾನೆ. ಆದರೆ ಸತ್ಯದ ಬೆಳಕು ಪ್ರಕಾಶಿಸುವುದು, ಪ್ರತಿ ನಿಷ್ಠಾವಂತರು ಬಿದ್ದುಹೋದ ಸಭೆಗಳಿಂದ ಹೊರಬಿದ್ದು ಉಳಿದ ಸಭೆ ಅಥವಾ ಜನಸಮೂಹದವರೊಂದಿಗೆ ಸೇರಿಕೊಳ್ಳುವರು. GCKn 235.1

    ಓದಿ: ಮತ್ತಾಯ 3; ಅಪೋಸ್ತಲರ ಕೃತ್ಯ ಅಧ್ಯಾಯ 2; 2ಕೊರಿಂಥ 11:11; 2ಥೆಸಲೋನಿಕ 2:9-12; ಪ್ರಕಟನೆ 14:6-12GCKn 235.2

    Larger font
    Smaller font
    Copy
    Print
    Contents